ಬಾಯಲ್ಲಿ ನೀರೂರಿಸುವ, ತಿಂದಾಗ ಛುಳ್ಳೆನ್ನುವ ಕಂಬಳಿ ಹಣ್ಣಿನ ಆರೋಗ್ಯ ಲಾಭಗಳೇನು?
ನೋಡಿದ ತಕ್ಷಣ ಬಾಯಲ್ಲಿ ನೀರೂರಿಸುವ, ತಿಂದಾಗ ಛುಳ್ಳೆನ್ನುವ ಕಂಬಳಿ ಹಣ್ಣು ಇದು! ಇದಕ್ಕೆ ರೇಷ್ಮೆ ಸೊಪ್ಪಿನ ಹಣ್ಣು, mulberry ಅಂತಲೂ ಕರೆಯುತ್ತಾರೆ. ರೇಷ್ಮೆ ಬೆಳೆ ಹೆಚ್ಚಾಗಿ ಬೆಳೆಯುವ ಕೋಲಾರ ಬಯಲುಸೀಮೆ ಸೇರಿದಂತೆ ಅನೇಕ ಕಡೆ ಕರ್ನಾಟಕದಲ್ಲಿ ಬೆಳೆಯುತ್ತಾರೆ. ದೇಶದ ತುತ್ತ ತುದಿಯಲ್ಲಿರುವ ಜಮ್ಮು ಕಾಶ್ಮೀರದಲ್ಲಿಯೂ ಇದನ್ನು ಬೆಳಯುತ್ತಾರಂತೆ. ಇಲ್ಲಿ ರೇಷ್ಮೆ ಸೊಪ್ಪಿಗಿಂತ ಹೆಚ್ಚಾಗಿ ಕಂಬಳಿ ಗಿಡಗಳನ್ನು ಹಣ್ಣು ಅಂದ್ರೆ ಬೆರ್ರಿಗಾಗಿಯೇ ಬೆಳೆಯುತ್ತಾರೆ. ಈ ಬಾರಿ, ಆ್ಯಪಲ್ ಬೆಳೆಯುವ ಕಣಿವೆ ರಾಜ್ಯದಲ್ಲಿ ಈ ಬಾರಿ Mulberry ಫಸಲು ಸಹ […]
ನೋಡಿದ ತಕ್ಷಣ ಬಾಯಲ್ಲಿ ನೀರೂರಿಸುವ, ತಿಂದಾಗ ಛುಳ್ಳೆನ್ನುವ ಕಂಬಳಿ ಹಣ್ಣು ಇದು! ಇದಕ್ಕೆ ರೇಷ್ಮೆ ಸೊಪ್ಪಿನ ಹಣ್ಣು, mulberry ಅಂತಲೂ ಕರೆಯುತ್ತಾರೆ. ರೇಷ್ಮೆ ಬೆಳೆ ಹೆಚ್ಚಾಗಿ ಬೆಳೆಯುವ ಕೋಲಾರ ಬಯಲುಸೀಮೆ ಸೇರಿದಂತೆ ಅನೇಕ ಕಡೆ ಕರ್ನಾಟಕದಲ್ಲಿ ಬೆಳೆಯುತ್ತಾರೆ.
ದೇಶದ ತುತ್ತ ತುದಿಯಲ್ಲಿರುವ ಜಮ್ಮು ಕಾಶ್ಮೀರದಲ್ಲಿಯೂ ಇದನ್ನು ಬೆಳಯುತ್ತಾರಂತೆ. ಇಲ್ಲಿ ರೇಷ್ಮೆ ಸೊಪ್ಪಿಗಿಂತ ಹೆಚ್ಚಾಗಿ ಕಂಬಳಿ ಗಿಡಗಳನ್ನು ಹಣ್ಣು ಅಂದ್ರೆ ಬೆರ್ರಿಗಾಗಿಯೇ ಬೆಳೆಯುತ್ತಾರೆ. ಈ ಬಾರಿ, ಆ್ಯಪಲ್ ಬೆಳೆಯುವ ಕಣಿವೆ ರಾಜ್ಯದಲ್ಲಿ ಈ ಬಾರಿ Mulberry ಫಸಲು ಸಹ ಭರ್ಜರಿಯಾಗಿ ಆಗಿದೆಯಂತೆ. ಸಕಾಲಿಕ ಮಳೆ, ಸಾವಯವ ಕೃಷಿಯಿಂದಾಗಿ ಫಸಲು ಜಾಸ್ತಿಯೇ ಆಗಿದೆ ಎಂದು ಅಲ್ಲಿನ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.
mulberry ಅಥವಾ ಕಂಬಳಿ ಹಣ್ಣಿನ ಆರೋಗ್ಯ ಲಾಭಗಳೇನು? ಕಂಬಳಿ ಹಣ್ಣು ಕಬ್ಬಿಣಾಂಶ, ನಾರಿನಾಂಶ ಮತ್ತು ವಿಟಿಮಿನ್ ಸಿ ಅನ್ನು ಧಾರಾಳವಾಗಿ ಹೊಂದಿದೆ. ಜೊತೆಗೆ ಒಂದಷ್ಟು ಪೊಟ್ಯಾಷಿಯಂ ಹಾಗೂ ವಿಟಿಮಿನ್ ಇ -ವಿಟಿಮಿನ್ ಕೆ ಹೊಂದಿದೆ. ಇದನ್ನು ವೈನ್, ಜ್ಯೂಸ್, ಜ್ಯಾಮ್, ಚಹಾ ತಯಾರಿಕೆಯಲ್ಲಿ ಬಳಸುತ್ತಾರೆ. ಕ್ಯಾನ್ಸರ್ ಮತ್ತು ಮಧುಮೇಹ ಹೊಂದಿರುವವರಿಗೆ ಇದು ಉಪಯೋಗಿ.
Published On - 2:37 pm, Tue, 9 June 20