ಪರಿಸರ ಮಾರಕ ಪ್ಲಾಸ್ಟಿಕ್​​ಗೆ ಪರ್ಯಾಯ ಕಂಡುಹಿಡಿದ ಕರ್ನಾಟಕದ ಜಸ್ವಿತ್​​​ಗೆ ಜಗತ್ತಿನ ವಿಜ್ಞಾನಿಗಳ ಮೆಚ್ಚುಗೆ

ಎಂಟನೆಯ ತರಗತಿಯಲ್ಲಿ ಎ.ಪಿ.ಜೆ ಅಬ್ದುಲ್ ಕಲಾಂ ಅವರ ಬಗೆಗಿನ ಪುಸ್ತಕವನ್ನು ಓದಿ, ತಾನೂ ಒಬ್ಬ ವಿಜ್ಞಾನಿಯಾಗಬೇಕು ಎಂಬ ಕನಸನ್ನು ಕಂಡಿದ್ದ ಹುಡುಗ ಜಸ್ವಿತ್. ಭವಿಷ್ಯದಲ್ಲಿ ಇಸ್ರೋದ ಭಾಗವಾಗಬೇಕು ಎಂಬ ಗುರಿಯನ್ನು ಗೊತ್ತುಮಾಡಿಕೊಂಡಿದ್ದಾರೆ.‌ ಈಗಾಗಲೇ ಅನೇಕ ವಿಜ್ಞಾನ ಮೇಳಗಳಲ್ಲಿ ಭಾಗವಹಿಸಿದ್ದಾರೆ.

ಪರಿಸರ ಮಾರಕ ಪ್ಲಾಸ್ಟಿಕ್​​ಗೆ ಪರ್ಯಾಯ ಕಂಡುಹಿಡಿದ ಕರ್ನಾಟಕದ ಜಸ್ವಿತ್​​​ಗೆ ಜಗತ್ತಿನ ವಿಜ್ಞಾನಿಗಳ ಮೆಚ್ಚುಗೆ
ಪರಿಸರ ಮಾರಕ ಪ್ಲಾಸ್ಟಿಕ್​​ಗೆ ಪರ್ಯಾಯ ಕಂಡುಹಿಡಿದ ಕರ್ನಾಟಕದ ಜಸ್ವಿತ್​​​ಗೆ ಜಗತ್ತಿನ ವಿಜ್ಞಾನಿಗಳ ಮೆಚ್ಚುಗೆ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 16, 2023 | 8:17 AM

ವಿಜ್ಞಾನ ಹಲವಾರು ಮಂದಿಗಳಿಗೆ ಕುತೂಹಲದ ಮತ್ತು ಸ್ಫೂರ್ತಿದಾಯಕ ಕ್ಷೇತ್ರ. ಇತ್ತೀಚಿಗಿನ ದಿನಗಳಲ್ಲಿ ಮೂಲ ವಿಜ್ಞಾನ ಕ್ಷೇತ್ರದೆಡೆಗೆ ಯುವಜನರ ತುಡಿತ ಹೆಚ್ಚಾಗುತ್ತಿದೆ.‌ ತಮ್ಮ ಮಕ್ಕಳು ಅದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಬಯಸುವ ಹೆತ್ತವರೂ ಇದ್ದಾರೆ. ಹಾಗೆಯೇ, ಸಾಧಕರಿಗೆ ಸರಕಾರವು ವಿಶಿಷ್ಟ ಅನುದಾನವನ್ನು ನೀಡಿ ಪ್ರೋತ್ಸಾಹ ಕೂಡಾ ನೀಡುತ್ತಿದೆ. ಇವೆಲ್ಲವುದರ ಪರಿಣಾಮ ಜಗತ್ತು ಕಂಡು ಕೇಳರಿಯದ ಸಾಧನೆ ವಿಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿವೆ.‌ ಹಾಗಾಗಿಯೇ, ಈಚೆಗಿನ ದಿನಗಳಲ್ಲಿ ಸಣ್ಣ ಸಣ್ಣ ಮಕ್ಕಳಲ್ಲೂ ವಿಜ್ಞಾನದ ಕುರಿತಾದ ಆಸಕ್ತಿ ತೀವ್ರತರವಾಗಿ ಏರಿಕೆಯಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ, ದಕ್ಷಿಣ ಕನ್ನಡದ ಪುತ್ತೂರಿನ ಅಂಬಿಕಾ ಸಿಬಿಎಸ್ ಇ ವಿದ್ಯಾಲಯದಲ್ಲಿ ಪ್ರಸ್ತುತ ಹತ್ತನೆ ತರಗತಿ ಓದುತ್ತಿರುವ ಜಸ್ವಿತ್ ಕಾಣಿಸಿಕೊಳ್ಳುತ್ತಾರೆ.

ಎಂಟನೆಯ ತರಗತಿಯಲ್ಲಿ ಎ.ಪಿ.ಜೆ ಅಬ್ದುಲ್ ಕಲಾಂ ಅವರ ಬಗೆಗಿನ ಪುಸ್ತಕವನ್ನು ಓದಿ, ತಾನೂ ಒಬ್ಬ ವಿಜ್ಞಾನಿಯಾಗಬೇಕು ಎಂಬ ಕನಸನ್ನು ಕಂಡಿದ್ದ ಹುಡುಗ ಜಸ್ವಿತ್. ಭವಿಷ್ಯದಲ್ಲಿ ಇಸ್ರೋದ ಭಾಗವಾಗಬೇಕು ಎಂಬ ಗುರಿಯನ್ನು ಗೊತ್ತುಮಾಡಿಕೊಂಡಿದ್ದಾರೆ.‌ ಈಗಾಗಲೇ ಅನೇಕ ವಿಜ್ಞಾನ ಮೇಳಗಳಲ್ಲಿ ಭಾಗವಹಿಸಿದ್ದಾರೆ.

2021ರಲ್ಲಿ ಐರೀಸ್ ಸಂಸ್ಥೆಯು ಆಯೋಜಿಸಿದ್ದ ಅಂತರಾಷ್ಟ್ರೀಯ ಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಅತ್ಯುತ್ತಮ ಐದು ಮಾದರಿಗಳಲ್ಲಿ ಇವರದೂ ಒಂದಾಗಿರುವುದು ಅವರ ಪ್ರತಿಭೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ಮೇಳದಲ್ಲಿ, ತಮ್ಮ ಸಹಪಾಠಿ ಪ್ರವರ್ಧನ್ ಜೊತೆ ಸೇರಿ, ಜಸ್ವಿತ್ ಅವರು ಪ್ಲಾಸ್ಟಿಕ್ ಬಳಕೆಗೆ ಪರ್ಯಾಯವಾದ ವಸ್ತುವನ್ನು ಪ್ರಸ್ತುತ ಪಡಿಸಿ ಜಗತ್ತಿನ ವಿಜ್ಞಾನಿಗಳ ಮೆಚ್ಚುಗೆಗೆ ಪಾತ್ರರಾಗಿರುವುದು ಹೆಮ್ಮೆಯ ವಿಚಾರ.

ಶಿಕ್ಷಣ ಹಾಗೂ ವೈಜ್ಞಾನಿಕ ಕ್ಷೇತ್ರ ಹೀಗೆ ಎರಡೂ ಕ್ಷೇತ್ರಗಳಲ್ಲೂ ಭಾಗವಹಿಸಲು ಸದಾ ಹುರಿದುಂಬಿಸುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಅವರು ತನಗೆ ಸ್ಫೂರ್ತಿ ಎಂದು ಜಸ್ವಿತ್ ನೆನಪಿಸಿಕೊಳ್ಳುತ್ತಾರೆ.

ತನ್ನ ಆಸಕ್ತಿ ಹಾಗೂ ವಿಜ್ಞಾನದೆಡೆಗಿನ ಅಭಿವೃದ್ಧಿಪಡಿಸಿಕೊಳ್ಳುವಲ್ಲಿ ಅಂಬಿಕಾ ವಿದ್ಯಾಲಯದ ಶಿಕ್ಷಕ ವೃಂದ ನೀಡುತ್ತಿರುವ ಪ್ರೋತ್ಸಾಹವನ್ನು ಜಸ್ವಿತ್ ಕೃತಜ್ಞಾಪೂರ್ವಕವಾಗಿ ಸ್ಮರಿಸುತ್ತಾರೆ. ತಾವು ಮಾದರಿ ರೂಪಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಶಿಕ್ಷಕರು ಬಂದು ಮಾಡುತ್ತಿದ್ದ ಸಹಾಯ ಮರೆಯಲಸಾಧ್ಯ ಎನ್ನುತ್ತಾರೆ. ಈ ನಡುವೆ ಹೆತ್ತವರಾದ ಕೇಶವ ಹಾಗೂ ವನಿತಾ ಅವರುಗಳು ಬೆಂಗಾವಲಾಗಿದ್ದು, ನೀಡಿದ ಪ್ರೋತ್ಸಾಹ ಶ್ಲಾಘನೀಯ.

ಇದನ್ನೂ ಓದಿ: ಧರ್ಮ ಇನ್ ರಿಯಲ್ ಲೈಫ್: ದೇವರ ಕೆಲಸದ ಜತೆಗೆ ಶ್ವಾನ ಪ್ರೀತಿ ಈ ಬಾಲಾಜಿ ಸಿಂಗ್​​ಗೆ

ರಸ್ತೆ ಅಪಘಾತ ತಡೆಗಟ್ಟಲು ಹೊಸ ಯೋಜನೆ

ತನ್ಮಧ್ಯೆ ಜಸ್ವಿತ್ ಇನ್ನೊಂದು ವಿಜ್ಞಾನ ಪ್ರಾಜೆಕ್ಟ್ ಗಾಗಿ ತಮ್ಮ ಸಮಯವನ್ನು ಬಳಸಿಕೊಳ್ಳುತ್ತಲಿದ್ದಾರೆ.‌ ರಾತ್ರಿ ವೇಳೆಯಲ್ಲಿ ಪ್ರಾಣಿಗಳು ಮಾರ್ಗ ಸಂಚರಿಸುತ್ತಿರುವುದು ವಾಹನ ಸವಾರರಿಗೆ ತಿಳಿವಿಗೆ ಬಾರದೆ ಅದೆಷ್ಟೋ ಜೀವಹಾನಿಯುಂಟಾಗುತ್ತಿದೆ. ಇದನ್ನು ತಡೆಗಟ್ಟಲು ಹೊಸದಾದ ಯೋಜನೆಯ ಸಿದ್ಧತೆಯಲ್ಲಿ ಜಸ್ವಿತ್ ಅವರು ತೊಡಗಿದ್ದಾರೆ.

ಪುಸ್ತಕ ಓದುವುದು ಜಸ್ವಿತ್ ಅವರ ಹವ್ಯಾಸ.‌ ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಓದಿ, ಹೊಸತನವನ್ನು ಹೇಗೆ ಕಾರ್ಯಗತಗೊಳಿಸಬಹುದೆಂದು ಸದಾ ಅಧ್ಯಯನ ನಡೆಸುತ್ತಾರೆ. ಇದರ ಜೊತೆಗೆ, ಯಕ್ಷಗಾನ ಜಸ್ವಿತ್ ಅವರ ಆಸಕ್ತಿಯ ಕಲಾಕ್ಷೇತ್ರ. ಬಾಲಕೃಷ್ಣ ಉಡ್ಡಂಗಳ ಅವರಿಂದ ಯಕ್ಷಗಾನ ನಾಟ್ಯ ಕಲಿಯುತ್ತಿರುವ ಜಸ್ವಿತ್ ಹಲವಾರು ವೇಷಗಳಿಗೆ ಹೆಜ್ಜೆ ಹಾಕಿದ್ದಾರೆ.‌ ಚಂಡ, ದೇವೇಂದ್ರ, ಹನುಮಂತ, ಕೃಷ್ಣ, ವಾಲ್ಮೀಕಿ ಹೀಗೆ ಅನೇಕ ಪ್ರಾತಗಳಲ್ಲಿ ಜಸ್ವಿತ್ ಮಿಂಚಿದ್ದಾರೆ.

ಪಂಚಮಿ ಬಾಕಿಲಪದವು 

ಅಂಬಿಕಾ ಮಹಾವಿದ್ಯಾಲಯ, ಬಪ್ಪಳಿಗೆ, ಪುತ್ತೂರು

ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ಲೈವ್​
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ಕೊಪ್ಪಳ: ಕೆಸರುಮಯವಾದ ರಸ್ತೆ, ಭತ್ತ ನಾಟಿ ಮಾಡಿ ಗ್ರಾಮಸ್ಥರ ಆಕ್ರೋಶ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ದೇವರಿಗೆ ಯಾವ ದಿನ ಯಾವ ನೈವೇದ್ಯ ಅರ್ಪಿಸಬೇಕು? ವಿಡಿಯೋ ನೋಡಿ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
ಈ ರಾಶಿಯವರಿಗೆ ಆಗಬೇಕಾದ ವಿವಾಹವು ಕಾರಾಣಾಂತರದಿಂದ ಮುಂದೆ ಹೋಗಲಿದೆ
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
FIR ದಾಖಲಾಗಿದ್ದರೂ ಸುದೀರ್ಘ 8 ವರೆ ಗಂಟೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ CM
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದ ಗೋಡೆ ಕುಸಿದು ಇಬ್ಬರು ಸಾವು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಈ ಪ್ರಕರಣದಲ್ಲಿ ನಂಗೆ ಗಂಡಾಂತರ ಇಲ್ಲ: ಲೋಕಾಯುಕ್ತ ವಿಚಾರಣೆ ಬಳಿಕ HDK ಮಾತು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ಸಿಎಂ ವಿರುದ್ಧ FIR: ಪಂಜು ಹಿಡಿದು ಪ್ರತಿಭಟನೆ ನಡೆಸಿದ ಸಿದ್ದು ಬೆಂಬಲಿಗರು
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ದಿಲ್ಲಿಯಿಂದ ನೇರವಾಗಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಬಂದ ಕುಮಾರಸ್ವಾಮಿ
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್
ಅರಮನೆ ಆವರಣದಲ್ಲಿ ಸಿದ್ದುಗೆ ದಸರಾ ಆನೆಗಳು ಸೆಲ್ಯೂಟ್