Maha Shivaratri; ಕಾಯುವನೇ ಶಿವ?: ನಿರ್ವಾಣದೀಕ್ಷೆಯಲಿ ನಿರ್ಯಾಣಘಟ್ಟದಲಿ ನಿರ್ಮಿತ್ರನಿರಲು ಕಲಿ

‘ನೋಡಮ್ಮಾ, ನಿನ್ನೆ ರಾತ್ರಿ ನನ್ನ ಕರಡಿಗೆಯಲ್ಲಿದ್ದ ಲಿಂಗು ಕಳೆದುಹೋದಂತೆ ಕನಸು ಬಿದ್ದಿತ್ತು. ಎಷ್ಟೇ ಮರೆಯಲು ಯತ್ನಿಸಿದರೂ ಆಗಾಗ ಅದೇ ನೆನಪಾಗ್ತಿತ್ತು. ನೀನು ಒಳಗೆ ಬಂದಾಗಲೂ ಮನಸ್ಸಿನಲ್ಲಿ ಅದೇ ಇತ್ತು. ಕನಸಿನಲ್ಲಿ ಕಳೆದಿರುವ ಲಿಂಗುವನ್ನು ನೀನು ತಂದುಕೊಡುತ್ತಿದ್ದೀಯ ಎಂಬಂತಾಗುತ್ತಿದೆ. ಇವೆಲ್ಲಾ ತರ್ಕಕ್ಕೆ ಸಿಗೋಲ್ಲ. ಆದರೂ ಇಂತಹಾ ವಿಷಯಗಳು ಆಶ್ಚರ್ಯ ತರುತ್ತದೆ’ ಎಂದರು.' ರೇಣುಕಾ ಮಂಜುನಾಥ

Maha Shivaratri; ಕಾಯುವನೇ ಶಿವ?: ನಿರ್ವಾಣದೀಕ್ಷೆಯಲಿ ನಿರ್ಯಾಣಘಟ್ಟದಲಿ ನಿರ್ಮಿತ್ರನಿರಲು ಕಲಿ
ರೇಣುಕಾ ಮಂಜುನಾಥ ಮತ್ತು ಅವರ ತಂದೆ
Follow us
|

Updated on: Mar 11, 2021 | 4:55 PM

ಮತ್ತೊಂದು ಶಿವರಾತ್ರಿಯಲ್ಲಿ ನಾವು ನೀವೆಲ್ಲ. ಕ್ಷಣಕ್ಷಣವೂ ಅಲ್ಲೆಲ್ಲಿಂದಲೋ ಘಂಟೆಗಳ ನಿನಾದ ಕೇಳಿಬರುತ್ತಿರಬಹುದು. ನೂರೆಂಟು ನಾಮಾವಳಿಗಳು ಅನುರಣಿಸುತ್ತಿರಬಹುದು. ಫಲಾಹಾರಗಳು ನಿಮ್ಮೆದುರಿಗಿರಬಹುದು. ಮೈಕುಗಳಿಂದ ನಾಮಸಂಕೀರ್ತನೆಗಳು ತೇಲಿಬರುತ್ತಿರಬಹುದು. ಉರಿಬಿಸಿಲಿನಲ್ಲಿ ಸಾಲಿನಲ್ಲಿ ತುದಿಗಾಲ ಮೇಲೆ ದರ್ಶನಕ್ಕಾಗಿ ನಿಂತಿರಬಹುದು. ಜಾಗರಣೆಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿರಬಹುದು; ಸತ್ಯ, ಶಕ್ತಿ, ಸೌಂದರ್ಯ ಸ್ವರೂಪನಾದ ಅಚಿಂತ್ಯ ನಿಮ್ಮ ಮನಸ್ಸನ್ನು ಈವತ್ತು ಹೇಗೆ ಆವರಿಸಿಕೊಂಡಿದ್ದಾನೆ, ಈ ಕ್ಷಣದಲ್ಲಿ ತೇಲಿಬಂದ ನೆನಪನ್ನು ಹಂಚಿಕೊಳ್ಳಬಹುದೇ ಎಂದು ‘ಟಿವಿ 9 ಕನ್ನಡ ಡಿಜಿಟಲ್’​ ಕೇಳಿತು. ಆಗ ಹೊಮ್ಮಿದ್ದೇ ‘ಕಾಯುವನೇ ಶಿವ?’ ಸರಣಿ. ಇಲ್ಲಿ ಅವನು ಪುಳಕಗೊಳಿಸಿದ್ದಾನೆ. ಕಳವಳಕ್ಕೆ ದೂಡಿದ್ದಾನೆ, ವಿಷಾದಕ್ಕೆ ನೂಕಿದ್ಧಾನೆ, ಆಪ್ತವಾಗಿ ಕೈಹಿಡಿದಿದ್ದಾನೆ, ಪ್ರೀತಿಯಿಂದಲೂ ಅಪ್ಪಿದ್ದಾನೆ. ಅನುಭವ ಅರಿವಿನಿಂದ ಮುನ್ನಡೆಸಿದ್ದಾನೆ. 

ಪರಿಕಲ್ಪನೆ: ಶ್ರೀದೇವಿ ಕಳಸದ

ಲೇಖಕಿ ರೇಣುಕಾ ಮಂಜುನಾಥ ಶಿವರಾತ್ರಿ ಹಿನ್ನೆಲೆಯಲ್ಲಿ ತಂದೆಯನ್ನು ಸ್ಮರಿಸಿದ್ದಾರೆ.

ನಮ್ಮಲ್ಲಿ ಬಹುತೇಕ ನನ್ನಂತಹವರು, ಅಂದರೆ ಈ ಲಿಂಗಾಯತ ಜಾತಿಯಲ್ಲಿ ಹುಟ್ಟಿರುವವರಲ್ಲಿ ಅನೇಕರಿಗೆ ನಮ್ಮ ನಮ್ಮ ಕರಡಿಗೆ, ಅದರೊಳಗಿನ ಲಿಂಗು ನೆನಪಾಗೋದೇ ಈ ಶಿವರಾತ್ರಿ ಹಿಂದಿನ ದಿನ ಅಥವಾ ಮನೆಗೆ ನಮ್ಮ ಮಠಗಳ ಸ್ವಾಮಿಗಳು ಪಾದಪೂಜೆ ಮತ್ತೊಂದಕ್ಕೆ ಬಂದಾಗ. ಇಲ್ಲದಿದ್ದರೆ, ನಮ್ಮ ಕರಡಿಗೆಗಳು ದೇವರಕೋಣೆಯಲ್ಲೊಂದು ಕಡೆ ಸುಭದ್ರವಾಗಿರುತ್ತವೆ. ಇದು ಹೆಚ್ಚಿನ ಮನೆಗಳ ಕತೆ.

ಹಾಗೇ ನನಗೆ ಹೆಚ್ಚು ನೆನಪಾಗೋದು ನಮ್ಮಪ್ಪಾಜಿ. ಅವರು ತಮ್ಮ ಸುದೀರ್ಘ ಆಯಸ್ಸು ಮತ್ತು ಅದ್ಭುತ ಆರೋಗ್ಯದ ವಿಷಯವಾಗಿ ಮಾತಾಡುವಾಗ ಹೇಳುತ್ತಿದ್ದುದೇನೆಂದರೆ, ‘ನೋಡಮ್ಮಾ, ನನ್ನ ಆಯಸ್ಸಿನ ಗುಟ್ಟು ಹೇಳ್ತೀನಿ ಕೇಳು. ನಾನು ನನ್ನ ಜೀವಮಾನದಲ್ಲಿ ಅನವಶ್ಯಕವಾದದ್ದೇನನ್ನೂ ಕೊಳ್ಳುವುದಿಲ್ಲ. ನನ್ನ ಬಳಿ ಇರುವುದನ್ನು ಹಾಳು ಮಾಡೋಲ್ಲ. ಒಂದು ನಿರ್ಜೀವ ವಸ್ತುವನ್ನೂ ಸಹ ಹೇಗೆ ಬಳಕೆ ಮಾಡಬಹುದೆಂದು ಯೋಚಿಸುತ್ತೇನೆ. ಅಗತ್ಯಕ್ಕಿಂತ ಹೆಚ್ಚು ನನ್ನ ಬಳಿ ಇಟ್ಟುಕೊಳ್ಳೋಲ್ಲ’ ಅನ್ನುತ್ತಿದ್ದರು. ನೀರು ಬಳಕೆಯಲ್ಲೂ ಸಹ ಹಿತ-ಮಿತ. ದೇಹಕ್ಕೆ ಹಿತವೆನಿಸುತ್ತೆ ಎಂದು ಒಂದು ಚೊಂಬು ಹೆಚ್ಚು ನೀರನ್ನು ಸ್ನಾನದಲ್ಲೂ ವ್ಯರ್ಥ ಮಾಡದವರು. ನನ್ನ ಬಾಲ್ಯದಿಂದ ಅವರು ಕಾಲವಾಗುವವರೆಗೂ ಅವರ ಬಳಿಯಿದ್ದುದು ಅದೇ ಶೇವಿಂಗ್ ಬಾಕ್ಸ್ ಮತ್ತು ಪರಿಕರಗಳು. 7o’clock ಬ್ಲೇಡ್ ನಿಂದ ಬ್ರ್ಯಾಂಡ್ ಬದಲಾಗಿರಬಹುದಷ್ಟೆ. ಹಾಗೇ ಅವರ ಎದೆ ಮೇಲಿದ್ದ ಕರಡಿಗೆ ಸಹಾ.

ನಾನು ಮದುವೆಯಾದ ಮೇಲೆ, ನನ್ನ ಗಂಡನ ಮನೆಯವರು ನಡೆದುಕೊಳ್ಳುತ್ತಿದ್ದ ದೇವಸ್ಥಾನ ಶ್ರೀಶೈಲ ಮಲ್ಲಿಕಾರ್ಜುನ. ಹಾಗಾಗಿ ನಾನೂ ಪ್ರತಿ ವರ್ಷ ಅಲ್ಲಿಗೆ ಹೋಗುತ್ತಿದ್ದೆ. ಆಗಿನ ದಿನಗಳಲ್ಲಿ, ಅಲ್ಲಿ ಅಭಿಷೇಕ ಮಾಡಿಸಿದವರಿಗೆ ಎರಡು ಅಮೃತಶಿಲೆಯಲ್ಲಿ ಮಾಡಿದ ಪುಟ್ಟ ಲಿಂಗು ಕೊಡುತ್ತಿದ್ದರು. ನನ್ನ ಬಳಿ ಆದೇನೇ ಹೆಚ್ಚುವರಿ ಇದ್ದರೂ, ತವರು ಮನೆಗೊಂದು ಎಂಬಂತಿದ್ದ ನಾನು ಅದರಲ್ಲಿ ಒಂದನ್ನು ತೆಗೆದುಕೊಂಡು ಮೈಸೂರಿನಲ್ಲಿದ್ದ ನನ್ನ ತಂದೆಗೆ ಕೊಡೋಣ ಎಂದು ಹೋಗಿದ್ದೆ. ಅದು ಶಿವರಾತ್ರಿ ಸಮಯ. ಅವರ ಬಳಿ ಹೋದಾಗ, ಅಂದು ಅದೇಕೋ ಎಂದಿಗಿಂತ ಹೆಚ್ಚು ಗಂಭೀರವಾಗೇ ಕುಂತಿದ್ದರು. ನಾನು ಹೋಗಿ ಮಾತನಾಡಿಸುತ್ತಾ, ಬ್ಯಾಗಿನಲ್ಲಿದ್ದ ಲಿಂಗುವಿನ ಡಬ್ಬಿ ತೆಗೆದು ‘ಅಪ್ಪಾಜಿ, ಶ್ರೀಶೈಲಕ್ಕೆ ಹೋಗಿದ್ದೆ. ಅಲ್ಲಿ ಅಭಿಷೇಕ ಆದನಂತರ ಈ ಲಿಂಗು ಕೊಟ್ಟರು, ಅದನ್ನು ಕೊಟ್ಟು ಹೋಗೋಣ ಅಂತಲೇ ಬಂದೆ’ ಎಂದೆ.

ಅವರು ತಕ್ಷಣ ನಾನು ಕೊಟ್ಟದ್ದನ್ನು ಕೈಲಿ ಹಿಡಿದುಕೊಂಡು, ಎಲ್ಲಾ ಕಡೆ ತಿರುಗಿಸಿ ನೋಡಿ ತಮ್ಮ ಮುಂದಿನ ಮೇಜಿನ ಮೇಲಿಟ್ಟು ಹೇಳಿದ್ದೇನೆಂದರೆ. ‘ನೋಡಮ್ಮಾ, ನಿನ್ನೆ ರಾತ್ರಿ ನನ್ನ ಕರಡಿಗೆಯಲ್ಲಿದ್ದ ಲಿಂಗು ಕಳೆದುಹೋದಂತೆ ಕನಸು ಬಿದ್ದಿತ್ತು. ಎಷ್ಟೇ ಮರೆಯಲು ಯತ್ನಿಸಿದರೂ ಆಗಾಗ ಅದೇ ನೆನಪಾಗ್ತಿತ್ತು. ನೀನು ಒಳಗೆ ಬಂದಾಗಲೂ ಮನಸ್ಸಿನಲ್ಲಿ ಅದೇ ಇತ್ತು. ಕನಸಿನಲ್ಲಿ ಕಳೆದಿರುವ ಲಿಂಗುವನ್ನು ನೀನು ತಂದುಕೊಡುತ್ತಿದ್ದೀಯ ಎಂಬಂತಾಗುತ್ತಿದೆ. ಇವೆಲ್ಲಾ ತರ್ಕಕ್ಕೆ ಸಿಗೋಲ್ಲ. ಆದರೂ ಇಂತಹಾ ವಿಷಯಗಳು ಆಶ್ಚರ್ಯ ತರುತ್ತದೆ’ ಎಂದರು. ಅವರು ಹಿಂದೊಮ್ಮೆ ಹೇಳಿದ್ದ ಮಾತು ನೆನಪಾಯ್ತು. ‘ನನ್ನ ಇಡೀ ಬದುಕಿನಲ್ಲಿ ಒಟ್ಟು ಹದಿನೆಂಟು ಸಾರಿ ಜೀವಾಪಾಯದಿಂದ ಪಾರಾಗಿದ್ದೇನೆ. ಕಾಣದ ಶಕ್ತಿ ನನ್ನನ್ನು ಬದುಕಿಸಿದೆ. ಇವಕ್ಕೆಲ್ಲಾ ಸ್ಪಷ್ಟನೆ ಕೊಡಲಾಗುವುದಿಲ್ಲ. ಆದರೆ ಸತ್ಯ’ ಎಂದಿದ್ದರು.

ಮತ್ತೂ ಹೇಳಬೇಕೆಂದರೆ, ನಮ್ಮಪ್ಪಾಜಿಗಿದ್ದ ಕಷ್ಟಗಳು, ಕಿರಿಕಿರಿ, ಆತಂಕಗಳು, ಸವಾಲುಗಳು ಒಂದೆರೆಡಲ್ಲ. ಎಲ್ಲದಕ್ಕೂ ಅವರು ಅದೆಷ್ಟು ‘ಒಂಟಿ’ ಯಾಗಿದ್ದರೆಂದು ಇಂದೂ ನೆನಪಿಸಿಕೊಂಡರೆ ಮನಸ್ಸು ವಿಚಲಿತಗೊಳ್ಳುತ್ತೆ. ಅವರೇನಾದರೂ ವಿಚಲಿತರಾಗಿದ್ದರೆ ಇಡೀ ಸಂಸಾರ ಬೀದಿಗೆ ಬೀಳುತ್ತಿತ್ತು. ಆದರೆ, ಕರ್ತವ್ಯಕ್ಕೆ ಕಟ್ಟುಬಿದ್ದು ಸಂಸಾರರಥವನ್ನು ಮುನ್ನಡೆಸಲು ಅವರು ಮೊರೆಹೋಗಿದ್ದು ಭಗವದ್ಗೀತೆಯನ್ನು. ದಿನವೂ ಬೆಳ್‌ಬೆಳಿಗ್ಗೆ ರೇಡಿಯೋದ ಅಷ್ಟೂ ಕೇಂದ್ರಗಳನ್ನು ತಿರುಗಿಸುತ್ತಾ ಒಂದಾದ ಮೇಲೊಂದರಂತೆ ಬರುವ ‘ಚಿಂತನ’ ಕಾರ್ಯಕ್ರಮಗಳನ್ನು ಕೇಳುತ್ತಿದ್ದರು. ಒಮ್ಮೆ, ಆ ಸಮಯದಲ್ಲಿ ಅವರ ಬಳಿ ಹೋದಾಗ ಅವರು ಹೇಳಿದ್ದು, ‘ನೋಡಮ್ಮಾ, ನನಗೆ ಬಹಳ ಆಶ್ಚರ್ಯವಾಗುತ್ತೆ! ನನಗೆ ಯಾವ ವಿಷಯ ಕಾಡುತ್ತಿರುತ್ತೋ, ಬಾಧಿಸುತ್ತಿರುತ್ತೋ ಅದೇ ವಿಷಯವಾಗಿ ಯಾವುದಾದರೂ ಒಂದು ಸ್ಟೇಶನ್‌ನಲ್ಲಿ ಬರುವ ಚಿಂತನ ಕಾರ್ಯಕ್ರಮದಲ್ಲಿ, ಅಂದೇ ನನಗೆ ಉತ್ತರ ಸಿಗುತ್ತೆ! ಇದು ಯಾವ ತರ್ಕಕ್ಕೂ ಸಿಗುವುದಿಲ್ಲ. ಇಂತಹಾ ಸಮಯದಲ್ಲೇ ನನಗೆ ಪರಮಾತ್ಮ ಇದ್ದಾನೆ ಎಂಬ ಭರವಸೆ ಹೆಚ್ಚುವುದು’ ಎಂದು ಬಹಳ ಪುಳಕಗೊಂಡು ಹೇಳುತ್ತಿದ್ದರು.

ಎದೆಯಮೇಲೆ ಲಿಂಗು, ಹಣೆಯಲ್ಲಿ ವಿಭೂತಿ ಬಿಟ್ಟರೆ ಮತ್ಯಾವ ಪೂಜೆಗೊಡವೆಗೆ ಅಪ್ಪಾಜಿ ಹೋಗುತ್ತಿರಲಿಲ್ಲ. ಅವರದ್ದು ವಿಚಾರಪ್ರಧಾನ ಭಕ್ತಿ. ಅಮ್ಮನದ್ದು ಆಚಾರ ಮುಂದು, ವಿಚಾರವೆಂಬುದು ಅವರ ನಿಘಂಟಿನಲ್ಲೇ ಇರಲಿಲ್ಲ. ಹಾಗಾಗಿ ಈ ದೇವರು-ದೇವಸ್ಥಾನ, ಪೂಜೆ- ಪುನಸ್ಕಾರ ವಿಷಯಗಳು ಬಂದರೆ ಇಬ್ಬರೂ ತದ್ವಿರುದ್ಧ. ಬಸವಜಯಂತಿ ಬಂದರೆ ಅಪ್ಪಾಜಿ ಜಗಜ್ಯೋತಿ ಬಸವೇಶ್ವರನನ್ನು ಆರಾಧಿಸಿದರೆ ಅಮ್ಮ ಬಸವನನ್ನು (ನಂದಿ) ಪೂಜಿಸುತ್ತಿದ್ದರು. ಇಂದು ಶಿವರಾತ್ರಿಯ ಈ ದಿನ , ನೊಸಲಮೇಲಿನ ವಿಭೂತಿ, ಎದೆಯ ಮೇಲಿನ ಕರಡಿಗೆಯ ಅಪ್ಪಾಜಿ ನೆನಪಾಗುತ್ತಿದ್ದಾರೆ.‌ ಹಾಗೇ ಅಂದು ಅವರ ಕೈಗೆ ನಾನು ಕೊಟ್ಟ ಶ್ರೀಶೈಲದ ಆ ಲಿಂಗು ಸಹಾ. ಹಾಗೇ, ಅಪ್ಪಾಜಿಯೆಂದರೆ ಈ ಕಗ್ಗ ನೆನಪಾಗುತ್ತೆ.

ಓರ್ವನೇ ನಿಲುವೆ ನೀನುತ್ಕಟಕ್ಷಣಗಳಲಿ ಧರ್ಮಸಂಕಟಗಳಲಿ, ಜೀವಸಮರದಲಿ ನಿರ್ವಾಣದೀಕ್ಷೆಯಲಿ, ನಿರ್ಯಾಣಘಟ್ಟದಲಿ ನಿರ್ಮಿತ್ರನಿರಲು ಕಲಿ – ಮಂಕುತಿಮ್ಮ

ಇದನ್ನೂ ಓದಿ : Maha Shivaratri; ಕಾಯುವನೇ ಶಿವ?: ಕಣ್ಣು ಬಿಡಡ ಬಿಟ್ರೆ ಮತ್ತೆ ಶುರುವಿನಿಂದ ಮಾಡಕಾಗ್ತು ರಾತ್ರಿ ಎಲ್ಲ ಇಲ್ಲೇ ಕೂರಕ್ಕು ಒಬ್ಬಳೇ

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್