Sign In

By signing in or creating an account, you agree with Associated Broadcasting Company's Terms & Conditions and Privacy Policy.

Raksha Bandhan 2022: ರಕ್ಷಾ ಬಂಧನ ಹಬ್ಬದ ಇತಿಹಾಸ, ಮಹತ್ವ ಮತ್ತು ಶುಭ ಮುಹೂರ್ತ ಯಾವಾಗ ಗೊತ್ತಾ?

ಈ ಹಬ್ಬವು ಸಹೋದರ ಮತ್ತು ಸಹೋದರಿಯ ನಡುವಿನ ಧಾರ್ಮಿಕ ಬಾಂಧವ್ಯಕ್ಕೆ ಹೆಸರಾಗಿದೆ. ರಕ್ಷಾ ಎಂದರೆ ಸುರಕ್ಷತೆ ಮತ್ತು ಬಂಧನ ಎಂದರೆ ಬಂಧ ಅಥವಾ ಬಾಂಧವ್ಯ.

Raksha Bandhan 2022: ರಕ್ಷಾ ಬಂಧನ ಹಬ್ಬದ ಇತಿಹಾಸ, ಮಹತ್ವ ಮತ್ತು ಶುಭ ಮುಹೂರ್ತ ಯಾವಾಗ ಗೊತ್ತಾ?
Raksha Bandhan 2022:
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Aug 11, 2022 | 7:37 AM

ಪ್ರತಿ ಶ್ರಾವಣ ಮಾಸದಲ್ಲಿ ರಕ್ಷಾ ಬಂಧನ (Raksha Bandhan 2022) ಹಬ್ಬವನ್ನು ಆಚರಿಸಲಾಗುತ್ತದೆ. ಈ ದಿನ ಸಹೋದರಿಯರು ತಮ್ಮ ಸಹೋದರರಿಗೆ ರಾಖಿಯನ್ನು ಕಟ್ಟುತ್ತಾರೆ. ಅನಾದಿ ಕಾಲದಿಂದಲೂ ಈ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ವೈದಿಕ ಕಾಲದಲ್ಲೂ ರಕ್ಷಾ ಬಂಧನ ಆಚರಣೆಯಲ್ಲಿತ್ತು ಎಂದು ಹೇಳಬಹುದು. ಈ ಹಬ್ಬವು ಸಹೋದರ ಮತ್ತು ಸಹೋದರಿಯ ನಡುವಿನ ಧಾರ್ಮಿಕ ಬಾಂಧವ್ಯಕ್ಕೆ ಹೆಸರಾಗಿದೆ. ರಕ್ಷಾ ಎಂದರೆ ಸುರಕ್ಷತೆ ಮತ್ತು ಬಂಧನ ಎಂದರೆ ಬಂಧ ಅಥವಾ ಬಾಂಧವ್ಯ. ಸಹೋದರಿಯರು ತಮ್ಮ ಸಹೋದರರ ಕೈಗೆ ಪವಿತ್ರ ದಾರವನ್ನು ಕಟ್ಟುತ್ತಾರೆ. ಪ್ರತಿಯಾಗಿ ಅವನ ರಕ್ಷಣೆಯನ್ನು ಬಯಸುತ್ತಾರೆ. ಈ ಹಬ್ಬವನ್ನು ಶ್ರಾವಣ ಮಾಸದಲ್ಲಿ ಹುಣ್ಣಿಮೆಯ ದಿನ ಅಥವಾ ಪೂರ್ಣಿಮಾ ದಿನದಂದು ಆಚರಿಸಲಾಗುತ್ತದೆ.

ಇದನ್ನೂ ಓದಿ: Raksha Bandhan 2022: ರಕ್ಷಾ ಬಂಧನ ಹಬ್ಬಕ್ಕೆ ಸಾಕ್ಷಿಯಾಗಿದೆ ಕೃಷ್ಣ – ದ್ರೌಪದಿಯ ಪುರಾಣ ಕಥೆ

ಇತಿಹಾಸ:

ರಕ್ಷಾ ಬಂಧನದ ಹಬ್ಬವು ಮಹಾಭಾರತದ ಕಾಲದ ಹಿಂದಿನದು. ಪುರಾಣಗಳ ಪ್ರಕಾರ, ಶ್ರೀಕೃಷ್ಣನು ಆಕಸ್ಮಿಕವಾಗಿ ತನ್ನ ಸುದರ್ಶನ ಚಕ್ರದಿಂದ ತನ್ನ ಬೆರಳನ್ನು ಕತ್ತರಿಸಿಕೊಂಡಾಗ ದ್ರೌಪದಿ ತನ್ನ ಸೀರೆಯ ತುಂಡನ್ನು ಹರಿದು ಶ್ರೀಕೃಷ್ಣನ ಗಾಯದ ಸುತ್ತಲೂ ರಕ್ತ ಹರಿಯುವುದನ್ನು ತಡೆಯಲು ಕಟ್ಟಿತ್ತಾಳೆ. ಮತ್ತು ಆ ಬಟ್ಟೆಯನ್ನು ಪವಿತ್ರ ದಾರವೆಂದು ಪರಿಗಣಿಸಲಾಗುತ್ತದೆ. ಆ ದಿನದಿಂದ, ಶ್ರೀಕೃಷ್ಣನು ದ್ರೌಪದಿಯನ್ನು ಯಾವುದೇ ಸಂದರ್ಭದಲ್ಲಿ ರಕ್ಷಿಸುವುದಾಗಿ ಪ್ರತಿಜ್ಞೆ ಮಾಡುತ್ತಾನೆ. ಅಂದಿನಿಂದ ಇಂದಿನವರೆಗೂ ಪವಿತ್ರ ರಕ್ಷಬಂಧನ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಮಹತ್ವ:

ಈ ದಿನದಂದು, ಸಹೋದರಿಯರು ತಮ್ಮ ಸಹೋದರನ ಕೈಗೆ ಪವಿತ್ರ ರಾಖಿ ಕಟ್ಟುತ್ತಾರೆ. ಜೊತೆಗೆ ಅವರಿಗೆ ದೀರ್ಘ, ಸಮೃದ್ಧ ಮತ್ತು ಸಂತೋಷದ ಜೀವನವನ್ನು ಹಾರೈಸುತ್ತಾರೆ. ಆದರೆ ಪ್ರತಿಯಾಗಿ, ಸಹೋದರರು ತಮ್ಮ ಜೀವನದುದ್ದಕ್ಕೂ ತಮ್ಮ ಸಹೋದರಿಯರನ್ನು ರಕ್ಷಿಸುವ ಭರವಸೆ ನೀಡುತ್ತಾರೆ. ರಾಖಿಯನ್ನು ಕಟ್ಟಿದ ನಂತರ, ಒಡಹುಟ್ಟಿದವರು ಉಡುಗೊರೆಗಳು ಮತ್ತು ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಕುತೂಹಲಕಾರಿಯಾಗಿ, ಇತ್ತೀಚಿನ ದಿನಗಳಲ್ಲಿ ಸಹೋದರರು ಮತ್ತು ಸಹೋದರಿಯರು ಒಬ್ಬರಿಗೊಬ್ಬರು ರಾಖಿ ಕಟ್ಟುವುದಿಲ್ಲ, ಆದರೆ ಸ್ನೇಹಿತರು ಮತ್ತು ಸಂಬಂಧಿಕರು ಸಂಪ್ರದಾಯವನ್ನು ಅನುಸರಿಸಲು ಪ್ರಾರಂಭಿಸಿದ್ದಾರೆ. ಯಾವುದೇ ಹಂತದಲ್ಲಿ ಇನ್ನೊಬ್ಬರಿಗೆ ರಕ್ಷಣೆ ಅಥವಾ ಕಾಳಜಿಯನ್ನು ಒದಗಿಸಿದ ಯಾರೊಂದಿಗೂ ಈಗ ರಾಖಿ ಆಚರಿಸಲಾಗುತ್ತದೆ.

ಇದನ್ನೂ ಓದಿ: Raksha Bandhan 2022: ರಕ್ಷಾ ಬಂಧನಕ್ಕೆ ಆಕರ್ಷಕ ಮೆಹಂದಿ ಡಿಸೈನ್​ಗಳು ಇಲ್ಲಿವೆ

ಶುಭ ಮುಹೂರ್ತ:

ಶ್ರಾವಣ ಪೂರ್ಣಿಮಾ ತಿಥಿಯು ಆಗಸ್ಟ್ 11 ರಂದು ಬೆಳಿಗ್ಗೆ 10:38 ಕ್ಕೆ ಪ್ರಾರಂಭವಾಗಿ, ಆಗಸ್ಟ್ 12, 2022 ರಂದು ಬೆಳಿಗ್ಗೆ 07:05 ಕ್ಕೆ ಕೊನೆಗೊಳ್ಳುತ್ತದೆ. ದೃಕ್ ಪಂಚಾಂಗದ ಪ್ರಕಾರ, ರಾಖಿ ಕಟ್ಟಲು ಉತ್ತಮ ಮಹೂರ್ತವು ರಾತ್ರಿ 08:51 ರಿಂದ 09:13 ರವರೆಗೆ ಇರುತ್ತದೆ. ಆಗಸ್ಟ್ 11 ರಂದು ಸಂಜೆ 05:17 ರಿಂದ 06:18 ರವರೆಗೆ ಇರುವ ಭದ್ರಾ ಪುಂಚದ ಸಮಯದಲ್ಲಿ ರಾಖಿ ಹಬ್ಬವನ್ನು ಸಹ ಆಚರಿಸಬಹುದಾಗಿದೆ.

ಮತ್ತಷ್ಟು ವಿಶೇಷ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಇಂದಿನಿಂದ ಕಸದ ಮೇಲೂ ತೆರಿಗೆ, ದಾರಿ ಯಾವುದಯ್ಯ ಬದುಕಲು?
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ಕಣ್ಮನ ಸೆಳೆಯುತ್ತಿದೆ ಶಿವಕುಮಾರ ಶ್ರೀಗಳ 125 ಅಡಿ ಉದ್ದದ ರಂಗೋಲಿ ಚಿತ್ರ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ