ಕಂಪ್ಯೂಟರ್​ ಮೂಷಿಕನ ಸಹ-ನಿರ್ಮಾತೃ ವಿಲಿಯಮ್​ ಇಂಗ್ಲಿಷ್​ ನಿಧನ

| Updated By: ಆಯೇಷಾ ಬಾನು

Updated on: Nov 23, 2020 | 12:10 PM

ಕಂಪ್ಯೂಟರ್​ ಬಳಸುವವರ ಜೀವನ ಸರಳಮಾಡಿಕೊಟ್ಟ ಮೌಸ್​ನ ಸಹ ಆವಿಷ್ಕಾರಕ ವಿಲಿಯಮ್​ ಇಂಗ್ಲಿಷ್​ ಜುಲೈ 26ರಂದು ನಿಧನರಾಗಿದ್ದಾರೆ. ಅಮೆರಿಕಾದ ಕೆಂಟಕಿಯಲ್ಲಿ ಜನಿಸಿದ 91 ವರ್ಷದ ಇಂಗ್ಲಿಷ್​ ತಮ್ಮ ಸಹೋದ್ಯೋಗಿ ಡಗ್​ ಎಂಗಲ್​ಬರ್ಟ್​ ಜೊತೆ ಸೇರಿ ಮೌಸ್​ ಸಾಧನವನ್ನ ಆವಿಷ್ಕರಿಸಿದ್ದರು. ಆದರೆ, 1963ರಲ್ಲಿ ಆವಿಷ್ಕರಿಸಲಾದ ಮೌಸ್​ ಜನಪ್ರಿಯವಾಗಿದ್ದು ಮಾತ್ರ ಹಲವು ದಶಕಗಳ ನಂತರ. ಪ್ರತಿಷ್ಠಿತ ಸ್ಟ್ಯಾನ್​ಫರ್ಡ್​ ಸಂಶೋಧನಾ ಸಂಸ್ಥೆಯಲ್ಲಿ ಈ ಜೋಡಿ ಕೆಲಸ ಮಾಡುವಾಗ ಕಂಪ್ಯೂಟರ್​ ಸ್ಕ್ರೀನ್​ ಮೇಲೆ ಕಾಣುವ ಪದಗಳು ಅಥವಾ ಅಕ್ಷರಗಳನ್ನು ಸುಲಭವಾಗಿ ಸೆಲೆಕ್ಟ್​ ಮಾಡಲು ಉಪಾಯವೊಂದನ್ನು […]

ಕಂಪ್ಯೂಟರ್​ ಮೂಷಿಕನ ಸಹ-ನಿರ್ಮಾತೃ ವಿಲಿಯಮ್​ ಇಂಗ್ಲಿಷ್​ ನಿಧನ
Follow us on

ಕಂಪ್ಯೂಟರ್​ ಬಳಸುವವರ ಜೀವನ ಸರಳಮಾಡಿಕೊಟ್ಟ ಮೌಸ್​ನ ಸಹ ಆವಿಷ್ಕಾರಕ ವಿಲಿಯಮ್​ ಇಂಗ್ಲಿಷ್​ ಜುಲೈ 26ರಂದು ನಿಧನರಾಗಿದ್ದಾರೆ. ಅಮೆರಿಕಾದ ಕೆಂಟಕಿಯಲ್ಲಿ ಜನಿಸಿದ 91 ವರ್ಷದ ಇಂಗ್ಲಿಷ್​ ತಮ್ಮ ಸಹೋದ್ಯೋಗಿ ಡಗ್​ ಎಂಗಲ್​ಬರ್ಟ್​ ಜೊತೆ ಸೇರಿ ಮೌಸ್​ ಸಾಧನವನ್ನ ಆವಿಷ್ಕರಿಸಿದ್ದರು. ಆದರೆ, 1963ರಲ್ಲಿ ಆವಿಷ್ಕರಿಸಲಾದ ಮೌಸ್​ ಜನಪ್ರಿಯವಾಗಿದ್ದು ಮಾತ್ರ ಹಲವು ದಶಕಗಳ ನಂತರ.

ಪ್ರತಿಷ್ಠಿತ ಸ್ಟ್ಯಾನ್​ಫರ್ಡ್​ ಸಂಶೋಧನಾ ಸಂಸ್ಥೆಯಲ್ಲಿ ಈ ಜೋಡಿ ಕೆಲಸ ಮಾಡುವಾಗ ಕಂಪ್ಯೂಟರ್​ ಸ್ಕ್ರೀನ್​ ಮೇಲೆ ಕಾಣುವ ಪದಗಳು ಅಥವಾ ಅಕ್ಷರಗಳನ್ನು ಸುಲಭವಾಗಿ ಸೆಲೆಕ್ಟ್​ ಮಾಡಲು ಉಪಾಯವೊಂದನ್ನು ಹುಡುಕುತ್ತಿದ್ದರು. ಆಗಲೇ ನೋಡಿ ಹುಟ್ಟಿದ್ದು ಕಂಪ್ಯೂಟರ್​ ಮೌಸ್​.

ಡಗ್​ ರಚಿಸಿದ ಮೌಸ್​ನ ವಿನ್ಯಾಸಕ್ಕೆ ರೂಪರೇಷೆ ನೀಡಿದ್ದು ವಿಲಿಯಮ್. ಮರದಿಂದ ಮಾಡಿರುವ ಪುಟ್ಟ ಡಬ್ಬಿಯಂತೆ ಹೋಲುತ್ತಿದ ಮೊದಲ ಮೌಸ್​ನಲ್ಲಿ ಕೇವಲ ಒಂದೇ ಬಟನ್​ ಹಾಗೂ ಎರಡು ಗಾಲಿಗಳನ್ನ ಲಂಬಕೋನಾಕಾರದಲ್ಲಿ (90 degrees) ಅಳವಡಿಸಲಾಗಿತ್ತು. ಇದರಿಂದ ಬಹು ಸುಲಭವಾಗಿ ಸ್ಕ್ರೀನ್​ ಮೇಲೆ ಪದಗಳನ್ನ ಸೆಲೆಕ್ಟ್​ ಮಾಡಲು ಸಾಧ್ಯವಾಗಿತ್ತು.

ಅಂದು ಸರಳವಾಗಿ ಬಳಕೆಗೆ ಮೌಸ್​ ಇದೀಗ ಹೊಸ ಹೊಸ ವಿನ್ಯಾಸಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಅಚ್ಚರಿಯ ಸಂಗತಿಯೆಂದರೆ ಈ ಸಾಧನಕ್ಕೆ ಮೌಸ್​ ಎಂದು ಯಾರು ಹೆಸರಿಟ್ಟರು ಅನ್ನೋದು ಡಗ್​ ಮತ್ತು ವಿಲಿಯಮ್​ಗೆ ಗೊತ್ತೇಯಾಗಲಿಲ್ಲ. ಆದರೆ, ವಿಪರ್ಯಾಸವೆಂದರೆ, ಈ ಜೋಡಿ ತಮ್ಮ ಆವಿಷ್ಕಾರದಿಂದ ಒಂದು ನಯಾ ಪೈಸೆ ಗಳಿಸಲಿಲ್ಲವಂತೆ. ಆದರೂ, ತಮ್ಮ ಆವಿಷ್ಕಾರದ ಮೂಲಕ ಜನರ ಮನಸ್ಸಲ್ಲಿ ಶಾಶ್ವತವಾಗಿ ಗೌರವ ಪಡೆದಿದ್ದಾರೆ.

Published On - 12:57 pm, Tue, 4 August 20