ಗೋವಾದಲ್ಲಿ ಜರ್ಮನ್ ಮಹಿಳೆಯೊಬ್ಬಳ ಮೃತದೇಹ ಪತ್ತೆ
53 ವರ್ಷ ವಯಸ್ಸಿನ ಜರ್ಮನ್ ಮಹಿಳೆಯೊಬ್ಬರ ಮೃತದೇಹ ಅವರು ವಾಸವಾಗಿದ್ದ ದಕ್ಷಿಣ ಗೋವಾದ ಕಾನಾಕೊನಾ ಫ್ಯಾಟ್ನಲ್ಲಿ ದೊರಕಿದೆ. ಮೃತ ಮಹಿಳೆಯನ್ನು ಸ್ಟಿಫಾನಿ ಹಿಸ್ಸರ್ ಎಂದು ಗುರುತಿಸಲಾಗಿದ್ದು ಆಕೆಯ ಮಗಳು ಜರ್ಮನಿಯಿಂದ ಗೋವಾಗೆ ಬಂದಾಗಲೇ ಆಕೆ ಸತ್ತಿರುವುದು ಬೆಳಕಿಗೆ ಬಂದಿದೆ. ಹಿಸ್ಸರ್ ತಮ್ಮ ಪ್ಲ್ಯಾಟ್ನಲ್ಲಿ ಒಬ್ಬರೇ ತಂಗಿದ್ದರಂತೆ. ಸ್ಟಿಫಾನಿಯೊಂದಿಗೆ ಕಳೆದ ಕೆಲವು ವಾರಗಳಿಂದ ನಿರಂತರವಾಗಿ ಸಂಪರ್ಕದಲ್ಲಿದ್ದ ಮಗಳು ಹಿಮಾನಿ ಹಿಸ್ಸರ್ಗೆ ತನ್ನ ತಾಯಿ ಫೋನ್ ಕೆಲ ದಿನಗಳಿಂದ ಕರೆಗಳನ್ನು ರಿಸೀವ್ ಮಾಡದೇ ಹೋಗಿದ್ದರಿಂದ ಗೋವಾಗೆ ಆಗಮಿಸಿದ್ದರು. ಆಕೆ ಮನೆ […]
53 ವರ್ಷ ವಯಸ್ಸಿನ ಜರ್ಮನ್ ಮಹಿಳೆಯೊಬ್ಬರ ಮೃತದೇಹ ಅವರು ವಾಸವಾಗಿದ್ದ ದಕ್ಷಿಣ ಗೋವಾದ ಕಾನಾಕೊನಾ ಫ್ಯಾಟ್ನಲ್ಲಿ ದೊರಕಿದೆ. ಮೃತ ಮಹಿಳೆಯನ್ನು ಸ್ಟಿಫಾನಿ ಹಿಸ್ಸರ್ ಎಂದು ಗುರುತಿಸಲಾಗಿದ್ದು ಆಕೆಯ ಮಗಳು ಜರ್ಮನಿಯಿಂದ ಗೋವಾಗೆ ಬಂದಾಗಲೇ ಆಕೆ ಸತ್ತಿರುವುದು ಬೆಳಕಿಗೆ ಬಂದಿದೆ.
ಹಿಸ್ಸರ್ ತಮ್ಮ ಪ್ಲ್ಯಾಟ್ನಲ್ಲಿ ಒಬ್ಬರೇ ತಂಗಿದ್ದರಂತೆ. ಸ್ಟಿಫಾನಿಯೊಂದಿಗೆ ಕಳೆದ ಕೆಲವು ವಾರಗಳಿಂದ ನಿರಂತರವಾಗಿ ಸಂಪರ್ಕದಲ್ಲಿದ್ದ ಮಗಳು ಹಿಮಾನಿ ಹಿಸ್ಸರ್ಗೆ ತನ್ನ ತಾಯಿ ಫೋನ್ ಕೆಲ ದಿನಗಳಿಂದ ಕರೆಗಳನ್ನು ರಿಸೀವ್ ಮಾಡದೇ ಹೋಗಿದ್ದರಿಂದ ಗೋವಾಗೆ ಆಗಮಿಸಿದ್ದರು. ಆಕೆ ಮನೆ ತಲುಪಿದಾಗ ಅದು ಒಳಗಿನಿಂದ ಲಾಕ್ ಆಗಿರುವುದನ್ನು ಕಂಡುಕೊಂಡಿದ್ದಾಳೆ.
20 ವರ್ಷ ವಯಸ್ಸಿನ ಹಿಮಾನಿ, ತನ್ನ ಒಬ್ಬ ಸ್ನೇಹಿತನ ಸಹಾಯದಿಂದ ಸ್ಟಿಫಾನಿಯ ಮನೆ ಬಾಗಿಲನ್ನು ಒಡೆದು ಒಳಪ್ರವೇಶಿಸಿದಾಗ ಆಕೆ ಸತ್ತು ಬಿದ್ದಿರುವುದು ಪತ್ತೆಯಾಗಿದೆ. ಪೊಲೀಸರಿಗೆ ವಿಷಯ ಗೊತ್ತಾಗಿ ಅವರು ಸ್ಥಳಕ್ಕೆ ಬಂದು ಮಹಜರ್ ನಡೆಸಿದ್ದಾರೆ.
ಹಿಮಾನಿ ಪೊಲೀಸರಿಗೆ ತಿಳಿಸಿರುವ ಮಾಹಿತಿಯ ಪ್ರಕಾರ, ಸ್ಟಿಫಾನಿ ಖಿನ್ನತೆ ಮತ್ತು ಅಸ್ತಮಾ ಸಮಸ್ಯೆಗಳಿಂದ ಬಳಲುತ್ತಿದ್ದಳು ಮತ್ತು ಈ ಅನಾರೋಗ್ಯಗಳಿಗೆ ಔಷಧಿಯನ್ನು ಸಹ ತೆಗೆದುಕೊಳ್ಳುತ್ತಿದ್ದಳು. ಪೊಲೀಸರು ಅಸಹಜ ಸಾವು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.