AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Children’s day 2022: ಮಕ್ಕಳ ಹಬ್ಬಕ್ಕೆ ಅರ್ಥ ಸಿಗಬೇಕಾದರೆ ಮೊದಲು ಸಾಕ್ಷರತೆ ಮಹತ್ವ ತಿಳಿಸಬೇಕು

ಇಂದಿಗೂ ದೇಶದಲ್ಲಿ ಸಾವಿರಾರು ಮಕ್ಕಳು ಬಾಲಕಾರ್ಮಿಕ ಕೆಲಸದಲ್ಲಿ ತೊಡಗಿಸಿಕೊಂಡಿರುವುದು ವಿಪರ್ಯಾಸ. ಅವರಿಗೆ ಶಿಕ್ಷಣದ ಹಕ್ಕು ಸಿಗುತ್ತಿಲ್ಲ. ಇಂದಿಗೂ ಮಕ್ಕಳು ಕಾರ್ಖಾನೆಗಳು, ಅಂಗಡಿಗಳು, ಹೋಟೆಲ್‌ಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ.

Children's day 2022: ಮಕ್ಕಳ ಹಬ್ಬಕ್ಕೆ ಅರ್ಥ ಸಿಗಬೇಕಾದರೆ ಮೊದಲು ಸಾಕ್ಷರತೆ ಮಹತ್ವ ತಿಳಿಸಬೇಕು
Children's day 2022
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on: Nov 14, 2022 | 11:44 AM

Share

ಮಕ್ಕಳ ದಿನಾಚರಣೆ ಎಂದರೆ ಸಾಮಾನ್ಯವಾಗಿ ನಮಗೆ ನೆನಪಿಗೆ ಬರುವುದು ಶಾಲೆ ಮಕ್ಕಳು. ಏಕೆಂದರೆ ಈ ದಿನವನ್ನು ನಾವು ಮಕ್ಕಳ ದಿನ ಎಂದು ಆಚರಿಸಲಾಗುತ್ತದೆ. ಪುಟ್ಟ ಮಕ್ಕಳ ಆಟ ಪಾಠ ತರ್ಲೆ ತುಂಟಾಟಗಳನ್ನು ನೋಡುವುದೇ ಒಂದು ಸಂತೋಷ. ಮಕ್ಕಳ ದಿನಾಚರಣೆಗೆ ಒಂದು ಇತಿಹಾಸವಿದೆ, ಪಂಡಿತ್ ಜವಾಹರ್ ಲಾಲ್ ನೆಹರು ಅವರ ಜನ್ಮದಿನವನ್ನು ನಾವೆಲ್ಲರೂ ಮಕ್ಕಳ ದಿನ ಎಂದು ಆಚರಿಸುತ್ತಾ ಬಂದಿದ್ದೇವೆ. ನವೆಂಬರ್ 14 ರಂದು ದೇಶಾದ್ಯಂತ ಮಕ್ಕಳ ಮೇಲಿರುವಂತ ಅತಿಯಾದ ಪ್ರೀತಿ ಕಾಳಜಿ ಹಾಗೂ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡುವ ಉದ್ದೇಶದಿಂದ ಈ ದಿನವನ್ನು ನಾವೆಲ್ಲರೂ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತೇವೆ. ಮಕ್ಕಳ ದಿನಾಚರಣೆಯನ್ನು ಸಾಮಾನ್ಯವಾಗಿ ಅಂಗನವಾಡಿಗಳಲ್ಲಿ, ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಹೆಚ್ಚಾಗಿ ಆಚರಿಸುತ್ತಾರೆ.

ಮಕ್ಕಳ ದಿನಾಚರಣೆ ಎಂದರೆ ಮಕ್ಕಳಿಗೆ ಒಳ್ಳೆಯ ರೀತಿಯಾದಂತಹ ಶಿಕ್ಷಣವನ್ನು ನೀಡುವುದರ ಜೊತೆಗೆ ಆಟ ಪಾಠ ಎಲ್ಲ ರೀತಿಯ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡುವುದು ಇದರಿಂದ ಅವರ ಜ್ಞಾನ ಹೆಚ್ಚಾಗುತ್ತದೆ ಈ ದಿನದಂದು ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗಾಗಿ ವಿಶೇಷ ರೀತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಸಂಗೀತ ಕುರ್ಚಿ, ಪ್ರಬಂಧ ಸ್ಪರ್ಧೆ ಡ್ರಾಯಿಂಗ್ ರಸಪ್ರಶ್ನೆ ಹೀಗೆ ಅನೇಕ ವಿಚಾರಕ್ಕೆ ಸಂಬಂಧಿಸಿದಂತಹ ಆಟ ಪಾಠಗಳನ್ನು ಶಿಕ್ಷಣದ ರೂಪದಲ್ಲಿ ಮಾಡಿಸುತ್ತಾರೆ. ಮಕ್ಕಳ ದಿನಾಚರಣೆ ಎಂದು ಹೇಳಿದರೆ ನಮ್ಮೆಲ್ಲರಿಗೂ ನೆನಪಲ್ಲಿ ಇರಬೇಕಾದ ವಿಷಯವೇನೆಂದರೆ ಅದು ಶಿಕ್ಷಣ ಮಾತ್ರ.

ಪ್ರಸ್ತುತ ಕಾಲಘಟ್ಟದಲ್ಲಿ ಮಕ್ಕಳು ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸುತ್ತಾರೆ ಉದಾಹರಣೆಗೆ ಮೊಬೈಲ್ ಪೋಷಕರು ಮಾಡುವಂತಹ ಮೊದಲನೆಯ ತಪ್ಪೇನೆಂದರೆ ಚಿಕ್ಕವಯಸ್ಸಿನಲ್ಲಿ ಮಕ್ಕಳಿಗೆ ಮೊಬೈಲ್ ನೀಡುವುದು ಇದರಿಂದ ಆಗುವ ಪರಿಣಾಮವನ್ನು ಯೋಚಿಸಲು ಸಾಧ್ಯವಿಲ್ಲ ಇದರಿಂದ ಮಕ್ಕಳ ಭವಿಷ್ಯಕ್ಕೆ ತುಂಬಾನೇ ಹಾನಿಕಾರವಾಗುತ್ತದೆ ಮಕ್ಕಳಿಗೆ ಶಿಕ್ಷಣವನ್ನು ನೀಡಬೇಕು ಅದು ಯಾವ ರೀತಿಯಾದಂತಹ ಶಿಕ್ಷಣವನ್ನು ನೀಡಬೇಕೆಂಬುದನ್ನು ಪೋಷಕರು ಯೋಚಿಸಬೇಕು.ಇಂದಿನ ಮಕ್ಕಳು ನಾಳಿನ ಭಾರತವನ್ನು ಕಟ್ಟುತ್ತಾರೆ, ನಾವು ಮಕ್ಕಳನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತೇವೆಯೋ ಅಷ್ಟು ಉತ್ತಮ ರಾಷ್ಟ್ರ ನಿರ್ಮಾಣವಾಗುತ್ತದೆ

ಇದನ್ನು ಓದಿ:  ಕಿರುತೆರೆಯ ಸೂಪರ್​ ಸ್ಟಾರ್​ ವಂಶಿಕಾ; ಈ ಪುಟಾಣಿಯ ಪ್ರತಿಭೆಗೆ ಫಿದಾ ಆಗದವರಿಲ್ಲ

ಮಕ್ಕಳಿಗೆ ಶಿಕ್ಷಣವನ್ನು ನೀಡುವುದು ಮಕ್ಕಳ ಸುರಕ್ಷತೆಯನ್ನು ಕಾಪಾಡುವುದು ಇವೆಲ್ಲವೂ ಮಕ್ಕಳ ದಿನಾಚರಣೆಯ ಮೂಲ ಉದ್ದೇಶವಾಗಿದೆ ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಅದೆಷ್ಟೋ ಬಡವರು ತನ್ನ ಮಕ್ಕಳ ಶಿಕ್ಷಣದ ವಿಚಾರದ ಬಗ್ಗೆ ಹೆಚ್ಚಾಗಿ ಯೋಚಿಸುತ್ತಾರೆ ಏಕೆಂದರೆ ಪ್ರಸ್ತುತ ಕಾಲಘಟ್ಟದಲ್ಲಿ ಶಿಕ್ಷಣ ಎಂಬುದು ವ್ಯವಹಾರಿಕವಾಗಿರುವುದರಿಂದ ಶಿಕ್ಷಣವನ್ನು ನೀಡುವುದೇ ಕಷ್ಟ ಸಾಧ್ಯವಾಗಿದೆ ಇದರಿಂದ ಬಡಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಇಂದಿಗೂ ದೇಶದಲ್ಲಿ ಸಾವಿರಾರು ಮಕ್ಕಳು ಬಾಲಕಾರ್ಮಿಕ ಕೆಲಸದಲ್ಲಿ ತೊಡಗಿಸಿಕೊಂಡಿರುವುದು ವಿಪರ್ಯಾಸ. ಅವರಿಗೆ ಶಿಕ್ಷಣದ ಹಕ್ಕು ಸಿಗುತ್ತಿಲ್ಲ. ಇಂದಿಗೂ ಮಕ್ಕಳು ಕಾರ್ಖಾನೆಗಳು, ಅಂಗಡಿಗಳು, ಹೋಟೆಲ್‌ಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಈ ಒಂದು ವಿಚಾರವನ್ನು ನಾವೆಲ್ಲರೂ ಮನದಲ್ಲಿಟ್ಟುಕೊಳ್ಳಬೇಕು ಮಕ್ಕಳ ದಿನಾಚರಣೆ ಯಂದು ನಾವೆಲ್ಲರೂ ಸೇರಿ ಅವರಿಗೆ ಶಿಕ್ಷಣದ ಮಜಹತ್ವ ತಿಳಿಸುವುದರ ಮೂಲಕ ಅವರ ಕಷ್ಟಗಳಿಗೆ ಸ್ಪಂದಿಸುವ ಉತ್ತಮ ಮನಸ್ಸನ್ನು ನಾವು ಹೊಂದಿರಬೇಕು.ಆಗಾ ಮಾತ್ರ ನಾವು ಆಚರಿಸುವ ಈ ಹಬ್ಬಕ್ಕೆ ಅರ್ಥ ಸಿಗುತ್ತದೆ.

ಕವಿತಾ, ವಿಟ್ಲ

ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಟ್ರಿನಿಡಾಡ್ ಮತ್ತು ಟೊಬೆಗೊದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆದ ಮೋದಿ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಬಲ್ಪುರದಲ್ಲಿ ನದಿಯಲ್ಲಿ ಕೊಚ್ಚಿ ಹೋದ ಎಲ್‌ಪಿಜಿ ಸಿಲಿಂಡರ್ ತುಂಬಿದ ಟ್ರಕ್
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..