Theatre: ಅಂಕಪರದೆ; ನಾಳೆ ರಂಗಶಂಕರದಲ್ಲಿ ‘ಇತಿ ನಿನ್ನ ಅಮೃತಾ’ ಬರುತ್ತೀರಲ್ಲ?

Kannada Play : ‘ಒಮ್ಮೊಮ್ಮೆ ಒಂದೇ ವ್ಯಕ್ತಿಯೊಂದಿಗೆ ದ್ವೇಷ ಮತ್ತು ಪ್ರೇಮ ಎರಡೂ ಏಕಕಾಲಕ್ಕೆ ಶಕ್ಯ. ಯಾರ ಮೈ ವಾಸನೆ ವಾಕರಿಕೆ ತರಿಸುತ್ತದೆಯೋ, ಯಾರ ಧಡ್ಡ ಮುಸುಡಿ ಮೈ ಉರಿಸುತ್ತದೆಯೋ, ಅಂಥವರ ಜೊತೆ ಮಲಗಲೂ ಬಲ್ಲೆವು.’

Theatre: ಅಂಕಪರದೆ; ನಾಳೆ ರಂಗಶಂಕರದಲ್ಲಿ ‘ಇತಿ ನಿನ್ನ ಅಮೃತಾ’ ಬರುತ್ತೀರಲ್ಲ?
ರಂಗಕಲಾವಿದರಾದ ನಲ್ಮೆ ನಚಿಯಾರ್, ದೀಕ್ಷಿತ್ ಶೆಟ್ಟಿ ಇಂದು. ಶಬಾನಾ ಆಝ್ಮಿ ಫಾರೂಕ್ ಶೇಖ್ ಅಂದು.
Follow us
ಶ್ರೀದೇವಿ ಕಳಸದ
|

Updated on:Mar 03, 2022 | 5:27 PM

ಅಂಕಪರದೆ | Ankaparade : ಕೆಲ ವರ್ಷಗಳ ಹಿಂದೆ ಮುಂಬಯಿಯಲ್ಲಿ ಶಬಾನಾ ಆಝ್ಮಿ ಮತ್ತು ಫಾರೂಕ್ ಶೇಖ್ ಅಭಿನಯಿಸಿದ್ದ ‘ತುಮ್ಹಾರೀ ಅಮೃತಾ’ ನಾಟಕ ನೋಡಿದ್ದೆ. ಯಾವ ಬಗೆಯ ರಂಗಚಲನೆಯಿಲ್ಲದೆ, ಇಬ್ಬರ ವಾಚನದ ಮೂಲಕ, ಪ್ರೇಕ್ಷಕರ ಮನವನ್ನೇ ರಂಗಸ್ಥಳವಾಗಿಸಿ ಚಲಿಸುತ್ತ ಆವರಿಸಿಕೊಳ್ಳುವ ಈ ಹೊಸ ಕೃತಿಯ ಚೈತನ್ಯಕ್ಕೆ ಕರಗಿಹೋದೆ. ಅದರ ಅನುರಣನ ಶಕ್ತಿಗೆ ಬೆರಗಾದೆ. ಇದು ನಾಟಕವೋ, ಪತ್ರರೂಪಕವೋ, ವಾಚನೋ ಗೊತ್ತಿಲ್ಲ ವಿಲಕ್ಷಣ ಸಂಬಂಧ ಹೊಂದಿರುವ, ಹುಚ್ಚು ವ್ಯಾಮೋಹಿ ಕಲೆಗಾರ್ತಿ ಅಮೃತಾ ಮತ್ತು ಹುರುಪಿನ ಮಹಾತ್ವಾಕಾಂಕ್ಷಿ ಯುವ ಝುಲ್ಫಿ ಇಬ್ಬರೂ ಕೂತು 40 ವರ್ಷಗಳ ಕಾಲ ಪರಸ್ಪರ ಬರೆದುಕೊಂಡಿದ್ದ ಕಾಗದಗಳನ್ನು ಇತಿ ನಿನ್ನ ಅಮೃತಾ (Iti Ninna Amruta) ನಾಟಕದಲ್ಲಿ ಓದುತ್ತಾರೆ ಅಷ್ಟೇ. ಆದರೆ ನಮ್ಮ ಮನದ ಸೂಕ್ಷ್ಮ ಬಿಂದುಗಳನ್ನು ಇಂಬಾಗಿಸಿಕೊಂಡು ಈ ಕಥಾನಕದ ಬಳ್ಳಿ ಹಬ್ಬುವ ನಮೂನೆ ಮಾತ್ರ ಅದ್ಭುತವಾದದ್ದು. ಮಸ್ಸೂರಿಯ ಮಂಜಿನ ಮೋಡಗಳಂತೆ ಕಾಲಖಂಡಗಳು ನಮ್ಮ ಮೂಲಕ ಹಾದು ಹೋಗುತ್ತವೆ. ಜಯಂತ ಕಾಯ್ಕಿಣಿ, ಕವಿ, ಕಥೆಗಾರ (Jayanth Kaikini)

*

‘ನೋವನ್ನು ತಿಳಿಯಲು ತಾಯಾಗಬೇಕಾದ ಅಗತ್ಯವೇ ಇಲ್ಲ. ಹೆಣ್ಣಾಗುವ ಅಗತ್ಯವೂ ಇಲ್ಲ. ಹೆಣ್ಣೆಂದರೇ ನೋವಿನ ಮೂರ್ತ ರೂಪ.’

‘ಒಮ್ಮೊಮ್ಮೆ ಒಂದೇ ವ್ಯಕ್ತಿಯೊಂದಿಗೆ ದ್ವೇಷ ಮತ್ತು ಪ್ರೇಮ ಎರಡೂ ಏಕಕಾಲಕ್ಕೆ ಶಕ್ಯ. ಯಾರ ಮೈ ವಾಸನೆ ವಾಕರಿಕೆ ತರಿಸುತ್ತದೆಯೋ, ಯಾರ ಧಡ್ಡ ಮುಸುಡಿ ಮೈ ಉರಿಸುತ್ತದೆಯೋ, ಅಂಥವರ ಜೊತೆ ಮಲಗಲೂ ಬಲ್ಲೆವು.’

‘ನಿನ್ನ ಸ್ವರ, ನನ್ನಲ್ಲಿ ಅಲೌಕಿಕ ಕಂಪನಗಳನ್ನು ಎಬ್ಬಿಸುತ್ತಿತ್ತು. ಅದು ನನ್ನ ಹದಿಹರೆಯದ ಭೋಳೆತನವಾಗಿತ್ತೆ? ಅಥವಾ ನಿನ್ನ ಮಾತುಗಳೆ ನಿಜವಾಗಿದ್ದವೆ? ಹೇಳು, ಈ ತನಕ ನನ್ನ ಜತೆ ನೀನು, ಒಂದೂ ಸುಳ್ಳು ಶಬ್ದವನ್ನು ಆಡಿಲ್ಲ ಎಂದು ಹೇಳು.’

‘ನನ್ನನ್ನು ಬಿಟ್ಟು ಇನ್ಯಾರನ್ನೂ ಯಾವತ್ತೂ ಪ್ರೀತಿಸಿಲ್ಲ ಎಂದು ಹೇಳು. ಜೀವಂತವಾಗಿರೋದಕ್ಕೆ ಒಂದಲ್ಲ ಒಂದು ಆಸರೆ ಬೇಕಾಗುತ್ತದೆ ಝುಲ್ಫೀ. ಈ ಆಸರೆ ನಿಜವೋ… ಸುಳ್ಳೋ… ಅದು ಮುಖ್ಯವಲ್ಲ. ಅದರಲ್ಲಿಟ್ಟಿರುವ ವಿಶ್ವಾಸ ಮುಖ್ಯ.’

‘ಹೀಗೆ ಈ ಇದನ್ನೊಂದು ಕಥೆಯಾಗಿಯೂ, ಕಿರುಕಾದಂಬರಿಯಾಗಿಯೂ ಸುಮ್ಮನೆ ಓದಿಕೊಳ್ಳಬಹುದು. ಎಲ್ಲಾದರೂ ಇಬ್ಬರು ಕೂತು ಕವಿತೆಯಂತೆ ವಾಚಿಸಲೂಬಹುದು. ಸಂಭಾಷಣೆಯನ್ನು ಉರು ಹೊಡೆಯುವ ಅಗತ್ಯವೇ ಇಲ್ಲದ ಮಜೇದಾರ್ ಪ್ರಯೋಗವಿದು. ಮಜಾ ಎಂದರೆ ಇದರ ಮೂಲ ಕೃತಿಯೇ ಇನ್ನೂ ಪ್ರಕಟವಾಗಿಲ್ಲ. ಮೂಲಕ್ಕಿಂತ ಮುನ್ನ ಭಾಷಾಂತರವೊಂದು ಪ್ರಕಟಗೊಂಡಿರುವುದು ಬಹುಶಃ ಇದೇ ಮೊದಲು ಏನೋ.’ ಎನ್ನುತ್ತಾರೆ ಜಯಂತ ಕಾಯ್ಕಿಣಿ.

Ankaparade Iti Ninna Amrita Kannada Play in Rangashankara

ಕಥೆಗಾರ ಜಯಂತ ಕಾಯ್ಕಿಣಿ ಮತ್ತು ರಂಗ ನಿರ್ದೇಶಕಿ ಉಷಾ ಭಂಡಾರಿ

‘ಇತಿ ನಿನ್ನ ಅಮೃತಾ’ ನಾಟಕದಿಂದ ಹೆಕ್ಕಿದ ಈ ಮೇಲಿನ ಸಂಭಾಷಣೆಗಳನ್ನು ಓದುತ್ತಿದ್ದರೆ ಕುತೂಹಲ ಹೆಚ್ಚುತ್ತಿರಬಹುದಲ್ಲ? ಹಾಗಿದ್ದರೆ ತಡ ಯಾಕೆ, ನಾಟಕ ನೋಡಲು ತಯಾರಾಗಿ.

ನಾಟಕ : ಇತಿ ನಿನ್ನ ಅಮೃತಾ ಮೂಲ : ಜಾವೇದ್ ಸಿದ್ದಿಕಿ ಕನ್ನಡಕ್ಕೆ : ಜಯಂತ ಕಾಯ್ಕಿಣಿ ನಿರ್ದೇಶನ : ಉಷಾ ಭಂಡಾರಿ ತಂಡ : ಆಪ್, ಬೆಂಗಳೂರು ಸಂಗೀತ : ರಾಮಕೃಷ್ಣ ಎಸ್. ಆರ್. ದಿನಾಂಕ : 4.3.2022 ಸಮಯ : ಸಂಜೆ 7.30 ಸ್ಥಳ : ರಂಗಶಂಕರ, ಜೆಪಿ ನಗರ, ಬೆಂಗಳೂರು ಟಿಕೆಟ್ : Book My Show

*

ಗಮನಿಸಿ : ‘ಅಂಕಪರದೆ’ಯ ಮೂಲಕ ರಂಗಾಸಕ್ತರನ್ನು ನೀವು ತಲುಪಲು ಬಯಸಿದಲ್ಲಿ ಪ್ರದರ್ಶನಕ್ಕೆ ಒಂದು ವಾರವಿರುವಾಗ ನಮಗೆ ತಿಳಿಸಿ. ಹಾಗೆಯೇ ರಂಗಾಸಕ್ತರು, ರಂಗತಜ್ಞರು ರಂಗಭೂಮಿಗೆ ಸಂಬಂಧಿಸಿದ ಯಾವುದೇ ವಿಷಯ, ವಿಚಾರ, ಒಳನೋಟಗಳನ್ನು ಹಂಚಿಕೊಳ್ಳಲು ನಮ್ಮನ್ನು ಸಂಪರ್ಕಿಸಿ :tv9kannadadigital@gmail.com

ಇದನ್ನೂ ಓದಿ : Theatre: ಅಂಕಪರದೆ; ವೈಚಾರಿಕನು ಭಾವುಕನೊಳಗೆ, ಭಾವುಕನು ವೈಚಾರಿಕನೊಳಗೆ ಕುಳಿತು ತಳಮಳಿಸುವ ಹೊತ್ತಿನಲ್ಲಿ

Published On - 5:22 pm, Thu, 3 March 22

Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ