AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Childrens Day 2022: ಈ ಬಾರಿಯ ಮಕ್ಕಳ ದಿನಾಚರಣೆ ಹೊಸ ಕಲ್ಪನೆಯನ್ನು ಸೃಷ್ಟಿ ಮಾಡಬೇಕಿದೆ

ಮಕ್ಕಳ ದಿನಾಚರಣೆಯ ದಿನ ಒಮ್ಮೆ ಶಾಲೆಗಳಿಗೆ ಭೇಟಿ ಕೊಟ್ಟು ನೋಡಿ. ದೇಶದ ಮಕ್ಕಳು ಸಂಭ್ರಮದಿಂದ ಕುಣಿದು ಕುಪ್ಪಳಿಸುವ ಈ ದಿನ ಇಡೀ ದೇಶವೇ ಮಕ್ಕಳನ್ನು ಗೌರವದಿಂದ ಕಾಣುವ ಹಬ್ಬ. ನವೆಂಬರ್ 14 ದೇಶಾದ್ಯಂತ ಮಕ್ಕಳ ದಿನಾಚರಣೆಯ ಸಂಭ್ರಮ.

Childrens Day 2022: ಈ ಬಾರಿಯ ಮಕ್ಕಳ ದಿನಾಚರಣೆ ಹೊಸ ಕಲ್ಪನೆಯನ್ನು ಸೃಷ್ಟಿ ಮಾಡಬೇಕಿದೆ
Childrens Day 2022
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on: Nov 14, 2022 | 2:11 PM

Share

ಮಕ್ಕಳನ್ನು  ದೇವರು ಎಂದೆನ್ನುವದೇ ಅವರಲ್ಲಿರುವ ಮುಗ್ಧತೆಯಿಂದಾಗಿ, ಮಕ್ಕಳ ಮನಸ್ಸು ಹೂವಿನಂತಹುದು, ಅವರ ಭಾವನೆಗಳಿಗೆ ಸ್ಪಂದಿಸಿದಾಗ ಅವು ಅರಳುತ್ತವೆ. ನೋವುದಾಗ ಬಾಡುತ್ತವೆ ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಆಧುನಿಕತೆ ಬೆಳೆದಂತೆ, ತಂತ್ರಜ್ಞಾನ ಮುಂದುವರಿದಂತೆ ಮಕ್ಕಳಲ್ಲಿರುವ ಮುಗ್ಧತೆ ಮರೀಚಿಕೆಯಾಗುತ್ತಿದೆ ಎಂದು ದೂರುವವರು ಸಾಕಷ್ಟು ಮಂದಿ. ಆದರೆ ಮಕ್ಕಳ ನಗುವಿಗೆ, ಮುಗ್ಧ ನಡವಳಿಕೆಗೆ ಸರ್ವರನ್ನು ಸೆಳೆಯಬಲ್ಲ ಶಕ್ತಿ ಇದೆ.‌

ಮಕ್ಕಳ ದಿನಾಚರಣೆಯ ದಿನ ಒಮ್ಮೆ ಶಾಲೆಗಳಿಗೆ ಭೇಟಿ ಕೊಟ್ಟು ನೋಡಿ. ದೇಶದ ಮಕ್ಕಳು ಸಂಭ್ರಮದಿಂದ ಕುಣಿದು ಕುಪ್ಪಳಿಸುವ ಈ ದಿನ ಇಡೀ ದೇಶವೇ ಮಕ್ಕಳನ್ನು ಗೌರವದಿಂದ ಕಾಣುವ ಹಬ್ಬ. ನವೆಂಬರ್ 14 ದೇಶಾದ್ಯಂತ ಮಕ್ಕಳ ದಿನಾಚರಣೆಯ ಸಂಭ್ರಮ. ನಮ್ಮ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಹುಟ್ಟಿದ ದಿನ. ಅವರ ಸವಿನೆನಪಿಗಾಗಿ ಅವರು ಪ್ರೀತಿಸುವ ಮಕ್ಕಳಿಗೆ ಆ ದಿನವನ್ನು ಮೀಸಿಲಿಟ್ಟಿದ್ದರು.

1954 ರಂದು ಭಾರತದಲ್ಲಿ ‌ಪ್ರಥಮ‌ ಬಾರಿಗೆ ನೆಹರೂ ಅವರ ಆಸೆಯಂತೆ ಮಕ್ಕಳ‌‌ ದಿನಾಚರಣೆ ಆಚರಿಸಲಾಯಿತು. ಅಂದಿನಿಂದ ಇಂದಿನವರೆಗೂ ಅದೇ‌ ಉತ್ಸಾಹಕತೆ ಇದೆ. ಸರ್ಕಾರಿ ,ಖಾಸಗಿ ಶಾಲೆ ಎನ್ನುವ ಭೇದವಿಲ್ಲದೇ‌ ಮಕ್ಕಳ ಖುಷಿಗಾಗಿ ವೇದಿಕೆಗಳು ತಯಾರಾಗಿರುತ್ತದೆ. ಹೊಸ ಬಟ್ಟೆ ,ಸಿಹಿ ತಿನಿಸು ,ಆಟ, ನೃತ್ಯದೊಂದಿಗೆ ಮಕ್ಕಳನ್ನು ಉಲ್ಲಾಸಿತರನ್ನಾಗಿಸಿ ಸಂತಸದ ಸವಿಭಾವದಿಂದ‌‌ ಕುಣಿದಾಡುವಂತೆ ಮಾಡುತ್ತದೆ‌. ಜನ್ಮದಿನದಂದು ಕಾಣದ ಖುಷಿ ಅವರ‌ ಕಣ್ಣಲ್ಲಿ ಈ ದಿನದಂದು ಕಾಣುತ್ತದೆ.

ಈ ದಿನದ ಉದ್ದೇಶ ಮಕ್ಕಳಿಗೆ ಜೀವನದ ಸಂತೋಷವನ್ನು ಸವಿಯುವ ಹಕ್ಕನ್ನು ದೊರಕಿಸುವುದು‌ ಮಾತ್ರವಲ್ಲ, ಆರೋಗ್ಯವಂತ ಮತ್ತು ಪ್ರಜ್ಞಾವಂತ ನಾಗರೀಕರಾಗಿ ಬೆಳೆಯಲು ಅವಕಾಶ ಮಾಡಿಕೊಡುವುದಾಗಿದೆ. ಮಕ್ಕಳನ್ನು ದೇಶದ ಮುಂದಿನ ಭವಿಷ್ಯ ಎಂದಿದ್ದರು ನೆಹರೂ. ನಾಳಿನ ಭಾರತವನ್ನು ಇಂದಿನ ಮಕ್ಕಳು ರೂಪಿಸಲಿದ್ದಾರೆ. ನಾವು ಇಂದು ಯಾವ ರೀತಿ ಅವರನ್ನು ಮುಂದೆ ತರುತ್ತೇವೆಯೋ ಅದೇ ರೀತಿ ನಾಳಿನ ಭಾರತದ ಭವಿಷ್ಯ ರೂಪುಗೊಳ್ಳುತ್ತದೆ ಎಂದು ಹೇಳಿದರು.‌

ಇದನ್ನು ಓದಿ:  ಮಕ್ಕಳ ಹಬ್ಬಕ್ಕೆ ಅರ್ಥ ಸಿಗಬೇಕಾದರೆ ಮೊದಲು ಸಾಕ್ಷರತೆ ಮಹತ್ವ ತಿಳಿಸಬೇಕು

ಇಂದಿನ ಮಕ್ಕಳೇ ಮುಂದಿನ ನಾಗರೀಕರು ಎನ್ನವುದು ಸತ್ಯ ಬೆಳೆಯುವ ಸಿರಿ‌ ಮೊಳಕೆಯಲ್ಲೇ ಎಂಬಂತೆ ಮಕ್ಕಳ ದಿನಾಚರಣೆ ‌ನಿಜವಾದ ಅರ್ಥವನ್ನು ‌ಮನದಟ್ಟು‌ ಮಾಡಿಕೊಂಡು ಮಕ್ಕಳಿಗೆ ಉತ್ತಮ‌ ಬುದ್ದಿ ಹಾಗೂ ಸಂಸ್ಕಾರಗಳನ್ನು ನೀಡಬೇಕು. ಬಾಲ್ಯದಲ್ಲಿ ನಾವು ಕಲಿಸುವ ಎಲ್ಲವನ್ನೂ ಮಗು ಕಲಿತುಕೊಳ್ಳುತ್ತದೆ. ಆ ಕಾರಣದಿಂದ ಬಾಲ್ಯದಿಂದಲೇ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ, ಕಲೆ‌, ಸಂಸ್ಕೃತಿಗಳ ಮೂಲಕ ಒಳ್ಳೆಯ ಮಾರ್ಗದಲ್ಲಿ ನಡೆಸಬೇಕು. ಇದರಿಂದಾಗಿ ಉನ್ನತ ಭವಿಷ್ಯ ಅವರದ್ದಾಗುತ್ತದೆ.

‌ಮಕ್ಕಳನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವುದು ನಮ್ಮೆಲ್ಲರ‌ ಹೊಣೆ. ಈ ಜವಾಬ್ದಾರಿಯನ್ನು ‌ಪ್ರತಿಯೊಬ್ಬರು‌ ಇದನ್ನು ಅರ್ಥೈಸಿಕೊಂಡು ‌ಮಕ್ಕಳ‌ ದಿನಾಚರಣೆ ಆಚರಿಸಬೇಕಾಗಿದೆ. ಪ್ರತಿವರ್ಷದಂತೆ ಈ ಬಾರಿಯು ಮಕ್ಕಳ‌ ದಿನಾಚರಣೆ ತಯಾರಿ‌‌ ನಡೆಯುತ್ತಿದೆ. ಕಂದಮ್ಮಗಳನ್ನು ರಂಜಿಸಲು ವೇದಿಕೆ ಸಜ್ಜಾ ಆಗಿದೆ. ಮಿತಿಯಿಲ್ಲದ ಸಂತೋಷ ನೀಡುವ ಮಕ್ಕಳಿಗೆ ಮಕ್ಕಳ ದಿನಾಚರಣೆ ಶುಭಾಶಯಗಳು

ಪವಿತ್ರ ಕುಂದಾಪುರ ‌‌‌‌ ‌‌‌‌‌‌

ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕುಂಭ ರಾಶಿಯಲ್ಲಿ ಸಂಚಾರ: ಇಂದಿನ ದಿನ ಭವಿಷ್ಯ ಇಲ್ಲಿದೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ