ಕಣ್ಮುಚ್ಚಿ ಕುಳಿತಿದೆಯಾ ಪೊಲೀಸ್ ಇಲಾಖೆ: ಸಿಸಿಬಿ ದಾಳಿ ವೇಳೆ ಎಸ್ಕೇಪ್ ಆದ ಎಂದಿದ್ದ ಸೈಲೆಂಟ್ ಸುನೀಲ ಬಹಿರಂಗ ಸಭೆಯಲ್ಲಿ ಭಾಗಿ

ಸಂಸದ ತೇಜಸ್ವಿ ಸೂರ್ಯ, ಪಿಸಿ ಮೋಹನ್, ಶಾಸಕ ಉದಯ್ ಗರುಡಾಚಾರ್, ಎನ್.ಆರ್.ರಮೇಶ್ ಇದ್ದ ವೇದಿಕೆಯಲ್ಲೇ ಸೈಲೆಂಟ್ ಸುನೀಲ ರಾಜಾರೋಷವಾಗಿ ಕಾಣಿಸಿಕೊಂಡಿದ್ದಾನೆ. ರಕ್ತ ಹರಿಸಿ ರೌಡಿ ಆದವನ ನೇತೃತ್ವದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ ಮಾಡಲಾಗಿದೆ.

ಕಣ್ಮುಚ್ಚಿ ಕುಳಿತಿದೆಯಾ ಪೊಲೀಸ್ ಇಲಾಖೆ: ಸಿಸಿಬಿ ದಾಳಿ ವೇಳೆ ಎಸ್ಕೇಪ್ ಆದ ಎಂದಿದ್ದ ಸೈಲೆಂಟ್ ಸುನೀಲ ಬಹಿರಂಗ ಸಭೆಯಲ್ಲಿ ಭಾಗಿ
Follow us
TV9 Web
| Updated By: ಆಯೇಷಾ ಬಾನು

Updated on:Nov 28, 2022 | 11:49 AM

ಬೆಂಗಳೂರು: ಇತ್ತೀಚೆಗೆ ನಗರದ 86 ರೌಡಿಶೀಟರ್​​​ಗಳ ಮನೆ ಮೇಲೆ ಸಿಸಿಬಿ ಪೊಲೀಸರು(CCB Police) ದಾಳಿ ನಡೆಸಿದ್ದರು. ಆದ್ರೆ ಪುಡಿ ರೌಡಿಗಳ ಮೇಲೆ ತಮ್ಮ ಪ್ರತಾಪ ತೋರಿಸಿ ಡಾನ್​ಗಳನ್ನು ಟಚ್ ಕೂಡ ಮಾಡದೆ ಸುಮ್ಮನಾಗಿದ್ದಾರೆ ಎಂಬ ಬಗ್ಗೆ ಚರ್ಚೆಯಾಗುತ್ತಿದೆ. ನವೆಂಬರ್ 23ರಂದು ನಡೆದಿದ್ದ ದಾಳಿ ವೇಳೆ ಎಸ್ಕೇಪ್ ಆದ ಎಂದು ಹೇಳಲಾಗುತ್ತಿದ್ದ ಸೈಲೆಂಟ್ ಸುನೀಲ(Silent Sunila) ನಿನ್ನೆ ನಡೆದ ಕಾರ್ಯಕ್ರಮದಲ್ಲಿ ರಾಜಕೀಯ ಗಣ್ಯರೊಂದಿಗೆ ಕಾಣಿಸಿಕೊಂಡಿದ್ದಾನೆ.

ಇತ್ತೀಚಿನ ದಾಳಿಯಲ್ಲಿ ಪೊಲೀಸರು ಪುಡಿ ರೌಡಿಗಳನ್ನ ಎತ್ತಾಕ್ಕೊಂಡು ಬಂದು ಪ್ರತಾಪ ತೋರಿಸಿದ್ದಾರೆ. ಆದ್ರೆ ಪ್ರಮುಖ ರೌಡಿಗಳಾದ ಸೈಲೆಂಟ್ ಸುನೀಲ್, ವಿಲ್ಸನ್ ಗಾರ್ಡನ್ ನಾಗ, ಸೈಕಲ್ ರವಿ, ಒಂಟೆ ರೋಹಿತ, ಕಾಡುಬೀಸನಹಳ್ಳಿ ರೋಹಿತ ಪರಾರಿಯಾಗಿದ್ದಾರೆಂದು ಸಿಸಿಬಿ ಪೊಲೀಸರು ಹೇಳಿಕೆ ಕೊಟ್ಟ ಸುಮ್ಮನಾಗಿದ್ದರು. ಇದರ ಬೆನ್ನಲ್ಲೇ ಈಗ ಅಂದು ಪರಾರಿಯಾಗಿದ್ದಾರೆಂದು ಹೇಳಿದ್ದ ಸೈಲೆಂಟ್ ಸುನೀಲ ನಿನ್ನೆ ಬಹಿರಂಗವಾಗಿ ಕಾಣಿಸಿಕೊಂಡಿದ್ದಾನೆ. ರಾಜಕಾರಣಿಗಳ ಸಮ್ಮುಖದಲ್ಲೇ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾನೆ. ಹೀಗಾಗಿ ಪೊಲೀಸ್ ಇಲಾಖೆ ಬಗ್ಗೆ ಅನೇಕ ಅನುಮಾನಗಳು ಕಾಡುತ್ತಿವೆ.

ಇದನ್ನೂ ಓದಿ: ಬೆಂಗಳೂರಿನ 86 ರೌಡಿಶೀಟರ್​​​ಗಳ ಮನೆ ಮೇಲೆ ಸಿಸಿಬಿ ಪೊಲೀಸರ ದಾಳಿ, ರಾಘವೇಂದ್ರನ ಮನೆಯಲ್ಲಿ ಲಾಂಗ್ ಪತ್ತೆ

ಸಂಸದ ತೇಜಸ್ವಿ ಸೂರ್ಯ, ಪಿಸಿ ಮೋಹನ್, ಶಾಸಕ ಉದಯ್ ಗರುಡಾಚಾರ್, ಎನ್.ಆರ್.ರಮೇಶ್ ಇದ್ದ ವೇದಿಕೆಯಲ್ಲೇ ಸೈಲೆಂಟ್ ಸುನೀಲ ರಾಜಾರೋಷವಾಗಿ ಕಾಣಿಸಿಕೊಂಡಿದ್ದಾನೆ. ರಕ್ತ ಹರಿಸಿ ರೌಡಿ ಆದವನ ನೇತೃತ್ವದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ ಮಾಡಲಾಗಿದೆ. ಬಹಿರಂಗ ಸಮಾವೇಶ ಮಾಡಿದರೂ ಸಿಸಿಬಿ ಪೊಲೀಸರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದಾರಾ? ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಕಾರ್ಯವೈಖರಿ‌ ಇದೇನಾ? ತನ್ನ ಇಲಾಖೆ ಮೇಲೆಯೇ ಹಿಡಿತ ಕಳೆದುಕೊಂಡ್ರಾ ಆಯುಕ್ತರು? ಇನ್ನಾದರೂ ನಿದ್ದೆಯಿಂದ ಏಳಬೇಕಿದೆ ಎಂದು ಅನೇಕರು ಪೊಲೀಸ್ ಇಲಾಖೆ ಮೇಲೆ ಆಕ್ರೋಶ ಹೊರ ಹಾಕಿದ್ದಾರೆ. ಹೀರೊಗಳಂತೆ ಪೋಸ್ ಕೊಡುವ ಅಧಿಕಾರಿಗಳು ನಿಷ್ಠೆಯಿಂದ ಕೆಲಸ ಮಾಡಬೇಕಿದೆ. ರಾಜಕಾರಣಿಗಳ ಒತ್ತಡಕ್ಕೆ ಮಣಿದು ಕೆಲಸ ಮಾಡೋದನ್ನ ಬಿಡಬೇಕಿದೆ.

ಸಿಸಿಬಿ ಪೊಲೀಸರ ಪೌರುಷ ಕೇವಲ ಪುಡಿ ರೌಡಿಗಳ ಮೇಲೆ. ಡಾನ್ ಗಳನ್ನ ಕಂಡರೆ ಖಾಕಿ ಹೀಗ್ಯಾಕೆ ಮಾಡುತ್ತೆ. ಬೆಂಗಳೂರು ಪೊಲೀಸರಂದ್ರೆ ನಡುಗುತ್ತಿದ್ದ ಡಾನ್ ಗಳ ಮುಂದೆ ಪೊಲೀಸರು ಜೋಕರ್​ಗಳಾಗಿಬಿಟ್ಟರೆ? ಎಂಬಂತಾಗಿದೆ.

ಇದನ್ನು ಓದಿ: ಬಿಬಿಎಂಪಿ ಚುನಾವಣೆಗೆ ಸಿದ್ಧರಾಗುತ್ತಿದ್ದ ರೌಡಿಶೀಟರ್​ಗಳು: ಹಠಾತ್ ದಾಳಿಗೆ ಕಾರಣ ತಿಳಿಸಿದ ಸಿಸಿಬಿ ಜಂಟಿ ಆಯುಕ್ತ ಶರಣಪ್ಪ

ಸುನೀಲ್ ಮೇಲೆ ಸದ್ಯಕ್ಕೆ ಯಾವುದೇ ಕೇಸ್ ಬಾಕಿ ಉಳಿದಿಲ್ಲ

ಇನ್ನು ಈ ಬಗ್ಗೆ ಸಿಸಿಬಿ ಜಂಟಿ ಆಯುಕ್ತ ಶರಣಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಕಳೆದ ವಾರ ಸಿಸಿಬಿ ವತಿಯಿಂದ ರೌಡಿಗಳ ಮನೆ ಮೇಲೆ ದಾಳಿ ಮಾಡಿ ಸರ್ಚ್ ಮಾಡಿದ್ವಿ. ಕೆಲವರು ಮನೆಯಲ್ಲಿ ಇರ್ಲಿಲ್ಲಾ. ಇದ್ದವರನ್ನು ವಶಕ್ಕೆ ಪಡೆದು ಎಚ್ಚರಿಕೆ ಕೊಡಲಾಗಿತ್ತು. ಈಗ ಹೀಗೆ ನಾಪತ್ತೆ ಆದ ಒಂಬತ್ತು ರೌಡಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಅದ್ರಲ್ಲಿ ಸೈಲೆಂಟ್ ಸುನಿಲ್, ಸೈಕಲ್ ರವಿ, ಮುಲಾಮ, ರೋಹಿತ್ ಸೇರಿ ಹಲವಾರ ಮೇಲೆ ನಿಗಾ ಇಟ್ಟಿದ್ದೇವೆ. ನೆನ್ನೆ ಒಂದು ಕಾರ್ಯಕ್ರಮ ಆಗಿದೆ. ಅಲ್ಲಿಗೆ ಸುನಿಲ್ ಇರುವುದು ಗಮನಕ್ಕೆ ಬಂದಿದೆ. ಯಾರ ಯಾರ ಮೇಲೆ ಕೇಸ್ ಇದೆ ಅದನ್ನು ಗಮದಲ್ಲಿ ಇಟ್ಟುಕೊಂಡು ಕೆಲಸ ಮಾಡ್ತಿದ್ದೇವೆ. ಸುನಿಲ್ ಮೇಲೆ ಸದ್ಯಕ್ಕೆ ಯಾವುದೇ ಕೇಸ್ ಬಾಕಿ ಉಳಿದಿಲ್ಲ. ಯಾವುದೇ ವಾರಂಟ್ ಬಾಕಿ ಇರ್ಲಿಲ್ಲಾ. ಮುಲಾಮ, ರಾಜ ದೊರೈ, ರೋಹಿತ್ ಗೌಡ, ಮಂಜು, ಗಜೇಂದ್ರ ಸೇರಿ ಒಂಬತ್ತು ಜನರನ್ನು ವಶಕ್ಕೆ ಪಡೆದಿದ್ದೇವೆ. ಯಾವುದೇ ರಾಜಕೀಯ ನಾಯಕರ ಒತ್ತಡ ಇಲ್ಲ. ರೌಡಿಶೀಟರ್​ಗಳ ವಿಚಾರದಲ್ಲಿ ಯಾವುದೇ ಮುಲಾಜಿಲ್ಲ ಎಂದರು.

Published On - 11:30 am, Mon, 28 November 22