60-70 ಸ್ಥಾನ ಗೆದ್ರೆ ಬೆರಳು ಕಟ್ ಮಾಡಿಕೊಳ್ಳುತ್ತೇನೆ: ಕಾಂಗ್ರೆಸ್​ಗೆ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಸವಾಲ್​

ಅರ್ಧ ಮೀಸೆ ಬೋಳಿಸಿಕೊಳ್ಳುವ ಎಂದು ಸವಾಲು ಹಾಕಿದ್ದ ಶಾಸಕ ಶಿವನಗೌಡ ನಾಯಕ ಮತ್ತೊಂದು ಇದೀಗ ಕಾಂಗ್ರೆಸ್​ಗೆ ಮತ್ತೊಂದು ಚಾಲೆಂಜ್ ಮಾಡಿದ್ದಾರೆ.

60-70 ಸ್ಥಾನ ಗೆದ್ರೆ ಬೆರಳು ಕಟ್ ಮಾಡಿಕೊಳ್ಳುತ್ತೇನೆ: ಕಾಂಗ್ರೆಸ್​ಗೆ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಸವಾಲ್​
Shivanagowda Nayak
Updated By: ರಮೇಶ್ ಬಿ. ಜವಳಗೇರಾ

Updated on: Oct 12, 2022 | 6:07 PM

ಕೊಪ್ಪಳ: ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ನಾಯಕ ಸವಾಲಿಗೆ ಪ್ರತಿ ಸವಾಲ್, ಆರೋಪ-ಪ್ರತ್ಯಾರೋಪಗಳು ಜೋರಾಗಿವೆ.

ರಾಯಚೂರು ಜಿಲ್ಲೆಯಲ್ಲಿ ಕಾಂಗ್ರೆಸ್ 7 ಸ್ಥಾನ ಗೆದ್ದರೆ ಅರ್ಧ ಮೀಸೆ ತೆಗೆಯುವೆ ಎಂದಿದ್ದ ಬಿಜೆಪಿ ಶಾಸಕ ಶಿವನಗೌಡ ನಾಯಕ್ (Shivangowda Nayak )ಇದೀಗ ಬೆರಳು ಕಟ್ ಮಾಡಿಕೊಳ್ಳುವ ಸವಾಲು ಹಾಕಿದ್ದಾರೆ.

ಜಿಲ್ಲೆಯಲ್ಲಿ ಕಾಂಗ್ರೆಸ್ 7 ಕ್ಷೇತ್ರ ಗೆದ್ರೆ ಅರ್ಧಭಾಗ ಮೀಸೆ ಬೋಳಿಸಿಕೊಳ್ತಿನಿ: ಕೈ ನಾಯಕರಿಗೆ ಬಿಜೆಪಿ ಶಾಸಕ ಸವಾಲ್

ಕುಷ್ಟಗಿಯ ಬಿಜೆಪಿ ಜನಸ್ಪಂದನಾ ಕಾರ್ಯಕ್ರದಲ್ಲಿ ಮಾತನಾಡಿದ ಶಿವನಗೌಡ ನಾಯಕ್, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 60 ಸೀಟುಗಳು ಗೆಲ್ಲಲ್ಲ. ಒಂದು ವೇಳೆ ಕಾಂಗ್ರೆಸ್​ ಮುಂಬರುವ ಚುನಾವಣೆಯಲ್ಲಿ 60-70 ಸ್ಥಾನ ಗೆದ್ರೆ ಬೆರಳು ಕಟ್ ಮಾಡಿಕೊಳ್ಳುತ್ತೇನೆ ಎಂದು ಚಾಲೆಂಜ್ ಮಾಡಿದರು.

ಸುಮ್ನೆ ಅಷ್ಟು ಗೆಲ್ತೀವಿ, ಇಷ್ಟು ಸ್ಥಾನ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ರಾಹುಲ್ ಗಾಂಧಿ ಎಷ್ಟೇ ತಿರುಗಾಡಿದ್ರು ಅಷ್ಟು ಗೆಲ್ಲಲ್ಲ ಎಂದು ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ಗೆ ಶಿವನಗೌಡ ನಾಯಕ್ ಟಾಂಗ್ ಕೊಟ್ಟರು.

ಮೊನ್ನೇ ಅಷ್ಟೇ ರಾಯಚೂರಿನ ಬಿಜೆಪಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಶಿವನಗೌಡ ನಾಯಕ್, ಜಿಲ್ಲೆಯಲ್ಲಿ ಏಳು ಸ್ಥಾನ ಗೆದ್ದರೆ ನನ್ನ ಅರ್ಧ ಮೀಸೆ ಬೋಳಿಸಿಕೊಳ್ಳುವ ಎಂದು ಸವಾಲು ಹಾಕಿದ್ದರು. ಇದರ ಬೆನ್ನಲ್ಲೇ ಇದೀಗ ಬೆರಳು ಕಟ್ ಮಾಡಿಕೊಳ್ಳುವ ಮಾತುಗಳನ್ನಾಡಿದ್ದಾರೆ.