AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಮರ್ಣ ಮಂಡ್ಯ ಪುಸ್ತಕವನ್ನು ದೇವೇಗೌಡ ಬಿಡುಗಡೆ ಮಾಡಿದ್ರು, ಉರಿಗೌಡ ನಂಜೇಗೌಡ ಬಗ್ಗೆ ನಮ್ಮ ಸಮಾಜಕ್ಕೆ ಹೆಮ್ಮೆ ಇದೆ ಎಂದ ಶೋಭಾ ಕರಂದ್ಲಾಜೆ

ಧರ್ಮದ ಉಳಿವಿಗಾಗಿ ಉರಿಗೌಡ, ನಂಜೇಗೌಡ ಹೋರಾಡಿದ್ದಾರೆ. ಹಿಂದೂಗಳ ನರಮೇಧ ಖಂಡಿಸಿ ಹೋರಾಟ ಮಾಡಿದ ಉರಿಗೌಡ, ನಂಜೇಗೌಡರ ಬಗ್ಗೆ ನಮ್ಮ ಸಮಾಜಕ್ಕೆ ಹೆಮ್ಮೆ ಇದೆ. ಹಿಂದೂಗಳನ್ನು ಕೊಂದಿದ್ದ ಟಿಪ್ಪು ಸುಲ್ತಾನ್​ ಕನ್ನಡ ವಿರೋಧಿಯಾಗಿದ್ದನು. ಟಿಪ್ಪು ವಿರುದ್ಧ ಸೆಟೆದು ನಿಂತಿದ್ದು ಉರಿಗೌಡ, ನಂಜೇಗೌಡರು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಸುಮರ್ಣ ಮಂಡ್ಯ ಪುಸ್ತಕವನ್ನು  ದೇವೇಗೌಡ ಬಿಡುಗಡೆ ಮಾಡಿದ್ರು, ಉರಿಗೌಡ ನಂಜೇಗೌಡ ಬಗ್ಗೆ ನಮ್ಮ ಸಮಾಜಕ್ಕೆ ಹೆಮ್ಮೆ ಇದೆ ಎಂದ ಶೋಭಾ ಕರಂದ್ಲಾಜೆ
ಕೇಂದ್ರ ಸಚಿವ ಶೋಭಾ ಕರಂದ್ಲಾಜೆ
Follow us
ವಿವೇಕ ಬಿರಾದಾರ
|

Updated on: Mar 19, 2023 | 12:38 PM

ಹುಬ್ಬಳ್ಳಿ: ಉರಿಗೌಡ, ನಂಜೇಗೌಡ (Uri Gowda, Nanje Gowda) ಎರಡು ಹೆಸರುಗಳು ರಾಜ್ಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದು, ಕರ್ನಾಟಕದ ಇತಿಹಾಸದ ಪುಟಗಳನ್ನು ತಿರುವುವಂತೆ ಮಾಡಿವೆ. ಈ ಇಬ್ಬರ ನಾಯಕರ ವಿಚಾರವಾಗಿ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎದ್ದಿದ್ದು, ತಮ್ಮ ತಮ್ಮ ರಾಜಕೀಯ ದಾಳಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಈ ವಿಚಾರವಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಮಾತನಾಡಿ ಧರ್ಮದ ಉಳಿವಿಗಾಗಿ ಉರಿಗೌಡ, ನಂಜೇಗೌಡ ಹೋರಾಡಿದ್ದಾರೆ. ಹಿಂದೂಗಳ ನರಮೇಧ ಖಂಡಿಸಿ ಹೋರಾಟ ಮಾಡಿದ ಉರಿಗೌಡ, ನಂಜೇಗೌಡರ ಬಗ್ಗೆ ನಮ್ಮ ಸಮಾಜಕ್ಕೆ ಹೆಮ್ಮೆ ಇದೆ. ಹಿಂದೂಗಳನ್ನು ಕೊಂದಿದ್ದ ಟಿಪ್ಪು ಸುಲ್ತಾನ್​ ಕನ್ನಡ ವಿರೋಧಿಯಾಗಿದ್ದನು. ಇದೇ ಟಿಪ್ಪು ವಿರುದ್ಧ ಉರಿಗೌಡ, ನಂಜೇಗೌಡ ಸೆಟೆದು ನಿಂತಿದ್ದರು, ಎಂದು ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸುವರ್ಣ ಮಂಡ್ಯ ಪುಸ್ತಕದಲ್ಲಿ ಉರಿಗೌಡ, ನಂಜೇಗೌಡರ ‌‌ಬಗ್ಗೆ ಉಲ್ಲೇಖವಿದೆ. 2006ರಲ್ಲಿ ಈ ಪುಸ್ತಕವನ್ನು ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡರು ಬಿಡುಗಡೆ ಮಾಡಿದ್ದರು. ಪುಸಕ್ತ ಬಿಡುಗಡೆ ಸಂದರ್ಭದಲ್ಲಿ ಜೆಡಿಎಸ್​ ನಾಯಕ ಹೆಚ್​. ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಇದೊಂದು ಸಂಶೋಧನಾತ್ಮಕ ಗ್ರಂಥ ಎಂದು ಹೇಳಿದರು.

ಇದನ್ನೂ ಓದಿ: ಟಿಪ್ಪುವನ್ನು ಉರಿಗೌಡ ನಂಜೇಗೌಡ ಕೊಂದ್ರಾ? ಯಾರಿವರು? ಇತಿಹಾಸ ತಜ್ಞ ಪ್ರೊ. ನಂಜರಾಜೇ ಅರಸ್ ಹೇಳಿದ್ದಿಷ್ಟು

ಜೆಡಿಎಸ್​, ಕಾಂಗ್ರೆಸ್​ ವೋಟ್ ಬ್ಯಾಂಕ್​​​ಗಾಗಿ ಮಾತನಾಡುತ್ತಿದ್ದಾರೆ. ಉರಿಗೌಡ, ನಂಜೇಗೌಡ ಸ್ವಾಭಿಮಾನಿಗಳು. ಟಿಪ್ಪು ಕೊಡವರ ನರಮೇಧ ಮಾಡಿದ್ದನು. ಹಿಂದೂಗಳನ್ನು ಕೊಂದು ಹಾಕಿದ್ದನು. ಟಿಪ್ಪು ಕನ್ನಡ ವಿರೋಧಿಯಾಗಿದ್ದನು. ಅಂತವನ ವಿರುದ್ಧ ಸೆಟೆದು ನಿಂತಿದ್ದು ಉರಿಗೌಡ ನಂಜೇಗೌಡರು ಎಂದು ತಿಳಸಿದರು.

ವಿವಾದದ ಹಿನ್ನೆಲೆ

ನರೇಂದ್ರ ಮೋದಿ ಮಂಡ್ಯಕ್ಕೆ ಬಂದ ವೇಳೆ ಅವರ ಸ್ವಾಗತಕ್ಕಾಗಿ ಮಾಡಿದ ದ್ವಾರ ಬಾಗಿಲಿಗೆ ಉರಿಗೌಡ, ನಂಜೇಗೌಡ ಹೆಸರು ಇಡಲಾಗಿತ್ತು. ಆದರೆ ಅಂದು ರಾತ್ರೋ ರಾತ್ರಿ ಅದನ್ನ ತೆರೆವು ಗೊಳಿಸಿ, ಬಾಲಗಂಗಾಧರನಾಥ ಸ್ವಾಮೀಜಿ ದ್ವಾರ ಬಾಗಿಲು ಅಂತಾ ಬದಲಾಯಿಸಲಾಗಿತ್ತು. ಇದಾದ ನಂತರ ಸಿ.ಟಿ. ರವಿ ಕೂಡ ಟಿಪ್ಪು ಕೊಂದದ್ದು ಉರಿಗೌಡ, ನಂಜೇಗೌಡ ಎಂದು ಹೆಸರು ಬಳಸಿ ಒಕ್ಕಲಿಗ ಅಸ್ತ್ರ ಹೂಡಿಸಿದ್ದರು. ಇದನ್ನೇ ಪ್ರತ್ಯಾಸ್ತ್ರ ಮಾಡಿಕೊಂಡ ಜೆಡಿಎಸ್ ಮತ್ತು ಕಾಂಗ್ರೆಸ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿತ್ತು. ಮಾಜಿ ಸಿಎಂ ಕುಮಾರಸ್ವಾಮಿ ಇದನ್ನು ಒಕ್ಕಲಿಗರ ಮೇಲೆ ಬಿಜೆಪಿ ವಕ್ರದೃಷ್ಟಿ ಎಂದು ಹೇಳಿದ್ದರು. ಬಿಜೆಪಿಯವರು ಇತಿಹಾಸದಲ್ಲೇ ಇಲ್ಲದ ವ್ಯಕ್ತಿಗಳನ್ನ ಸೃಷ್ಟಿಸಿ, ಒಕ್ಕಲಿಗ ಸಮುದಾಯಕ್ಕೆ ಅಗೌರವ ತೋರಿಸ್ತಿದ್ದಾರೆ. ಒಕ್ಕಲಿಗರು ಇದನ್ನ ಪ್ರತಿಭಟಿಸಬೇಕು ಎಂದಿದ್ದರು. ನಾಡಪ್ರಭು ಕೆಂಪೇಗೌಡರ ಪ್ರತಿಮೆ ಸ್ಥಾಪಿಸಿ ಒಕ್ಕಲಿಗರನ್ನು ಓಲೈಸುವ ಕೆಲಸದ ಮಾಡಿರೋ ಬಿಜೆಪಿ, ಇನ್ನೊಂದೆಡೆ ಟಿಪ್ಪು ಕೊಲೆಯ ಕಳಂಕವನ್ನು ಮೆತ್ತಿ, ಒಕ್ಕಲಿಗ ಸಮುದಾಯಕ್ಕೆ ಕಪ್ಪುಚುಕ್ಕೆ ಮೆತ್ತಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಟ್ವೀಟ್​ನಲ್ಲೇ ಕಿಡಿ ಕಾರಿದ್ದರು. ನಂತರ ಬಿಜೆಪಿ ವಕ್ತಾರ ಸಿಟಿ ಮಂಜುನಾಥ್ ಮಂಡ್ಯದಲ್ಲೇ ಸ್ಪೋಟಕ ಸಾಕ್ಷ್ಯವನ್ನ ಬಿಡುಗಡೆ ಮಾಡಿದ್ದರು. 70 ವರ್ಷಗಳ ಹಿಂದಿನ ಲಾವಣಿ ಹಾಡನ್ನ ರಿಲೀಸ್ ಮಾಡಿದ್ದರು. ಅದರಲ್ಲಿ ಪರಂಪರಾಗತ ವೈರಿ ಗೌಡರು ತರಿದರು ಖಡ್ಗದಲ್ಲಿ ಎಂಬ ಪದ ಬಳಕೆ ಮಾಡಲಾಗಿತ್ತು. ಈ ಲಾವಣಿ ಹಾಡಿನ ಸಿಡಿಯನ್ನ ಕೆಪಿಸಿಸಿ ಕಚೇರಿ ಹಾಗೂ ಜೆಡಿಎಸ್ ಕೇಂದ್ರ ಕಚೇರಿಗೆ ಕೊರಿಯರ್ ಮಾಡುವುದರ ಮೂಲಕ ಟಕ್ಕರ್ ಕೊಟ್ಟಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿದ್ಯಾರ್ಥಿನಿಯ ಬದ್ಧತೆ ಕಂಡು ಸಂತೋಷ ವ್ಯಕ್ತಪಡಿಸಿದ ಕಾಲೇಜು ಪ್ರಿನ್ಸಿಪಾಲ್
ವಿದ್ಯಾರ್ಥಿನಿಯ ಬದ್ಧತೆ ಕಂಡು ಸಂತೋಷ ವ್ಯಕ್ತಪಡಿಸಿದ ಕಾಲೇಜು ಪ್ರಿನ್ಸಿಪಾಲ್
‘ಅವರು ಇದ್ದಿದ್ರೆ...’ ಅಂಬರೀಶ್ ಹುಟ್ಟುಹಬ್ಬದಂದು ಸುಮಲತಾ ಭಾವುಕ
‘ಅವರು ಇದ್ದಿದ್ರೆ...’ ಅಂಬರೀಶ್ ಹುಟ್ಟುಹಬ್ಬದಂದು ಸುಮಲತಾ ಭಾವುಕ
ಹಿಂದೂ-ಮುಸ್ಲಿಂ ಸಮುದಾಯಗಳು ಸಾಮರಸ್ಯದಿಂದ ಬದುಕಬೇಕು: ಸಿದ್ದರಾಮಯ್ಯ
ಹಿಂದೂ-ಮುಸ್ಲಿಂ ಸಮುದಾಯಗಳು ಸಾಮರಸ್ಯದಿಂದ ಬದುಕಬೇಕು: ಸಿದ್ದರಾಮಯ್ಯ
‘ಸರಿಗಮಪ’ ವೇದಿಕೆ ಮೇಲೆ ಫಿನಾಲೆಗೂ ಮೊದಲು ವಿಶೇಷ ಕಾರ್ಯಕ್ರಮ
‘ಸರಿಗಮಪ’ ವೇದಿಕೆ ಮೇಲೆ ಫಿನಾಲೆಗೂ ಮೊದಲು ವಿಶೇಷ ಕಾರ್ಯಕ್ರಮ
ಸೋನಿಯ ಗಾಂಧಿಗೆ ಹರಿಪ್ರಸಾದ್ ಆಪ್ತರು ಎಂಬ ಕಾರಣಕ್ಕೆ ಭೇಟಿಯೇ?
ಸೋನಿಯ ಗಾಂಧಿಗೆ ಹರಿಪ್ರಸಾದ್ ಆಪ್ತರು ಎಂಬ ಕಾರಣಕ್ಕೆ ಭೇಟಿಯೇ?
ಭಾರತ ಏನು ಮಾಡಬಹುದು ಎಂದು ಪಾಕಿಸ್ತಾನಕ್ಕೆ ಈಗ ಅರ್ಥವಾಗಿರಬಹುದು
ಭಾರತ ಏನು ಮಾಡಬಹುದು ಎಂದು ಪಾಕಿಸ್ತಾನಕ್ಕೆ ಈಗ ಅರ್ಥವಾಗಿರಬಹುದು
ಒಂದೇ ವಾರದಲ್ಲಿ ಹೃದಯಾಘಾತದಿಂದ ಮೂವರ ಸಾವು; ತಜ್ಞರು ಹೇಳಿದ್ದೇನು ನೋಡಿ
ಒಂದೇ ವಾರದಲ್ಲಿ ಹೃದಯಾಘಾತದಿಂದ ಮೂವರ ಸಾವು; ತಜ್ಞರು ಹೇಳಿದ್ದೇನು ನೋಡಿ
VIDEO: ಮೈದಾನದಲ್ಲೇ ಹೊಡೆದಾಟ... ಬಾಂಗ್ಲಾ ಆಟಗಾರನಿಗೆ ಪಂಚ್
VIDEO: ಮೈದಾನದಲ್ಲೇ ಹೊಡೆದಾಟ... ಬಾಂಗ್ಲಾ ಆಟಗಾರನಿಗೆ ಪಂಚ್
ಗದಗ: ಶಾಲೆ ಆರಂಭದ ದಿನವೇ ಶಾಲಾ ವಾಹನ ಪಲ್ಟಿ, ತಪ್ಪಿದ ದುರಂತ
ಗದಗ: ಶಾಲೆ ಆರಂಭದ ದಿನವೇ ಶಾಲಾ ವಾಹನ ಪಲ್ಟಿ, ತಪ್ಪಿದ ದುರಂತ
ರಸ್ತೆಯಲ್ಲಿ ನೀರು, ಮಳೆ ಹೊರತಾಗಿಯೂ ಓಡಾಡುತ್ತಿರುವ ವಾಹನ ಮತ್ತು ಜನ
ರಸ್ತೆಯಲ್ಲಿ ನೀರು, ಮಳೆ ಹೊರತಾಗಿಯೂ ಓಡಾಡುತ್ತಿರುವ ವಾಹನ ಮತ್ತು ಜನ