ಹೆಚ್​ಡಿ ಕುಮಾರಸ್ವಾಮಿ ‘ಪುಟಗೋಸಿ’ ಹೇಳಿಕೆಗೆ ಸಿದ್ದರಾಮಯ್ಯ ಪುತ್ರ ಯತೀಂದ್ರ ತಿರುಗೇಟು

TV9 Digital Desk

| Edited By: sandhya thejappa

Updated on: Oct 13, 2021 | 9:42 AM

ನಿಮ್ಮ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಯಾರ ಅಪ್ಪಣೆ ಬೇಕಿಲ್ಲ. ಅದೇ ರೀತಿ ಜೆಡಿಎಸ್ ತಪ್ಪು ತಿಳಿಸಲೂ ಅಪ್ಪಣೆ ಬೇಕಾಗಿಲ್ಲ. ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಾಗಿಲ್ಲ ಅಂತ ಸರಣಿ ಟ್ವೀಟ್ ಮೂಲಕ ಶಾಸಕ ಯತೀಂದ್ರ ತಿರುಗೇಟು ನೀಡಿದ್ದಾರೆ.

ಹೆಚ್​ಡಿ ಕುಮಾರಸ್ವಾಮಿ ‘ಪುಟಗೋಸಿ’ ಹೇಳಿಕೆಗೆ ಸಿದ್ದರಾಮಯ್ಯ ಪುತ್ರ ಯತೀಂದ್ರ ತಿರುಗೇಟು
ಡಾ.ಯತೀಂದ್ರ ಸಿದ್ದರಾಮಯ್ಯ, ಹೆಚ್​ಡಿ ಕುಮಾರಸ್ವಾಮಿ

Follow us on

ಮೈಸೂರು: ‘ಪುಟಗೋಸಿ’ ವಿಪಕ್ಷ ಸ್ಥಾನಕ್ಕಾಗಿ ಮೈತ್ರಿ ಸರ್ಕಾರ ತೆಗೆದಿದ್ದರು ಅಂತ ಸಿದ್ದರಾಮಯ್ಯ (Siddaramaiah) ವಿರುದ್ಧ ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿಗೆ (HD Kumaraswamy) ಸಿದ್ದರಾಮಯ್ಯ ಪುತ್ರ ಯತೀಂದ್ರ (Dr Yathindra Siddaramaiah) ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್​ನ 17 ಶಾಸಕರನ್ನ ಕಳೆದುಕೊಳ್ಳಲು ಮೈತ್ರಿ ಕಾರಣ ಅಂತ ಟ್ವೀಟ್ ಮೂಲಕ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್​ಗೆ 80 ಶಾಸಕರಿದ್ದರೂ ಮುಖ್ಯಮಂತ್ರಿ ಸ್ಥಾನವನ್ನ ಕುಮಾರಸ್ವಾಮಿ ರವರಿಗೆ ಬಿಟ್ಟುಕೊಟ್ಟೆವು. ಶಾಸಕರಿಗೆ ಕುಮಾರಸ್ವಾಮಿ ಸೂಕ್ತವಾಗಿ ಸ್ಪಂದಿಸಲಿಲ್ಲ. ಕಷ್ಟಗಳನ್ನ ಕೇಳಲಿಲ್ಲ ಇದರಿಂದ ಬೇಸತ್ತು ಬಿಟ್ಟು ಹೋಗಿದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಪಾತ್ರವೇನೂ ಇಲ್ಲ ಅಂತ ಹೇಳಿದ್ದಾರೆ.

ಸಿದ್ದರಾಮಯ್ಯ ಆಗ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು. ಅವರು ಕಾಂಗ್ರೆಸ್ ಶಾಸಕರ ಕೆಲಸ ಮಾಡಿಕೊಡಬಹುದಿತ್ತು. ಅವರು ವಿಪಕ್ಷ ಸ್ಥಾನ ತೆಗೆದುಕೊಂಡು ಏನು ಮಾಡಬೇಕು? ಅದೇನು ಮುಖ್ಯಮಂತ್ರಿ ಸ್ಥಾನನಾ? ಅಂತ ಸಿದ್ದರಾಮಯ್ಯ ಪುತ್ರ ಯತೀಂದ್ರ ಹೆಚ್​ಡಿ ಕುಮಾರಸ್ವಾಮಿಗೆ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದಾರೆ. ಹೆಚ್ಡಿಕೆ ಆರೋಪಗಳು ನಗೆಪಾಟಲಿಗೆ ಗುರಿಯಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ

ನಿಮ್ಮ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಯಾರ ಅಪ್ಪಣೆ ಬೇಕಿಲ್ಲ. ಅದೇ ರೀತಿ ಜೆಡಿಎಸ್ ತಪ್ಪು ತಿಳಿಸಲೂ ಅಪ್ಪಣೆ ಬೇಕಾಗಿಲ್ಲ. ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಾಗಿಲ್ಲ ಅಂತ ಸರಣಿ ಟ್ವೀಟ್ ಮೂಲಕ ಶಾಸಕ ಯತೀಂದ್ರ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ

ಅಮೃತ ಗ್ರಾಮ ಯೋಜನೆಗೆ ಧಾರವಾಡದ 17 ಗ್ರಾಮಗಳ ಆಯ್ಕೆ; ಹೈಟೆಕ್ ಆಗಲಿವೆ ಹಳ್ಳಿಗಳು

ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ; ಅದೇ ನನ್ನ ಕೊನೆಯ ಹೋರಾಟ: ಹೆಚ್​ಡಿ ಕುಮಾರಸ್ವಾಮಿ

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada