ಅಮ್ಮ ಮಾಡಿದ ಕರಾವಳಿ ಪತ್ರೊಡೆ ಟ್ವಿಟ್ಟರ್​ನಲ್ಲಿ ಹಂಚಿಕೊಂಡ ಕಂಗನಾ!

ಉಡುಪಿ: ಹಳ್ಳಿಯ ಪತ್ರೊಡೆಗೆ ಈಗ ಡೆಲ್ಲಿವರೆಗೂ ಪ್ರಸಿದ್ಧಿ ಬಂದಿದೆ. ಕರಾವಳಿಯ ಖಾದ್ಯ ಪತ್ರೊಡೆಯನ್ನು ಬಾಲಿವುಡ್ ನಟಿ ಕಂಗನಾ ರಾಣಾವತ್ ಸವಿದಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅದನ್ನು ಬರೆದುಕೊಂಡಿದ್ದಾರೆ. ಮಳೆಗಾಲದಲ್ಲಿ ತುಳುನಾಡಿನ ಗದ್ದೆ, ತೋಟಗಳಲ್ಲಿ ಯಥೇಚ್ಚವಾಗಿ ಬೆಳೆಯುವ ಕೆಸುವಿನ ಎಲೆಯ ಖಾದ್ಯಕ್ಕೆ ಕಂಗನಾ ರಾಣಾವತ್ ಬೌಲ್ಡ್ ಆಗಿದ್ದಾರೆ. ತುಳುನಾಡಿನ ಆಹಾರದ ಬಗ್ಗೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪ್ರಸ್ತಾವಿಸಿದ್ದಾರೆ. ಮಳೆಗಾಲ ಬಂತೆಂದರೆ ಸಾಕು ಕರಾವಳಿ ಭಾಗದಲ್ಲಿ ಕೆಸು ಬೆಳೆಯಲು ಆರಂಭಿಸುತ್ತದೆ. ಮೂರ್ನಾಲ್ಕು ತಿಂಗಳುಗಳ ಕಾಲ ಕೆಸುವಿನ ಎಲೆಯಲ್ಲಿ ಹಲವಾರು ಖಾದ್ಯಗಳನ್ನು […]

ಅಮ್ಮ ಮಾಡಿದ ಕರಾವಳಿ ಪತ್ರೊಡೆ ಟ್ವಿಟ್ಟರ್​ನಲ್ಲಿ ಹಂಚಿಕೊಂಡ ಕಂಗನಾ!
Ayesha Banu

| Edited By: sadhu srinath

Aug 17, 2020 | 2:46 PM

ಉಡುಪಿ: ಹಳ್ಳಿಯ ಪತ್ರೊಡೆಗೆ ಈಗ ಡೆಲ್ಲಿವರೆಗೂ ಪ್ರಸಿದ್ಧಿ ಬಂದಿದೆ. ಕರಾವಳಿಯ ಖಾದ್ಯ ಪತ್ರೊಡೆಯನ್ನು ಬಾಲಿವುಡ್ ನಟಿ ಕಂಗನಾ ರಾಣಾವತ್ ಸವಿದಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅದನ್ನು ಬರೆದುಕೊಂಡಿದ್ದಾರೆ.

ಮಳೆಗಾಲದಲ್ಲಿ ತುಳುನಾಡಿನ ಗದ್ದೆ, ತೋಟಗಳಲ್ಲಿ ಯಥೇಚ್ಚವಾಗಿ ಬೆಳೆಯುವ ಕೆಸುವಿನ ಎಲೆಯ ಖಾದ್ಯಕ್ಕೆ ಕಂಗನಾ ರಾಣಾವತ್ ಬೌಲ್ಡ್ ಆಗಿದ್ದಾರೆ. ತುಳುನಾಡಿನ ಆಹಾರದ ಬಗ್ಗೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಪ್ರಸ್ತಾವಿಸಿದ್ದಾರೆ.

ಮಳೆಗಾಲ ಬಂತೆಂದರೆ ಸಾಕು ಕರಾವಳಿ ಭಾಗದಲ್ಲಿ ಕೆಸು ಬೆಳೆಯಲು ಆರಂಭಿಸುತ್ತದೆ. ಮೂರ್ನಾಲ್ಕು ತಿಂಗಳುಗಳ ಕಾಲ ಕೆಸುವಿನ ಎಲೆಯಲ್ಲಿ ಹಲವಾರು ಖಾದ್ಯಗಳನ್ನು ಕರಾವಳಿಗರು ತಯಾರು ಮಾಡುತ್ತಾರೆ. ಕೆಸುವಿನ ಎಲೆಯ ಪತ್ರೊಡೆ, ಕೆಸುವಿನ ಎಲೆಯ ಸಾರು, ಕೆಸುವಿನ ಎಲೆಯ ಚಟ್ನಿ, ಕೆಸುವಿನ ಕಾಂಡದ ಪಲ್ಯ ಹೀಗೆ ವಿವಿಧ ಖಾದ್ಯಗಳು ಕೆಸುವಿಂದ ಆಗುತ್ತದೆ.

ಹಿಮಾಚಲ ಪ್ರದೇಶದ ಕಂಗನಾಳಿಗೂ ಕೆಸುವಿನ ಪತ್ರೊಡೆ ಅಂದರೆ ಇಷ್ಟ. ತನ್ನ ತಾಯಿ ಪತ್ರೊಡೆಯನ್ನು ತಯಾರು ಮಾಡಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಕಂಗನಾ ಟ್ವೀಟ್​ಗೆ ಕರಾವಳಿಯ ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದು, ಖುಷಿ ವ್ಯಕ್ತಪಡಿಸಿದ್ದಾರೆ.

ಕೆಸುವಿನ ಎಲೆಯಲ್ಲಿ ಅಗಾಧವಾದ ರೋಗ ನಿರೋಧಕ ಶಕ್ತಿ ಕೆಸುವಿನ ಎಲೆಯಲ್ಲಿ ಅಗಾಧವಾದ ರೋಗ ನಿರೋಧಕ ಶಕ್ತಿ ಇದ್ದು, ಎಲೆಯನ್ನು ತಿಂದರೆ ದೇಹದ ಶಕ್ತಿ ವೃದ್ಧಿಯಾಗುತ್ತೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹೊಟ್ಟೆ ಸೇರಿರುವ ಉಗುರು, ತಲೆಗೂದಲಿನಂತಹ ಕರಗದ ವಸ್ತುಗಳನ್ನು ಕರಗಿಸುವ ಶಕ್ತಿ ಕೆಸುವಿನ ಎಲೆಗೆ ಮಾತ್ರ ಇರುತ್ತದೆ ಎಂಬುವುದು ಆಯುರ್ವೇದದಲ್ಲಿ ಸಾಬೀತಾಗಿದೆ.

ಕರಾವಳಿಗರು ಮಳೆಗಾಲದಲ್ಲಿ ಒಂದೆರಡು ಬಾರಿಯಾದರೂ ಆಹಾರದಲ್ಲಿ ಕೆಸುವನ್ನು ಬಳಸುತ್ತಾರೆ. ಇದೀಗ ಕಂಗನಾ ರಾಣಾವತ್ ಪತ್ರೊಡೆ ಬಗ್ಗೆ ಪ್ರಸ್ತಾಪ ಮಾಡಿದ್ದು ಕೆಸುವಿಗೆ ದೇಶ ಮಟ್ಟದಲ್ಲಿ ಪ್ರಚಾರ ಸಿಕ್ಕಂತಾಗಿದೆ.

ಮಳೆಗಾಲಕ್ಕಿಂತನ್ನೂ ಆಷಾಢ ಮಾಸ ಅಂದ್ರೆ ಬರಗಾಲ ಕಾಲ ಅನ್ನೊದು ವಾಡಿಕೆ, ಪೂರ್ವಜರು ಇದೇ ಕಾರಣಕ್ಕಾಗಿ ಕಾಡಿನಲ್ಲಿ ಸಿಗುವ ಸೊಪ್ಪುಗಳು, ಗೆಡ್ಡೆ, ಕಾಯಿಗಳ ಮೊರೆಹೋಗುತ್ತಿದ್ರು. ಅದರಲ್ಲೂ ಆಷಾಢ ಮಾಸದಲ್ಲೇ ಹೆಚ್ಚಾಗಿ ಪತ್ರೊಡೆ, ಚಗಟೆ, ಹಲಸಿಬೀಜ ಇನ್ನೂ‌ ನಾನಾ ಬಗೆಯ ವಸ್ತುಗಳಿಂದ ಖಾದ್ಯ ಮಾಡಿ ಸವಿಯುತ್ತಾರೆ. ಅದರಲ್ಲೂ ಪತ್ರೊಡೆ ರುಚಿ ಸವಿಯದೆ ಯಾವ ಮಂದಿಯ ಆಷಾಢ ಮಾಸ ಕಳೆಯುವುದೇ ಕರವಾಳಿಯಲ್ಲಿ ಅಪರೂಪ.

ಪತ್ರೊಡೆ ಮಾಡುವ ವಿಧಾನ ಪತ್ರೋಡೆಯನ್ನು ತುಂಬ ಸುಲಭವಾಗಿ ತಯಾರಿಸಬಹುದು ಮೊದಲೇ ಅಕ್ಕಿ, ತೊಗರಿ ಬೇಳೆ ನೆನೆಸಿಡಬೇಕು. ಒಣ ಮೆಣಸಿನಕಾಯಿ, ಕೊತ್ತಂಬರಿ, ಅಕ್ಕಿ, ಉಪ್ಪು, ಹುಳಿ, ಬೆಲ್ಲ, ಸ್ವಲ್ಪ ಮೆಂತೆ, ಕೊಂಚ ತೊಗರಿ ಬೇಳೆಯನ್ನು ರುಬ್ಬಿ ಪೇಸ್ಟ್ ತಯಾರಿಸಬೇಕು. ಮಿಶ್ರಣದ ಪೇಸ್ಟನ್ನು ಕೆಸುವಿನ ಎಲೆಯ ಮೇಲೆ ತೆಳುವಾಗಿ ಹಚ್ಚಬೇಕು.

ಇನ್ನೊಂದು ಕೆಸುವಿನ ಎಲೆಯನ್ನು ಅದರ ಮೇಲಿಟ್ಟು ಅದಕ್ಕೂ ಹಚ್ಚಬೇಕು. ಹೀಗೆ ಐದಾರು ಎಲೆಗಳನ್ನು ಮೇಲಿಂದ ಮೇಲೆ ಇಟ್ಟು ಮಸಾಲೆ ಹಚ್ಚಿ, ಕೊನೆಗೆ ಸುತ್ತಿ ಇಡ್ಲಿ ಪಾತ್ರೆಯಲ್ಲಿ ಬೇಯಿಸಬೇಕು‌. ಬೆಂದ ನಂತರ ರೌಂಡ್ ಆಕಾರದಲ್ಲಿ ಕಟ್ ಮಾಡಿ, ತುಪ್ಪ ಹಚ್ಚಿ ಕಾವಲಿಯಲ್ಲಿ ಎರಡು ಬದಿ ಕಾಯಿಸಿದರೆ ರುಚಿಕರವಾದ ಪತ್ರೊಡೆ ಸಿದ್ಧವಾಗುತ್ತದೆ. -ಹರೀಶ್ ಪಾಲೇಚ್ಚಾರ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada