AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದು ಗೋವಾದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಯಾರ್ಕರ್​ ಕಿಂಗ್​ ಬುಮ್ರಾ.. ತೀರಾ ಖಾಸಗಿಯಾಗಿ ನಡೆಯಲಿದೆ ಮದುವೆ!

ಗೋವಾದಲ್ಲಿ ನಡೆಯುವ ಖಾಸಗಿ ಸಮಾರಂಭದಲ್ಲಿ ಸ್ಟಾರ್ ಸ್ಪೋರ್ಟ್ಸ್ ಆ್ಯಂಕರ್ ಸಂಜನಾ ಗಣೇಶನ್ ಅವರೊಂದಿಗೆ ಬುಮ್ರಾ ವೈವಾಹಿಕ ಜೀವನಕ್ಕೆ ಕಾಲಿರಿಸಲ್ಲಿದ್ದಾರೆ.

ಇಂದು ಗೋವಾದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಯಾರ್ಕರ್​ ಕಿಂಗ್​ ಬುಮ್ರಾ.. ತೀರಾ ಖಾಸಗಿಯಾಗಿ ನಡೆಯಲಿದೆ ಮದುವೆ!
ಜಸ್ಪ್ರೀತ್ ಬುಮ್ರಾ, ಸಂಜನಾ ಗಣೇಶನ್
ಪೃಥ್ವಿಶಂಕರ
|

Updated on:Mar 15, 2021 | 2:53 PM

Share

ಮಾರ್ಚ್ 15, ಟೀಂ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ಅತ್ಯಂತ ವಿಶೇಷವಾಗಿದೆ. ತಮ್ಮ ಅತ್ಯುತ್ತಮ ಬೌಲಿಂಗ್ ಮೂಲಕ ಈಗಾಗಲೇ ಕ್ರಿಕೆಟ್ ವೃತ್ತಿಜೀವನದಲ್ಲಿ ಅನೇಕ ಉತ್ತಮ ಸಾಧನೆಗಳನ್ನು ಮಾಡಿದ ಬುಮ್ರಾ ಅವರ ವೈಯಕ್ತಿಕ ಜೀವನಕ್ಕೆ ಹೊಸ ಸದಸ್ಯೆ ಎಂಟ್ರಿಯಾಗಲಿದ್ದಾರೆ. ಹಲವಾರು ದಿನಗಳ ಊಹಾಪೋಹಗಳು ಮತ್ತು ವದಂತಿಗಳ ನಂತರ, ಬುಮ್ರಾ ಅಂತಿಮವಾಗಿ ಸೋಮವಾರ ವಿವಾಹವಾಗಲಿದ್ದಾರೆ. ಗೋವಾದಲ್ಲಿ ನಡೆಯುವ ಖಾಸಗಿ ಸಮಾರಂಭದಲ್ಲಿ ಸ್ಟಾರ್ ಸ್ಪೋರ್ಟ್ಸ್ ಆಂಕರ್ ಸಂಜನಾ ಗಣೇಶನ್ ಅವರೊಂದಿಗೆ ಬುಮ್ರಾ ವಿವಾಹವಾಗಲಿದ್ದಾರೆ. 

ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ನಂತರ ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾದಿಂದ ರಜೆ ಪಡೆದಿದ್ದರು. ನಾಲ್ಕನೇ ಟೆಸ್ಟ್ ಪಂದ್ಯದ ಮೊದಲು ಬುಮ್ರಾ ವೈಯಕ್ತಿಕ ಕಾರಣಗಳಿಗಾಗಿ ರಜೆ ಕೋರಿದ್ದಾರೆ ಎಂದು ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ತಿಳಿಸಿತ್ತು. ಇದರಿಂದಾಗಿ ಅಹಮದಾಬಾದ್‌ನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಬುಮ್ರಾ ಆಡಲು ಸಾಧ್ಯವಾಗಲಿಲ್ಲ. ಕೆಲವು ದಿನಗಳ ನಂತರ, ಬುಮ್ರಾ ಮದುವೆಗೆ ಸಿದ್ಧತೆಯಲ್ಲಿ ನಿರತರಾಗಿದ್ದಾರೆ ಎಂದು ವರದಿಯಾಗಿತ್ತು. ಆದರೆ, ವೇಗದ ಬೌಲರ್‌ ಯಾರನ್ನು ಮದುವೆಯಾಗುತ್ತಿದ್ದಾರೆ ಎಂಬುದು ಸ್ಪಷ್ಟವಾಗಿರಲಿಲ್ಲ.

ಯಾರು ಈ ಸಂಜನಾ ಗಣೇಶನ್​? 28 ವರ್ಷದ ಸಂಜನಾ ಗಣೇಶನ್​ ಮೂಲತಃ ಪುಣೆಯವರು. ಮಾಡೆಲಿಂಗ್​ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಸಂಜನಾ 2014ರಲ್ಲಿ ಫೆಮಿನಾ ಮಿಸ್​ ಇಂಡಿಯಾ ಸೌಂದರ್ಯ ಸ್ಪರ್ಧೆಯ ಫೈನಲಿಸ್ಟ್​ ಕೂಡ ಆಗಿದ್ದಾರೆ. 2016ರಲ್ಲಿ ಸ್ಟಾರ್​ಸ್ಪೋರ್ಟ್ಸ್​ಗೆ ಕ್ರೀಡಾ ನಿರೂಪಕಿಯಾಗಿ ಸೇರ್ಪಡೆಯಾಗಿದ್ದಾರೆ. 2014ರಲ್ಲಿ ಎಂಟಿವಿಯ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿದ್ದ ಸಂಜನಾಗೆ ಅವರ ಪ್ರತಿಸ್ಪರ್ಧಿಯಾಗಿದ್ದ ಅಶ್ವಿನಿ ಕೌಲ್​​ ಜತೆ ಅಫೇರ್​ ಇತ್ತು. ಆದರೆ ಅವರಿಬ್ಬರ ರಿಲೇಶನ್​ಶಿಪ್​ ತುಂಬ ದಿನ ಇರಲಿಲ್ಲ ಎಂಬ ರೂಮರ್​ ಕೂಡ ಇದೆ. 2016ರ ಈಚೆಗೆ ಕ್ರೀಡೆಗೆ ಸಂಬಂಧಪಟ್ಟ ಶೋ, ಸಂದರ್ಶನಗಳಲ್ಲಿ ಅವರು ಸಕ್ರಿಯವಾಗಿದ್ದಾರೆ. ಐಪಿಲ್​ ವೇಳೆ ಕೋಲ್ಕತ್ತ ನೈಟ್​ ರೈಡರ್ಸ್​ ತಂಡದ ನೈಟ್​ ಕ್ಲಬ್​ ಶೋನ ನಿರೂಪಕಿ ಇವರು. ಬುಮ್ರಾ ಮತ್ತು ಸಂಜನಾ ವಿವಾಹವಾಗುತ್ತಿರುವ ಬಗ್ಗೆ ಇವರಿಬ್ಬರೂ ಇನ್ನೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.

ಮೊಬೈಲ್ ಫೋನ್ ತರುವಂತಿಲ್ಲಾ.. ಹಲವು ದಿನಗಳ ವದಂತಿಗಳು ಮತ್ತು ಊಹಾಪೋಹಗಳ ನಂತರ, ಟೀಮ್ ಇಂಡಿಯಾದ ಸೂಪರ್​ ಸ್ಟಾರ್​, ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಅವರನ್ನು ಮದುವೆಯಾಗಲಿದ್ದಾರೆ ಎಂಬುದು ಸ್ಪಷ್ಟವಾಗಿದೆ. ವರದಿಯ ಪ್ರಕಾರ, ಗೋವಾದಲ್ಲಿ ಭಾನುವಾರವೇ ವಿವಾಹ ಪೂರ್ವ ವಿಧಿವಿಧಾನಗಳು ಪೂರ್ಣಗೊಂಡಿವೆ ಮತ್ತು ಸೋಮವಾರ ದಂಪತಿಗಳು ವೈವಾಹಿಕ ಜೀವನಕ್ಕೆ ಕಾಲಿರಿಸಲ್ಲಿದ್ದಾರೆ ಎಂದು ವರದಿಯಾಗಿದೆ.

ಇಡೀ ಮದುವೆ ಸಮಾರಂಭವನ್ನು ಬಹಳ ಖಾಸಗಿಯಾಗಿ ನಡೆಸಲಾಗುತ್ತಿದ್ದು ಮಾಧ್ಯಮಗಳನ್ನು ದೂರವಿಡಲಾಗುತ್ತಿದೆ. ಈ ಸಮಾರಂಭದಲ್ಲಿ ಎರಡೂ ಕುಟುಂಬಗಳ ಆಪ್ತರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸುತ್ತಿದ್ದಾರೆ. ಮದುವೆಗೆ ಹಾಜರಾಗುವ ಅತಿಥಿಗಳು ತಮ್ಮ ಮೊಬೈಲ್ ಫೋನ್ಗಳನ್ನು ತರಬಾರದೆಂದು ತಿಳಿಸಲಾಗಿದೆ ಎಂದು ವರದಿ ಹೇಳಿದೆ. ಇದರಿಂದಾಗಿ ಇಡೀ ಈವೆಂಟ್ ಸಂಪೂರ್ಣವಾಗಿ ಖಾಸಗಿಯಾಗಿ ಉಳಿದಿದೆ ಮತ್ತು ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳ ವ್ಯಾಪ್ತಿಯಿಂದ ದೂರವಿದೆ.

ಇದನ್ನೂ ಓದಿ: ಕ್ರೀಡಾ ನಿರೂಪಕಿ ಸಂಜನಾ ಜೊತೆ ಬುಮ್ರಾ ಮದುವೆ.. ಕ್ರೀಡಾ ನಿರೂಪಕಿಯರನ್ನ ವರಿಸಿರುವ ಇತರೆ ಕ್ರಿಕೆಟಿಗರು ಯಾರ‍್ಯಾರು ಗೊತ್ತಾ?

Published On - 2:46 pm, Mon, 15 March 21

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!