ಕೃಷ್ಣನಿಗೆ ಇಷ್ಟವಾದ ಗಿಡವನ್ನು ಅಯೋಧ್ಯೆಯಲ್ಲಿ ನೆಡಲಿದ್ದಾರೆ ಪ್ರಧಾನಿ ಮೋದಿ! ಏನಿದರ ಐತಿಹ್ಯ?

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ರಂಗುರಂಗಿನ ಸಿದ್ಧತೆ ಭರದಿಂದ ಸಾಗಿದೆ. ಭಾರೀ ಐತಿಹ್ಯ ವಿಶೇಷಗಳನ್ನೊಳಗೊಂಡಿರುವ ರಾಮ ಮಂದಿರ ಭೂಮಿ ಪೂಜೆಗಾಗಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಆದ ಬಳಿಕ ಮೊದಲ ಬಾರಿಗೆ ಅಯೋಧ್ಯೆಗೆ ಆಗಮಿಸಲಿದ್ದಾರೆ. ಮೊದಲು ರಾಮನ ಭಕ್ತ ಆಂಜನೇಯನಿಗೆ ಅಗ್ರ ಪೂಜೆ ಸಲ್ಲಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬಹುಮುಖ್ಯವಾದ ಪಾರಿಜಾತ ಗಿಡವನ್ನು ಪ್ರಧಾನಿ ಮೋದಿ ನೆಡಲಿದ್ದಾರೆ. ಅದಾದ ಬಳಿಕ ರಾಮಮಂದಿರ ಭೂಮಿ ಪೂಜೆ ನೆರವೇರಲಿದೆ. ಮಹಾಭಾರತದ ಪೂಜಾ ಹೂ ರಾಮನ ಅಂಗಳದಲ್ಲಿ! ಈ […]

ಕೃಷ್ಣನಿಗೆ ಇಷ್ಟವಾದ ಗಿಡವನ್ನು ಅಯೋಧ್ಯೆಯಲ್ಲಿ ನೆಡಲಿದ್ದಾರೆ ಪ್ರಧಾನಿ ಮೋದಿ! ಏನಿದರ ಐತಿಹ್ಯ?
ಸಾಧು ಶ್ರೀನಾಥ್​

Updated on: Aug 05, 2020 | 11:18 AM

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮಕ್ಕೆ ರಂಗುರಂಗಿನ ಸಿದ್ಧತೆ ಭರದಿಂದ ಸಾಗಿದೆ. ಭಾರೀ ಐತಿಹ್ಯ ವಿಶೇಷಗಳನ್ನೊಳಗೊಂಡಿರುವ ರಾಮ ಮಂದಿರ ಭೂಮಿ ಪೂಜೆಗಾಗಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಆದ ಬಳಿಕ ಮೊದಲ ಬಾರಿಗೆ ಅಯೋಧ್ಯೆಗೆ ಆಗಮಿಸಲಿದ್ದಾರೆ.

ಮೊದಲು ರಾಮನ ಭಕ್ತ ಆಂಜನೇಯನಿಗೆ ಅಗ್ರ ಪೂಜೆ ಸಲ್ಲಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬಹುಮುಖ್ಯವಾದ ಪಾರಿಜಾತ ಗಿಡವನ್ನು ಪ್ರಧಾನಿ ಮೋದಿ ನೆಡಲಿದ್ದಾರೆ. ಅದಾದ ಬಳಿಕ ರಾಮಮಂದಿರ ಭೂಮಿ ಪೂಜೆ ನೆರವೇರಲಿದೆ.

ಮಹಾಭಾರತದ ಪೂಜಾ ಹೂ ರಾಮನ ಅಂಗಳದಲ್ಲಿ!
ಈ ಮಧ್ಯೆ ಕುತೂಹಲದ ಸಂಗತಿಯೆಂದ್ರೆ ಪಾರಿಜಾತವು ಮಹಾಭಾರತದ ಬರುವ ವಿಶೇಷ ಪೂಜಾ ಹೂ. ಇದು ರಾಮಾಯಣ ಐತಿಹ್ಯದ ಅಯೋಧ್ಯೆಯಲ್ಲಿ ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಹತ್ವ ಪಡೆದುಕೊಂಡಿರುವುದು ಸೋಜಿಗದ ಸಂಗತಿಯಾಗಿದೆ!

ಸಮುದ್ರ ಮಥನ ಕಾಲದಲ್ಲಿ ಸುರಭಿ ಮತ್ತು ವಾರಿಣಿಯ ನಂತರ ಜನಿಸಿದ್ದು ಪಾರಿಜಾತ. ಕ್ಷೀರ ಸಮುದ್ರದಿಂದ ಹುಟ್ಟಿದ 5 ಕಲ್ಪವೃಕ್ಷಗಳಲ್ಲಿ ಇದೂ ಒಂದು. ಪಂಚ ವೃಕ್ಷಗಳ ಪೈಕಿ ಉಳಿದ ನಾಲ್ಕು ವೃಕ್ಷಗಳೆಂದ್ರೆ ಮಂದಾರ, ಸಂತಾನ, ಕಲ್ಪವೃಕ್ಷ ಮತ್ತು ಹರಿಚಂದನ.

Godly Flower
ಕೃಷ್ಣವತಾರ ಕಾಲದಲ್ಲಿ ಕೃಷ್ಣನು ಪಾರಿಜಾತವನ್ನು ಸ್ವರ್ಗಲೋಕದಿಂದ ತಂದು ಸತ್ಯಭಾಮೆಯ ಅಂಗಳದಲ್ಲಿ ನೆಟ್ಟಿದ ಎಂಬ ಮಹಾಭಾರತದ ಕಥೆಯಿದೆ. ಕೃಷ್ಣ ಪರಮಾತ್ಮನಿಗೆ ಪಾರಿಜಾತ ಪುಷ್ಪವನ್ನು ಕಂಡರೆ ಪಂಚಪ್ರಾಣ! ನೆಲದ ಮೇಲೆ ಬಿದ್ದರೂ ದೇವರಿಗೆ ಅರ್ಪಿಸಬಹುದಾದ ಏಕೈಕ ಹೂವು ಇದಾಗಿದೆ.

Published On - 8:28 pm, Tue, 4 August 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us