AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಣೇಶ ಅಂದ್ರೆನೇ ಚಾಕೊಲೇಟ್ ಹೀರೋ! ಅಂಥಾದ್ರಲ್ಲಿ 40 ಕೆ.ಜಿ. ಚಾಕೊಲೇಟ್​ ಬಳಸಿ ಗಣೇಶನ ಸೃಷ್ಟಿ!

ಚಂಡೀಗಢ: ಪ್ರಥಮ ಪೂಜಿತ, ಏಕದಂತ, ವಿಘ್ನ ನಿವಾರಕ ಹೀಗೆ ಹತ್ತು ಹಲವು ಹೆಸರುಗಳಿಂದ ಕರೆಸಿಕೊಳ್ಳುವ ಗೌರಿಸುತ ಗಣೇಶನ ಹಬ್ಬವನ್ನು ದೇಶಾದ್ಯಂತ ಆಚರಿಸಲಾಯಿತು. ಆದರೆ ಪ್ರತೀ ವರ್ಷದಂತೆ ಈ ವರ್ಷ ಹಬ್ಬದಲ್ಲಿ ಆ ಸಡಗರ ಸಂಭ್ರಮ ಇರಲಿಲ್ಲ. ಆದರೂ ಕೊರೊನಾ ನಿಯಮಗಳನ್ನು ಪಾಲಿಸುತ್ತ ಬಪ್ಪನ ದಿನವನ್ನು ಅದ್ದೂರಿಯಿಂದ ಆಚರಿಸಲಾಗಿದೆ. ಕೊರೊನಾದ ಕರಿನೆರಳು ಹಬ್ಬದ ಸಂಭ್ರಮವನ್ನು ಕಡಿಮೆ ಮಾಡಿದ್ರೂ ಅನೇಕರು ಹೊಸ ಹೊಸ ರೀತಿಯಲ್ಲಿ ಹಬ್ಬವನ್ನು ಆಚರಿಸಿದ್ದಾರೆ. ಅನೇಕರು ಪರಿಸರ ಸ್ನೇಹಿ ಗಣೇಶನ ಮೊರೆ ಹೋಗಿದ್ರು. ಅದೇ ರೀತಿಯಲ್ಲಿ ಪಂಜಾಬ್​ […]

ಗಣೇಶ ಅಂದ್ರೆನೇ ಚಾಕೊಲೇಟ್ ಹೀರೋ! ಅಂಥಾದ್ರಲ್ಲಿ 40 ಕೆ.ಜಿ. ಚಾಕೊಲೇಟ್​ ಬಳಸಿ ಗಣೇಶನ ಸೃಷ್ಟಿ!
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​|

Updated on: Aug 24, 2020 | 4:13 PM

Share

ಚಂಡೀಗಢ: ಪ್ರಥಮ ಪೂಜಿತ, ಏಕದಂತ, ವಿಘ್ನ ನಿವಾರಕ ಹೀಗೆ ಹತ್ತು ಹಲವು ಹೆಸರುಗಳಿಂದ ಕರೆಸಿಕೊಳ್ಳುವ ಗೌರಿಸುತ ಗಣೇಶನ ಹಬ್ಬವನ್ನು ದೇಶಾದ್ಯಂತ ಆಚರಿಸಲಾಯಿತು. ಆದರೆ ಪ್ರತೀ ವರ್ಷದಂತೆ ಈ ವರ್ಷ ಹಬ್ಬದಲ್ಲಿ ಆ ಸಡಗರ ಸಂಭ್ರಮ ಇರಲಿಲ್ಲ. ಆದರೂ ಕೊರೊನಾ ನಿಯಮಗಳನ್ನು ಪಾಲಿಸುತ್ತ ಬಪ್ಪನ ದಿನವನ್ನು ಅದ್ದೂರಿಯಿಂದ ಆಚರಿಸಲಾಗಿದೆ.

ಕೊರೊನಾದ ಕರಿನೆರಳು ಹಬ್ಬದ ಸಂಭ್ರಮವನ್ನು ಕಡಿಮೆ ಮಾಡಿದ್ರೂ ಅನೇಕರು ಹೊಸ ಹೊಸ ರೀತಿಯಲ್ಲಿ ಹಬ್ಬವನ್ನು ಆಚರಿಸಿದ್ದಾರೆ. ಅನೇಕರು ಪರಿಸರ ಸ್ನೇಹಿ ಗಣೇಶನ ಮೊರೆ ಹೋಗಿದ್ರು. ಅದೇ ರೀತಿಯಲ್ಲಿ ಪಂಜಾಬ್​ ರಾಜ್ಯದ ಲುಧಿಯಾನ ನಗರದ ರೆಸ್ಟೋರೆಂಟ್​ನಲ್ಲಿ ಬರೋಬ್ಬರಿ 40 ಕೆ.ಜಿ ಚಾಕೊಲೇಟ್ ಬಳಸಿ ಗಣೇಶನ ವಿಗ್ರಹವನ್ನು ತಯಾರಿಸಲಾಗಿದೆ.

ಚಾಕೊಲೇಟ್ ಗಣೇಶನ ವಿಶೇಷತೆ ಈ ರೆಸ್ಟೋರೆಂಟ್​ನಲ್ಲಿ ಕಳೆದ 5 ವರ್ಷಗಳಿಂದ ಪ್ರತಿ ವರ್ಷವೂ ಚಾಕೊಲೇಟ್​ ಬಳಸಿ ಗಣಪತಿ ವಿಗ್ರಹವನ್ನು ತಯಾರಿಸಲಾಗುತ್ತಿದೆ. 10 ಬಾಣಸಿಗರನ್ನು ಒಳಗೊಂಡ ತಂಡವು ಸತತ 10 ದಿನಗಳ ಕಾಲ ನಡೆಸಿದ ಪರಿಶ್ರಮದಿಂದ ಈ 40 ಕೆಜಿಯ ಚಾಕೊಲೇಟ್ ಗಣೇಶ ಸಜ್ಜಾಗಿದ್ದಾನೆ. ವಿಶೇಷವೆಂದರೆ, ಈ ವಿಗ್ರಹವನ್ನು ತಯಾರಿಸಿದ ರೆಸ್ಟೋರೆಂಟ್​ನ ಮಾಲೀಕ ಅದನ್ನು ಬಡ ಮಕ್ಕಳಿಗೆ ವಿತರಿಸಲು ನಿರ್ಧರಿಸಿದ್ದಾರೆ.