AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಪ್ರತಿಷ್ಠಿತ ಹೋಟೆಲ್​ನಲ್ಲಿ ಮಸಾಲೆ ದೋಸೆ ಜೊತೆ, ರಬ್ಬರಿನಂತೆ ಅರ್ಧ ಹಲ್ಲಿ ಹಲ್ಲಿಗೆ ಸಿಕ್ತು!

ದೆಹಲಿ: ಅನ್​ಲಾಕ್​ ಬಳಿಕವಾದರೂ ಸ್ನೇಹಿತರೊಟ್ಟಿಗೆ ಹಾಯಾಗಿ ಹೋಟೆಲ್​ನಲ್ಲಿ ತನ್ನ ನೆಚ್ಚಿನ ಮಸಾಲೆ ದೋಸೆ ಸವಿಯಲು ಬಯಸಿದ ವ್ಯಕ್ತಿಗೆ ದೊಡ್ಡ ಶಾಕ್​ ಸಿಕ್ಕಿದೆ. ವೀಕೆಂಡ್​ ಮಸ್ತಿಗೆಂದು ಪಂಕಜ್​ ಅಗರ್​ವಾಲ್ ಎಂಬುವರು ತಮ್ಮ ಸ್ನೇಹಿತರೊಟ್ಟಿಗೆ ನಗರದ ಕನ್ಹಾಟ್ ​ ಪ್ಲೇಸ್​ನಲ್ಲಿರುವ ದಕ್ಷಿಣ ಭಾರತದ ಪ್ರತಿಷ್ಠಿತ ಹೋಟೆಲ್​ನ ಬ್ರಾಂಚ್​ಗೆ ಭೇಟಿ ಕೊಟ್ಟಿದ್ದ. ಎಂದಿನಂತೆ ತನ್ನ ಫೇವರೇಟ್​ ಮಸಾಲೆ ದೋಸೆ ಆರ್ಡರ್​ ಮಾಡಿದ್ದರು. ರಬ್ಬರಿನಂತೆ ಹಲ್ಲಿ ಹಲ್ಲಿಗೆ ಸಿಕ್ತು! ಬಿಸಿ ಬಿಸಿ ದೋಸೆ ಬಂದ ಕೂಡಲೇ ರುಚಿಯಾದ ಸಾಂಬಾರ್​ನಲ್ಲಿ ಅದ್ದಿ ಬಾಯಿಗೆ ಇಟ್ಟು […]

ಆ ಪ್ರತಿಷ್ಠಿತ ಹೋಟೆಲ್​ನಲ್ಲಿ ಮಸಾಲೆ ದೋಸೆ ಜೊತೆ, ರಬ್ಬರಿನಂತೆ ಅರ್ಧ ಹಲ್ಲಿ ಹಲ್ಲಿಗೆ ಸಿಕ್ತು!
KUSHAL V
| Edited By: |

Updated on:Aug 03, 2020 | 2:04 PM

Share

ದೆಹಲಿ: ಅನ್​ಲಾಕ್​ ಬಳಿಕವಾದರೂ ಸ್ನೇಹಿತರೊಟ್ಟಿಗೆ ಹಾಯಾಗಿ ಹೋಟೆಲ್​ನಲ್ಲಿ ತನ್ನ ನೆಚ್ಚಿನ ಮಸಾಲೆ ದೋಸೆ ಸವಿಯಲು ಬಯಸಿದ ವ್ಯಕ್ತಿಗೆ ದೊಡ್ಡ ಶಾಕ್​ ಸಿಕ್ಕಿದೆ. ವೀಕೆಂಡ್​ ಮಸ್ತಿಗೆಂದು ಪಂಕಜ್​ ಅಗರ್​ವಾಲ್ ಎಂಬುವರು ತಮ್ಮ ಸ್ನೇಹಿತರೊಟ್ಟಿಗೆ ನಗರದ ಕನ್ಹಾಟ್ ​ ಪ್ಲೇಸ್​ನಲ್ಲಿರುವ ದಕ್ಷಿಣ ಭಾರತದ ಪ್ರತಿಷ್ಠಿತ ಹೋಟೆಲ್​ನ ಬ್ರಾಂಚ್​ಗೆ ಭೇಟಿ ಕೊಟ್ಟಿದ್ದ. ಎಂದಿನಂತೆ ತನ್ನ ಫೇವರೇಟ್​ ಮಸಾಲೆ ದೋಸೆ ಆರ್ಡರ್​ ಮಾಡಿದ್ದರು.

ರಬ್ಬರಿನಂತೆ ಹಲ್ಲಿ ಹಲ್ಲಿಗೆ ಸಿಕ್ತು! ಬಿಸಿ ಬಿಸಿ ದೋಸೆ ಬಂದ ಕೂಡಲೇ ರುಚಿಯಾದ ಸಾಂಬಾರ್​ನಲ್ಲಿ ಅದ್ದಿ ಬಾಯಿಗೆ ಇಟ್ಟು ವಾವ್​ ಟೇಸ್ಟಿ ಟೇಸ್ಟಿ ಅನ್ನೋಕೆ ಹೊರಟಿದ್ರು. ಅಷ್ಟರಲ್ಲೇ ಬಾಯಲ್ಲಿ ರಬ್ಬರಿನಂಥ ಪದಾರ್ಥ ಸಿಕ್ಕಿದಂತೆ ಭಾಸವಾಯ್ತು. ಸಾಂಬಾರ್​ನಲ್ಲಿರೋ ಪದಾರ್ಥ ಇರಬೇಕು ಅಂತಾ ಬಾಯಿಂದ ಹೊರ ತೆಗೆದಾಗಲೇ ಗೊತ್ತಾಗಿದ್ದು, ಅದು ಸತ್ತ ಹಲ್ಲಿಯೆಂದು.

ಅಂದು ಕ್ಷಣ ದಂಗಾದ ಪಂಕಜ್​ಗೆ ಏನು ಮಾಡೋದು ಎಂದು ತೋಚಲೇ ಇಲ್ಲ. ಆಗಲೇ ಆತನಿಗೆ ಹೊಳೆದಿದ್ದು ಅದು ಬರಿ ಹಲ್ಲಿಯ ಅರ್ಧ ಕಳೆಬರ ಅಂತಾ! ಉಳಿದಿದ್ದು ಎಲ್ಲಿ ಅಂತಾ ಹುಡುಕಾಡಿದ, ಬಟ್​ ಸಿಗಲಿಲ್ಲ. ಕೂಡಲೇ, ಹೋಟೆಲ್​ ಸಿಬ್ಬಂದಿಯ ಮೇಲೆ ಕೂಗಾಡಿದ ಪಂಕಜ್​, ಘಟನೆಯ ವಿಡಿಯೋ ಸಹ ಮಾಡಿದ್ದಾರೆ. ಜೊತೆಗೆ, ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾರೆ. ತನಿಖೆ ಕೈಗೆತ್ತಿಕೊಂಡಿರೋ ಪೊಲೀಸರು ಹೋಟೆಲ್​ನ ಸಿಸಿಟಿವಿ ವಿಡಿಯೋ ಹಾಗೂ ಅಡುಗೆ ಭಟ್ಟನ ವಿವರ ಸಹ ಪಡೆದಿದ್ದಾರೆ.

Published On - 2:04 pm, Mon, 3 August 20

ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ