ನೀವು ಈ ಬೈಸಿಕಲ್ ತುಳಿದಿದ್ದರೆ ಅದರ ಬಗ್ಗೆ ನಿಮಗೊಂದು ನಿರಾಶೆಯ ಸುದ್ದಿ ಇಲ್ಲಿದೆ!
ಅಟ್ಲಾಸ್ ಸೈಕಲ್ ಎಂಬುದು 80ರ ದಶಕದಲ್ಲಿ ಯುವಕರ ಕನಸು, ಅದನ್ನು ದಕ್ಕಿಸಿಕೊಂಡರೆ ಹೆಮ್ಮೆಯ ಸಂಗಾತಿ ಎಂಬಂತಾಗಿತ್ತು. ಅಷ್ಟರಮಟ್ಟಿಗೆ ಅಟ್ಲಾಸ್ ಸೈಕಲ್ ಅಂದಿನ ಜನಜೀವನದಲ್ಲಿ ಹಾಸುಹೊಕ್ಕಿತ್ತು. ಇಂತಹ ಸೈಕಲ್ಗೆ ಮೊನ್ನೆ ವಿಶ್ವ ಬೈಸಿಕಲ್ ದಿನ ಕೊನೆಯ ದಿನವಾಗಿತ್ತು. ಅಂದ್ರೆ ಅಟ್ಲಾಸ್ ಸೈಕಲ್ ಉತ್ತರಪ್ರದೇಶದಲ್ಲಿದ್ದ ತನ್ನ ಕೊನೆಯ ಉತ್ಪಾದನಾ ಘಟಕದಲ್ಲಿ ಸೈಕಲ್ ತಯಾರಿಸುವುದನ್ನು ಸ್ಥಗಿತಗೊಳಿಸಿತು. ಅಲ್ಲಿಗೆ ಹಳೆಯ ಸೈಕಲ್ ಮಾಡೆಲ್ಗಳ ಪೈಕಿ ಅಟ್ಲಾಸ್ ಕಂಪನಿಯ ಸೈಕಲ್ ಜನ ಮಾನಸದಿಂದ ದೂರವಾಗಿದೆ. ಅದಾಗಲೇ ಒಂದೊಂದೇ ಉತ್ಪಾದನಾ ಘಟಕವನ್ನು ಮುಚ್ಚುತ್ತಾ ಬಂದಿದ್ದ ಅಟ್ಲಾಸ್ […]
ಅಟ್ಲಾಸ್ ಸೈಕಲ್ ಎಂಬುದು 80ರ ದಶಕದಲ್ಲಿ ಯುವಕರ ಕನಸು, ಅದನ್ನು ದಕ್ಕಿಸಿಕೊಂಡರೆ ಹೆಮ್ಮೆಯ ಸಂಗಾತಿ ಎಂಬಂತಾಗಿತ್ತು. ಅಷ್ಟರಮಟ್ಟಿಗೆ ಅಟ್ಲಾಸ್ ಸೈಕಲ್ ಅಂದಿನ ಜನಜೀವನದಲ್ಲಿ ಹಾಸುಹೊಕ್ಕಿತ್ತು. ಇಂತಹ ಸೈಕಲ್ಗೆ ಮೊನ್ನೆ ವಿಶ್ವ ಬೈಸಿಕಲ್ ದಿನ ಕೊನೆಯ ದಿನವಾಗಿತ್ತು. ಅಂದ್ರೆ ಅಟ್ಲಾಸ್ ಸೈಕಲ್ ಉತ್ತರಪ್ರದೇಶದಲ್ಲಿದ್ದ ತನ್ನ ಕೊನೆಯ ಉತ್ಪಾದನಾ ಘಟಕದಲ್ಲಿ ಸೈಕಲ್ ತಯಾರಿಸುವುದನ್ನು ಸ್ಥಗಿತಗೊಳಿಸಿತು. ಅಲ್ಲಿಗೆ ಹಳೆಯ ಸೈಕಲ್ ಮಾಡೆಲ್ಗಳ ಪೈಕಿ ಅಟ್ಲಾಸ್ ಕಂಪನಿಯ ಸೈಕಲ್ ಜನ ಮಾನಸದಿಂದ ದೂರವಾಗಿದೆ.
ಅದಾಗಲೇ ಒಂದೊಂದೇ ಉತ್ಪಾದನಾ ಘಟಕವನ್ನು ಮುಚ್ಚುತ್ತಾ ಬಂದಿದ್ದ ಅಟ್ಲಾಸ್ ಸೈಕಲ್ ಕಂಪನಿಗೆ ಕೊರೊನಾ ಸೋಂಕು ಅಂತಿಮ ಮೊಳೆ ಹೊಡೆದಿದೆ. ಕೊರೊನಾ ಕಾಲದಲ್ಲಿ ಉತ್ಪಾದನೆ ಮುಂದುವರಿಸಿಕೊಂಡು ಹೋಗುವುದು ಸಾಧ್ಯವಾಗುತ್ತಿಲ್ಲ ಎಂದು ಕಂಪನಿ ಸುಮಾರು 400 ಉದ್ಯೋಗಿಳನ್ನು ಮನೆಗೆ ಕಳಿಸಿಬಿಟ್ಟಿದೆ. ಜೊತೆಗೆ ಸೈಕಲ್ ಡೀಲರ್ಗಳಿಗೂ ಭಾರಿ ಮೊತ್ತದ ಹಣವನ್ನು ಬಾಕಿ ಉಳಿಸಿಕೊಂಡುಬಿಟ್ಟಿದೆ.
https://www.instagram.com/p/CA-TEl1jgSK/?utm_source=ig_web_copy_link
Published On - 1:12 pm, Sat, 6 June 20