AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

“ಧಮ್ಕಿಗಳನ್ನ ಇಲ್ಲಿಗೆ ನಿಲ್ಲಿಸಿದ್ರೆ ಒಳ್ಳೆದು”: ಶಾಸಕ ಎಸ್.ಆರ್.ಶ್ರೀನಿವಾಸ್​ಗೆ ಎಚ್ಚರಿಕೆ ನೀಡಿದ ವೀರಶೈವ ಮುಖಂಡರು

ಎಲ್ಲರಿಗೂ ತಿಳುವಳಿಕೆ ಬಂದಿದೆ, ಎಲ್ಲರೂ ರಾಜಕಾರಣವನ್ನ ತುಂಬಾ ಹತ್ತಿರದಿಂದ ನೋಡುತ್ತಿದ್ದಾರೆ. ಈ ಧಮ್ಕಿಗಳನ್ನ ಇಲ್ಲಿಗೆ ನಿಲ್ಲಿಸಿದರೆ ಒಳ್ಳೆದು ಎಂದು ಜೆಡಿಎಸ್ ಉಚ್ಛಾಟಿತ ಶಾಸಕ ಎಸ್.ಆರ್.ಶ್ರೀನಿವಾಸ್​ಗೆ ವೀರಶೈವ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಧಮ್ಕಿಗಳನ್ನ ಇಲ್ಲಿಗೆ ನಿಲ್ಲಿಸಿದ್ರೆ ಒಳ್ಳೆದು: ಶಾಸಕ ಎಸ್.ಆರ್.ಶ್ರೀನಿವಾಸ್​ಗೆ ಎಚ್ಚರಿಕೆ ನೀಡಿದ ವೀರಶೈವ ಮುಖಂಡರು
ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್ ಮತ್ತು ವೀರಶೈವ ಮುಖಂಡ ಸುರೇಶ್
TV9 Web
| Updated By: Rakesh Nayak Manchi|

Updated on:Dec 15, 2022 | 10:29 AM

Share

ತುಮಕೂರು: ಗುಬ್ಬಿ ಕ್ಷೇತ್ರದ ಜೆಡಿಎಸ್ ಉಚ್ಛಾಟಿತ ಶಾಸಕ ಎಸ್.ಆರ್.ಶ್ರೀನಿವಾಸ್ (MLA S.R.Srinivas) ಕಾಂಗ್ರೆಸ್ ಸೇರ್ಪಡೆಗೆ ಕಾಂಗ್ರೆಸ್ ಪಕ್ಷದಿಂದಲೇ ವಿರೋಧ ಕೇಳಿಬಂದಿದ್ದವು. ಇದೀಗ ಕಾಂಗ್ರೆಸ್ ಮುಖಂಡರಾದ ಹೊನ್ನಗಿರಿ ಗೌಡರು, ಜಿ.ಎಸ್.ಪ್ರಸನ್ನ ಕುಮಾರ್ ಅವರ ಬಗ್ಗೆ ಮಾತನಾಡಿದ ಶ್ರೀನಿವಾಸ್ ವಿರುದ್ಧ ವೀರಶೈವ ಸಮುದಾಯ (Veerashaiva community)ದ ಕೆಲವು ಮುಖಂಡರು ತಿರುಗಿಬಿದ್ದಿದ್ದಾರೆ. ಕಾಂಗ್ರೆಸ್​ಗೆ ಇತ್ತೀಚೆಗೆ ಬಂದು 15 ವರ್ಷಗಳಿಂದ ಪಕ್ಷ ಸಂಘಟನೆ ಮಾಡಿರುವ ಹೊನ್ನಗಿರಿ ಗೌಡರು, ಜಿ.ಎಸ್.ಪ್ರಸನ್ನ ಕುಮಾರ್ ಬಗ್ಗೆ ಮಾತನಾಡುತ್ತಿಯಾ, ನಿನ್ನ ಮತ್ತು ನಿನ್ನ ಹಿಂಬಾಲಕರ ಬೆದರಿಕೆಗಳಿಗೆ ಯಾರೂ ಬಗ್ಗುವವರಲ್ಲ ಎಂದು ವೀರಶೈವ ಮುಖಂಡ ಸುರೇಶ್ ಅವರ ಶಾಸಕ ಶ್ರೀನಿವಾಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಎಸ್.ಆರ್.ಶ್ರೀನಿವಾಸ್ ಅವರ ಪರವಾಗಿರುವ ವೀರಶೈವ ಮುಖಂಡರು ಇತ್ತೀಚೆಗೆ ಕಾಂಗ್ರೆಸ್ಸಿಗರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು. ನಿಮಗೆ ತಾಕತ್ ಇದ್ದರೆ ಕಾಂಗ್ರೆಸ್​ನಿಂದ ವಾಸಣ್ಣನವರಿಗೆ ಟಿಕೆಟ್ ತಪ್ಪಿಸಿ ಎಂದು ಸವಾಲೆಸೆದಿದ್ದರು. ಇದಕ್ಕೆ ಪ್ರತಿಯಾತಿ ಶ್ರೀನಿವಾಸ್ ವಿರುದ್ಧ ಮತ್ತೊಂದು ವೀರಶೈವ ಸಮುದಾಯ ಮುಖಂಡರು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಶಿವನೇಹಳ್ಳಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್​ನಿಂದ​ ಭರದ ಸಿದ್ಧತೆ, ಟಿಕೆಟ್ ಹಂಚಿಕೆಗೆ ಸಮಿತಿ ರಚನೆ

ಎಸ್.ಆರ್.ಶ್ರೀನಿವಾಸ್​ಗೆ ಎಚ್ಚರಿಕೆ ನೀಡಿ ಮಾತನಾಡಿದ ವೀರಶೈವ ಮುಖಂಡ ಸುರೇಶ್, ರಾಜ್ಯದಲ್ಲಿ, ಜಿಲ್ಲೆಯಲ್ಲಿ ವೀರಶೈವ ಸಮಾಜ ತುಂವಾ ಬಲಿಷ್ಠವಾಗಿದೆ. ಇಷ್ಟಕ್ಕೆ ಸುಮ್ಮನಾದರೆ ಒಳ್ಳೆಯದು. ವೀರಶೈವ ಸಮುದಾಯಕ್ಕೆ ನಿನ್ನ ಕೊಡುಗೆ ಏನೆಂದು ವೀರಶೈವ ಮುಖಂಡರು ಸವಾಲೆಸೆದರು. ಇಲ್ಲಿಯವರೆಗೆ ನಾಲ್ಕು ಬಾರಿ ಚುನಾವಣೆ ಗೆದ್ದಿದ್ದೀಯ, ಒಂದೇ ಒಂದು ಅಭಿವೃದ್ಧಿ ಕಾರ್ಯ ಮಾಡಿಲ್ಲ. ಯಾವ ಯಾವ ವೇಷ ಹಾಕಿ ಗೆದ್ದಿದ್ದೀಯ ಎಂಬುದು ಗೊತ್ತು. ವೀರಶೈವ ಸಮುದಾಯದ ಯಾರೋ ಒಬ್ಬರಿಗೆ ತಾಲೂಕು ಅಧ್ಯಕ್ಷನ ಸ್ಥಾನ ಕೊಟ್ಟಿರುವುದು ಬಿಟ್ಟರೆ ಬೇರೆ ಏನು ಅಧಿಕಾರ ಕೊಟ್ಟಿದ್ದೀಯಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಕಾಂಗ್ರೆಸ್ ಸೇರ್ಪಡೆಗೆ 2 ಕಾರಣ ಕೊಟ್ಟ ದತ್ತ, ದೇವೇಗೌಡ್ರ ಹತ್ತಿರ ಹೇಳಿಕೊಳ್ಳಲಾಗದೇ ತೊಳಲಾಟಕ್ಕೆ ಒಳಗಾದ ಮೇಷ್ಟ್ರು

ವೀರಶೈವ ಸಮಾಜಕ್ಕಾಗಿ ಯಾವೊಬ್ಬನೂ ಇಲ್ಲ. ನಿನ್ನ ಜೊತೆ ಇರುವವರೆಲ್ಲಾ ನಿನಗೋಸ್ಕರ ಇರುವವರು. ಈ ಹಿಂದೆ ಸಂಸದ ಜಿ.ಎಸ್. ಬಸವರಾಜುಗೆ ಕೀಳಾಗಿ ಮಾತನಾಡಿದ್ದೀಯ. ಇಷ್ಟೋಂದು ಕೀಳುಮಟ್ಟದ ರಾಜಕಾರಣಕ್ಕೆ ನೀನು ಇಳಿದರೆ ನಾವು ಹೆದರುವುದಿಲ್ಲ. ಈ ಧಮ್ಕಿ ಎಲ್ಲ ಇಲ್ಲಿಗೆ ನಿಲ್ಲಸಬೇಕು ಎಂದು ಎಚ್ಚರಿಕೆ ನೀಡಿದರು.

ಶ್ರೀನಿವಾಸ್ ಅವರು ಕಾಂಗ್ರೆಸ್ ಸೇರುವ ಬಗ್ಗೆ ಹೊನ್ನಗಿರಿ ಗೌಡರು, ಜಿ.ಎಸ್.ಪ್ರಸನ್ನ ಕುಮಾರ್ ಅವರು ವಿರೋಧ ವ್ಯಕ್ತಪಡಿಸಿದ್ದರು. ಜಂಟಿ ಸುದ್ದಿಗೋಷ್ಠಿ ನಡೆಸಿ ಶ್ರೀನಿವಾಸ್ ಫೋಟೋ ಹಾಕದೆ 10 ತಲೆಯ ರಾವಣನ ಪೋಸ್ಟರ್ ಬಿಡುಗಡೆ ಮಾಡಿದ್ದರು. ಈ ಇಬ್ಬರು ಮುಖಂಡರು ಗುಬ್ಬಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಎಂದು ಹೇಳಲಾಗುತ್ತಿದೆ.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:29 am, Thu, 15 December 22

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು