AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಡೆದು ಹೋಗ್ತಿದ್ದಾಗ ಕಾಲಡಿ ಸಿಕ್ತು ಬೆಲೆ ಬಾಳುವ ವಜ್ರ!

ಯಾರಾದರೂ ನಡೆದು ಹೋಗುತ್ತಿರುವಾಗ ಅವರಿಗೆ ರಸ್ತೆ ಮೇಲೆ ನೂರು ರೂಪಾಯಿ ಸಿಕ್ಕಿದರೆ ಎಷ್ಟು ಖುಷಿಯಾಗಿಬಿಡು ತ್ತೆ ಅಲ್ವಾ! ಆದೇ ರೀತಿ ನೂರು ರೂಪಾಯಿ ಬದಲು ವಜ್ರ ಸಿಕ್ಕಿಬಿಟ್ಟರೆ ಹೇಗಿರುತ್ತೆ..? ಅಂತಾ ಎಂದಾದರೂ ಯೋಚಿಸಿದ್ದೀರಾ… ಹಾಗಿದ್ರೆ ಇಲ್ಲೊಂದು ಸುದ್ದಿ ಹಾಗೆಯೇ ಇದೆ. ರಸ್ತೆಯಲ್ಲಿ ವ್ಯಕ್ತಿಯೊಬ್ಬನಿಗೆ ಗಾಜಿನ ಚೂರು ಸಿಕ್ಕಿದೆ. ಆದರೆ ಅದು ಯಃಕಶ್ಚಿತ್ ಗಾಜು ಆಗಿರಲಿಲ್ಲ. ಅಮೂಲ್ಯವಾದ ವಜ್ರವಾಗಿತ್ತು. ಚಿನ್ನಕ್ಕಿಂತ ಹೆಚ್ಚು ಬೆಲೆ ಬಾಳುವ 9.07 ಕ್ಯಾರೆಟ್ ರತ್ನವನ್ನು ಗಾಜಿನ ತುಂಡು ಎಂದು ಭಾವಿಸಿ ಬ್ಯಾಂಕ್ ಮ್ಯಾನೇಜರ್ ಕೈಗೆತ್ತಿಕೊಂಡಿರುವ […]

ನಡೆದು ಹೋಗ್ತಿದ್ದಾಗ ಕಾಲಡಿ ಸಿಕ್ತು ಬೆಲೆ ಬಾಳುವ ವಜ್ರ!
ಆಯೇಷಾ ಬಾನು
|

Updated on: Sep 27, 2020 | 10:04 AM

Share

ಯಾರಾದರೂ ನಡೆದು ಹೋಗುತ್ತಿರುವಾಗ ಅವರಿಗೆ ರಸ್ತೆ ಮೇಲೆ ನೂರು ರೂಪಾಯಿ ಸಿಕ್ಕಿದರೆ ಎಷ್ಟು ಖುಷಿಯಾಗಿಬಿಡು ತ್ತೆ ಅಲ್ವಾ! ಆದೇ ರೀತಿ ನೂರು ರೂಪಾಯಿ ಬದಲು ವಜ್ರ ಸಿಕ್ಕಿಬಿಟ್ಟರೆ ಹೇಗಿರುತ್ತೆ..? ಅಂತಾ ಎಂದಾದರೂ ಯೋಚಿಸಿದ್ದೀರಾ… ಹಾಗಿದ್ರೆ ಇಲ್ಲೊಂದು ಸುದ್ದಿ ಹಾಗೆಯೇ ಇದೆ. ರಸ್ತೆಯಲ್ಲಿ ವ್ಯಕ್ತಿಯೊಬ್ಬನಿಗೆ ಗಾಜಿನ ಚೂರು ಸಿಕ್ಕಿದೆ. ಆದರೆ ಅದು ಯಃಕಶ್ಚಿತ್ ಗಾಜು ಆಗಿರಲಿಲ್ಲ. ಅಮೂಲ್ಯವಾದ ವಜ್ರವಾಗಿತ್ತು.

ಚಿನ್ನಕ್ಕಿಂತ ಹೆಚ್ಚು ಬೆಲೆ ಬಾಳುವ 9.07 ಕ್ಯಾರೆಟ್ ರತ್ನವನ್ನು ಗಾಜಿನ ತುಂಡು ಎಂದು ಭಾವಿಸಿ ಬ್ಯಾಂಕ್ ಮ್ಯಾನೇಜರ್ ಕೈಗೆತ್ತಿಕೊಂಡಿರುವ ಘಟನೆ ನೈಋತ್ಯ ಅರ್ಕಾನ್ಸಾಸ್‌ ರಾಜ್ಯ ಉದ್ಯಾನವನದ ಬಳಿ ನಡೆದಿದೆ. ಮಾಮೆಲ್ಲೆಯ ನಿವಾಸಿ ಕೆವಿನ್ ಕಿನಾರ್ಡ್ (Kevin Kinard) ಅವರಿಗೆ ಕಾರ್ಮಿಕರ ದಿನದಂದು ಕ್ರೇಟರ್ ಆಫ್ ಡೈಮಂಡ್ಸ್ ಸ್ಟೇಟ್ ಪಾರ್ಕ್‌ನ 48 ವರ್ಷಗಳ ಇತಿಹಾಸ ಇರುವ ಎರಡನೇ ಅತಿದೊಡ್ಡ ವಜ್ರ ಸಿಕ್ಕಿದೆ.

ನನ್ನ ಕಾಲ ಬಳಿ ಬಂದು ಬಿದ್ದಿತ್ತು ವಜ್ರ: ಕೆವಿನ್ ಕಿನಾರ್ಡ್ ಹೇಳುವಂತೆ ಮರ್ಫ್ರೀಸ್ಬೊರೊ (Murfreesboro)ದಲ್ಲಿನ ರಾಜ್ಯ ಉದ್ಯಾನವನಕ್ಕೆ ಕೆವಿನ್ ಮತ್ತು ಅವನ ಸ್ನೇಹಿತರು ಉಪಕರಣಗಳನ್ನು ಸಾಗಿಸುತ್ತಿದ್ದರು. ಈ ವೇಳೆ ಕೆವಿನ್ ಕ್ರೇಟರ್ ಆಫ್ ಡೈಮಂಡ್ಸ್‌ಗೆ (Crater of Diamonds) ಚಿಕ್ಕಂದಿನಿಂದಲೂ ಭೇಟಿ ನೀಡುತ್ತಿದ್ದರು. ಆದರೆ ಅದೇ ಜಾಗದಲ್ಲಿ ಅತ್ಯಂತ ಬೆಲೆ ಬಾಳುವ ವಜ್ರ ಅವರ ಪಾದದಡಿ ಸಿಗುತ್ತೇ ಎಂದು ನಾನೆಂದೂ ಭಾವಿಸಿರಲಿಲ್ಲ. ಸೆಪ್ಟೆಂಬರ್ 7 ರಂದು ವಜ್ರ ನನ್ನ ಕಾಲ ಬಳಿ ಸಿಕ್ಕಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಹೊಳೆಯುವಂತ ವಸ್ತು ಕಾಣಿಸಿತು. ಆದನ್ನು ತೆಗೆದುಕೊಂಡು ಬ್ಯಾಗ್​ನಲ್ಲಿ ಹಾಕಿಕೊಂಡೆ. ನಂತರ ನಾನು ಮತ್ತು ನನ್ನ ಸ್ನೇಹಿತರು ಉದ್ಯಾನವನದ ಡೈಮಂಡ್ ಡಿಸ್ಕವರಿ ಕೇಂದ್ರದ ಬಳಿ ನಿಂತೆವು. ಅಲ್ಲಿ ಅನೇಕರು ತಮಗೆ ಸಿಕ್ಕ ಹಾಗೂ ಪತ್ತೆ ಹಚ್ಚಿದ ವಜ್ರಗಳನ್ನು ನೋಂದಾಯಿಸಿಕೊಳ್ಳುತ್ತಿದ್ದರು. ಆದರೆ ನಾನು ನನಗೆ ಸಿಕ್ಕಿರುವ ವಸ್ತುವನ್ನು ಪರಿಶೀಲಿಸಲಿಲ್ಲ. ಏಕೆಂದರೆ ಅದು ಕೇವಲ ಗಾಜು ಎಂದೇ ಭಾವಿಸಿದ್ದೆ. ಆಗ ಉದ್ಯೋಗಿಯೊಬ್ಬರು ತಮಗೆ ಸಿಕ್ಕ ವಜ್ರದ ಬಗ್ಗೆ ಹೇಳಿದ್ರು. ಆಗ ನನಗೆ ಶಾಕ್ ಆಯ್ತು ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಆಗ ನನಗೆ ತಿಳಿಯಿತು ನನ್ನ ಬಳಿ ಇರುವುದು ಜಸ್ಟ್​ ಗಾಜು ಅಲ್ಲ; ವಜ್ರ ಅಂತಾ ಎಂದು ಗದ್ಗದಿತರಾಗಿದ್ದಾರೆ.

ಆಗಸ್ಟ್ 20 ರಂದು ಪಾರ್ಕ್ ಸಿಬ್ಬಂದಿ ಶೋಧನೆಗಾಗಿ ಇಲ್ಲಿನ ಪ್ರದೇಶವನ್ನು ಅಗೆದಿದ್ದರು. ಈ ವೇಳೆ ಜೋರಾದ ಮಳೆ ಬಂದು ಶೋಧಕ್ಕೆ ಅಡ್ಡಿ ಉಂಟು ಮಾಡಿತ್ತು. ಅಗೆದ ಮಣ್ಣೆಲ್ಲ ಹರಿದು ಹೋಗಿತ್ತು. ಈ ಪರಿಣಾಮ ಪಾರ್ಕ್ ಬಳಿ ಅನೇಕರಿಗೆ ವಜ್ರ ಸಿಕ್ಕಿದೆ. ಈವರೆಗೆ ಒಟ್ಟು 59.25 ಕ್ಯಾರೆಟ್ ತೂಕದ 264 ವಜ್ರಗಳನ್ನು ಈ ವರ್ಷದ ಕ್ರೇಟರ್ ಆಫ್ ಡೈಮಂಡ್ಸ್ ಸ್ಟೇಟ್ ಪಾರ್ಕ್‌ನಲ್ಲಿ ನೋಂದಾಯಿಸಲಾಗಿದೆ.. ಜನರು ಉದ್ಯಾನದಲ್ಲಿ ಪ್ರತಿದಿನ ಒಂದು ಅಥವಾ ಎರಡು ವಜ್ರಗಳನ್ನು ಕಂಡುಕೊಳ್ಳುತ್ತಿದ್ದಾರಂತೆ. !

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!