ನಾಳೆಯಿಂದ (ಫೆಬ್ರವರಿ 7) ಒಂದು ವಾರ ಅಂದರೆ ಫೆಬ್ರವರಿ 7ರಿಂದ 14ರವರೆಗೆ ಪ್ರೇಮಿಗಳ ಪಾಲಿಗೆ ಹಬ್ಬದಂತೆ.. ಪ್ರತಿವರ್ಷ ಫೆಬ್ರವರಿ 7ರಿಂದ 14ರವರೆಗೆ ವ್ಯಾಲೆಂಟೈನ್ ಸಪ್ತಾಹವಾಗಿ ಆಚರಿಸಲಾಗುತ್ತಿದ್ದು, ಈ ವರ್ಷವೂ ನಾಳೆಯಿಂದ ಪ್ರೇಮಿಗಳ ಪಾಲಿಗೆ ಸಂಭ್ರಮ.
ಈ ವ್ಯಾಲೆಂಟೈನ್ ವಾರದ ಮೊದಲ ದಿನ ಅಂದರೆ ನಾಳೆ ರೋಸ್ ಡೇ. ಗುಲಾಬಿಗಳಲ್ಲೆಲ್ಲ ಕೆಂಪು ಗುಲಾಬಿ ಪ್ರೀತಿಯ ಸಂಕೇತ. ನಾಳೆ ರೋಸ್ ಡೇ ದಿನ ಎಲ್ಲೆಲ್ಲೂ ಈ ಕೆಂಪು ಗುಲಾಬಿಯದ್ದೇ ಕಾರುಬಾರು. ಪ್ರತಿ ಪ್ರೇಮಿಯೂ ತನ್ನ ಹುಡುಗಿ/ಹುಡುಗನಿಗೆ ಗುಲಾಬಿ ಹೂವು ಕೊಡುವ ಮೂಲಕ ತನ್ನ ಮನಸಿನ ಪ್ರೇಮವನ್ನು ವ್ಯಕ್ತಪಡಿಸಬೇಕು ಎಂದು ಬಯಸುತ್ತಾನೆ/ಳೆ. ಇನ್ನು ಪ್ರತಿ ಬಣ್ಣದ ಗುಲಾಬಿಗೂ ಬೇರೆಬೇರೆಯದಾದ ಭಾವ ಇರುವುದರಿಂದ, ಪ್ರಿಯತಮೆಗೋ..ಪ್ರಿಯಕರನಿಗೋ ಗುಲಾಬಿ ಕೊಡುವಾಗ ಎಚ್ಚರಿಕೆಯಿಂದ ಆರಿಸಿ, ಕೊಡುವುದು ಒಳ್ಳೆಯದು..!
ರೋಸ್ ಡೇಗೆ ಹೇಗೆ ಪ್ಲ್ಯಾನ್ ಮಾಡಬಹುದು?
ಇನ್ನು ನಾಳೆಯ (ಫೆ. 7) ರೋಸ್ ಡೇಗೆ ಏನೆಲ್ಲ ಪ್ಲ್ಯಾನ್ ಮಾಡಬಹುದು. ಮಾರ್ಕೆಟ್ಗೆ ಹೋಗಿ ಒಂದಷ್ಟು ಚೆಂದನೆಯೂ ಹೂವು ತಂದು ಕೊಟ್ಟರೆ ಸಾಕಾ? ಮತ್ತೇನಾದರೂ ವಿಭಿನ್ನವಾಗಿ ಪ್ಲ್ಯಾನ್ ಮಾಡಬಹುದಾ? ಎಂದು ನೀವು ಯೋಚಿಸುತ್ತಿದ್ದರೆ, ನಾವೊಂದಿಷ್ಟು ಸಲಹೆ ಕೊಡ್ತೀವಿ ನೋಡಿ..
ನಾಳೆಯಿಂದ ಶುರುವಾಗುವ ವ್ಯಾಲೆಂಟೈನ್ ವಾರದ ಪೂರ್ತಿ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದರೆ ಮೊದಲ ದಿನವಾದ ರೋಸ್ ಡೇಗೆ ಏನಾದ್ರೂ ಡಿಫರೆಂಟ್ ಆಗಿ ಪ್ಲ್ಯಾನ್ ಮಾಡಿ. ಬೆಳಗ್ಗೆ ಸ್ವಲ್ಪ ಎಂದಿಗಿಂತ ಬೇಗ ಎದ್ದು, ಮಾರ್ಕೆಟ್ಗೆ ಹೋಗಿ ಫ್ರೆಶ್ ಆಗಿರುವ ಗುಲಾಬಿ ಹೂವುಗಳ ಬೊಕ್ಕೆ ತನ್ನಿ. ಅದನ್ನು ನಿಮ್ಮ ವ್ಯಾಲೆಂಟೈನ್ಗೆ ಪ್ರೀತಿಯಿಂದ ಕೊಡಿ. ನಿಮ್ಮ ಮನಸಿನಾಳದ ಪ್ರೀತಿಯನ್ನು ಹಂಚಿಕೊಳ್ಳಿ.
ಇನ್ನು ಹೂವು ಕೊಟ್ಟು, ಹಾಗೇ ಹೊರಟುಬಿಡಬೇಡಿ. ಪರಸ್ಪರ ಸ್ವಲ್ಪ ಹೊತ್ತು ರೊಮ್ಯಾಂಟಿಕ್ ಆಗಿ ಕಾಲ ಕಳೆಯಿರಿ. ಪರಸ್ಪರಿಗೆ ಹಿತವೆನ್ನಿಸುವ ಟಾಪಿಕ್ ಎತ್ತಿಕೊಳ್ಳಿ. ನಗು, ಹಾಸ್ಯ, ಪ್ರೀತಿ ತುಂಬಿದ ಸಮಯ ಅದಾಗಿರಲಿ. ಇನ್ನು, ರೋಸ್ ಡೇ ಸ್ಪೆಷಲ್ ಎಂದು ನೀವು ಕ್ಯಾಂಡಲ್ ಲೈಟ್ ಡಿನ್ನರ್ ಆಯೋಜಿಸಬಹುದು. ಇಬ್ಬರೂ ಸೇರಿಯೇ ಪ್ಲ್ಯಾನ್ ಮಾಡಬಹುದು. ಆದರೆ ಒಬ್ಬರು, ಇನ್ನೊಬ್ಬರಿಗೆ ಸರ್ಪ್ರೈಸ್ ಪಾರ್ಟಿ ನೀಡಿದರೆ ಇನ್ನೂ ಚೆನ್ನಾಗಿರುತ್ತದೆ. ಈ ಡಿನ್ನರ್ನಲ್ಲಿ ಒಂದಷ್ಟು ಚೆಂದನೆಯ ಕೆಂಪು ಗುಲಾಬಿಗಳು ನಿಮ್ಮೊಟ್ಟಿಗೆ ನಗುತ್ತಿರಲಿ.. ಹಾಗೇ ನೀವು ಪಾರ್ಟಿ ಆಯೋಜಿಸಿದ ರೂಂನ್ನು ಗುಲಾಬಿ ಹೂವುಗಳಿಂದ ಅಲಂಕರಿಸಿದರೆ ಅಲ್ಲಿನ ವಾತಾವರಣ ಇನ್ನೂ ಹಿತವಾಗಿರುತ್ತದೆ.
ಹಾಗೇ, ರೋಸ್ ಡೇ ದಿನ ನಿಮ್ಮ ಪ್ರಿಯಕರ/ಪ್ರಿಯತಮೆಗೆ ಹೂವು ಕೊಡುವ ಜಾಗದ ಆಯ್ಕೆ ಸರಿಯಾಗಿರಲಿ. ಎಲ್ಲೆಲ್ಲೋ, ಅವಸರವಾಗಿ ಕೊಟ್ಟು ಬರುವುದು ಬೇಡ. ನಿಮ್ಮಿಬ್ಬರಿಗೂ ಇಷ್ಟವಾದ ಜಾಗ, ಅಥವಾ ನಿಮ್ಮ ವ್ಯಾಲೆಂಟೈನ್ ತುಂಬ ಇಷ್ಟಪಡುವ ಸ್ಥಳವನ್ನೇ ಆಯ್ಕೆ ಮಾಡಿಕೊಳ್ಳಿ. ಕೆಂಪು ಗುಲಾಬಿಯೊಂದಿಗೆ ಒಂದು ಪುಟ್ಟ ಉಡುಗೋರೆ ಇದ್ದರೆ ಇನ್ನೂ ಚೆನ್ನ. ಒಂದೇ ಒಂದು ಚೆಂದನೆಯ ಗುಲಾಬಿಯನ್ನೂ ಕೊಡಬಹುದು. ಹೀಗೆ ಹೂವು ಕೊಡುವಾಗ ಅದರೊಟ್ಟಿಗೆ ಒಂದು ಸಣ್ಣ ಪ್ರೇಮಪತ್ರವನ್ನೋ, ಪ್ರೀತಿಯ ಕೋಟ್ ಅನ್ನೋ ಬರೆದು ಕೊಡಿ. ಇದೆಲ್ಲ ಎಷ್ಟು ಸ್ಪೆಷಲ್ ಆಗಿರುತ್ತದೆ ನೋಡಿ.
ರೆಸ್ಟೋರಂಟ್, ಮಾಲ್ಗಳಲ್ಲಿ ಜಗಮಗ
ವ್ಯಾಲೆಂಟೈನ್ ವಾರವೆಲ್ಲ ರೆಸ್ಟೋರೆಂಟ್, ಮಾಲ್ಗಳೆಲ್ಲ ಜಗಮಗ ಎಂದು ಹೊಳೆಯುತ್ತಿರುತ್ತವೆ. ಕೆಲವೆಡೆಯಂತೂ ಪ್ರತಿದಿನ ಆಯಾ ದಿನವನ್ನು ಸ್ಪೆಷಲ್ ಆಗಿ ಆಚರಣೆ ಮಾಡಲಾಗುತ್ತದೆ. ಸಣ್ಣ ಪಾರ್ಟಿ, ಮ್ಯೂಸಿಕ್ ಪಾರ್ಟಿಗಳು ನಡೆಯುತ್ತಿರುತ್ತವೆ. ಇನ್ನು ಮಾರ್ಕೆಟ್ಗಳಲ್ಲಿ ಗುಲಾಬಿ ಹೂವಿಗೆ ಮತ್ತೊಂದು ಮಟ್ಟದ ಬೆಲೆ ಬರುತ್ತದೆ. ಕೆಂಪು ಗುಲಾಬಿಯನ್ನು ಇಷ್ಟಪಡದವರೇ ಕಡಿಮೆ. ಅದರಲ್ಲೂ ಪ್ರೇಮಿಗಳ ದಿನಾಚರಣೆ ಹತ್ತಿರ ಬರುತ್ತಿದ್ದಂತೆ ಬೇಡಿಕೆ, ಮಾರಾಟವೂ ಹೆಚ್ಚುತ್ತದೆ. ಅದರಲ್ಲೂ ನಾಳೆ ರೋಸ್ ಡೇ ನಿಮಿತ್ತ ಇವತ್ತು ಸಂಜೆಯಿಂದಲೇ ಗುಲಾಬಿ ಹೂವುಗಳ ಮಾರಾಟ ಶುರುವಾಗುತ್ತದೆ.
Valentine day: ಮನಕದ್ದ ಹುಡುಗಿಯ ಮನಗೆಲ್ಲಲು ಇದಕ್ಕಿಂತಲೂ ಉತ್ತಮ ಉಡುಗೊರೆ ಇನ್ನೊಂದಿಲ್ಲ
Published On - 3:26 pm, Sat, 6 February 21