ಓದು ಮಗು ಓದು: ನಮ್ಮಮ್ಮ ಭಾರೀ ಪ್ಲ್ಯಾನ್ ಮಾಡ್ತಾರೆ!

ಉಡುಪಿಯ ಗುಂಡ್ಮಿಯಲ್ಲಿ 3ನೇ ತರಗತಿ ಓದುತ್ತಿರುವ ಸಾನ್ವಿ ಶಾಸ್ತ್ರಿಯ ಅಮ್ಮ ಈ ವರ್ಷ ಹಾಕಿದ ಕಂಡೀಷನ್ ಏನು ಗೊತ್ತಾ? ಓದ್ತಾ ಹೋಗಿ ಗೊತ್ತಾಗುತ್ತೆ...

ಓದು ಮಗು ಓದು: ನಮ್ಮಮ್ಮ ಭಾರೀ ಪ್ಲ್ಯಾನ್ ಮಾಡ್ತಾರೆ!
Follow us
ಶ್ರೀದೇವಿ ಕಳಸದ
|

Updated on:Jan 15, 2021 | 11:26 AM

ಈಗಂತೂ ಮಕ್ಕಳ ಇಸ್ಕೂಲ್​ ಮನೇಲಲ್ವೇ? ಹಾಗಿದ್ದರೆ ಪಠ್ಯಪುಸ್ತಕ ಬಿಟ್ಟು ಬೇರೇನು ಓದುತ್ತಿವೆ ನಮ್ಮ ಮಕ್ಕಳು ಎನ್ನುವ ಕುತೂಹಲ ಟಿವಿ9 ಕನ್ನಡ ಡಿಜಿಟಲ್​ಗೆ ಉಂಟಾಯಿತು. ತಡಮಾಡದೆ ಒಂದಿಷ್ಟು ಮಕ್ಕಳಿಗೆ, ಈ ತನಕ ನಿಮಗೆ ಇಷ್ಟವಾದ ಐದು ಪುಸ್ತಕಗಳು ಮತ್ತವುಗಳ ಬಗ್ಗೆ ದೊಡ್ಡವರ ಸಹಾಯ ಪಡೆದುಕೊಂಡೇ ಬರೆದು ಕಳಿಸಿ ಎಂದು ಕೇಳಲಾಯಿತು. ಮೆಲ್ಲಮೆಲ್ಲಗೆ ‘ಕನ್ನಡ’ದಲ್ಲಿ ಬಂದು ನಮ್ಮನ್ನು ತಲುಪಿದ ಮೇಲ್​ಗಳಲ್ಲಿ ಕೆಲವೊಂದಿಷ್ಟನ್ನು ಆಯ್ಕೆ ಮಾಡಲಾಯಿತು. ಈ ಓದು ಮಗು ಓದು ಸರಣಿಯಲ್ಲಿ ಪ್ರಜ್ಞಾವಂತ ಪೋಷಕರ, ಲೇಖಕರ, ಶಿಕ್ಷಕರ ಮತ್ತು ಓದುಬರಹವನ್ನೇ ಬದುಕಿನ ಭಾಗವಾಗಿಸಿಕೊಂಡ ದೊಡ್ಡಮಕ್ಕಳ ಅನುಭವಾಧಾರಿತ ಕಥನಗಳು, ವಿಶ್ಲೇಷಣಾತ್ಮಕ ಮತ್ತು ಮುನ್ನೋಟದಿಂದ ಕೂಡಿದ ಲೇಖನಗಳೂ ಇರುತ್ತವೆ. ಇಷ್ಟೇ ಅಲ್ಲ, ಇಲ್ಲಿ ನೀವೂ ನಿಮ್ಮ ಮಕ್ಕಳೊಂದಿಗೆ ಪಾಲ್ಗೊಳ್ಳಬಹುದು ಹಾಗೆಯೇ ಪ್ರತಿಕ್ರಿಯೆಗಳನ್ನೂ ಹಂಚಿಕೊಳ್ಳಬಹುದು. ಇ-ಮೇಲ್: tv9kannadadigital@gmail.com

ಈಗಿಲ್ಲಿ ಸಾನ್ವಿ ಶಾಸ್ತ್ರಿ ಆಯ್ಕೆಗಳು ನಿಮ್ಮ ಓದಿಗೆ.

ಲಾಕ್ ಡೌನ್  ಶುರುವಾಗುತ್ತಿದ್ದಂತೆ ಎಲ್ಲರಂತೆ ನಾನೂ ಮನೆಯಲ್ಲೇ ಬಂಧಿಯಾಗಿದ್ದೆ. ನನಗೆ ಅಮ್ಮ ಹೇಳುವ ಕಥೆ ಕೇಳುವುದೆಂದರೆ ಬಲು ಇಷ್ಟ. ಮೊದಲೆಲ್ಲ ಅವಳು ನನಗೆ ಊಟ ಮಾಡಿಸುವಾಗಲೆಲ್ಲ ಚಂದಚಂದದ ಕಥೆ ಹೇಳಿ ಊಟ ಮಾಡಿಸುತ್ತಿದ್ದಳು. ಈ ಕೊರೋನಾ ಕಾಲದಲ್ಲಿ ಅಮ್ಮ ಒಂದು ಕಂಡೀಷನ್ ಹಾಕಿದಳು. ಅದೇನಪ್ಪಾ ಅಂದ್ರೆ ನಾನು ಕಥೆ ಓದಬೇಕು. ಸಾಧ್ಯವಾದಷ್ಟು ನಾನೇ ತಿಳಿದುಕೊಳ್ಳಬೇಕು. ನಂತರ ಅವಳು ಅದನ್ನು ವಿವರಿಸಿ ಹೇಳುವುದು ಅಂತ. ನಾನು ಇಂಗ್ಲೀಷ್ ಮತ್ತು ಕನ್ನಡ ಚೆನ್ನಾಗಿ ಓದಲು ಕಲಿಯಲಿ ಮತ್ತು ನನ್ನ ಸುತ್ತಮುತ್ತಲಿನ ಸಮಾಜವನ್ನು ಓದಿನ ಮೂಲಕ ತಿಳಿಯಲಿ ಅಂತ ಅವಳ ಪ್ಲ್ಯಾನ್!

ಪು: ದಿನಕ್ಕೊಂದು ಕಥೆ ಲೇ:ಅನುಪಮಾ ನಿರಂಜನ ಪ್ರ: ಡಿ.ವಿ.ಕೆ.ಮೂರ್ತಿ ಇದರಲ್ಲಿ ಪ್ರಾಣಿಪಕ್ಷಿಗಳ ಚಿಕ್ಕ ಚಿಕ್ಕ ಕಥೆಗಳು, ಪೌರಾಣಿಕ ಕಥೆಗಳು, ಇತರ ದೇಶದ ಕಥೆಗಳು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತೆ ಬರೆದಿದ್ದಾರೆ. ಹೀಗಾಗಿ ಯಾರ ಸಹಾಯವಿಲ್ಲದೆ ನಾನೇ ಓದಿ ಅರ್ಥ ಮಾಡಿಕೊಂಡೆ.

ಪು: Moin And The Monster ಲೇ: Anushka Ravishankar ಪ್ರ: Duckbill Books ಈ ಕಿರುಕಾದಂಬರಿಯಲ್ಲಿ ಮೋಯಿನ್ ಎಂಬ ಬಾಲಕನಿಗೆ ರಾಕ್ಷಸನೊಬ್ಬ ತನ್ನ ಚಿತ್ರ ಬಿಡಿಸುವಂತೆ ಹೇಳಿ, ಅವನು ಚಿತ್ರ ಬಿಡಿಸಿದ ನಂತರ ಅದಕ್ಕೆ ಜೀವ ಬಂದು ಅದು ಅವನ ಜೊತೆಗೆ ವಾಸಿಸತೊಡಗುತ್ತದೆ. ಇದರಿಂದ ಆ ಹುಡುಗ ಪೇಚಿಗೆ ಸಿಗುವ ಅನೇಕ ಸನ್ನಿವೇಶಗಳು ತುಂಬಾ ತಮಾಷೆಯಾಗಿ ಮೂಡಿಬಂದಿವೆ. ಕಷ್ಟದ ಪದಗಳ ಅರ್ಥವನ್ನು ಅಮ್ಮ ತಿಳಿಸಿ ಹೇಳಿದಳು. ಹಾಗಾಗಿ ಇದನ್ನು ಓದುವಾಗ ಬಹಳ ಖುಷಿ ಆಗುತ್ತಾ ಹೋಯಿತು.

ಪು: Madly Humorous Stories of Mulla Nasruddin ಸಂ: IGEN B. ಪ್ರ: Manoj Publications ನನಗೆ ಮೊದಲಿನಿಂದಲೂ ಮುಲ್ಲಾ ನಸಿರುದ್ದೀನನ ಕಥೆಗಳೆಂದರೆ ತೆನಾಲಿ ರಾಮನ ಕಥೆಗಳಷ್ಟೆ ಇಷ್ಟ! ಅವನ ಬುದ್ದಿವಂತಿಕೆ, ಕುಟಿಲತನ ಮತ್ತು ಕಥೆಗಳಲ್ಲಿ ಬರುವ ತಮಾಷೆಯ ಪ್ರಸಂಗಗಳು ತುಂಬಾ ಖುಷಿಕೊಡುತ್ತವೆ.

ಪು:Famous Tales of Tenali Raman ಪ್ರ: Tiny Tot Publications ಇದರಲ್ಲಿ ಒಟ್ಟು 37 ಕಥೆಗಳಿವೆ. ತೆನಾಲಿರಾಮ, ಶ್ರೀಕೃಷ್ಣದೇವರಾಯನನ್ನು ಭೇಟಿಯಾಗುವ ಕಥೆ, ತನ್ನ ಚಾಣಾಕ್ಷತನದಿಂದ ರಾಜನಿಂದ ಅನೇಕ ಬಾರಿ ಉಡುಗೊರೆಗಳನ್ನು ಪಡೆಯುವ ಅನೇಕ ಕಥೆಗಳು ಮತ್ತೆಮತ್ತೆ ಓದಬೇಕು ಎನ್ನುವಂತಿವೆ.

ಪು: The Serpent’s Revenge (Unusual Tales from the Mahabharata) ಲೇ: Sudha Murty ಪ್ರ:Puffin Books by Penguin Random House India ಇದು ನನಗೆ ಎಲ್ಲಕ್ಕಿಂತ ತುಂಬಾ ಇಷ್ಟವಾದ ಪುಸ್ತಕ. ಏಕೆಂದರೆ ಇದರಲ್ಲಿರುವ ಎಲ್ಲ 25 ಕಥೆಗಳು ನನ್ನಮ್ಮ ನನಗೆ ಹೇಳುತ್ತಿದ್ದ ಮಹಾಭಾರತದ ಕಥೆಗಳು. ಆದರೂ ಮತ್ತೆ ಮತ್ತೆ ಓದಬೇಕೆನಿಸುತ್ತದೆ.

ಓದು ಮಗು ಓದು: ನಾವು ಓದಿದರೆ ನಮ್ಮ ಮಕ್ಕಳೂ ಓದುತ್ತಾರೆ…

Published On - 11:25 am, Fri, 15 January 21

ಬೆಳ್ಳಿ ಪರದೆ ಮೇಲೆ ‘ತ್ರಿವ್ಯ’ ಜೋಡಿ, ಭವ್ಯಾ ಗೌಡ ಹೇಳಿದ್ದೇನು?
ಬೆಳ್ಳಿ ಪರದೆ ಮೇಲೆ ‘ತ್ರಿವ್ಯ’ ಜೋಡಿ, ಭವ್ಯಾ ಗೌಡ ಹೇಳಿದ್ದೇನು?
ಸಂಪಾದನೆ ಎಷ್ಟೇ ಇರಲಿ ಉಳಿತಾಯ ಮಾಡಲೇಬೇಕು: ಭವ್ಯಾ ಗೌಡ
ಸಂಪಾದನೆ ಎಷ್ಟೇ ಇರಲಿ ಉಳಿತಾಯ ಮಾಡಲೇಬೇಕು: ಭವ್ಯಾ ಗೌಡ
ತ್ರಿವಿಕ್ರಮ ಜೊತೆ ಗೆಳೆತನ ಅಷ್ಟೇ, ಪೊಸ್ಸೆಸ್ಸಿವ್​ನೆಸ್ ಇರಲಿಲ್ಲ: ಭವ್ಯಾ
ತ್ರಿವಿಕ್ರಮ ಜೊತೆ ಗೆಳೆತನ ಅಷ್ಟೇ, ಪೊಸ್ಸೆಸ್ಸಿವ್​ನೆಸ್ ಇರಲಿಲ್ಲ: ಭವ್ಯಾ
‘ನನ್ನ, ತ್ರಿವಿಕ್ರಮ್ ನಡುವೆ ಏನೂ ಇಲ್ಲ, ಪದೇ ಪದೇ ಇದೇ ಹೇಳೋಕಾಗಲ್ಲ’: ಭವ್ಯಾ
‘ನನ್ನ, ತ್ರಿವಿಕ್ರಮ್ ನಡುವೆ ಏನೂ ಇಲ್ಲ, ಪದೇ ಪದೇ ಇದೇ ಹೇಳೋಕಾಗಲ್ಲ’: ಭವ್ಯಾ
ವಿಜಯೇಂದ್ರ ವಿರುದ್ಧ ನಡ್ಡಾ ಜೀಗೆ ಪತ್ರ ಬರೆದಿರುವುದು ನಿಜ: ಯತ್ನಾಳ್
ವಿಜಯೇಂದ್ರ ವಿರುದ್ಧ ನಡ್ಡಾ ಜೀಗೆ ಪತ್ರ ಬರೆದಿರುವುದು ನಿಜ: ಯತ್ನಾಳ್
ಹೊಸ ಗೆಟಪ್ ನಲ್ಲಿ ಸಭೆಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್!
ಹೊಸ ಗೆಟಪ್ ನಲ್ಲಿ ಸಭೆಗೆ ಆಗಮಿಸಿದ ಬಸನಗೌಡ ಪಾಟೀಲ್ ಯತ್ನಾಳ್!
ರೈಲ್ವೆ ಟಿಕೆಟ್ ಕಲೆಕ್ಟರ್ ವೇಗಕ್ಕೆ ಶರಣಾದ ಕ್ರಿಕೆಟ್ ಸಾಮ್ರಾಟ..!
ರೈಲ್ವೆ ಟಿಕೆಟ್ ಕಲೆಕ್ಟರ್ ವೇಗಕ್ಕೆ ಶರಣಾದ ಕ್ರಿಕೆಟ್ ಸಾಮ್ರಾಟ..!
ಪಕ್ಷದ ನಾಯಕರು ಒಂದೆಡೆ ಸೇರಿ ಊಟ ಮಾಡುವುದು ತಪ್ಪಲ್ಲ: ಸಿದ್ದರಾಮಯ್ಯ
ಪಕ್ಷದ ನಾಯಕರು ಒಂದೆಡೆ ಸೇರಿ ಊಟ ಮಾಡುವುದು ತಪ್ಪಲ್ಲ: ಸಿದ್ದರಾಮಯ್ಯ
ಬಿಜೆಪಿ ಆಂತರಿಕ ಕಚ್ಚಾಟ ನೆಚ್ಚಿಕೊಂಡು ಸರ್ಕಾರ ನಡೆಸುತ್ತಿಲ್ಲ: ಶಿವಕುಮಾರ್
ಬಿಜೆಪಿ ಆಂತರಿಕ ಕಚ್ಚಾಟ ನೆಚ್ಚಿಕೊಂಡು ಸರ್ಕಾರ ನಡೆಸುತ್ತಿಲ್ಲ: ಶಿವಕುಮಾರ್
ಎಸ್ಟಿ ಸಮುದಾಯದ ಶ್ರೀಗಳು ಜಾತ್ರೆಗೆ ಆಹ್ವಾನಿಸಲು ಬಂದಿದ್ದರು: ಪರಮೇಶ್ವರ್
ಎಸ್ಟಿ ಸಮುದಾಯದ ಶ್ರೀಗಳು ಜಾತ್ರೆಗೆ ಆಹ್ವಾನಿಸಲು ಬಂದಿದ್ದರು: ಪರಮೇಶ್ವರ್