ಕಿಂಗ್ಸ್ ಇಲೆವೆನ್ ಪಂಜಾಬ್ ಪ್ರಾಂಚೈಸಿಯ ಮಾಲೀಕರಲ್ಲೊಬರಾಗಿರುವ ಸಿನಿಮಾ ತಾರೆ ಮತ್ತು ಸೌಂದರ್ಯದ ಖನಿ ಪ್ರೀಟಿ ಜಿಂಟಾ ಅವರಿಗೆ ಇಂಡಿಯನ್ ಪ್ರಿಮೀಯರ್ ಲೀಗಿನ 13 ನೇ ಆವೃತ್ತಿ ಮಿಶ್ರ ಭಾವನೆಗಳನ್ನು ಒದಗಿಸಿದೆ. ಈ ಬಾರಿ ಅಕೆಯ ಟೀಮು ಪ್ಲೇ ಆಫ್ ಹಂತಕ್ಕೆ ಅರ್ಹತೆ ಗಳಿಸಲಿಲ್ಲ. ಕಳೆದ ಆರು ವರ್ಷಗಳಿಂದ ಅದು ಲೀಗ್ ಹಂತದಲ್ಲೇ ನಿರ್ಗಮಿಸುತ್ತಿರುವುದು ಬೇರೆ ವಿಷಯ. ಕೊನೆಯ ಬಾರಿ ಪ್ರೀಟಿಯ ಟೀಮು ಪ್ಲೇ ಆಫ್ನಲ್ಲಿ ಆಡಿದ್ದು 2014ರಲ್ಲಿ, ಆ ಸೀಸನ್ನಲ್ಲಿ ಅದು ಫೈನಲ್ ಕೂಡ ಪ್ರವೇಶಿಸಿತಾದರೂ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಅದಕ್ಕಿಂತ ಮೊದಲು ಒಮ್ಮೆ, 2008ರ ಉದ್ಘಾಟನಾ ಆವೃತ್ತಿಯಲ್ಲಿ ಅದು ಸೆಮಿಫೈನಲ್ ಹಂತವನ್ನು ತಲುಪಿತ್ತು.
ಈ ವರ್ಷದ ಕರವಾ ಚೌತ್ ಮೂರು ನಾನು ಮೂರು ಕಡೆ ಆಚರಿಸಿದೆ ಅಂತ ಪ್ರೀಟಿ ತಮ್ಮ ಇನ್ಸ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ. ಪ್ರತಿ ಐಪಿಎಲ್ ಸೀಸನ್ ನಡೆಯುವಾಗ ಟೀಮಿನೊಂದಿಗೆ ಇರುವ ಪ್ರೀಟಿ ಹಬ್ಬದ ದಿನವೂ ದುಬೈನಲ್ಲಿದ್ದರು. ಆದರೆ, ಅವತ್ತೇ ಲಾಸ್ ಏಂಜೆಲಿಸ್ ವಿಮಾನ ಹತ್ತಿದ ಅವರು ಹಬ್ಬ ಮುಗಿಯುವುದರೊಳಗೆ ತಮ್ಮ ಪತಿಯನ್ನು ಸೇರಿಕೊಂಡೆನೆಂದು ಬರೆದುಕೊಂಡಿದ್ದಾರೆ.
‘ನನ್ನ ಈ ಬಾರಿಯ ಕರವಾ ಚೌತ್ ಸುದೀರ್ಘವಾಗಿತ್ತು, ಅದು ದುಬೈನಿಂದ ಅರಂಭಗೊಂಡು, ಮೋಡಗಳ ಮಧ್ಯೆ ಹಾದು ಅಂತಿಮವಾಗಿ ಲಾಸ್ ಏಂಜಲಿಸ್ನಲ್ಲಿ ಲ್ಯಾಂಡ್ ಆಗುವುದರೊಂದಿಗೆ ಸಂಪನ್ನಗೊಂಡಿತು, ಎಲ್ಲರಿಗೂ ಕರವಾ ಚೌತ್ ಹಬ್ಬದ ಶುಭಾಶಯಗಳು’ ಅಂತ ಪ್ರೀಟಿ ಹೇಳಿಕೊಂಡಿದ್ದಾರೆ.
ದುಬೈಯಲ್ಲಿರುವಾಗಲೂ ಅವರು ತಮ್ಮ ಪತಿಗೆ ‘ಮಿಸ್ ಯೂ,’ ‘ನಮ್ಮ ದಿಢೀರ್ ಪ್ರವಾಸಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ,’ ‘ಹೊರಗಡೆ ಸುತ್ತುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ,’ ‘ನನ್ನ ಪತಿಯನ್ನು ಮಿಸ್ ಮಾಡಿಕೊಳ್ಳತಿದ್ದೇನೆ,’ ಅಂತ ಮೆಸೇಜುಗಳನ್ನು ಇನ್ಸ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡುತ್ತಿದ್ದರು.
ಪ್ರತಿಬಾರಿ ದುಬೈಯಿಂದಲಾಸ್ ಏಂಜಲೀಸ್ ಪ್ರಯಾಣಿಸುವಾಗ ಅವರು ಕೊವಿಡ್-19 ಸಂಬಂಧಿತ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರು. ಅಂಥ ಒಂದು ಟ್ರಿಪ್ನಲ್ಲಿ ಅವರು ಅಮೆರಿಕ ತಲುಪಿದ ಮೇಲೆ, ‘ಬಯೊ ಬಬಲ್ನಿಂದ ಆಚೆ ಬಂದು ಲವ್ ಬಬಲ್ ಸೇರಿಕೊಂಡಿದ್ದೇನೆ, ಅಲ್ಪಾವಧಿಗೋಸ್ಕರ ಮನೆಗೆ ಬಂದಿದ್ದರೂ ಬಹಳ ಸಂತೋಷವಾಗುತ್ತಿದೆ,’ ಅಂತ ಬರೆದುಕೊಂಡಿದ್ದಾರೆ.