
ಮಳೆ ತುಸು ಹೆಚ್ಚೇ ಸುರಿದರೂ ಮನೆಗಳಿಗೆ ನೀರು ನುಗ್ಗುವುದು, ಜಲಾಶಯಗಳ ಗೇಟು ಕಿತ್ತುಹೋಗುವುದು ಈಗೀಗ ಸಾಮಾನ್ಯವಾಗಿದೆ. ಇನ್ನು ಬಿಹಾರದಲ್ಲಿ ಇತ್ತೀಚೆಗೆ ವಾರ ಹದಿನೈದು ದಿನದಲ್ಲಿ ಹತ್ತಾರು ಬ್ರಿಡ್ಜ್ಗಳೇ ಉದುರಿಬಿದ್ದವು. ಅತ್ಯಾಧುನಿಕ ನಿರ್ಮಾಣ ತಂತ್ರಜ್ಞಾನದ ಮಧ್ಯೆಯೂ ಇಂದಿನ ಮಾನವ ನಿರ್ಮಿತ ಕಟ್ಟಡಗಳು ಶಿಥಿಲಗೊಳ್ಳುತ್ತಿರುವುದನ್ನು ನೋಡಿದಾಗ ಮನುಷ್ಯನ ಮೇಲಿನ ನಂಬಿಕೆಯೇ ಕುಸಿಯುತ್ತದೆ. ಇದಕ್ಕಿಂತಾ ಕೆಟ್ಟ ಪ್ರಸಂಗವೆಂದರೆ ಇತ್ತೀಚೆಗೆ ರಾಜಧಾನಿ ದೆಹಲಿಯಲ್ಲಿ ಮಳೆ ಸ್ವಲ್ಪ ಜೋರಾಗಿ ಬಿದ್ದಾಗ ನೀರು ಬೇಸ್ಮೆಂಟ್ಗೆ ನುಗ್ಗಿ ಭವಿಷ್ಯದ ಆಶಾಕಿರಣವಾಗಿದ್ದ ಮೂವರು ಐಎಎಸ್ ಆಕಾಂಕ್ಷಿಗಳು ಕೆಲವೇ ಕ್ಷಣಗಳಲ್ಲಿ ಜಲಸಮಾಧಿಯಾದರು. ಇದೆಲ್ಲಾ ದುರದೃಷ್ಟಕರ ತಾಜಾ ಬೆಳವಣಿಗೆಗಳಿಗೆ ಹಿಡಿದ ಕನ್ನಡಿಯಾಗಿದೆ. ಅಷ್ಟಕ್ಕೂ ಇದೆಲ್ಲಾ ಯಾಕೆ ಹೇಳಬೇಕಾಯಿತು ಅಂದರೆ ಸರಿಸುಮಾರು 1200 ವರ್ಷಗಳ ಹಿಂದೆ ಸಮತಟ್ಟಾದ ಬೆಟ್ಟದಲ್ಲಿ ಏಕಶಿಲೆಯಲ್ಲಿ ಬೃಹದಾಕಾರದ ದೇವಸ್ಥಾನವನ್ನು ನಿರ್ಮಿಸಲಾಯಿತು. ಮಹಾರಾಷ್ಟ್ರದ ಎಲ್ಲೋರಾ ಗುಹೆಗಳಲ್ಲಿ ಕೆತ್ತಿದ ಆ ದೇಗುಲವೇ ಕೈಲಾಸ ಮಂದಿರ. ಸಾವಿರಾರು ವರ್ಷಗಳೇ ಉರುಳಿದರೂ ಆ ಬೆಟ್ಟದಿಂದ ಒಂದು ಚಿಕ್ಕ ಬಂಡೆಯೂ ಉರುಳಿಲ್ಲ! ಅಷ್ಟು ಸದೃಢವಾಗಿ ಬಂಡೆಯಂತೆ ನಿಂತಿದೆ ಆ ದೇವಸ್ಥಾನ. ಅದೇ ಇಂದಿನ ‘ಆಧುನಿಕ ಕರಕುಶಲ ಕರ್ಮಿಗಳು’ ಅಂದರೆ ದುಷ್ಕರ್ಮಿಗಳು ತಾವು ಕಟ್ಟಲಾಗದಿದ್ದರೂ ಅದನ್ನು ಬೀಳಿಸುವಲ್ಲಿ ಎತ್ತಿದ ಕೈ ಆಗಿದ್ದಾರೆ. ಯಾಕೆಂದರೆ ಆ ಕೈಲಾಸ ಮಂದಿರದಲ್ಲಿದ್ದ ಹಲವಾರು ಅದ್ಭುತ ಕುಶಲ ಕೆತ್ತನೆಗಳು, ವಿಗ್ರಹಗಳನ್ನು ಈ ದುಷ್ಕರ್ಮಿಗಳು ಮನಸೋಇಚ್ಛೆ ಕಡಿದುಹಾಕಿದ್ದಾರೆ. ಇದು ಮಾನವ ದುರಂತವೇ ಸರಿ. ಇನ್ನು,...
Published On - 2:32 pm, Tue, 10 September 24