AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Stock Market Updates: ಕುಸಿದ ಸೆನ್ಸೆಕ್ಸ್, ನಿಫ್ಟಿ; ಟಾಟಾ ಮೋಟರ್ಸ್ ಷೇರು ಮೌಲ್ಯದಲ್ಲಿ ಭಾರಿ ಇಳಿಕೆ

ಕಳೆದ ವಾರ ಉತ್ತಮ ಗಳಿಕೆ ದಾಖಲಿಸಿದ್ದ ದೇಶೀಯ ಷೇರುಪೇಟೆಗಳಲ್ಲಿ ವಹಿವಾಟು ಮತ್ತೆ ಕುಸಿದಿದೆ. ಇದರೊಂದಿಗೆ, ದೇಶೀಯ ಷೇರುಪೇಟೆಗಳಲ್ಲಿ ಸತತ ಎರಡನೇ ದಿನ ಕುಸಿತ ದಾಖಲಾಗಿದೆ.

Stock Market Updates: ಕುಸಿದ ಸೆನ್ಸೆಕ್ಸ್, ನಿಫ್ಟಿ; ಟಾಟಾ ಮೋಟರ್ಸ್ ಷೇರು ಮೌಲ್ಯದಲ್ಲಿ ಭಾರಿ ಇಳಿಕೆ
ಸಾಂದರ್ಭಿಕ ಚಿತ್ರImage Credit source: PTI
TV9 Web
| Edited By: |

Updated on: Nov 10, 2022 | 6:32 PM

Share

ಮುಂಬೈ: ಕಳೆದ ವಾರ ಉತ್ತಮ ಗಳಿಕೆ ದಾಖಲಿಸಿದ್ದ ದೇಶೀಯ ಷೇರುಪೇಟೆಗಳಲ್ಲಿ (Stock Market) ವಹಿವಾಟು ಮತ್ತೆ ಕುಸಿದಿದೆ. ಗುರುವಾರದ ವಹಿವಾಟಿನ ಕೊನೆಯಲ್ಲಿ ಬಿಎಸ್​ಇ ಸೆನ್ಸೆಕ್ಸ್ (BSE Sensex) 419.85 ಅಂಶ ಕುಸಿದು 60,613.70ರಲ್ಲಿ ವಹಿವಾಟು ಮುಗಿಸಿತು. ಎನ್​ಎಸ್​ಇ ನಿಫ್ಟಿ (NSE Nifty) 121 ಅಂಶ ಕುಸಿದು 18,036 ರಲ್ಲಿ ವಹಿವಾಟು ಕೊನೆಗೊಳಿಸಿತು. ಇದರೊಂದಿಗೆ, ದೇಶೀಯ ಷೇರುಪೇಟೆಗಳಲ್ಲಿ ಸತತ ಎರಡನೇ ದಿನ ಕುಸಿತವಾಗಿದೆ.

ಶೇಕಡಾ 5ರಷ್ಟು ಕುಸಿದ ಟಾಟಾ ಮೋಟರ್ಸ್ ಷೇರು ಮೌಲ್ಯ

ಟಾಟಾ ಮೋಟರ್ಸ್ ಷೇರು ಮೌಲ್ಯವು ಗುರುವಾರದ ವಹಿವಾಟಿನ ಕೊನೆಯಲ್ಲಿ ಶೇಕಡಾ 4.80 ರಷ್ಟು ಕುಸಿಯಿತು. ಬಿಎಸ್​ಇಯಲ್ಲಿ ಕಂಪನಿಯ ಷೇರುಗಳು ತಲಾ 412.20 ರೂ. ನಂತೆ ವಹಿವಾಟು ನಡೆಸಿದವು. ಎನ್​ಎಸ್​ಇಯಲ್ಲಿ ಶೇಕಡಾ 4.61ರ ಕುಸಿತ ಕಂಡು ಪ್ರತಿ ಷೇರಿಗೆ 413.20 ರೂ.ನಂತೆ ವಹಿವಾಟು ನಡೆಸಿತು.

ಇದನ್ನೂ ಓದಿ: Mutual Funds: ಉತ್ತಮ ರಿಟರ್ನ್ಸ್ ತಂದುಕೊಡುತ್ತಿರುವ ಮಿಡ್​ಕ್ಯಾಪ್ ಮ್ಯೂಚುವಲ್ ಫಂಡ್​ಗಳಿವು

ಸೆಪ್ಟೆಂಬರ್​ಗೆ ಕೊನೆಗೊಂಡ ತ್ರೈಮಾಸಿಕ ಅವಧಿಯ ಟಾಟಾ ಮೋಟರ್ಸ್ ಫಲಿತಾಂಶ ಬುಧವಾರ ಪ್ರಕಟಗೊಂಡಿತ್ತು. ಕಂಪನಿಯು 898 ಕೋಟಿ ನಿವ್ವಳ ನಷ್ಟ ಅನುಭವಿಸಿತ್ತು. ತ್ರೈಮಾಸಿಕ ಫಲಿತಾಂಶದ ಬೆನ್ನಲ್ಲೇ ಷೇರುಪೇಟೆಯಲ್ಲಿಯೂ ಕಂಪನಿಯ ವಹಿವಾಟು ಮುಗ್ಗರಿಸಿದೆ.

ಉಳಿದಂತೆ ಆ್ಯಕ್ಸಿಸ್ ಬ್ಯಾಂಕ್, ಬಜಾಜ್ ಫಿನ್​ಸರ್ವ್, M&M, ಟೈಟಾನ್ ಆ್ಯಂಡ್ ಕಂಪನಿ ಷೇರುಗಳು ಕುಸಿತ ದಾಖಲಿಸಿದರೆ, ಹೀರೊ ಮೋಟರ್​ಕಾರ್ಪ್, ಎಚ್​ಡಿಎಫ್​ಸಿ ಬ್ಯಾಂಕ್, ಕೋಟಕ್ ಮಹೀಂದ್ರಾ ಷೇರುಗಳು ಗಳಿಕೆ ದಾಖಲಿಸಿದವು.

ಮತ್ತೆ ಕುಸಿದ ರೂಪಾಯಿ

ಕಳೆದ ಕೆಲವು ದಿನಗಳಿಂದ ಚೇತರಿಕೆ ದಾಖಲಿಸಿ ಭರವಸೆ ಮೂಡಿಸಿದ್ದ ರೂಪಾಯಿ ಮೌಲ್ಯ ಗುರುವಾರ ಕುಸಿದಿದೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 30 ಪೈಸೆ ಇಳಿಕೆಯಾಗಿ 81.77ರಲ್ಲಿ ವಹಿವಾಟು ಮುಗಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಬೆಂಗಳೂರಿನ ತಿರುಮಲ ತಿರುಪತಿ ದೇವಾಲಯಕ್ಕೆ ಹರಿದುಬಂತು ಭಕ್ತರ ದಂಡು!
ಹಳ್ಳಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಮಂಚದ ಮೇಲೆ ಮಲಗಿದ ಹುಲಿ
ಹಳ್ಳಿಯಲ್ಲಿ ವ್ಯಕ್ತಿಯ ಮೇಲೆ ದಾಳಿ ಮಾಡಿ, ಮಂಚದ ಮೇಲೆ ಮಲಗಿದ ಹುಲಿ