Breaking ದೆಹಲಿ ಲೆಫ್ಟಿನೆಂಟ್​​ ಗವರ್ನರ್​​ ಅನುಮತಿ ನಿರಾಕರಿಸಿದರೂ ಸಿಂಗಾಪುರಕ್ಕೆ ಭೇಟಿ ನೀಡುವೆ: ಅರವಿಂದ ಕೇಜ್ರಿವಾಲ್

ಅದು ಮೇಯರ್​​ಗಳ ಸಮಾವೇಶವಾಗಿರುವುದರಿಂದ ಕೇಜ್ರಿವಾಲ್ ಹೋಗಬೇಕಾದ ಅಗತ್ಯವಿಲ್ಲ ಎಂದು ಸಕ್ಸೇನಾ ಗುರುವಾರ ಅನುಮತಿ ನಿರಾಕರಿಸಿದ್ದರೂ ನಾನು ಸಿಂಗಾಪುರಕ್ಕೆ ಭೇಟಿ ನೀಡುತ್ತೇನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ .

Breaking ದೆಹಲಿ ಲೆಫ್ಟಿನೆಂಟ್​​ ಗವರ್ನರ್​​ ಅನುಮತಿ ನಿರಾಕರಿಸಿದರೂ ಸಿಂಗಾಪುರಕ್ಕೆ ಭೇಟಿ ನೀಡುವೆ: ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್
Updated By: ರಶ್ಮಿ ಕಲ್ಲಕಟ್ಟ

Updated on: Jul 21, 2022 | 6:48 PM

ಸಿಂಗಾಪುರದಲ್ಲಿ (Singapore visit) ಅಗಸ್ಟ್ ತಿಂಗಳಲ್ಲಿ ನಡೆಯಲಿರುವ ಸಮಾವೇಶವೊಂದರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಭಾಗವಹಿಸುವುದಕ್ಕೆ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ( VK Saxena) ಅನುಮತಿ ನಿರಾಕರಿಸಿದ್ದಾರೆ. ಅದು ಮೇಯರ್​​ಗಳ ಸಮಾವೇಶವಾಗಿರುವುದರಿಂದ ಕೇಜ್ರಿವಾಲ್ ಹೋಗಬೇಕಾದ ಅಗತ್ಯವಿಲ್ಲ ಎಂದು ಸಕ್ಸೇನಾ ಗುರುವಾರ ಅನುಮತಿ ನಿರಾಕರಿಸಿದ್ದರೂ ನಾನು ಸಿಂಗಾಪುರಕ್ಕೆ ಭೇಟಿ ನೀಡುತ್ತೇನೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.ವಿದೇಶದಲ್ಲಿ ನಡೆಯುವ ಸಮಾವೇಶದಲ್ಲಿ ಹಾಜರಾಗದಂತೆ ಕೇಜ್ರಿವಾಲ್ ಅವರಿಗೆ ಅನುಮತಿ ನಿರಾಕರಿಸುತ್ತಿರುವುದು ಇದು ಎರಡನೇ ಬಾರಿ. ಇದು ಮೇಯರ್ ಗಳ ಸಮಾವೇಶ. ಇದರಲ್ಲಿ ಮುಖ್ಯಮಂತ್ರಿ ಭಾಗವಹಿಸುವ ಅಗತ್ಯವಿಲ್ಲ ಎಂದು ವಿಕೆ ಸಕ್ಸೇನಾ ಅವರು ಕೇಜ್ರಿವಾಲ್ ಮನವಿಗೆ ಉತ್ತರಿಸಿದ್ದಾರೆ. ಗೌರವಾನ್ವಿತ ಲೆಫ್ಟಿನೆಂಟ್ ಗವರ್ನರ್ ಅವರ ಆದೇಶವನ್ನು ನಾನು ಒಪ್ಪುವುದಿಲ್ಲ ಎಂದು ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದಾರೆ.


ನಮ್ಮ ದೇಶದಲ್ಲಿರುವ ಪ್ರತಿಯೊಂದು ಸಾಂವಿಧಾನಿಕ ಅಧಿಕಾರಿಯ ಭೇಟಿಯು ಆ ಅಧಿಕಾರಿಯ ಅಧಿಕಾರದ ವ್ಯಾಪ್ತಿಯೊಳಗೆ ಯಾವ ವಿಷಯಗಳು ಬರುತ್ತವೆ ಎಂಬುದನ್ನು ನಿರ್ಧರಿಸಿ ಆಗುವುದಾದರೆ ಇದು ತುಂಬಾ ತಮಾಷೆಯ ಸಂಗತಿ. ಹೀಗಾಗುವುದಾದರೆ ಪ್ರಧಾನಿಯವರೂ ಹೆಚ್ಚಿನ ಸ್ಥಳಗಳಿಗೆ ಹೋಗುವಂತಿಲ್ಲ. ಯಾಕೆಂದರೆ ಅವರು ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚೆ ಮಾಡುತ್ತಾರೆ, ಅದರಲ್ಲಿ ಹೆಚ್ಚಿನದ್ದು ಅವರ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಇದೀಗ ದೆಹಲಿ ಸರ್ಕಾರವು ನೇರವಾಗಿಯೇ ವಿದೇಶಾಂಗ ಸಚಿವಾಲಯದ ಅನುಮತಿ ಪಡೆಯಲು ನಿರ್ಧರಿಸಿದೆ. ಸಿಂಗಾಪುರದಲ್ಲಿ World Cities Summit ನಡೆಯಲಿದ್ದು, ಇದರಲ್ಲಿ ಮುಖ್ಯಮಂತ್ರಿ ಭಾಗವಹಿಸುವ ಅಗತ್ಯವಿಲ್ಲ ಎಂದು ಲೆಫ್ಟಿನೆಂಟ್ ಗವರ್ನರ್ ಹೇಳಿದ್ದರು.

Published On - 5:24 pm, Thu, 21 July 22