2020 Year in Review | ಲಾಕ್​ಡೌನ್​ ಏಕಾಂತದಲ್ಲಿ ಚಾಲೆಂಜ್​ ಸುಗ್ಗಿ; ಸೋಷಿಯಲ್ ಮೀಡಿಯಾದಲ್ಲಿ ಬಗೆಬಗೆ ಚಾಲೆಂಜ್​ಗಳು

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 30, 2020 | 6:01 PM

2020ರ ಕೊನೆಯ ಹೆಜ್ಜೆಯಲ್ಲಿ ಇಂಥ ಚಾಲೆಂಜ್​ಗಳನ್ನು ಮೆಲುಕು ಹಾಕುವುದೂ ಮಜಾ ಎನಿಸುತ್ತೆ. ಇಲ್ಲಿದೆ 2020ರಲ್ಲಿ ವೈರಲ್​ ಆಗಿ, ನಮ್ಮನಿಮ್ಮೆಲ್ಲರ ಗಮನ ಸೆಳೆದ ಸೋಷಿಯಲ್ ಮೀಡಿಯಾ ಚಾಲೆಂಜ್​ಗಳ ಮೆಲುಕು. ನೀವು ಯಾವೆಲ್ಲಾ ಚಾಲೆಂಜ್​ಗಳಲ್ಲಿ ಪಾಲ್ಗೊಂಡಿದ್ದಿರಿ ನೆನಪಿಸಿಕೊಳ್ಳಿ.

2020 Year in Review | ಲಾಕ್​ಡೌನ್​ ಏಕಾಂತದಲ್ಲಿ ಚಾಲೆಂಜ್​ ಸುಗ್ಗಿ; ಸೋಷಿಯಲ್ ಮೀಡಿಯಾದಲ್ಲಿ ಬಗೆಬಗೆ ಚಾಲೆಂಜ್​ಗಳು
ಬಗೆಬಗೆ ಚಾಲೆಂಜ್​ಗಳು
Follow us on

ಜನರನ್ನು ಮನೆಗೆ ಸೀಮಿತಗೊಳಿಸಿದ ಲಾಕ್​ಡೌನ್​ ಹುಟ್ಟುಹಾಕಿದ ಅನಿವಾರ್ಯ ಏಕಾಂತದ ಬೇಸರ ಕಳೆಯಲು ಆಸರೆಯಂತೆ ಒದಗಿ ಬಂದಿದ್ದು ಸೋಷಿಯಲ್ ಮೀಡಿಯಾ. ಲಾಕ್​ಡೌನ್​ ವೇಳೆ ಜನಪ್ರಿಯವಾದ ಹತ್ತುಹಲವು ಚಾಲೆಂಜ್​ಗಳ ಹಿಂದೆ ಮುಖ್ಯವಾಗಿ ಇದ್ದುದು ಹೊತ್ತುಕಳೆಯುವ ಉದ್ದೇಶ. ಆಮೇಲೆ ಒಂದಿಷ್ಟು ಖುಷಿಪಡುವ ಆಸೆ, ಪರಸ್ಪರರನ್ನು ಭೇಟಿಯಾಗಲೂ ಸಾಧ್ಯವಿಲ್ಲದ ಸಂದರ್ಭದಲ್ಲಿ ಪರಸ್ಪರರನ್ನು ಎಂಗೇಜ್ ಮಾಡಲು ಇಂಥ ಚಾಲೆಂಜ್​ಗಳು ನೆರವಿಗೆ ಬಂದವು.

2020ರ ಕೊನೆಯ ಹೆಜ್ಜೆಯಲ್ಲಿ ಇಂಥ ಚಾಲೆಂಜ್​ಗಳನ್ನು ಮೆಲುಕು ಹಾಕುವುದೂ ಮಜಾ ಎನಿಸುತ್ತೆ. ಇಲ್ಲಿದೆ 2020ರಲ್ಲಿ ವೈರಲ್​ ಆಗಿ, ನಮ್ಮನಿಮ್ಮೆಲ್ಲರ ಗಮನ ಸೆಳೆದ ಸೋಷಿಯಲ್ ಮೀಡಿಯಾ ಚಾಲೆಂಜ್​ಗಳ ಮೆಲುಕು. ನೀವು ಯಾವೆಲ್ಲಾ ಚಾಲೆಂಜ್​ಗಳಲ್ಲಿ ಪಾಲ್ಗೊಂಡಿದ್ದಿರಿ ನೆನಪಿಸಿಕೊಳ್ಳಿ.

ಕೈ ತೊಳೀರಿ #SafeHands: ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲೂಎಚ್‌ಒ) ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳನ್ನು ಟ್ಯಾಗ್​ ಮಾಡಿ ಸೇಫ್‌ ಹ್ಯಾಂಡ್ಸ್ ಚಾಲೆಂಜ್​ ಹಾಕಿತ್ತು. ಕೊರೊನಾ ಸೋಂಕು ಹರಡುವ ವೇಗಕ್ಕೆ ಕಡಿವಾಣ ಹಾಕಲು ಕೈಗಳನ್ನು ಸ್ವಚ್ಛವಾಗಿರಿಸಿಕೊಳ್ಳಲು ಸಮಾಜದಲ್ಲಿ ಜಾಗೃತಿ ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆ ಈ ಮಾರ್ಗ ಕಂಡುಕೊಂಡಿತ್ತು. ಸೆಲೆಬ್ರಿಟಿಗಳು ಮತ್ತು ಜನಪ್ರಿಯ ವ್ಯಕ್ತಿಗಳು ಈ ಸವಾಲನ್ನು ಸ್ವೀಕರಿಸಿ 20 ಸೆಕೆಂಡುಗಳ ಕಾಲ ಕೈ ತೊಳೆಯುವ ವಿಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ಚಾಲೆಂಜ್ ಸ್ವೀಕರಿಸಿದ್ದರು.

ನಾಳೆಯವರೆಗೆ #UntilTomorrowChallenge: ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆದ ಚಾಲೆಂಜ್​ಗಳಲ್ಲಿ ಇದೂ ಒಂದು. ವಿಲಕ್ಷಣವಾದ ಅಥವಾ ಮುಜುಗರದ ಚಿತ್ರಗಳನ್ನು #Untiltomorrow ಶೀರ್ಷಿಕೆಯೊಂದಿಗೆ ಹಲವರು ಪೋಸ್ಟ್ ಮಾಡಿದ್ದರು. ಸವಾಲಿನಲ್ಲಿ ಪಾಲ್ಗೊಳ್ಳುವವರು ತಮ್ಮ ಇಷ್ಟದ ಇನ್ನಿತರ ಸ್ನೇಹಿತರ ಇದೇ ರೀತಿಯ ಪೋಸ್ಟ್​ಗಳಿಗೆ ಲೈಕ್ ಮಾಡುವವರು ಈ ಚಾಲೆಂಜ್ ತಗೆದುಕೊಂಡಂತೆ ಎನ್ನುವ ಅರ್ಥವಿದ್ದಿದ್ದು ಈ ಸವಾಲಿನ ವಿಶೇಷ. ಹೆಸರೇ ಹೇಳುವಂತೆ ಒಬ್ಬ ವ್ಯಕ್ತಿ ಪೋಸ್ಟ್ ಮಾಡಿದ ಚಿತ್ರ ಇತರರಿಗೆ ಕನಿಷ್ಠ 24 ಗಂಟೆಗಳ ಕಾಲ ಗೋಚರಿಸುವಂತಿರಬೇಕು ಎನ್ನುವುದು ಈ ಸವಾಲಿನ ಆಶಯವೂ ಆಗಿತ್ತು..

ಸೀರೆ ಚಾಲೆಂಜ್ (Saree challenge): ಸೀರೆಯುಟ್ಟ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಚಾಲೆಂಜ್ ಇದು. ಚಿತ್ರವನ್ನು ಪೋಸ್ಟ್ ಮಾಡಿದವರು ಟ್ಯಾಗ್ ಮಾಡುವ ಮೂಲಕ ನಂತರ ಸ್ನೇಹಿತರನ್ನು ಟ್ಯಾಗ್ ಮಾಡುತ್ತಿದ್ದರು. ಈ ಚಾಲೆಂಜ್ ವೈರಲ್ ಆದ ಹಿನ್ನೆಲೆಯಲ್ಲಿ ಪುರುಷರು ಕೂಡ ಧೋತಿಗಳಲ್ಲಿ ತಮ್ಮ ಚಿತ್ರಗಳನ್ನು ಸೋಶಿಯಲ್ ಮಿಡಿಯಾಗಳಲ್ಲಿ ಪೊಸ್ಟ್ ಮಾಡಿ ಖುಷಿಪಟ್ಟಿದ್ದರು.

ಕ್ವಾರಂಟೈನ್ ಟ್ರಾವೆಲ್ ಚಾಲೆಂಜ್( Quarantine Travel Challenge): ಈ ವೈರಲ್ ಸವಾಲು ವಿಶ್ವದಾದ್ಯಂತ ಜನಪ್ರಿಯವಾಗಿತ್ತು. ಈ ಚಾಲೆಂಜ್ ಒಪ್ಪಿಕೊಂಡವರು ತಾವು ಭೇಟಿ ನೀಡಿದ ಸ್ಥಳವನ್ನು ಮತ್ತೆ ಮನೆಯಲ್ಲಿಯೇ ಮರು ಸೃಷ್ಟಿ ಮಾಡಬೇಕಾಗಿತ್ತು. ಫೇಸ್​ಬುಕ್, ಟ್ವಿಟರ್, ಇನ್​ಸ್ಟಾಗ್ರಾಮ್​ಗಳಲ್ಲಿ ಹಲವರು ಈ ಚಾಲೆಂಜ್​ ಸ್ವೀಕರಿಸಿದ್ದರು. ತಮ್ಮ ಪ್ರಯಾಣದಲ್ಲಿ ಅತ್ಯಂತ ಖುಷಿ ತಂದ ಕ್ಷಣಗಳನ್ನು ಮತ್ತು ಮನೆಯಲ್ಲಿಯೇ ಮರುಸೃಷ್ಟಿಸಿದ ಫೋಟೊಗಳನ್ನು ಜೊತೆಗೆ ಸೇರಿಸಿ ಹಾಕುತ್ತಿದ್ದರು.

ಡಾಲ್ಗೊನಾ ಕಾಫಿ (Dalgona Coffee challenge): ಬೆಂಗಳೂರು ಮಹಾನಗರವೂ ಸೇರಿದಂತೆ ಕರ್ನಾಟಕದಲ್ಲಿಯೂ ಜನಪ್ರಿಯವಾಗಿದ್ದ ಚಾಲೆಂಜ್ ಇದು. ದಕ್ಷಿಣ ಕೊರಿಯಾ ಮೂಲದ ಡಾಲ್ಗೊನಾ ಕ್ಯಾಂಡಿ ಎಂಬ ಕಾಫಿಯನ್ನು ಮನೆಯಲ್ಲೇ ಮಾಡಿ, ಅದರ ಚಿತ್ರಗಳನ್ನು ಸೋಷಿಯಲ್ ಮಿಡಿಯಾಗಳಲ್ಲಿ ಶೇರ್ ಮಾಡಿಕೊಳ್ಳುವುದು ಈ ಚಾಲೆಂಜ್​ನ ಮುಖ್ಯ ಅಂಶವಾಗಿತ್ತು.

ಕ್ವಾರಂಟೈನ್ ದಿಂಬಿನ ಸವಾಲು (Quarantine Pillow Challenge): ಜನಸಾಮಾನ್ಯರು ಹೆಚ್ಚು ಲೈಕ್ ಒತ್ತಿದ ಚಾಲೆಂಜ್ ಇದು. ಆದರೆ ಪಾಲ್ಗೊಂಡವರು ಮಾತ್ರ ಸೆಲೆಬ್ರಿಟಿಗಳು. ಈ ಸವಾಲಿನಲ್ಲಿ ಭಾಗವಹಿಸುವವರು ತಮಗೆ ಇಷ್ಟವಾದ ದಿಂಬನ್ನು ಬಟ್ಟೆಯನ್ನಾಗಿ ಧರಿಸಿ, ಆ ಚಿತ್ರವನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳಬೇಕಿತ್ತು. ಅದರಂತೆ ಕೆಲವರು ತಮ್ಮ ಇಷ್ಟದ ದಿಂಬನ್ನು ಬೆಲ್ಟ್, ಮುತ್ತಿನ ಹಾರಗಳ ಸಹಾಯದಿಂದ ಧರಿಸಿ ಕಂಗೊಳಿಸಿದ್ದು ವಿಶೇಷ ಎನಿಸಿತ್ತು.

ಟಿಕ್​ಟಾಕ್​ ಟೊ (Tic Tac Toe Challenge with pets): ಸಾಕು ಪ್ರಾಣಿಗಳನ್ನು ಬಳಸಿಕೊಂಡು ಟಿಕ್​ಟಾಕ್ (ಕಿರು ವಿಡಿಯೊ) ಮಾಡುವ ಚಾಲೆಂಜ್ ಇದು. ಹೆಚ್ಚಿನವರು ತಮ್ಮ ಸಾಕುಪ್ರಾಣಿಗಳಿಗೆ ಪೆನ್ನು ಮತ್ತು ಕಾಗದವನ್ನು ನೀಡಿ ಆಟವಾಡಲು ಬಿಟ್ಟು, ಚಾಲೆಂಜ್ ಪೂರ್ಣಗೊಳಿಸಿದರು.

20ರಲ್ಲಿ ನಾನು (MeAt20): 10 ವರ್ಷಗಳ ಹಿಂದಿನ ಚಿತ್ರ ಮತ್ತು 2020ರ ಅಂದರೆ ಈಗಿನ ಫೋಟೊಗಳನ್ನು ಪೊಸ್ಟ್ ಮಾಡಿ ಸವಾಲನ್ನು ಪೂರ್ಣಗೊಳಿಸಿದರು. ಈ ಸವಾಲಿನಲ್ಲಿ ಹೆಚ್ಚಾಗಿ ಸಿನಿಮಾ ನಟ-ನಟಿಯರು ಭಾಗಿಯಾದರು. ತಮ್ಮ ಈಗಿನ ಮತ್ತು 10 ವರ್ಷದ ಹಿಂದಿನ ಫೋಟೊವನ್ನು ಹ್ಯಾಶ್‌ಟ್ಯಾಗ್ ಜೊತೆಗೆ ಪೋಸ್ಟ್ ಮಾಡುವ ಮೂಲಕ ಸವಾಲಿನಲ್ಲಿ ಭಾಗವಹಿಸಿದರು.

ಗೆಸ್ಚರ್ ಸವಾಲು (the gesture challenge): ಸಂಗೀತಕ್ಕೆ ತಕ್ಕಂತೆ ತಮ್ಮ ಕೈಗಳನ್ನು ಆಡಿಸುವ ಚಾಲೆಂಜ್ ಇದು. ಈ ಸವಾಲನ್ನು ದಿ ಜೊನಸ್ ಬ್ರದರ್ಸ, ಡಾನ್ ಓಸ್ಬೋರ್ನ್ ಮತ್ತು ಜಾಕ್ವೆಲಿನ್ ಜೋಸ್ಸಾ ಸೇರಿದಂತೆ ವಿವಿಧ ಪ್ರಸಿದ್ಧ ವ್ಯಕಿಗಳು ಸ್ವೀಕರಿಸಿದ್ದರು.

ಕ್ವಾರಂಟೈನ್ ಡಾನ್ಸ್ (Quarantine dance challenge): ಈ ವರ್ಷದ ಅತ್ಯಂತ ಜನಪ್ರಿಯ ಸವಾಲು ಇದು. ಒಬ್ಬ ವ್ಯಕ್ತಿ ತನ್ನ ಆಯ್ಕೆಯ ಯಾವುದೇ ಹಾಡಿಗೆ ಡಾನ್ಸ್​ ಮಾಡಿ, ನಂತರ ಈ ಚಾಲೆಂಜ್​ ಅನ್ನು ಸ್ನೇಹಿತರಿಗೆ ಟ್ಯಾಗ್ ಮಾಡಬೇಕಿತ್ತು. ಇದೇ ರೀತಿ ಹಲವು ಡಾನ್ಸ್​ ಸವಾಲುಗಳು ಕ್ವಾರಂಟೈನ್​ ಸಮಯದಲ್ಲಿ ಚಾಲ್ತಿಗೆ ಬಂದಿತ್ತು.

ಇದೇ ರೀತಿ ಟಾಯ್ಲೆಟ್ ಪೇಪರ್ ಚಾಲೆಂಜ್ (Toilet paper challenge), ಹಿಂಬಾಲಿಸುವ ಸವಾಲು (Follow me to), ಪಾಸ್ ಮಿ ದಿ ಬ್ರಷ್ ಚಾಲೆಂಜ್ (Pass me the brush challenge), ಫ್ಲಿಪ್​ ದಿ ಸ್ವಿಚ್ (Flip the switch) ಸೇರಿದಂತೆ ಹತ್ತು ಹಲವು ಸವಾಲುಗಳು ಲಾಕ್​ಡೌನ್ ಸಂದರ್ಭದಲ್ಲಿ ಸದ್ದು ಮಾಡಿದ್ದವು. ಸಾಮಾನ್ಯ ಜನರೂ ಸಹ ದೊಡ್ಡ ಸಂಖ್ಯೆಯಲ್ಲಿ ಈ ಸವಾಲಿನಲ್ಲಿ ಭಾಗಿಯಾಗಿದ್ದರು ಎನ್ನುವುದು ಗಮನಾರ್ಹ ಸಂಗತಿ.

2020 Year in Review | ಕೊರೊನಾ ಆವರಿಸಿದ ಕಹಿ, ಅದರಿಂದ ಚೇತರಿಸಿಕೊಳ್ಳುವ ವಿಶ್ವಾಸ ಮೂಡಿಸಿದ ಸಿಹಿ

2020 Year in Review | ಸಂಘರ್ಷ, ಆತಂಕದ ನಡುವೆ ಕಾಡಿದ ಒಂಟಿತನ; ಒಂದು ವರ್ಷದಲ್ಲಿ ಏನೆಲ್ಲಾ ಆಯ್ತು?

2020 year in review | ಸುಪ್ರೀಂಕೋರ್ಟ್ ನೀಡಿದ ಐದು ಮಹತ್ತರ ತೀರ್ಪುಗಳು

2020 year in review | ಸಚಿವರ ಸಾಧನೆಗೆ ಕೈಗನ್ನಡಿ; ಇಲ್ಲಿದೆ ಅಂಕಪಟ್ಟಿ

Published On - 5:52 pm, Wed, 30 December 20