Travel Plan : ಮಳೆಗಾಲದ ಪ್ರವಾಸಕ್ಕೆ ಈ ಸ್ಥಳಗಳು ನಿಮಗಾಗಿ ಕಾಯುತ್ತಿವೆ

| Updated By: ಶ್ರೀದೇವಿ ಕಳಸದ

Updated on: Jun 14, 2022 | 7:18 PM

Resorts : ಹಿತವಾದ ಸಂಗೀತ, ರುಚಿಯಾದ ತಿಂಡಿತಿನಿಸು, ನೀವಿರುವ ರೂಮ್​ಗಳನ್ನು ಸುತ್ತುವರಿದ ಹಲಸು, ಮಾವು, ತೆಂಗಿನ ಮರಗಳು, ವಿಳ್ಯದೆಲೆಯ ಬಳ್ಳಿಗಳು. ಹೊರಗೆ ಮಳೆ... ಎಂಥ ಆಹ್ಲಾದಕರ ವಾತಾವರಣ!

Travel Plan : ಮಳೆಗಾಲದ ಪ್ರವಾಸಕ್ಕೆ ಈ ಸ್ಥಳಗಳು ನಿಮಗಾಗಿ ಕಾಯುತ್ತಿವೆ
Follow us on

Travel Plan for Rainy Season : ಕಣ್ಣುಗಳಿಗೆ ಪಟ್ಟಿ ಕಟ್ಟಿಕೊಂಡು ಓಡುವ ಕುದುರೆಯಂತೆ ನಾವು ನಿತ್ಯವೂ ಓಡುತ್ತಲೇ ಇದ್ಧೇವೆ. ಸಿಗುವ ಒಂದು ಭಾನುವಾರವೂ ಸಾಲದೆ, ಮತ್ತೆ ಸೋಮವಾರ ಬಂತೇ ಎಂಬ ಬೇಸರದಲ್ಲೇ ಆಫೀಸುಗಳಿಗೆ ತೆರಳುತ್ತಿದ್ದೇವೆ. ಮಕ್ಕಳಿಗೆ ಶಾಲೆ ಶುರುವಾಗಿ ಯಂತ್ರದಂತೆ ಅವೂ ಓಡುತ್ತಿವೆ. ಇದೆಲ್ಲದಕ್ಕೆ ಮುಕುಟವಿಟ್ಟಂತೆ ಸೂರ್ಯ ನಿಗಿನಿಗಿಯಾಗುತ್ತಲೇ ಇದ್ಧಾನೆ. ಇನ್ನು ಸಾಧ್ಯವೇ ಇಲ್ಲ ಎಂದಾಗ ಆಗಾಗ ಚೂರು ಮಳೆಸೆಳಕು ಬೀಳಿಸಿ ಸಮಾಧನ ಹೇಳುತ್ತಿದೆ ಆಕಾಶ. ಕಾಲ ಹೀಗೇ ನಿಂತೀತೆ? ಬಂದೇ ಬರುತ್ತದೆ ಮಳೆಗಾಲ ಚಳಿಗಾಲ ಮತ್ತೆ ಬೇಸಿಗೆಕಾಲ. ಈಗಿನಿಂದಲೇ ನೀವು ಮಳೆಗಾಲದ ಪ್ರವಾಸಕ್ಕೆ ತಯಾರಿ ಮಾಡಿಕೊಳ್ಳಿ. ಅಂಡಮಾನ್​ ನಿಕೋಬಾರ್, ಗೋವಾ, ಊಟಿ, ಮಹಾಬಲೇಶ್ವರ, ಲೋನಾವಳ, ಮನಾಲಿ ರೆಸಾರ್ಟ್​​​ಗಳು ನಿಮ್ಮ ಬರುವಿಕೆಗಾಗಿ ಸಿದ್ಧಗೊಂಡಿವೆ. ಹಿತವಾದ ಸಂಗೀತ, ರುಚಿಯಾದ ತಿಂಡಿತಿನಿಸು, ನೀವಿರುವ ರೂಮ್​ಗಳನ್ನು ಸುತ್ತುವರಿದ ಹಲಸು, ಮಾವು, ತೆಂಗಿನ ಮರಗಳು, ವಿಳ್ಯದೆಲೆಯ ಬಳ್ಳಿಗಳು. ಹೊರಗೆ ಮಳೆ… ಎಂಥ ಆಹ್ಲಾದಕರ ವಾತಾವರಣ! ಈಗಲೇ ಯೋಜಿಸಿ. ಮುಂಜೋಹ್ ಐಲ್ಯಾಂಡ್ ಹೌಸ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳೂ ನಿಮಗಾಗಿ ಕಾಯುತ್ತಿವೆ.

ಸ್ಟರ್ಲಿಂಗ್, ಊಟಿ
ಅದೆಷ್ಟು ಸಲ ಹೋದರೂ ಊಟಿಯ ರಮ್ಯತಾಣದ ಸೊಬಗನ್ನು ಅನುಭವಿಸುವುದು ಮುಗಿಯುವುದೇ ಇಲ್ಲ.  ಊಟಿಯ ಪರ್ವತಗಳುದ್ದಕ್ಕೂ ಹಸಿರು ಚಾದರದಂತೆ ಹಾಸಿರುವ ಸಸ್ಯರಾಶಿ, ಆಳ ಕಣಿವೆಯಲ್ಲಿ ಆಕಾಶ ನೋಡುತ್ತ ನಿಂತ ಪೈನ್​ ಕಾಡುಗಳು, ನವಿರಾದ ಹಸಿರು ಶಾಲನ್ನು ಹೊದಿಸಿದಂತೆ ಕಾಣುವ  ಟೀ ಎಸ್ಟೇಟ್​ಗಳು ಮತ್ತೆ ಮತ್ತೆ ನಿಮ್ಮನ್ನು ಕರೆಯುತ್ತಲೇ ಇರುತ್ತವೆ. ಬೆಳಗಿನ ಮಂಜು ನಿಮ್ಮನ್ನು ಕನಸಿನಲೋಕಕ್ಕೆ ಕರೆದೊಯ್ಯಲು ನಿಮಗಾಗಿಯೇ  ಕಾಯುತ್ತಿರುವಂತೆ ತೋರುತ್ತಿರುತ್ತವೆ.

ಇದನ್ನೂ ಓದಿ : Color Psychology : ಬಣ್ಣಗಳ ಮೂಲಕ ನಿಮ್ಮ ವ್ಯಕ್ತಿತ್ವ ತಿಳಿಯಿರಿ

ಇದನ್ನೂ ಓದಿ
Literature: ನೆರೆನಾಡ ನುಡಿಯೊಳಗಾಡಿ; ‘ಈಗಲೇ ರಿಕಾರ್ಡ್ ಹಚ್ಚಬಾರದು, ಇನ್ನೂ ಅಪ್ಪನ ಖತಮು ಮುಗಿದಿಲ್ಲ’
Literature : ನೆರೆನಾಡ ನುಡಿಯೊಳಗಾಡಿ; ಬಿಎಂ ಶರ್ಮಾ ಅನುವಾದಿಸಿದ ರಾಹುಲ ಸಾಂಕೃತ್ಯಾಯನ ಕಥೆ ‘ನಿಶಾ‘
Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’

ಅಲ್ಲಲ್ಲಿ ಹರಿಯುವ ತೊರೆಗಳು, ಅಪರೂಪಕ್ಕೆ ಕಾಣುವ ಕಾಡುಪ್ರಾಣಿಗಳು, ಸುಗಂಧಿತ ಸಸ್ಯಗಳು ಇನ್ನೂ ಏನೆಲ್ಲ ಇದೆ ಇಲ್ಲಿ. ಇನ್ನು ಈ ರೆಸಾರ್ಟ್​ನಲ್ಲಿ ಪೇಂಟ್‌ಬಾಲ್, ಲೈಬ್ರರಿ ಮತ್ತು ಮನಸೋಲ್ಲಾಸ ನೀಡುವ ಅನೇಕ ಚಟುವಟಿಕೆಗಳ ನಡುವೆಯೂ ಆರಾಮದಾಯಕವಾಗಿ ನೀವು ಕಳೆದುಹೋಗಬಹುದು.

ಸ್ಟೇವಿಸ್ಟಾ, ಲೋನಾವಾಲಾ
ಇಲ್ಲಿ ನೀವು ಕುಟುಂಬದೊಂದಿಗೆ ಸ್ನೇಹಿತರೊಂದಿಗೆ ಅಥವಾ ಸಹೋದ್ಯೋಗಿಗಳೊಂದಿಗೆ ವಿಹಾರಕ್ಕಾಗಿ ಗುಂಪಿನಲ್ಲಿಯೂ ಬರಬಹುದು. ವಿವಿಧ ಕಾರ್ಯಕ್ರಮ, ಪಾರ್ಟಿಗಳನ್ನು ಹಮ್ಮಿಕೊಳ್ಳಬಹುದು. ಅದಕ್ಕಾಗಿ ಪೂರಕವಾಗುವಂತೆ ಸುಸಜ್ಜಿತವಾದ ಕೊಠಡಿ, ಹಾಲ್​, ಊಟೋಪಚಾರ, ವಸತಿ ವ್ಯವಸ್ಥೆ, ಆಹ್ಲಾದಕರ ಹವಾಮಾನ ಇಲ್ಲಿರುತ್ತದೆ. ಸುತ್ತಮುತ್ತಲೂ ಇರುವ ಪ್ರವಾಸಿ ತಾಣಗಳಿಗೂ ಭೇಟಿಕೊಡಬಹುದು. ಖಂಡೇಲಾ, ಸಿಂಹಗಡ, ಮಹಾಬಲೇಶ್ವರಗಳಿಗೂ ಭೇಟಿ ನೀಡಬಹುದು.