ಜೀವನದ ಸವಾಲುಗಳನ್ನು ಮೆಟ್ಟಿ ನಿಂತು ಭರವಸೆಯ ಸಾಧನೆ ಮಾಡಿದ ಉದಯೋನ್ಮುಖ ಪ್ರತಿಭೆ ಕಾರ್ತಿಕ್ ವೈ ಬಿ
ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ಉದಯೋನ್ಮುಖ ಪ್ರತಿಭೆ ಕಾರ್ತಿಕ್ ವೈ ಬಿ, ತಮ್ಮ ಜೀವನದಲ್ಲಿ ಎಲ್ಲ ವಿಚಾರಗಳಲ್ಲಿ ಮುಂದಿರುವ ಕಾರ್ತಿಕ್ ತನ್ನ ಕೆಲಸದ ಜೊತೆ ಜೊತೆಗೆ ರಂಗಭೂಮಿ, ಕಿರುಚಿತ್ರ, ವಾಯ್ಸ್ ಆರ್ಟಿಸ್ಟ್, ಮೋಡ್ಲಿಂಗ್ನಲ್ಲೂ ಇವರ ಉತ್ಸಾಹ ತುಂಬಾನೇ ಹೆಚ್ಚಿತ್ತು. ಆ ಕಾರಣ ಇವರನ್ನು ಬಹುಮುಖ ಪ್ರತಿಭೆ ಎಂದು ಕರೆಯಬಹುದು.
ಯಾವುದೇ ಸವಾಲು ದೊಡ್ಡದಲ್ಲ, ಅದೃಷ್ಟ, ಆತ್ಮಸ್ಥೈರ್ಯ ನಮ್ಮ ಜೊತೆಗಿರುವ ತನಕ ಸವಾಲುಗಳನ್ನು ನಮ್ಮದಾಗಿಸಿಕೊಂಡು ಎದುರಿಸುವ ಧೈರ್ಯ ನಮ್ಮದಾಗಿರಬೇಕು ಎಂಬ ಮಾತಿನಂತೆ ಸವಾಲುಗಳನ್ನು ಸ್ವೀಕರಿಸಿಕೊಂಡು ಬಿಸಿನೆಸ್, ಮೋಡ್ಲಿಂಗ್, ಕಿರುಚಿತ್ರ, ಡಬ್ಬಿಂಗ್ ಆರ್ಟಿಸ್ಟ್ ಆಗಿ ಮಿಂಚುತ್ತಿರುವ ದಕ್ಷಿಣಕನ್ನಡ ಜಿಲ್ಲೆಯ ಹೆಮ್ಮೆಯ ಪ್ರತಿಭೆ ಕಾರ್ತಿಕ್ ವೈ. ಬಿ ಇವರು ಮೂಲತಃ ಮಂಗಳೂರಿನ ನಿವಾಸಿಯಾಗಿದ್ದು, ವೈ ಆರ್ ಬಜೇಂದ್ರ ಹಾಗೂ ಸರೋಜಾ ದಂಪತಿಯ ಪುತ್ರ. ಇವರು ತಮ್ಮ ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢ ಶಿಕ್ಷಣವನ್ನು ಸೈಂಟ್ ಆಂಟ್ಸ್ ಸ್ಕೂಲ್ ಕುಂಟಿಕಾನ, ಪದವಿ ಶಿಕ್ಷಣವನ್ನು ಮಹೇಶ್ ವಿಜ್ಞಾನ ಕಾಲೇಜು, ಹಾಗೂ ಎಸ್ ಎನ್ ಎಂ ಪಾಲಿಟೆಕ್ನಿಕ್ ಸಿವಿಲ್ ಇಂಜಿನಿಯರಿಂಗ್ ಪದವಿ ಪೂರ್ವ ಶಿಕ್ಷಣವನ್ನು ಮೂಡಬಿದ್ರೆಯಲ್ಲಿ ಪೂರೈಸಿದರು.
ಸಿವಿಲ್ ಇಂಜಿನಿಯರಿಂಗ್ ಪೂರ್ಣಗೊಳಿಸಿದ ಬಳಿಕ ಇವರ ಏಕಾಗ್ರತೆ, ಆಲೋಚನೆ ಕಾಂಕ್ರೀಟ್ ವ್ಯವಹಾರದ ಕಡೆಗೆ ಸೆಳೆಯಿತು. ತನ್ನ ಕೆಲಸದ ಜೊತೆ ಜೊತೆಗೆ ರಂಗಭೂಮಿ, ಕಿರುಚಿತ್ರ, ವಾಯ್ಸ್ ಆರ್ಟಿಸ್ಟ್, ಮೋಡ್ಲಿಂಗ್ನಲ್ಲೂ ಇವರ ಉತ್ಸಾಹ ತುಂಬಾನೇ ಹೆಚ್ಚಿತ್ತು. ಇವರನ್ನು ಬಹುಮುಖ ಪ್ರತಿಭೆ ಎಂದು ಹೇಳಿದರು ತಪ್ಪಾಗಲಾರದು. ಎಲ್ಲಾ ಸವಾಲುಗಳನ್ನು ಸ್ವೀಕರಿಸಿಕೊಂಡು ತನನ್ನೇ ತಾನೂ ಎಲ್ಲಾ ಕ್ಷೇತ್ರದಲ್ಲೂ ಗುರುತಿಸಿಕೊಳ್ಳಬೇಕು ಎಂಬ ಹಠವನ್ನು ಹಿಡಿದು ಜೀವನದಲ್ಲಿ ಮುಂದೆ ಸಾಗುತ್ತಿದ್ದಾರೆ. ಪ್ರಯತ್ನಪಟ್ಟರೆ ಎಲ್ಲವೂ ನಮ್ಮದಾಗುತ್ತದೆ ಎಂಬ ಭರವಸೆ ಇದ್ದರೆ ಏನನ್ನೂ ಬೇಕಾದರೂ ಸಾಧಿಸಬಹುದು. ಇವರಿಗೆ ಐಕಾನ್ ಆಫ್ ಇಂಡಿಯನ್ ಬಿಸಿನೆಸ್ನಲ್ಲಿ ಬೆಸ್ಟ್ ಕಾಂಕ್ರೀಟ್ ಮ್ಯಾನುಫ್ಯಾಕ್ಚರಿಂಗ್ ಎಂಬ ಪ್ರಶಸ್ತಿಯು ಕೂಡ ಲಭಿಸಿದೆ.
ಬಾಲ್ಯದಿಂದಲೇ ತುಂಬಾ ಆಸಕ್ತಿಯನ್ನು ಹೊಂದಿದ ಇವರು ಮೊಟ್ಟಮೊದಲ ಬಾರಿಗೆ ಕಿರು ಚಿತ್ರಗಳ ಮೂಲಕ ಕಾಣಿಸಿಕೊಂಡ ಇವರು ಸುಮಾರು 40 ಕ್ಕಿಂತ ಹೆಚ್ಚು ಕಿರು ಚಿತ್ರಗಳಲ್ಲಿ ಡಬ್ಬಿಂಗ್ ಆರ್ಟಿಸ್ಟ್ ವಾಯ್ಸ್ ಕೊಟ್ಟು, ತನ್ನ ಸಾಧನೆಯನ್ನು ಎಲ್ಲರಿಗೂ ತೋರಿಸಿಕೊಟ್ಟರು. ಅದಲ್ಲದೆ ಇವರು ಆಸ್ತಿ, ಪೊನ್ನ ಜನ್ಮ, ಸ್ಪರ್ ಹಾಗೂ ಕರಿನೆರೆಲ್ ಎಂಬ 4 ತುಳು ಕಿರು ಚಿತ್ರಗಳಲ್ಲಿ ನಟನೆಯನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ.
ಜೀವನದಲ್ಲಿ ಸವಾಲುಗಳು ಇರಬೇಕು ಸವಾಲುಗಳನ್ನು ಎದುರಿಸುವ ಪ್ರಯತ್ನ ನಮ್ಮದಾಗಿರಬೇಕು. ಇತ್ತೀಚಿನ ದಿನಗಳಲ್ಲಿ ಮೋಡ್ಲಿಂಗ್ ಆಗಿ ತನ್ನನ್ನೇ ತಾನೂ ಗುರುತಿಸಿಕೊಂಡಿರುವ ಇವರು ಮೊಟ್ಟ ಮೊದಲ ಬಾರಿಗೆ Mr ತುಳುನಾಡ್ 1ಸ್ಟ್ ರನ್ನರಪ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ತನ್ನ ಈ ಸಾಧನೆಯ ಶಿಖರಕ್ಕೆ ತಂದೆ ಮತ್ತು ತಾಯಿಯ ಸ್ಪೂರ್ತಿಯೇ ತುಂಬಾನೇ ಮಹತ್ವದಾದುದು. ಹಾಗೂ ಸಿನಿಮಾ ಕ್ಷೇತ್ರಗಳಲ್ಲಿ ವಿಜಯ್ ಕುಮಾರ್ ಕೊಡಿಯಲ್ ಬೈಲ್ ನನಗೆ ಸ್ಪೂರ್ತಿದಾಯಕರು ಎಂದು ಸಂತಸದಿಂದ ವ್ಯಕ್ತಪಡಿಸಿದರು.
ತನ್ನ ಈ ಸಾಧನೆಗೆ ಮನೆಯವರ ಮತ್ತು ಸ್ನೇಹಿತರ ಪ್ರೋತ್ಸಾಹ ತುಂಬಾನೇ ಹಿರಿದು. ಮನೆಯಲ್ಲಿ ಎಲ್ಲರೂ ಅವರದೇ ಆದ ಕನಸನ್ನು ಕಟ್ಟಿರುವಾಗ ಯಾವುದೇ ಕೆಲಸವನ್ನು ಮಾಡುವಾಗ ಬೇಡವೆನ್ನುವುದು ಸಹಜ, ಆದರೆ ನಮ್ಮ ಗುರಿಯನ್ನು ನಾವು ಮೆಟ್ಟಿ ನಿಲ್ಲಬೇಕು ಎನ್ನುವುದು ಆತ್ಮವಿಶ್ವಾಸವಾಗಿರುಬೇಕು. ಸೋಲೇ ಬರಲಿ ಗೆಲುವೇ ಇರಲಿ ಸೋತರೆ ಬೇಸರ, ಗೆದ್ದರೆ ಇತಿಹಾಸ ಎಂಬ ಮಾತಿನಂತೆ ಗೆಲ್ಲಲೇಬೇಕು ಎಂಬ ಛಲವನ್ನು ಹುಟ್ಟಿಸಿ, ಗೆದ್ದು ಬಂದರೆ ಎಲ್ಲರಿಗೂ ಹೆಮ್ಮೆಯ ಭಾವನೆ ಇದ್ದೆ ಇರುತ್ತದೆ. ಗೆಲುವು ನಮ್ಮದಾಗಿರಬೇಕು ಎನ್ನುವುದು ಇವರ ಅನಿಸಿಕೆ.
ಇದನ್ನೂ ಓದಿ: ಪರಿಸರ ಮಾರಕ ಪ್ಲಾಸ್ಟಿಕ್ಗೆ ಪರ್ಯಾಯ ಕಂಡುಹಿಡಿದ ಕರ್ನಾಟಕದ ಜಸ್ವಿತ್ಗೆ ಜಗತ್ತಿನ ವಿಜ್ಞಾನಿಗಳ ಮೆಚ್ಚುಗೆ
ಜೀವನದಲ್ಲಿ ಅನೇಕ ಸವಾಲುಗಳು ಎದುರಾಗುತ್ತವೆ ಸವಾಲುಗಳನ್ನು ಮೆಟ್ಟಿ ನಿಲ್ಲುವಂತಹ ಭರವಸೆ ನಮ್ಮಲ್ಲಿರಬೇಕು ಆಗಾದಾಗ ಮಾತ್ರ ಜೀವನದಲ್ಲಿ ಬೆಳೆಯಲು ಸಾಧ್ಯ. ಯಾವುದೇ ರೀತಿಯ ಅನ್ಯಾಯ ಮಾಡದೇ, ಮಕ್ಕಾಲಾಟಿಕೆಯನ್ನು ಬಿಟ್ಟು ಜೀವನದಲ್ಲಿ ಗೆಲುವನ್ನು ಸಾಧಿಸಬೇಕು. ಕಾರ್ತಿಕ್ ವೈ. ಬಿ
ಇವರಿಗೆ ಇನ್ನಷ್ಟು ಕಿರು ಚಿತ್ರ ,ಸಿನಿಮಾ ಕ್ಷೇತ್ರ ಹಾಗೆಯೇ ಮೊಡ್ಲಿಂಗ್ ನಲ್ಲೂ ಒಳ್ಳೆಯ ಮಟ್ಟದಲ್ಲಿ ಗುರುತಿಸಿಕೊಂಡು ಜೀವನದಲ್ಲಿ ಮುಂದೆ ಸಾಗಿ ಎಲ್ಲರ ಮನೆಮನೆ ಮಾತಾಗಬೇಕು ಹಾಗೆಯೇ ಇನ್ನಷ್ಟು ಕ್ಷೇತ್ರಗಳಲ್ಲಿ ಅವಕಾಶ ದೊರಕಲಿ.
ರಮ್ಯ ಎಂ ಶ್ರೀನಿವಾಸ್
ವಿವೇಕಾನಂದ ಕಾಲೇಜು ಪುತ್ತೂರು