AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಲು ಉತ್ಪಾದನೆಯಲ್ಲಿ ನಾಡಿಗೆ ಸ್ಪೂರ್ತಿಯಾಗುತ್ತಿದೆ ಮಾರ್ಕಂಡಪುರದ ಮಹಿಳೆಯರ ಮಾದರಿ

ಸ್ರ್ತೀ ಮನಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದು ತಲೆ ತಲಾಂತರದಿಂದ ಸಾಬೀತಾಗುತ್ತಲೇ ಇದೆ. ಗಂಗೆಯನ್ನು ಭೂಮಿಗಿಳಿಸಿದ ಭಗೀರಥನ ಕಥೆ ಕೇಳಿದ ನಮಗೆ ಮಾರ್ಕಂಡಪುರದ ಮಹಿಳೆಯರ ಮಾದರಿ ಸ್ಪೂರ್ತಿಯಾಗುತ್ತದೆ.

ಹಾಲು ಉತ್ಪಾದನೆಯಲ್ಲಿ ನಾಡಿಗೆ ಸ್ಪೂರ್ತಿಯಾಗುತ್ತಿದೆ ಮಾರ್ಕಂಡಪುರದ ಮಹಿಳೆಯರ ಮಾದರಿ
ಹಾಲು ಉತ್ಪಾದಕ ಸಂಘದ ಕೆಲಸದಲ್ಲಿ ನಿರತರಾದ ಮಹಿಳೆಯರು
guruganesh bhat
| Edited By: |

Updated on: Dec 17, 2020 | 11:37 AM

Share

ಕೋಲಾರ: ಮಹಿಳೆ ಮನಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದು ತಲೆತಲಾಂತರದಿಂದ ಸಾಬೀತಾಗುತ್ತಲೇ ಇದೆ. ಗಂಗೆಯನ್ನು ಭೂಮಿಗಿಳಿಸಿದ ಭಗೀರಥನ ಕಥೆ ಕೇಳಿದ ನಮಗೆ ಮಾರ್ಕಂಡಪುರದ ಮಹಿಳೆಯರ ಮಾದರಿ ಸ್ಪೂರ್ತಿಯಾಗುತ್ತದೆ.

ಕೋಲಾರದ ಕೆಲವೆಡೆ ಅಂತರ್ಜಲವೇ ಬತ್ತಿಹೋಗಿದೆ. ಮಾರ್ಕಂಡಪುರವೂ ಅಂತದ್ದೇ ಒಂದು ಗ್ರಾಮ. ಗ್ರಾಮದ ಜನರು ಕುಡಿಯಲೂ ನೀರಿಲ್ಲದೆ ಊರು ಬಿಡುವ ಸ್ಥಿತಿಗೆ ತಲುಪಿದ್ದರು. ಕಳೆದ ಎಂಟು ವರ್ಷಗಳಿಂದ ಮಳೆಯನ್ನೇ ಕಾಣದೆ ಕೃಷಿ ಮಾಡುವುದು ಅಸಾಧ್ಯವೆಂಬ ಸ್ಥಿತಿಗೆ ತಲುಪಿತ್ತು. ಗ್ರಾಮಸ್ಥರು ಮಾಡಲು ಏನೂ ತೋಚದೇ ತಲೆ ಮೇಲೆ ಕೈಹೊತ್ತು ಕುಳಿತರು. ಆದರೆ, ಗ್ರಾಮದ ಮಹಿಳೆಯರು ಧೃತಿಗೆಡಲಿಲ್ಲ.

ಮಹಿಳೆಯರ ಮೊಗದಲ್ಲಿ ಸ್ವಾವಲಂಬನೆಯ ನಗು

ನೀರಿಲ್ಲದಿದ್ದರೇನು..ಹಾಲು ಬೆಳೆಯಬಹುದಲ್ಲ!? ಕೃಷಿ ಮಾಡಲಾಗದೇ ದಿಕ್ಕೆಟ್ಟು ಕೂತಿದ್ದ ಪುರುಷರಿಗೆ ಮಹಿಳೆಯರ ಬದುಕು ನಡೆಸುವ ಇನ್ನೊಂದು ಆಯಾಮ ತೋರಿಸಿದರು. ಮಹಿಳೆಯರೇ ಸೇರಿಕೊಂಡು, ಸ್ವಸಹಾಯ ಗುಂಪು ನಿರ್ಮಿಸಿದರು. ಮನೆಯ ಜಾನುವಾರಿಗೆ ಕೈಮುಗಿದು ಹೈನುಗಾರಿಕೆ ಪ್ರಾರಂಭಿಸಿದರು.

ಅಂದು 50 ಲೀಟರ್ ಹಾಲಿನಿಂದ ಆರಂಭವಾದ ಸಂಘ ಇಂದು 500 ಲೀ ಹಾಲು ಉತ್ಪಾದನೆ ಮಾಡುತ್ತಿದೆ. ನಿರಂತರ ಶ್ರಮ ಮತ್ತು ಆಸಕ್ತಿಗೆ ಜಿಲ್ಲೆಯೇ ಮಾರ್ಕಂಡಪುರದತ್ತ ತಿರುಗಿನೋಡುತ್ತಿದೆ. ಮಹಿಳೆಯರೇ ನಡೆಸುತ್ತಿರುವ ಸಹಕಾರಿ ಸಂಘ ಇತರ ಗ್ರಾಮಗಳಿಗೂ ಮಾದರಿಯಾಗಿದೆ.

ಈಗ ಹಸುಗಳಿಗೂ ಮಾರ್ಕಂಡಪುರದ ಮಹಿಳೆಯರಿಗೂ ಬೆಳೆದಿದೆ ಬಿಡಿಸಲಾರದ ನಂಟು

ಮಹಿಳೆಯರ ಶ್ರ,ಮಕ್ಕೆ ಸಂದ ಗೌರವ

ಇಲ್ಲಿ ಮಹಿಳೆಯರೇ ಬಾಸ್ ಹಸು ಮೇಯಿಸಿ, ಹಾಲು ಕರೆದು, ಪೇಟೆಯಿಂದ ದನಕರುಗಳಿಗೆ ಮೇವು ತರುವುದರಿಂದ ಹಿಡಿದು ಡೈರಿಗೆ ಹಾಲು ಹಾಕಿ, ತಿಂಗಳಿಗೆ ಸಂಬಳ ಎಣಿಸುವವರೆಗೂ ಎಲ್ಲಾ ಕೆಲಸಗಳನ್ನೂ ಮಹಿಳೆಯರೇ ನಿರ್ವಹಿಸುತ್ತಾರೆ. ಸಂಘದ ಮೂಲಕ ಬಡ ಮಹಿಳೆಯರಿಗೆ ಸಾಲ ಸೌಲಭ್ಯಗಳನ್ನ ಕಲ್ಪಿಸಿ, ಆರ್ಥಿಕವಾಗಿ ಸಬಲರಾಗುವಂತೆ ಮಾಡಲಾಗಿದೆ.

ಇಡೀ ಕುಟುಂಬವನ್ನು ಪೋಷಿಸಬಲ್ಲ ಶಕ್ತಿ ಮಹಿಳೆಗಿದೆ ಎಂಬುದಕ್ಕೆ ತಾಜಾ ನಿದರ್ಶನವಾಗಿ ಮಾರ್ಕಂಡಪುರದ ಮಹಿಳೆಯರು ನಮ್ಮೆದುರಿಗಿದ್ದಾರೆ. ಇತರ ಗ್ರಾಮಗಳ ಮಹಿಳೆಯರಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ.

-ರಾಜೇಂದ್ರ ಸಿಂಹ

3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!
ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು
ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!
ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!
ಆಟೋ ಚಾಲಕನನ್ನು ಬಾನೆಟ್ ಮೇಲೆ ಹೊತ್ತೊಯ್ದ ಜೀಪ್ ಚಾಲಕ
ಆಟೋ ಚಾಲಕನನ್ನು ಬಾನೆಟ್ ಮೇಲೆ ಹೊತ್ತೊಯ್ದ ಜೀಪ್ ಚಾಲಕ
ಲಕ್ಕುಂಡಿಯಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳದಲ್ಲೇ ಹಾವು ಪ್ರತ್ಯಕ್ಷ!
ಲಕ್ಕುಂಡಿಯಲ್ಲಿ ಉತ್ಖನನ ನಡೆಯುತ್ತಿರುವ ಸ್ಥಳದಲ್ಲೇ ಹಾವು ಪ್ರತ್ಯಕ್ಷ!
ಗುರುಗ್ರಾಮದ ವಿಜಯ್ ವಿಹಾರದಲ್ಲಿ ಜನರ ಮೇಲೆ ಬೀದಿ ನಾಯಿಗಳ ದಾಳಿ
ಗುರುಗ್ರಾಮದ ವಿಜಯ್ ವಿಹಾರದಲ್ಲಿ ಜನರ ಮೇಲೆ ಬೀದಿ ನಾಯಿಗಳ ದಾಳಿ
ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕಿರಿದಾದ ರಸ್ತೆಯಲ್ಲಿ ಸ್ಕೂಲ್ ಬಸ್ ಅಟ್ಟಾಡಿಸಿದ ಭಾರಿ ಗಾತ್ರದ ಒಂಟಿ ಸಲಗ!
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಕೆಲ‌ಕಾಲ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ
ಕೊಪ್ಪಳ: ಕಿಮ್ಸ್ ಆಡಳಿತಾಧಿಕಾರಿ ಕಲ್ಲೇಶ್ ಮನೆ ಸೇರಿ 6 ಕಡೆ ಲೋಕಾಯುಕ್ತ ದಾಳಿ
ಕೊಪ್ಪಳ: ಕಿಮ್ಸ್ ಆಡಳಿತಾಧಿಕಾರಿ ಕಲ್ಲೇಶ್ ಮನೆ ಸೇರಿ 6 ಕಡೆ ಲೋಕಾಯುಕ್ತ ದಾಳಿ
ನಟಿಯರ ಪರವಾಗಿ ಚಿತ್ರರಂಗಕ್ಕೆ ವಿಶೇಷ ಮನವಿ ಮಾಡಿದ ರಚಿತಾ ರಾಮ್
ನಟಿಯರ ಪರವಾಗಿ ಚಿತ್ರರಂಗಕ್ಕೆ ವಿಶೇಷ ಮನವಿ ಮಾಡಿದ ರಚಿತಾ ರಾಮ್