2024ರ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ‘ಬಕ್ರೀದ್ ಮೇ ಬಚೇಂಗೆ ತೋ…’ ಎಂದು ಉತ್ತರಿಸಿದ ಮಲ್ಲಿಕಾರ್ಜುನ ಖರ್ಗೆ
ಒಂದು ಮಾತಿದೆ ಬಕ್ರೀದ್ ಮೇ ಬಚೇಂಗೆ ತೋ ಮೊಹರಂ ಮೇ ನಾಚೇಂಗೆ (ಆಡು ಬಕ್ರೀದ್ ನಲ್ಲಿ ಬದುಕಿದರೆ ಅದು ಮೊಹರಂ ಸಮಯದಲ್ಲಿ ಕುಣಿಯುತ್ತದೆ) ಮೊದಲು ಮತದಾನವಾಗಲಿ.
ದೆಹಲಿ: ಕಾಂಗ್ರೆಸ್ (Congress) ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರು ಸೋಮವಾರ (ಅಕ್ಟೋಬರ್ 17) ಪಕ್ಷದ ಅಧ್ಯಕ್ಷರ ಚುನಾವಣೆಗಾಗಿ ಮಧ್ಯಪ್ರದೇಶದಲ್ಲ ಪ್ರಚಾರ ಮಾಡುವಾಗ 2024 ರ ಪ್ರಧಾನಿ ಅಭ್ಯರ್ಥಿಯ ಕುರಿತು ಕೇಳಿದ ಪ್ರಶ್ನೆಗೆ ಸೇತುವೆಗೆ ಬಂದಾಗ ದಾಟುತ್ತೇನೆ ಎಂದಿದ್ದಾರೆ. 2024 ರ ರಾಷ್ಟ್ರೀಯ ಚುನಾವಣೆಗೆ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಅವರು ರಾಹುಲ್ ಗಾಂಧಿಯ (Rahul Gandhi) ವಿರುದ್ಧ ಸ್ಪರ್ಧಿಸುತ್ತಾರೆಯೇ ಎಂದು ಕೇಳಿದಾಗ ಈ ಬಗ್ಗೆ ತುಂಬಾ ಮುಂಚೆಯೇ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. “ಈ ಚುನಾವಣೆಗಳನ್ನು ಮೊದಲು ಎದುರಿಸೋಣ. ಒಂದು ಮಾತಿದೆ ಬಕ್ರೀದ್ ಮೇ ಬಚೇಂಗೆ ತೋ ಮೊಹರಂ ಮೇ ನಾಚೇಂಗೆ (ಆಡು ಬಕ್ರೀದ್ ನಲ್ಲಿ ಬದುಕಿದರೆ ಅದು ಮೊಹರಂ ಸಮಯದಲ್ಲಿ ಕುಣಿಯುತ್ತದೆ) ಮೊದಲು ಮತದಾನವಾಗಲಿ.ನಾನು ಮುಖ್ಯಸ್ಥನಾಗಲಿ, ನಂತರ ನೋಡೋಣ ಎಂದು ಖರ್ಗೆ ಹೇಳಿದ್ದಾರೆ.
ಕಳೆದ 20 ವರ್ಷಗಳಲ್ಲಿ ಗಾಂಧಿಯೇತರರು ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷರ ಮೊದಲ ಚುನಾವಣೆಯಲ್ಲಿ ಮಾಜಿ ಕೇಂದ್ರ ಸಚಿವರು ಗೆಲುವು ಸಾಧಿಸುವುದು ಬಹುತೇಕ ಖಚಿತವಾಗಿದೆ.
#WATCH| Bhopal, MP | There is a saying “Bakrid mein bachenge toh Muharram mein nachenge”. First, let these elections get over and let me become president, then we’ll see: Congress presidential candidate Mallikarjun Kharge when asked who would be the PM’s face, Rahul Gandhi or he. pic.twitter.com/wvtCPqDlIH
— ANI (@ANI) October 12, 2022
80 ವರ್ಷ ವಯಸ್ಸಿನ ಖರ್ಗೆ ಮತ್ತು ಶಶಿ ತರೂರ್ ನಡುವೆ ಕಾಂಗ್ರೆಸ್ ಅಧ್ಯಕ್ಷಸ್ಥಾನಕ್ಕೆ ಸ್ಪರ್ಧೆ ನಡೆಯಲಿದೆ. ಖರ್ಗೆ ಅಥವಾ ಬೇರೆ ಯಾರಾದರೂ ತಮ್ಮ “ಅಧಿಕೃತ” ಅಭ್ಯರ್ಥಿ ಅಲ್ಲ ಎಂದು ಕಾಂಗ್ರೆಸ್ ಹೇಳಿದೆ. ಗಾಂಧಿ ಕುಟುಂಬ ಸ್ಪರ್ಧಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ತಾನು ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಖರ್ಗೆ ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಖರ್ಗೆ ಅವರ ಪ್ರಮುಖ ಪ್ರತಿಸ್ಪರ್ಧಿ ಶಶಿ ತರೂರ್. ಇಬ್ಬರೂ ಅಭ್ಯರ್ಥಿಗಳು ಕಾಂಗ್ರೆಸ್ ಪ್ರತಿನಿಧಿಗಳ ಬೆಂಬಲವನ್ನು ಪಡೆಯಲು ವಿವಿಧ ರಾಜ್ಯಗಳಿಗೆ ಪ್ರಯಾಣಿಸುತ್ತಿರುವಾಗ, ಅನೇಕ ರಾಜ್ಯಗಳಲ್ಲಿ ತರೂರ್ ಅವರಿಗಿಂತ ಹೆಚ್ಚಿನ ಜನರು ಖರ್ಗೆ ಅವರಿಗೆ ಬೆಂಬಲ ಸೂಚಿಸುತ್ತಿದ್ದು ಖರ್ಗೆ ಚುನಾವಣೆ ಗೆಲ್ಲುವುದು ಬಹುತೇಕ ಖಚಿತವಾದಂತಿದೆ.
Published On - 9:52 pm, Wed, 12 October 22