Azadi Ka Amrut Mahotsav: ಸ್ವಾತಂತ್ರ್ಯ ಹೋರಾಟಗಾರ ನನ್ನ ಮುತ್ತಜ್ಜ; ತಮ್ಮ ಹೆಸರನ್ನು ಇತಿಹಾಸದಲ್ಲಿ ಅಚ್ಚುಮಾಡಲು ಅವರು ಕಿಂಚಿತ್ ಪ್ರಯತ್ನವನ್ನೂ ಮಾಡಲಿಲ್ಲ

| Updated By: shruti hegde

Updated on: Aug 15, 2021 | 8:29 AM

Independence Day 2021 : ವೈದ್ಯ ನೀಲಕಂಠ ರಾಮಚಂದ್ರರಾವ್ ಪಟವರ್ಧನ್ ಶಿರಸಿ ಅವರಿಗೆ ಬ್ರಿಟಿಷರನ್ನು ವಿರೋಧಿಸುವುದು ರಕ್ತಗತವಾಗಿ ಬಂದಂತಹ ಸಂಗತಿಯಾಗಿತ್ತು. ಏಕೆಂದರೆ ಅವರ ಅಜ್ಜ, ಅವರ ಕುಟುಂಬದ ಎಲ್ಲ ಸದಸ್ಯರನ್ನು ಬ್ರಿಟಿಷರು ಬೆಂಕಿಹಾಕಿ, ಗುಂಡಿಕ್ಕಿ ಕೊಂದಿದ್ದರು ಎಂಬ ಇತಿಹಾಸದ ಪುಟಗಳು ಉಸುರುತ್ತಿದ್ದವು.

Azadi Ka Amrut Mahotsav: ಸ್ವಾತಂತ್ರ್ಯ ಹೋರಾಟಗಾರ ನನ್ನ ಮುತ್ತಜ್ಜ; ತಮ್ಮ ಹೆಸರನ್ನು ಇತಿಹಾಸದಲ್ಲಿ ಅಚ್ಚುಮಾಡಲು ಅವರು ಕಿಂಚಿತ್ ಪ್ರಯತ್ನವನ್ನೂ ಮಾಡಲಿಲ್ಲ
ಇತಿಹಾಸದ ಪುಟಗಳಲ್ಲಿ ಅಚ್ಚಾಗದೇ ಉಳಿದ ಸ್ವಾತಂತ್ರ್ಯ ಹೋರಾಟಗಾರ ವೈದ್ಯ ನೀಲಕಂಠ ರಾಮಚಂದ್ರರಾವ್ ಪಟವರ್ಧನ್, ಶಿರಸಿ
Follow us on

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದವರ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಹಲವರೂ ಸಕ್ರಿಯವಾಗಿ ಭಾಗವಹಿಸಿದ್ದರು. ಅದರಲ್ಲಿ ಇತಿಹಾಸದ ಕೆಲವು ಪುಸ್ತಕಗಳಲ್ಲಿ ಪ್ರಪ್ರಥಮವಾಗಿ ಕಾಣಲು ಸಿಗುವಂತಹ ಹೆಸರು ವೈದ್ಯ ನೀಲಕಂಠ ರಾಮಚಂದ್ರರಾವ್ ಪಟವರ್ಧನ್. ಅಪ್ರತಿಮ ಹೋರಾಟಗಾರ ನೀಲಕಂಠರಾಯರ ಕುಟುಂಬದ ಸಂಬಂಧದಲ್ಲಿ ತಮ್ಮ ಮುತ್ತಜ್ಜನ ಕುರಿತು ಹೆಮ್ಮೆಯನ್ನು ಹಂಚಿಕೊಂಡಿದ್ದಾರೆ ಶಿರಸಿಯ ಡಾ.ರವಿ ಪಟವರ್ಧನ್. 75 ನೇ ಸ್ವಾತಂತ್ರ್ಯೋತ್ಸವದ ಘಳಿಗೆಯಲ್ಲಿ ಪ್ರಸಿದ್ಧಿಯ ಗುಂಗಿಗೆ ಹೋಗದ ಸ್ವಾತಂತ್ರ್ಯ ಹೋರಾಟಗಾರ ವೈದ್ಯ ನೀಲಕಂಠರಾವ್ ಪಟವರ್ಧನ್ ಅವರ ಹೋರಾಟದ ರೋಚಕ ಪರಿಚಯ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ನಿಮ್ಮ ಓದಿಗಾಗಿ..

ವೈದ್ಯ ನೀಲಕಂಠ ರಾಮಚಂದ್ರರಾವ್ ಪಟವರ್ಧನ್ ಶಿರಸಿ ಅವರಿಗೆ ಬ್ರಿಟಿಷರನ್ನು ವಿರೋಧಿಸುವುದು ರಕ್ತಗತವಾಗಿ ಬಂದಂತಹ ಸಂಗತಿಯಾಗಿತ್ತು. ಏಕೆಂದರೆ ಅವರ ಅಜ್ಜ, ಅವರ ಕುಟುಂಬದ ಎಲ್ಲ ಸದಸ್ಯರನ್ನು ಬ್ರಿಟಿಷರು ಬೆಂಕಿಹಾಕಿ, ಗುಂಡಿಕ್ಕಿ ಕೊಂದಿದ್ದರು ಎಂಬ ಇತಿಹಾಸದ ಪುಟಗಳು ಉಸುರುತ್ತಿದ್ದವು. ಆಗಿನ ಕಾಲದಲ್ಲಿ ಶಿರಸಿಯ ಕಟ್ಟಕಡೆಯ ಮನೆ ನೀಲಕಂಠ ರಾಯರದಾಗಿತ್ತು. ಒಂದು ಊರಿನಿಂದ ಇನ್ನೊಂದು ಊರಿಗೆ ಗೌಪ್ಯವಾಗಿ ತೆರಳುವ ಎಲ್ಲ ಸ್ವಾತಂತ್ರ್ಯ ಸಂಗ್ರಾಮದ ಸೈನಿಕರು ನನ್ನ ಮುತ್ತಜ್ಜನ ಮನೆಯಲ್ಲಿ ವಾಸ್ತವ್ಯ ಮಾಡುತ್ತಿದ್ದರು. ಆಗಿನ ಕಾಲದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಹಿಂದೆ ಇರುವಂತಹ ಧಾರ್ಮಿಕ ಗುರುಗಳು ಕೂಡ ಪ್ರವಾಸದಲ್ಲಿ ಅವರ ಮನೆಯಲ್ಲಿಯೇ ವಿಶ್ರಾಂತಿಗಾಗಿ ಇರುವುದು ರೂಢಿಯಾಗಿತ್ತು.

ಅಂದಿನ ಕಾಲದಲ್ಲಿ ಶಿರಸಿಯಲ್ಲಿ ಮಾರಿಕಾಂಬ ಹೈಸ್ಕೂಲು ಒಂದೇ ಪ್ರೌಢಶಿಕ್ಷಣ ವ್ಯವಸ್ಥೆಯಾಗಿತ್ತು. ಅಲ್ಲಿಯ ವಿದ್ಯಾರ್ಥಿಗಳನ್ನು ತಮ್ಮ ಬಳಿಗೆ ಕರೆದು ಅವರಿಗೆ ಸ್ವಾತಂತ್ರ್ಯ ಎಂದರೇನು? ಎಂಬಂತಹ ಬ್ರಿಟಿಷರ ವಿರುದ್ಧ ಮಾಹಿತಿಗಳನ್ನು ನೀಡಿ ಬ್ರಿಟಿಷರು ಕೊಡುವಂತ ಬಹುಮಾನಗಳನ್ನು ಸ್ವೀಕರಿಸಬೇಡಿ ಎಂದು ಕಿವಿಮಾತುಗಳನ್ನು ಹೇಳುತ್ತಿದ್ದರು. ಜತೆಗೆ ಎಲ್ಲ ವಿದ್ಯಾರ್ಥಿಗಳಿಗೆ ಹಣ್ಣು ಹಂಪಲುಗಳನ್ನು ಕೊಟ್ಟು ಕಳುಹಿಸುತ್ತಿದ್ದರು. ಸ್ವಾತಂತ್ರ ಸಂಗ್ರಾಮದಲ್ಲಿ ಅವರು ಜೈಲುವಾಸವನ್ನು ಅನುಭವಿಸಿದವರಲ್ಲ. ಸರಕಾರಿ ದಾಖಲೆಗಳಲ್ಲಿ ದಾಖಲೆಯಾಗಿ ಸ್ವಾತಂತ್ರ್ಯ ಸೈನಿಕರು ಎಂಬ ಅವರು ಎಂದಿಗೂ ಕರೆಸಿಕೊಂಡಿಲ್ಲ. ಅಂತಹ ಪ್ರಯತ್ನವನ್ನೂ ಮುತ್ತಜ್ಜ ಮಾಡಿರಲಿಲ್ಲ. ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ನಮ್ಮೆಲ್ಲರದು ಅಳಿಲುಸೇವೆ, ಅದಕ್ಕೆ ಯಾಕೆ ಹಣೆಪಟ್ಟಿ ಬೇಕು? ಎಂಬುದು ಅವರ ಚಿಂತನೆಯಾಗಿತ್ತು. ಅಥವಾ ಸ್ವಾತಂತ್ರ್ಯಾ ನಂತರ ಸ್ವತಂತ್ರ ಸಂಗ್ರಾಮದಲ್ಲಿ ಭಾಗವಹಿಸಿದ್ದಕ್ಕಾಗಿ ಸರ್ಕಾರಿ ಸವಲತ್ತುಗಳು ಬೇಡ ಹೇಳುವಂತಹ ದೊಡ್ಡ ವಿಚಾರಧಾರೆಯ ವ್ಯಕ್ತಿ ನನ್ನ ಮುತ್ತಜ್ಜ.

ಅಂದಿನ ಕಾಲದಲ್ಲಿ ನನ್ನ ಮುತ್ತಜ್ಜ ವೈದ್ಯ ನೀಲಕಂಠ ರಾಮಚಂದ್ರರಾವ್ ಪಟವರ್ಧನ್ ಅವರ ಹೆಸರು ಚಿಕಿತ್ಸೆಗಾಗಿ ಕರ್ನಾಟಕದಲ್ಲಿಯೇ ಪ್ರಖ್ಯಾತವಾಗಿತ್ತು. ಶಿರಸಿಯನ್ನು ಇವರ ಹೆಸರಿನಿಂದಲೇ ಗುರುತಿಸುವ ರೂಡಿ ಇತ್ತು ಎಂದು ಹಳೆಯ ಕೆಲವು ವೃದ್ಧರು ನನಗೆ ಮಾಹಿತಿ ನೀಡಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇದ್ದರೂ ಹೆಸರು ಹೇಳಬಯಸದ, ಸರ್ಕಾರದಿಂದ ಗುರುತಿಸಲು ಇಚ್ಛಿಸದ, ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಸ್ವತಂತ್ರ ಸೈನಿಕರ ಆತ್ಮಕ್ಕೆ ನನ್ನ ಸ್ವಾತಂತ್ರದ 75ರ ಸಂಭ್ರಮದಲ್ಲಿ ನನ್ನ ಅನಂತ ನಮಸ್ಕಾರಗಳನ್ನು ಹೇಳಬಯಸುತ್ತೇನೆ.

ವಿಶೇಷ ಲೇಖನ: ಡಾ.ರವಿ ಪಟವರ್ಧನ್, ಶಿರಸಿ

ಇದನ್ನೂ ಓದಿ: 

75ನೇ ಸ್ವಾತಂತ್ರ್ಯೋತ್ಸವ: ಇಂದು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ರಾಷ್ಟ್ರಪತಿ ರಾಮನಾಥ ಕೋವಿಂದ್​

Kannada Patriotic Movies: ದೇಶದ ಸ್ವಾತಂತ್ರ್ಯದ ಕುರಿತು ಮೈ ನವಿರೇಳಿಸುವ ಕನ್ನಡದ ದೇಶಭಕ್ತಿ ಸಿನಿಮಾಗಳು

(Azadi Ka Amrut Mahotsav Independence Day 2021 here is the profile of Freedom Fighters Neelakanta Ramachandra Rao Patwardhan Sirsi)

Published On - 7:11 am, Sun, 15 August 21