Children’s day 2022: ರಂಗು ರಂಗಿನ ಮಕ್ಕಳ ದಿನಾಚರಣೆ, ಮತ್ತೆ ನೆನಪಿಸಿದ ಬಾಲ್ಯದ ಸವಿನೆನಪುಗಳು

ಕಾಲೇಜು, ಉನ್ನತ ವ್ಯಾಸಂಗ ಅಂತ ಓಡುತ್ತಿರುವ ಈ ಜೀವನದ ಮಧ್ಯೆ ಮತ್ತೆ ಮಕ್ಕಳಾಗಿ ಶಾಲೆಗೆ ಹೋಗಬೇಕು ಎನ್ನುವ ಬಯಕೆ ಆಗಾಗ ಮೂಡುತ್ತದೆ. ಎಲ್ಲಾ ಪುಟಾಣಿ ಕಂದಮ್ಮಗಳಿಗೂ, ಬೆಳಯುತ್ತಿರುವ ಮುಗ್ಧ ಮನಸ್ಸುಗಳಿಗೂ ಜೊತೆಗೂ ಎಷ್ಟೇ ಬೆಳದರೂ ಇನ್ನೂ ಮಗುವಿನಂತ ಮನಸ್ಸುಳ್ಳವರಿಗೂ ಮಕ್ಕಳ ದಿನದ ಸವಿ ಶುಭಾಶಯಗಳು.

Children's day 2022: ರಂಗು ರಂಗಿನ ಮಕ್ಕಳ ದಿನಾಚರಣೆ, ಮತ್ತೆ ನೆನಪಿಸಿದ ಬಾಲ್ಯದ ಸವಿನೆನಪುಗಳು
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 14, 2022 | 10:51 AM

ನನಗೆ ಮಕ್ಕಳ ದಿನಾಚರಣೆ ಅಂದ ಕೂಡಲೇ ಮೊದಲು ನೆನಪಿಗೆ ಬರೋದೇ ಶಾಲೆಗಳಲ್ಲಿ ಕಲರ್ ಬಟ್ಟೆ ಹಾಕುವುದ ಎಂದರೆ ಖುಷಿ. ಈ ಇಂಟರ್ನ್ಯಾಷನಲ್ ಶಾಲೆಗಳಲ್ಲಿ ಅದೇಕೋ ಕಾಣೆ ಶಾಲಾ ಸಮವಸ್ತ್ರ ಬಿಟ್ಟರೆ ಬೇರೆ ಯಾವುದೇ ತರಹದ ರಂಗು ರಂಗಿನ ಬಟ್ಟೆ ತೊಡಲು ಅವಕಾಶವಿರುವುದಿಲ್ಲ. ಹುಟ್ಟಿದ ದಿನ ಕೂಡ ಸಮವಸ್ತ್ರ ಧರಿಸಬೇಕಾ? ಅನ್ನೋ ನನ್ನಂಥ ಸಾವಿರರಾರು ವಿದ್ಯಾರ್ಥಿಗಳ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ ಆ ಒಂದು ದಿನ ಮಾತ್ರ ನಮ್ಮೆಲ್ಲರ ಪಾಲಿಗೆ ಸುದಿನ. ಅಂದು ಮಕ್ಕಳೇ ಕೇಂದ್ರ ಬಿಂದು, ಆ ಕಾರಣಕ್ಕೆ ಈ ದಿನದಂದು ಸಮವಸ್ತ್ರಕ್ಕೆ ರಜೆ ಹೇಳಿ ನಮ್ಮಿಷ್ಟದ ಉಡುಗೆ ತೊಟ್ಟು ಶಾಲೆಗೆ ಹೋಗುವ ಸಂಭ್ರಮ. ವರ್ಷವಿಡೀ ಕಲರ್ ಡ್ರೆಸ್ ಹಾಕಲು ಅನುಮತಿ ಇಲ್ಲ ಎಂದು ಕೊರಗಿದವರ ಪಾಲಿಗಂತೂ ಅದು ಅದೃಷ್ಟದ ದಿನ ಅಥವಾ ಯಾವುದೋ ಲಾಟರಿ ಹೊಡೆದಂತೆ. ಮಕ್ಕಳ ಪಾಲಿಗೆ ಸಂಭ್ರಮ ಸಂತಸ ಹಾಗೂ ಸಡಗರ ತರುವ ಆ ದಿನ ಯಾವುದು ಎಂಬುದು ಎಲ್ಲರಿಗೂ ತಿಳಿದೇ ಇದೆ, ಅದುವೇ ಮಕ್ಕಳ ದಿನಾಚರಣೆ.

ನಮ್ಮೆಲ್ಲರ ನೆಚ್ಚಿನ ತಾತ, ಅಚ್ಚುಮೆಚ್ಚಿನ ಚಾಚಾ, ಮಕ್ಕಳ ಪಾಲಿನ ರಿಯಲ್ ಹೀರೋ, ಹಾಗೇ ದೇಶಕ್ಕಾಗಿ ದುಡಿದ ವೀರಮನುಜ ಜವಹರಲಾಲ್ ನೆಹರು ರವರ ಹುಟ್ಟಿದ ದಿನವಾದ ನವೆಂಬರ್ 14 ರನ್ನು ದೇಶದೆಲ್ಲೆಡೆ ಮಕ್ಕಳ ದಿನವನ್ನಾಗಿ ಆಚರಿಸುತ್ತಾರೆ. ನಮ್ಮ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ನೆಹರೂ ಅವರ ಹುಟ್ಟಿದ ದಿನವನ್ನು ಅವರ ಸವಿನೆನಪಿಗಾಗಿ ಅವರು ಅತ್ಯಂತ ಪ್ರೀತಿಸುವ ಮಕ್ಕಳಿಗೆ ಮೀಸಿಲಿಡಲಾಗಿದೆ. ನೆಹರೂ ಅವರಿಗೆ ಮಕ್ಕಳೆಂದರೆ ಬಹಳ ಪ್ರೀತಿ.

ಮಕ್ಕಳ ಮೇಲಿನ ಅವರ ವಾತ್ಸಲ್ಯ ಎಷ್ಟಿತ್ತು ಎಂದರೆ ಹೆಚ್ಚಿನ ಸಮಯವನ್ನು ಮಕ್ಕಳೊಂದಿಗೆ ಕಳೆಯುವುದಕ್ಕೆ ನೆಹರೂ ಬಯಸುತ್ತಿದ್ದರಂತೆ. ಆದ್ದರಿಂದಲೇ ಮಕ್ಕಳೆಲ್ಲರಿಗೂ ನೆಹರೂ ಎಂದಿಗೂ ಪ್ರೀತಿಯ ಚಾಚಾನಾಗಿ ಇರುತ್ತಿದ್ದರು. ಇಂದಿಗೂ ನೆಹರು ಮಕ್ಕಳ ನೆಚ್ಚಿನ ಚಾಚಾನಾಗಿಯೇ ಹೆಚ್ಚು ಹೆಸರುವಾಸಿ. ಇನ್ನೂ ಪ್ರತಿ ವರ್ಷ ಶಾಲೆ ಮತ್ತು ಕಾಲೇಜುಗಳಲ್ಲಿ ಈ ದಿನದಂದು ಮಕ್ಕಳಿಗಾಗಿ ಸಾಕಷ್ಟು ಆಟಗಳು, ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಇತ್ಯಾದಿಗಳನ್ನು ಆಯೋಜಿಸುವುದು ಸರ್ವೇಸಾಮಾನ್ಯ. ಮಕ್ಕಳಿಗೋಸ್ಕರ ಕೆಲವು ಶಾಲಾ ಕಾಲೇಜುಗಳಲ್ಲಿ ಉಡುಗೊರೆಯನ್ನು ಕೂಡ ನೀಡಲಾಗುತ್ತದೆ. ಇನ್ನು ಕೆಲವು ಶಾಲೆಗಳಲ್ಲಿ ಸಿಹಿ ಹಂಚಿ, ಪುಸ್ತಕ ವಿತರಣೆ ಮಾಡುವುದು ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ.

ಇದನ್ನು ಓದಿ:  ಇಂದು ಮಕ್ಕಳ ದಿನಾಚಣೆ, ಇದೇ ಕಾರಣಕ್ಕೆ ಚಾಚಾ ನೆಹರು ಜನ್ಮ ದಿನದಂದು ಮಕ್ಕಳ ದಿನಾಚರಣೆ ಆಚರಿಸಲಾಗುತ್ತದೆ

ಅಂತೆಯೇ ನಾನು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ಆ ದಿನ ಬಹಳ ರಂಗು ರಂಗಾಗಿರುತ್ತಿತ್ತು. ಎಲ್ಲರೂ ಅವರ ನೆಚ್ಚಿನ ಬಟ್ಟೆ ತೊಟ್ಟು ಶಾಲಾ ಆವರಣದ ತುಂಬೆಲ್ಲಾ ಓಡಾಡುತ್ತಿದ್ದರೆ ನೋಡಲು ಬಹಳ ಸೊಗಸಾಗಿರುತ್ತಿತ್ತು. ಮತ್ತೊಂದು ಸಂತೋಷದ ಸಂಗತಿ ಎಂದರೆ ಆ ದಿನ ನಮಗೆ ಪುಸ್ತಕ ಅಥವಾ ಬ್ಯಾಗ್ ಹೊರುವ ಕೆಲಸದಿಂದ ಒಂದು ದಿನದ ಮಟ್ಟಿಗೆ ರಜೆ ಸಿಗುತಿತ್ತು .

ಕೈ ಬೀಸಿ ಕೊಂಡು ಶಾಲೆಯೆಲ್ಲಾ ತಿರುಗಾಡುತ್ತಾ, ನಮ್ಮ ನೆಚ್ಚಿನ ಶಿಕ್ಷಕರ ನೃತ್ಯ, ಹಾಡು, ರಸಮಂಜರಿ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳುವ ಸೌಭಾಗ್ಯ ದೊರೆಯುತ್ತಿತ್ತು. ಇದೆಲ್ಲದರ ಜೊತೆಗೆ ನಮಗಾಗಿ ಭಾರಿ ಭೋಜನವನ್ನೂ ಏರ್ಪಡಿಸುತ್ತಿದ್ದರು. ಊಟದ ನಂತರ ನಮಗೆಲ್ಲ ಉಡುಗೊರೆಗಳನ್ನು ಕೊಡುವುದರ ಮೂಲಕ ಮಕ್ಕಳ ದಿನವನ್ನು ಅತ್ಯಂತ ಸಡಗರದಿಂದ ಆಚರಿಸುತ್ತಿದ್ದರು. ಮುಂದೆ ಕಾಲೇಜು, ಉನ್ನತ ವ್ಯಾಸಂಗ ಅಂತ ಓಡುತ್ತಿರುವ ಈ ಜೀವನದ ಮಧ್ಯೆ ಮತ್ತೆ ಮಕ್ಕಳಾಗಿ ಶಾಲೆಗೆ ಹೋಗಬೇಕು ಎನ್ನುವ ಬಯಕೆ ಆಗಾಗ ಮೂಡುತ್ತದೆ. ಎಲ್ಲಾ ಪುಟಾಣಿ ಕಂದಮ್ಮಗಳಿಗೂ, ಬೆಳಯುತ್ತಿರುವ ಮುಗ್ಧ ಮನಸ್ಸುಗಳಿಗೂ ಜೊತೆಗೂ ಎಷ್ಟೇ ಬೆಳದರೂ ಇನ್ನೂ ಮಗುವಿನಂತ ಮನಸ್ಸುಳ್ಳವರಿಗೂ ಮಕ್ಕಳ ದಿನದ ಸವಿ ಶುಭಾಶಯಗಳು.

ತೇಜಶ್ವಿನಿ ಕಾಂತರಾಜ್, ಬೆಂಗಳೂರು

ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್