ಹಗೆ ಸಾಧಿಸುವುದಕ್ಕೆ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡುವ ಲಜ್ಜೆಯಿಲ್ಲದ ಇಂಥಾ ಸರ್ಕಾರವನ್ನು ನಾನೆಂದೂ ನೋಡಿಲ್ಲ: ಯಶವಂತ ಸಿನ್ಹಾ

ಕಳೆದ 60 ವರ್ಷಗಳಲ್ಲಿ ಈ ರೀತಿ ಭಯಪಡಿಸುವ ಸರ್ಕಾರದ ಸಂಸ್ಥೆಗಳನ್ನು ನಾನೆಂದೂ ನೋಡಿಲ್ಲ, ನಾನು ಅಟಲ್ ಜೀ ಅವರ ಸರ್ಕಾರದಲ್ಲಿ 5 ವರ್ಷವಿದ್ದೆ. ರಾಜಕೀಯ ವಿರೋಧಿಗಳ ವಿರುದ್ಧ ಜಾರಿ ನಿರ್ದೇಶನಾಲಯ, ತೆರಿಗೆ ಇಲಾಖೆಗಳನ್ನು ಬಳಸಬೇಕು ಎಂಬುದು ಯಾವತ್ತೂ ನನ್ನ ಮನಸ್ಸಲ್ಲಿ ಬಂದಿರಲಿಲ್ಲ...

ಹಗೆ ಸಾಧಿಸುವುದಕ್ಕೆ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡುವ ಲಜ್ಜೆಯಿಲ್ಲದ ಇಂಥಾ ಸರ್ಕಾರವನ್ನು ನಾನೆಂದೂ ನೋಡಿಲ್ಲ: ಯಶವಂತ ಸಿನ್ಹಾ
ಯಶವಂತ ಸಿನ್ಹಾ
Updated By: ರಶ್ಮಿ ಕಲ್ಲಕಟ್ಟ

Updated on: Jul 12, 2022 | 7:16 PM

ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ (presidential election) ಚುನಾವಣಾ ಆಯೋಗ ಮತಪತ್ರ , ಪೆನ್, ಪೇಪರ್ ಮತ್ತು ಮತ ಪೆಟ್ಟಿಗೆಯನ್ನು ಮಂಗಳವಾರ ವಿತರಿಸಿದ್ದು, ರಾಷ್ಟ್ರಪತಿ ಹುದ್ದೆ ಸ್ಪರ್ಧಿಸುತ್ತಿರುವ ವಿಪಕ್ಷ ಬೆಂಬಲಿತ ಅಭ್ಯರ್ಥಿ ಯಶವಂತ ಸಿನ್ಹಾ(Yashwant Sinha) ಕೇಂದ್ರ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿರೋಧಿಗಳ ಮೇಲೆ ಹಗೆ ಸಾಧಿಸುವುದಕ್ಕಾಗಿ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದೆ ಎಂದು ಸಿನ್ಹಾ ಆರೋಪಿಸಿದ್ದಾರೆ. ಮಂಗಳವಾರ ಚಂಡೀಗಢಕ್ಕೆ (Chandigarh) ಬಂದ ಸಿನ್ಹಾ ಕಾಂಗ್ರೆಸ್ ನೇತಾರ ಭುಪಿಂಗದರ್ ಸಿಂಗ್ ಹೂಡಾ ನೇತೃತ್ವದ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಿದ್ದಾರೆ. ಕಳೆದ 60 ವರ್ಷಗಳಲ್ಲಿ ಈ ರೀತಿ ಭಯಪಡಿಸುವ ಸರ್ಕಾರದ ಸಂಸ್ಥೆಗಳನ್ನು ನಾನೆಂದೂ ನೋಡಿಲ್ಲ, ನಾನು ಅಟಲ್ ಜೀ ಅವರ ಸರ್ಕಾರದಲ್ಲಿ 5 ವರ್ಷವಿದ್ದೆ. ರಾಜಕೀಯ ವಿರೋಧಿಗಳ ವಿರುದ್ಧ ಜಾರಿ ನಿರ್ದೇಶನಾಲಯ, ತೆರಿಗೆ ಇಲಾಖೆಗಳನ್ನು ಬಳಸಬೇಕು ಎಂಬುದು ಯಾವತ್ತೂ ನನ್ನ ಮನಸ್ಸಲ್ಲಿ ಬಂದಿರಲಿಲ್ಲ. ಆ ದಿನಗಳಲ್ಲಿ ಯಾವುದೇ ಸಂಸ್ಥೆಗಳ ದುರ್ಬಳಕೆ ನಡೆದಿರಲಿಲ್ಲ. ಆದರೆ ಈಗ ಇಡಿ ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ಲಜ್ಜೆಯಿಲ್ಲದೆ ಬಳಸಲಾಗುತ್ತದೆ ಎಂದು ಹೇಳಿದ್ದಾರೆ. ಬಹಳ ಸಂದಿಗ್ಧ ಪರಿಸ್ಥಿತಿಯಲ್ಲಿ 15ನೇ ರಾಷ್ಟ್ರಪತಿ ಚುನಾವಣೆ ನಡೆಯುತ್ತಿದೆ. 1970ರ ತುರ್ತು ಪರಿಸ್ಥಿಯ ವೇಳೆಯೂ ಹೀಗಾಗಿರಲಿಲ್ಲ. ನಮ್ಮ ಆರ್ಥಿಕತೆಯನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಇದರಿಂದ ಬೆಲೆ ಏರಿಕೆ ಮತ್ತು ನಿರುದ್ಯೋಗ ಸಮಸ್ಯೆಗಳು ಕಾಣಿಸಿಕೊಂಡಿವೆ ಎಂದು ಸಿನ್ಹಾ ಹೇಳಿದ್ದಾರೆ.

ನಮ್ಮ ಪ್ರಜಾಪ್ರಭುತ್ವ ಬಹಳ ಅಪಾಯದಲ್ಲಿದೆ. ಪ್ರತಿಯೊಂದು ಸಂಸ್ಥೆಯನ್ನು ಆಡಳಿತಾರೂಢ ಪಕ್ಷ ನಿಭಾಯಿಸುತ್ತದೆ. ವಿಪಕ್ಷ ನಾಯಕಮೇಲೆ ದಾಳಿ ನಡೆಸಲು, ವಿಪಕ್ಷಗಳಲ್ಲಿ ಬಿಕ್ಕಟ್ಟು ಉಂಟು ಮಾಡಿ ಅವರು ಅಧಿಕಾರದಲ್ಲಿರುವ ರಾಜ್ಯದಲ್ಲಿ ಅವರನ್ನು ಕೆಳಗಿಳಿಸುವುದಕ್ಕಾಗಿ ಇಡಿ, ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ಬಳಸಲಾಗುತ್ತಿದೆ. ಚುನಾವಣೆಗಳನ್ನು ಗೆಲ್ಲುವುದಕ್ಕಾಗಿ ಆಡಳಿತಾರೂಢ ಪಕ್ಷವು ಕೋಮು ಧ್ರುವೀಕರಣ ಮಾಡುತ್ತಿದೆ. ಇದು ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಹಾಳು ಮಾಡುತ್ತದೆ ಎಂದು ಸಿಹ್ನಾ ಹೇಳಿದ್ದಾರೆ.

ಇದನ್ನೂ ಓದಿ
ಬಿಜೆಪಿಯವರು ಮೊದಲು ತಮ್ಮ ತೂತುಗಳನ್ನ ಮುಚ್ಚಿಕೊಳ್ಳಲಿ: ಶಾಸಕ ಯತೀಂದ್ರ ಸಿದ್ದರಾಮಯ್ಯ
PM Modi in Jharkhand: ಬೈದ್ಯನಾಥ್ ಧಾಮಕ್ಕೆ ಸಂಪರ್ಕ ಕಲ್ಪಿಸುವ ದೇವಘರ್ ವಿಮಾನ ನಿಲ್ದಾಣ ಇಂದಿನಿಂದ ಕಾರ್ಯಾರಂಭ
Atal: ಬಯೋಪಿಕ್​ನಲ್ಲಿ ಅಟಲ್​ ಬಿಹಾರಿ ವಾಜಪೇಯಿ ಪಾತ್ರ ಮಾಡಲಿರುವ ಪಂಕಜ್​ ತ್ರಿಪಾಠಿ? ಹೆಚ್ಚಿತು ನಿರೀಕ್ಷೆ

ದೇಶದ ಆಡಳಿತಾರೂಢ ಪಕ್ಷವು ಒಂದು ದೇಶ ಒಂದು ಪಕ್ಷ ಎಂಬ ಅಜೆಂಡಾವನ್ನು ಹೇರುತ್ತಿದೆ. ಪ್ರಜಾಪ್ರಭುತ್ವ ದೇಶವನ್ನು ಇವರು ಕಮ್ಯನಿಸ್ಟ್ ಚೀನಾದಂತೆ ಮಾಡಲು ಹೋಗುತ್ತಿದ್ದಾರೆ. ಇದು ನಿಲ್ಲಬೇಕು ಎಂದು ಹೇಳಿದ್ದಾರೆ.