ಅಸ್ತ್ರವಾದ ಸೈಲೆಂಟ್ ಸುನೀಲ: ಬಿಜೆಪಿಯಲ್ಲಿ ‘ರೌಡಿ ಮೋರ್ಚಾ’ ಘಟಕ ತೆರೆಯುವ ಲಕ್ಷಣವಿದೆ ಎಂದ ಕಾಂಗ್ರೆಸ್

| Updated By: ರಮೇಶ್ ಬಿ. ಜವಳಗೇರಾ

Updated on: Nov 29, 2022 | 5:00 PM

ರೌಡಿಶೀಟರ್​ ಸೈಲೆಂಟ್​ ಸುನೀಲ ವಿಚಾರಕ್ಕೆ ಸಂಬಂಧಿಸಿದಂತೆ ಕೈ, ಕಮಲ ನಡುವೆ ನಿಲ್ಲದ ಅಂತರ್ಯುದ್ಧದ ಹಂಗಾಮ. ಕಾಂಗ್ರೆಸ್​, ಬಿಜೆಪಿ ನಡುವಿನ ಮಾತಿನ ಕಾಳಗ ತಣ್ಣಗಾಗ್ತಿಲ್ಲ. ಇಬ್ಬರ ಕದನದ ಕಿಚ್ಚಿಗೆ ಒಂದಿಲ್ಲೊಂದು ವಿಷಯಗಳು ತುಪ್ಪದಂತೆ ಬೀಳ್ತಿದ್ದು, ನಾಯಕರ ಬೀದಿ ಕಾಳಗ ತಾರಕಕ್ಕೇರುತ್ತಿದೆ.

ಅಸ್ತ್ರವಾದ ಸೈಲೆಂಟ್ ಸುನೀಲ: ಬಿಜೆಪಿಯಲ್ಲಿ ‘ರೌಡಿ ಮೋರ್ಚಾ’ ಘಟಕ ತೆರೆಯುವ ಲಕ್ಷಣವಿದೆ ಎಂದ ಕಾಂಗ್ರೆಸ್
ಬಿಜೆಪಿ ನಾಯಕರ ಜೊತೆ ರೌಡಿಶೀಟರ್ ಸೈಲೆಂಟ್ ಸುನೀಲ
Follow us on

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬಿಜೆಪಿ, ಕಾಂಗ್ರೆಸ್ (​BJP And Congress) ನಡುವೆ ಮಾತಿನ ಕಾಳಗಗಳು ಕಾಮನ್​. ಇದಕ್ಕೆ ಇಂತಹದೇ ವಿಷಯ ಬೇಕು ಅಂತೇನಿಲ್ಲ. ಇದೀಗ ಬಿಜೆಪಿ ನಾಯಕರ ಜತೆಗೆ ರೌಡಿಶೀಟರ್​ ಸೈಲೆಂಟ್​ ಸುನೀಲ (Rowdy Sheeter Silent Sunila) ಕಾಣಿಸಿಕೊಂಡಿರುವ ವಿಚಾರಕ್ಕೆ ಶುರುವಾಗಿರುವ ಮಾತಿನ ಮಲ್ಲಯುದ್ಧ ರಾಜ್ಯ ರಾಜಕಾರಣವನ್ನೇ ರಾಡಿ ಎಬ್ಬಿಸಿದಂತಿದೆ. ನಾಯಕರ ಮಧ್ಯೆ ವಾಗ್ಯುದ್ಧದ ಅಬ್ಬರಾಗಿದ್ರೆ, ಮತ್ತೊಂದೆಡೆ ಟ್ವೀಟ್​ನಲ್ಲೂ ಸಮರ ಶುರುವಾಗಿದೆ.

ರೌಡಿಶೀಟರ್​ ಸೈಲೆಂಟ್​ ಸುನೀಲ ಬಿಜೆಪಿ ನಾಯಕರ ಜೊತೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದೇ ತಡ ಅಸ್ತ್ರವನ್ನಾಗಿ ಮಾಡಿಕೊಂಡ ಕಾಂಗ್ರೆಸ್, ಬಿಜೆಪಿ ವಿರುದ್ಧ ಮುಗಿಬಿದ್ದಿದೆ. ಸರಣಿ ಟ್ವೀಟ್ ಮೂಲಕ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದೆ.

ಇದನ್ನೂ ಓದಿ: ರಾಜಕೀಯ ಪ್ರವೇಶಕ್ಕೆ ಸಜ್ಜಾದ ಕುಖ್ಯಾತ ರೌಡಿ ಸೈಲೆಂಟ್ ಸುನೀಲ: ಪಾತಕ ಲೋಕದಲ್ಲಿ ಹೀಗಿದೆ ಇವನ ಹೆಜ್ಜೆಗುರುತು

40% ವಸೂಲಿ ಸಾಕಾಗದೆ ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಂಡು ಹಫ್ತಾ ವಸೂಲಿಗೆ ರಾಜ್ಯ ಬಿಜೆಪಿ ಘಟಕ ತಯಾರಿ ನಡೆಸಿರುವಂತಿದೆ. ಬಿಜೆಪಿಯಲ್ಲಿ ‘ರೌಡಿ ಮೋರ್ಚಾ’ ಘಟಕ ತೆರೆಯುವ ಲಕ್ಷಣವಿದೆ. ಸೋಲಿನ ಭೀತಿಯಿಂದ ರೌಡಿಗಳನ್ನು ಬಳಸಿ ಮುಂದಿನ ಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸಿದೆಯೇ ಎಂದು ಪ್ರಶ್ನೆ? ಇದೇನಾ ಬಿಜೆಪಿ ಸಂಸ್ಕೃತಿ, ಸಂಸ್ಕಾರ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಇನ್ನು ಬಿಜೆಪಿ ಸಹ ಸರಣಿ ಟ್ವೀಟ್ ಮಾಡಿದ್ದು, ಕಾಂಗ್ರೆಸ್​ನಲ್ಲಿ ಸಿಎಂ ಮ್ಯೂಸಿಕಲ್ ಚೇರ್​ ಆರಂಭಗೊಂಡಿದೆ. ಮುಂದಿನ ಸಿಎಂ ಎಂದು ಘೋಷಿಸಿ ಬೀದಿ ಜಗಳಕ್ಕೆ ನಿಂತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಮತ್ತೆ ಮುಗಿಬಿದ್ದಿದೆ.

ಇದನ್ನೂ ಓದಿ: ಕಣ್ಮುಚ್ಚಿ ಕುಳಿತಿದೆಯಾ ಪೊಲೀಸ್ ಇಲಾಖೆ: ಸಿಸಿಬಿ ದಾಳಿ ವೇಳೆ ಎಸ್ಕೇಪ್ ಆದ ಎಂದಿದ್ದ ಸೈಲೆಂಟ್ ಸುನೀಲ ಬಹಿರಂಗ ಸಭೆಯಲ್ಲಿ ಭಾಗಿ

ತಮಗೆ ತಾವೇ ಮುಂದಿನ ಮುಖ್ಯಮಂತ್ರಿ ಅಂತ ಸಾರ್ವಜನಿಕವಾಗಿ ಘೋಷಣೆ ಮಾಡಿಕೊಳ್ಳುವ ಮೂಲಕ ಬೀದಿ ಜಗಳಕ್ಕೆ ನಿಂತಿದ್ದಾರೆ. ಕುರ್ಚಿಗಾಗಿ ಕಿತ್ತಾಡುವ ಇವರು ರಾಜ್ಯದ ಚುಕ್ಕಾಣಿ ಹಿಡಿದರೆ ರಾಜ್ಯದ ಗತಿ ಏನಾಗಬಹುದು ಯೋಚಿಸಿ. ಸಿದ್ದರಾಮಯ್ಯ ಅವರು ಹೋದಲ್ಲೆಲ್ಲಾ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡುತ್ತಿದ್ದರು. ಇದನ್ನು ನಿಯಂತ್ರಿಸಲು “ಟಿಕೆಟ್ ಘೋಷಿಸುವ ಅಧಿಕಾರ ಸಿದ್ದರಾಮಯ್ಯ ಅವರಿಗಿಲ್ಲ” ಎನ್ನುವ ಹೇಳಿಕೆಯನ್ನು ಡಿಕೆಶಿ ಘಂಟಾಘೋಷವಾಗಿ ನೀಡಿದರು. ಸಿಎಂ ಕುರ್ಚಿಗಾಗಿ ಶೀತಲ ಸಮರವೇ? ಎಂದು ಬಿಜೆಪಿ ಪ್ರಶ್ನಿಸಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 5:00 pm, Tue, 29 November 22