Bharti Airtel: ವಿದೇಶಿ ಸಾಲದ ಬಾಂಡ್​​ದಾರರಿಗೆ 71 ಕೋಟಿ ರೂ. ಮೌಲ್ಯದ ಈಕ್ವಿಟಿ ನೀಡಲಿದೆ ಭಾರ್ತಿ ಏರ್​ಟೆಲ್

| Updated By: Ganapathi Sharma

Updated on: Dec 10, 2022 | 10:34 AM

ದೇಶದಲ್ಲಿ 5ಜಿ ನೆಟ್​ವರ್ಕ್ ಸೇವೆ ಆರಂಭಿಸಿದ ಬಳಿಕ ಭಾರ್ತಿ ಏರ್​​ಟೆಲ್ ಷೇರುಪೇಟೆಯಲ್ಲಿ ಉತ್ತಮ ವಹಿವಾಟು ದಾಖಲಿಸುತ್ತಿದೆ. ಕಳೆದ ಕೆಲವು ಸೆಷನ್​ಗಳ ಟ್ರೇಡಿಂಗ್​​ಗಳಲ್ಲಿ ಏರ್​ಟೆಲ್ ಉತ್ತಮ ಗಳಿಕೆ ದಾಖಲಿಸಿದೆ.

Bharti Airtel: ವಿದೇಶಿ ಸಾಲದ ಬಾಂಡ್​​ದಾರರಿಗೆ 71 ಕೋಟಿ ರೂ. ಮೌಲ್ಯದ ಈಕ್ವಿಟಿ ನೀಡಲಿದೆ ಭಾರ್ತಿ ಏರ್​ಟೆಲ್
ಭಾರ್ತಿ ಏರ್​ಟೆಲ್
Follow us on

ನವದೆಹಲಿ: ವಿದೇಶಿ ಸಾಲದ ಬಾಂಡ್ ಹೊಂದಿರುವವರಿಗೆ 86 ಲಕ್ಷ ಡಾಲರ್ ಮೌಲ್ಯದ (ಸುಮಾರು 71 ಕೋಟಿ ರೂ.) ಈಕ್ವಿಟಿ ಷೇರುಗಳನ್ನು ನೀಡುವ ಪ್ರಸ್ತಾವಕ್ಕೆ ಭಾರ್ತಿ ಏರ್​ಟೆಲ್ (Bharti Airtel) ಅನುಮೋದನೆ ನೀಡಿದೆ. 2020ರ ಜನವರಿಯಲ್ಲಿ ವಿದೇಶಿ ಸಾಲದ ಬಾಂಡ್ ಪಡೆದವರಿಗೆ ಈಕ್ವಿಟಿ ಷೇರುಗಳನ್ನು ನೀಡಲಿದೆ. 2025ಕ್ಕೆ ಪಾವತಿಯಾಗಬೇಕಿರುವ 1 ಶತಕೋಟಿ ಡಾಲರ್ ವಿದೇಶಿ ಕರೆನ್ಸಿ ವಿನಿಮಯ ಸಾಲದ ಬಾಂಡ್​ಗಳನ್ನು ಕಂಪನಿ ಬಿಡುಗಡೆ ಮಾಡಿತ್ತು.

‘86 ಲಕ್ಷ ಡಾಲರ್ ಮೌಲ್ಯದ ಈಕ್ವಿಟಿ ಷೇರುಗಳನ್ನು ವಿದೇಶಿ ಕರೆನ್ಸಿ ವಿನಿಮಯ ಸಾಲದ ಬಾಂಡ್​ದಾರರಿಗೆ ನೀಡಲು ಫಂಡ್​ ರೈಸಿಂಗ್ ವಿಭಾಗದ ವಿಶೇಷ ನಿರ್ದೇಶಕರ ಸಮಿತಿ ಸಮ್ಮತಿಸಿದೆ. ಈಕ್ವಿಟಿ ಷೇರಿಗೆ 521ರಂತೆ ಪರಿವರ್ತಿಸಬಹುದಾದ 5 ರೂ. ಮುಖಬೆಲೆಯ 1,188,917 ಷೇರುಗಳನ್ನು ನೀಡಲು ನಿರ್ಧರಿಸಲಾಗಿದೆ’ ಎಂದು ಭಾರ್ತಿ ಏರ್​​ಟೆಲ್ ಷೇರು ಮಾರುಕಟ್ಟೆಗೆ ತಿಳಿಸಿದೆ. ಈ ನಿರ್ಧಾರದೊಂದಿಗೆ ಸಿಂಗಾಪುರ ಎಕ್ಸ್​​ಚೇಂಜ್ ಲಿಮಿಟೆಡ್​​ನಲ್ಲಿ ಕಂಪನಿಯ ಮೌಲ್ಯ 991.20 ದಶಲಕ್ಷ ಡಾಲರ್​​ಗೆ ಇಳಿಕೆಯಾಗಿದೆ ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ: Airtel 5G: ಕೇವಲ 30 ದಿನಗಳಲ್ಲಿ 10 ಲಕ್ಷ ಗ್ರಾಹಕರ ಸಂಪಾದಿಸಿದ ಏರ್ಟೆಲ್ 5ಜಿ

ದೇಶದಲ್ಲಿ 5ಜಿ ನೆಟ್​ವರ್ಕ್ ಸೇವೆ ಆರಂಭಿಸಿದ ಬಳಿಕ ಭಾರ್ತಿ ಏರ್​​ಟೆಲ್ ಷೇರುಪೇಟೆಯಲ್ಲಿ ಉತ್ತಮ ವಹಿವಾಟು ದಾಖಲಿಸುತ್ತಿದೆ. ಕಳೆದ ಕೆಲವು ಸೆಷನ್​ಗಳ ಟ್ರೇಡಿಂಗ್​​ಗಳಲ್ಲಿ ಏರ್​ಟೆಲ್ ಉತ್ತಮ ಗಳಿಕೆ ದಾಖಲಿಸಿದೆ. ದೇಶದಲ್ಲಿ ಅಕ್ಟೋಬರ್​ 1ರಂದು 5ಜಿ ಸೇವೆಗೆ ಚಾಲನೆ ದೊರೆತಿತ್ತು. 5ಜಿ ಸೇವೆ ಆರಂಭಿಸಿದ ಕಂಪನಿಗಳ ಪೈಕಿ ಏರ್​ಟೆಲ್ ಮುಂಚೂಣಿಯಲ್ಲಿದೆ. 5ಜಿ ಸೇವೆ ಆರಂಭಿಸಿದ 30 ದಿನಗಳಲ್ಲೇ 10 ಲಕ್ಷ ಗ್ರಾಹಕರನ್ನು ಹೊಂದಿದ್ದೇವೆ ಎಂದು ನವೆಂಬರ್​ನಲ್ಲಿ ಏಟರ್​ಟೆಲ್ ಹೇಳಿಕೊಂಡಿತ್ತು. ಬೆಂಗಳೂರು, ಮುಂಬೈ, ಚೆನ್ನೈ, ಹೈದರಾಬಾದ್, ಸಿಲಿಗುರಿ, ನಾಗ್ಪುರ ಹಾಗೂ ವಾರಾಣಸಿಗಳಲ್ಲಿ ಹಂತಹಂತವಾಗಿ 5ಜಿ ಸೇವೆ ಆರಂಭಿಸಲಾಗುತ್ತಿದೆ ಎಂದು 5ಜಿ ಸೇವೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಏರ್​ಟೆಲ್ ಹೇಳಿತ್ತು.

ದೇಶದ 5ಜಿ ತಂರಗಗುಚ್ಛ ಹರಾಜು ಪ್ರಕ್ರಿಯೆ ಆಗಸ್ಟ್ 1ರಂದು ಕೊನೆಗೊಂಡಿತ್ತು. ಒಟ್ಟು 7 ದಿನಗಳ ಕಾಲ ನಡೆದ ಹರಾಜು ಪ್ರಕ್ರಿಯೆಯಲ್ಲಿ 1.5 ಲಕ್ಷ ಕೋಟಿ ರೂ.ಗೂ ಹೆಚ್ಚು ಮೌಲ್ಯದ 5ಜಿ ತಂರಗಗುಚ್ಛ ಹರಾಜಾಗಿತ್ತು. ಬಳಿಕ 5ಜಿ ಸೇವೆಗೆ ಅಕ್ಟೋಬರ್ 1ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:32 am, Sat, 10 December 22