Blog Story: ನಮ್ಮೂರಿನ ಜಾತ್ರೆಯನ್ನು ನೆನಪಿಸಿದೆ ಧರ್ಮಸ್ಥಳ, ನೆನಪಿನ ಗೂಡಿನಲ್ಲಿ ಸದಾ ಕಾಲ ಜೀವಂತ

ನಮ್ಮ ಊರಿನ ಜಾತ್ರೆಯನ್ನು ನೆನಪಿಸಿದೆ ಧರ್ಮಸ್ಥಳದ ಲಕ್ಷದೀಪೋತ್ಸವ, ಈ ಜಾತ್ರೆ ನಮ್ಮ ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ, ಹಲವು ಸಂಭ್ರಮಕ್ಕೆ ಈ ಜಾತ್ರೆ ಸಾಕ್ಷಿ.

Blog Story: ನಮ್ಮೂರಿನ ಜಾತ್ರೆಯನ್ನು ನೆನಪಿಸಿದೆ ಧರ್ಮಸ್ಥಳ, ನೆನಪಿನ ಗೂಡಿನಲ್ಲಿ ಸದಾ ಕಾಲ ಜೀವಂತ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 24, 2022 | 8:20 AM

ಬೆಂಗಳೂರಿನಲ್ಲಿ ನನ್ನ ಮನೆ ಕನಕಪುರದಲ್ಲಾದರೂ, (Kanakpur) ನನ್ನ ನೆಚ್ಚಿನ ಜಾಗ ಅಂದರೆ ಅದು ಬಸವನಗುಡಿ. ಕಳೆದ ಐದು ವಸಂತಗಳಲ್ಲಿ ನನಗೆ ತಿಳಿಯದಂತೆ ಬಸವನಗುಡಿ ನನ್ನ ಜೀವನದ ಒಂದು ಪ್ರಮುಖ ಭಾಗವಾಗಿದೆ. ಪಿ.ಯು.ಸಿ ಯಿಂದ ಡಿಗ್ರಿ ವರೆಗೂ ಐದು ವರ್ಷಗಳ ಕಾಲ ಅಲ್ಲಿನ ಬಿ.ಎಂ. ಎಸ್ ಹಾಗು ನ್ಯಾಷನಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆಡಿದ್ದು ಒಂದೆಡೆಯಾದರೆ, ಆ ಅವಧಿಯಲ್ಲಿ ಗಾಂಧಿ ಬಜಾರ್​ನ ಮೂಲೆ ಮೂಲೆಗಳನ್ನು ಸುತ್ತಿದ್ದು ಮತ್ತೊಂದೆಡೆ. ಅಲ್ಲಿ ನಡೆಯುವ ಕಡಲೆಕಾಯಿ ಪರಿಷೆ ನನಗೆ ತುಂಬಾ ಇಷ್ಟ. ನಾನು ವರ್ಷವಿಡೀ ಕಾಯುತಿದ್ದ ಏಕೈಕ ಜಾತ್ರೆ ಎಂದರೆ ಅದು ಬಸವನಗುಡಿಯ ಕಡಲೆಕಾಯಿ ಪರಿಷೆ.

ಅಲ್ಲಿನ ಅಂಗಡಿಗಳು, ಜೋಳದ ಘಮಲು , ಪೀಪಿ ಶಬ್ದ, ರಂಗುರಂಗಿನ ಲೈಟ್ಸ್, ಬಟ್ಟೆಗಳು, ಜುಮ್ಕಿಗಳು, ಅಬ್ಬಬ್ಬಾ! ಆ ಜಾತ್ರೆ ಸಂಭ್ರಮವನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ. ಆದರೆ ಈಗ ಸದ್ಯ ಉನ್ನತ ವ್ಯಸಂಗಕ್ಕಾಗಿ ನಾನು ಉಜಿರೆಯಲ್ಲಿದ್ದೇನೆ. ಆದ ಕಾರಣ ಈ ಬಾರಿ ಜಾತ್ರೆಗೆ ಹೋಗಲು ಸಾಧ್ಯವಿಲ್ಲ ಎನ್ನುವ ಬೇಸರದ ಬೆನ್ನಲ್ಲೇ ಶ್ರೀ ಕ್ಷೇತ್ರ ಧರ್ಮಸ್ಥಳದ್ಲಲಿ ಲಕ್ಷದೀಪೋತ್ಸವ ನಡೆಯುತ್ತದೆ ಎಂಬ ಸಂತಸದ ವಿಷಯ ತಿಳಿಯಿತು. ಹೀಗೇ ಎರಡು ವರುಷಗಳ ಕೆಳಗೆ ನಾನು ಮತ್ತು ತಂಗಿ ಲಕ್ಷದೀಪೋತ್ಸವದ ಅಂಗವಾಗಿ ಕಾರ್ಯಕ್ರಮ ಕೊಡಲು ಧರ್ಮಸ್ಥಳಕ್ಕೆ ಬಂದದ್ದು ಹಾಗೇ ನೆನಪಿಗೆ ಬಂತು.

ಊರ ಜಾತ್ರೆಯೆಂದರೆ ಅದೇನೋ ಪುಳಕ. ಒಂದೊಳ್ಳೆ ನೆನಪಿನ ಸವಾರಿ. ಹಳೆಯ ಗೆಳೆಯರ ಒಡನಾಟದ ನೆನಪು. ಅಮ್ಮನ ಕೈರುಚಿಯಂತೆ, ನೆನಪ ಓಣಿಯಲ್ಲಿ ಸದಾ ಇರುತ್ತದೆ. ಈಗ ಹೋದರೂ ಮತ್ತೆ ತಬ್ಬಿ ಬರಮಾಡಿಕೊಳ್ಳುತ್ತದೆ. ಅಂತೆಯೇ ಲಕ್ಷದೀಪೋತ್ಸವದ ಜಾತ್ರೆ ನನಗೆ ಹೊಸದಾದರೂ ಎಂದೋ ಕಂಡಂತೆ ಭಾಸವಾಗುತ್ತಿತ್ತು.

ಇದನ್ನು ಓದಿ;ಮಕ್ಕಳ ಹಬ್ಬಕ್ಕೆ ಅರ್ಥ ಸಿಗಬೇಕಾದರೆ ಮೊದಲು ಸಾಕ್ಷರತೆ ಮಹತ್ವ ತಿಳಿಸಬೇಕು

ಈ ಜಾತ್ರೆಯೆಂದರೆ ಹಾಗೆ, ಕೂತಲ್ಲೇ ಕುಣಿಸುವ ಗಮ್ಮತ್ತಿನ ಗೊಂಬೆಯಂತೆ. ಗೊಂಬೆ ಮತ್ತು ಅದನ್ನು ಕುಣಿಸುವವ ಬದಲಾದರೂ, ಅದು ನೀಡುವ ಮನರಂಜನೆ ಮಾತ್ರ ಯಾವತ್ತೂ ಮಿಸ್ ಆಗಲ್ಲ. ಪ್ರದೇಶದಿಂದ ಪ್ರದೇಶಕ್ಕೆ ಇದು ತನ್ನ ಸ್ವರೂಪ ಬದಲಾಯಿಸಿದರೂ ಉದ್ದೇಶ ಮಾತ್ರ ಮನಸ್ಸುಗಳನ್ನು ಬೆಸೆಯುವುದೇ ಆಗಿರುತ್ತದೆ. ಹೀಗಾಗಿ ಏಳು ಸಮುದ್ರ ದಾಟಿಕೊಂಡು ಹೋದವರೂ ಕೂಡ ಜಾತ್ರೆಯ ನೆಪದಲ್ಲಿ ಮತ್ತೆ ಮೂಲಬೇರನ್ನು ಹುಡುಕಿಕೊಂಡು ಹಳ್ಳಿಗೆ ಬರುತ್ತಾರೆ. ತೇರನೆಳೆಯುವರು ನೆಪದಲ್ಲಿ ಒಂದಾಗುತ್ತಾರೆ ಎಂದು ನಾನು ನಂಬಿದ್ದೇನೆ.

ಜನುಮದ ಜೋಡಿ ಸಿನಿಮಾದಲ್ಲಿ ದೊರೆಯಂಗೆ ಬಂದೆ ನೀ ಜನ ಜಾತ್ರೆ ನಡುವೆ, ಕಣ್ಣಲ್ಲೇ ತೊಡಿಸಿದೇ ನೀ ಮುದ್ದಿನ ಒಡವೆ’.. ಎಂಬ ಗೀತೆಯೊಂದು ನನಗೀಗ ನೆನಪಿಗೆ ಬರುತ್ತಿದೆ. ಅಕ್ಷರಶಃ ಜಾತ್ರೆಗಳಲ್ಲಿ ಪ್ರೀತಿ ಸಿಗುತ್ತದೆ ಎಂಬುದನ್ನು ಎಲ್ಲೋ ಕೇಳದ ನೆನಪು. ಹಾಗಂತ ಪ್ರೀತಿಯನ್ನು ಹುಡುಕಿಕೊಂಡು ಹೋಗುತ್ತಿದ್ದೇನೆ ಅಂತಲ್ಲ, ಅಂಥದ್ದೊಂದು ಹುಮ್ಮಸ್ಸು ಸಹಜವಾಗಿ ಕಾಣುತ್ತದೆ ಎಂದರ್ಥ. ಇದಕ್ಕೆಲ್ಲ ಕಾರಣ, ಸ್ವರ್ಗವೇ ಜಾತ್ರೆಯಾದ ಸೋಜಿಗ.

ಈ ಸೋಜಿಗವನ್ನು ಬಣ್ಣಿಸುವುದು ತುಂಬಾ ಕಷ್ಟ. ಕಾಮನಬಿಲ್ಲಿನಂತೆ ಕಾಣುವ ಕಲರ್‌ಫುಲ್ ಪ್ರಪಂಚವನ್ನು ವರ್ಣಿಸುವುದಕ್ಕಿಂತ ನೋಡಿ ಆನಂದ ಪಡಬೇಕಷ್ಟೆ. ಜಾತ್ರೆಯಂಬ ಸ್ವರ್ಗದಲ್ಲಿ ಜಾರಿ ಬಿದ್ದರೆ ಏನುಂಟು ಏನಿಲ್ಲ? ಎಂಬ ಪ್ರಶ್ನೆಗೆ ಉತ್ತರವೇ ರಥಬೀದಿಯ ಬದಿಯಲ್ಲಿದ್ದ ಅಂಗಡಿಗಳ ಸಾಲು, ಮಧ್ಯ ನಿಂತಿರುವ ಅಲಂಕೃತ ತೇರು. ತೇರಿನ ಸುತ್ತ ನಿಂತಿರುವ ಭಕ್ತರು. ಬೆಂಡು ಬತ್ತಾಸ್ ಗುಡ್ಡೆಗಳು, ಶ್ರೀ ಮಂಜುನಾಥಸ್ವಾಮಿಯ ಗೋಪುರದ ಸುತ್ತಲಿನ ಹೂವಿನ ಅಲಂಕಾರ, ವಿದ್ಯುತ್ ಅಲಂಕಾರ, ಮೆರಗನ್ನು ಹೆಚ್ಚಿಸುವಂತಹ ವಾದ್ಯಗಳು, ವಿಧವಿಧವಾದ ಜುಮ್ಕಿ, ಸರ, ಬಳೆ, ಕನ್ನಡಕ. ಮತ್ತೊಂದೆಡೆ ತಿರುಗುತ್ತಿದ್ದ ಉಯ್ಯಾಲೆ, ಜಾಯಿಂಟ್ ವೀಲ್ ಹಾಗು ಸರ್ಕಸ್ ಆಟಗಳು ಪ್ರತಿ ಜಾತ್ರೆಯ ಮುಖ್ಯ ಆಕರ್ಷಣೆ. ಇದೆಲ್ಲದರ ಮಧ್ಯೆ ಈ ಹುಡುಗರಂತೂ ಪೀಪಿ ಊದುವುದನ್ನು ಯಾವ ವರ್ಷವೂ ನಿಲ್ಲಿಸಲಿಕ್ಕಿಲ್ಲ ಎಂದು ಕಾಣುತ್ತದೆ.

ನವಂಬರ್‌ನಲ್ಲಿ ನಡೆಯುವ ಧರ್ಮಸ್ಥಳದ ಲಕ್ಷ ದೀಪೋತ್ಸವದಲ್ಲಿ ಲಕ್ಷಾಂತರ ದೀಪಗಳ ಝಗಮಗ ನೋಡಬಹುದು. ಈ ವೈಭವದ ಜೊತೆಗೆ 85 ವರ್ಷಗಳಿಂದ ಇಲ್ಲಿ ಉತ್ಸವದ ಅಂಗವಾಗಿ ಸರ್ವಧರ್ಮ ಸಮ್ಮೇಳನ ಹಾಗೂ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. 40 ವರ್ಷಗಳಿಂದ ರಾಜ್ಯಮಟ್ಟದ ವಸ್ತು ಪ್ರದರ್ಶನ ನಡೆಯುತ್ತಿದೆ. ರಾಜ್ಯದ ಸ್ತ್ರೀ ಶಕ್ತಿ ಸಂಘಟನೆಗಳೆಲ್ಲ ಈ ಸಂದರ್ಭದ್ಲಲಿ ಸೇರುವುದು ವಿಶಿಷ್ಟವಾಗಿದೆ. ಇವನ್ನೆಲ್ಲ ಈ ಬಾರಿ ಪ್ರತ್ಯಕ್ಷವಾಗಿ ಕೇಳುವ ಕಾಣುವ ಅವಕಾಶ ನನಗೆ ದೊರೆತದ್ದು ನನ್ನ ಭಾಗ್ಯ ಎಂದೇ ಭಾವಿಸಿದ್ದೇನೆ. ಹೀಗೆ ಜಾತ್ರೆ, ಕಾರ್ಯಕ್ರಮ, ವರದಿಗಾರಿಗೆ ಎಂದು ನಾಲ್ಕು ದಿನ ಕಳೆದದ್ದೆ ಗೊತ್ತಾಗಲಿಲ್ಲ. ಈ ಜಾತ್ರೆಯ ಸವಿಯಂತೂ ನನ್ನ ನೆನಪಿನ ಗೂಡಿನಲ್ಲಿ ಸದಾ ಕಾಲ ಜೀವಂತವಿರುತ್ತದೆ.

ತೇಜಶ್ವಿನಿ ಕಾಂತರಾಜ್

ಬೆಂಗಳೂರು

ಬ್ಲಾಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ