ಭಾರತೀಯ ವೃತ್ತಿಪರರಿಗೆ ಕಂಟಕವಾದ ಟ್ರಂಪ್ ಆದೇಶ

| Updated By: ಆಯೇಷಾ ಬಾನು

Updated on: Nov 23, 2020 | 11:50 AM

ಅಮೇರಿಕಾದ ಉದ್ಯಮಗಳು ತಮ್ಮ ಸಂಸ್ಥೆಗಳಲ್ಲಿ ವಿದೇಶಿ ನಾಗರಿಕರಿಗೆ ಅದರಲ್ಲೂ ವಿಶೇಷವಾಗಿ ಹೆಚ್-1ಬಿ ವೀಸಾ ಹೊಂದಿರುವವರಿಗೆ ಗುತ್ತಿಗೆ ಆಧಾರದಲ್ಲಿ ನೌಕರಿ ನೀಡಬಾರದೆಂಬ ಕಾರ್ಯನಿರ್ವಾಹಕ ಆದೇಶವೊಂದಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರದಂದು ಸಹಿ ಹಾಕುವ ಮೂಲಕ ಅಲ್ಲಿಗೆ ಹೋಗಿ ಕೆಲಸ ಗಿಟ್ಟಿಸುವ ಮಹದಾಸೆ ಹೊಂದಿದ್ದ ಸಾವಿರಾರು ಭಾರತೀಯ ಐಟಿ ವೃತ್ತಿಪರರ ಕನಸಿಗೆ ತಣ್ಣೀರೆರಚಿದ್ದಾರೆ. ಭಾರತೀಯರಿಗೆ ಚೆನ್ನಾಗಿ ನೆನಪಿದೆ. ಕಳೆದ ಜೂನ್ 23ರಂದು, ಟ್ರಂಪ್ ಸರಕಾರವು ಹೆಚ್-1ಬಿ ವೀಸಾ ಮತ್ತು ಅಮೇರಿಕಾದಲ್ಲಿ ಉದ್ಯೋಗವರಸಿ ಪಡೆಯುವ ವೀಸಾಗಳನ್ನು ಪ್ರಸಕ್ತ ವರ್ಷ ಕೊನೆಗೊಳ್ಳವವರೆಗೆ ರದ್ದು […]

ಭಾರತೀಯ ವೃತ್ತಿಪರರಿಗೆ ಕಂಟಕವಾದ ಟ್ರಂಪ್ ಆದೇಶ
Follow us on

ಅಮೇರಿಕಾದ ಉದ್ಯಮಗಳು ತಮ್ಮ ಸಂಸ್ಥೆಗಳಲ್ಲಿ ವಿದೇಶಿ ನಾಗರಿಕರಿಗೆ ಅದರಲ್ಲೂ ವಿಶೇಷವಾಗಿ ಹೆಚ್-1ಬಿ ವೀಸಾ ಹೊಂದಿರುವವರಿಗೆ ಗುತ್ತಿಗೆ ಆಧಾರದಲ್ಲಿ ನೌಕರಿ ನೀಡಬಾರದೆಂಬ ಕಾರ್ಯನಿರ್ವಾಹಕ ಆದೇಶವೊಂದಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರದಂದು ಸಹಿ ಹಾಕುವ ಮೂಲಕ ಅಲ್ಲಿಗೆ ಹೋಗಿ ಕೆಲಸ ಗಿಟ್ಟಿಸುವ ಮಹದಾಸೆ ಹೊಂದಿದ್ದ ಸಾವಿರಾರು ಭಾರತೀಯ ಐಟಿ ವೃತ್ತಿಪರರ ಕನಸಿಗೆ ತಣ್ಣೀರೆರಚಿದ್ದಾರೆ.

ಭಾರತೀಯರಿಗೆ ಚೆನ್ನಾಗಿ ನೆನಪಿದೆ. ಕಳೆದ ಜೂನ್ 23ರಂದು, ಟ್ರಂಪ್ ಸರಕಾರವು ಹೆಚ್-1ಬಿ ವೀಸಾ ಮತ್ತು ಅಮೇರಿಕಾದಲ್ಲಿ ಉದ್ಯೋಗವರಸಿ ಪಡೆಯುವ ವೀಸಾಗಳನ್ನು ಪ್ರಸಕ್ತ ವರ್ಷ ಕೊನೆಗೊಳ್ಳವವರೆಗೆ ರದ್ದು ಮಾಡುವ ನಿರ್ಧಾರ ತೆಗೆದುಕೊಂಡಿತ್ತು. ಅಮೇರಿಕನ್ ಮೂಲದ ಉದ್ಯೋಗಿಗಳಿಗೆ ನೆರವಾಗುವ ದೃಷ್ಟಿಯಿಂದ ಈ ನಿರ್ಣಯ ತೆಗೆದುಕೊಳ್ಳಲಾಗಿದೆಯೆಂದು ಟ್ರಂಪ್ ಆಡಳಿತ ಹೇಳಿಕೆ ನೀಡಿತಾದರೂ ಟ್ರಂಪ್ ಅವರ ದೃಷ್ಟಿ, ವರ್ಷಾಂತ್ಯದಲ್ಲಿ ನಡೆಯಲಿರುವ ಆಧ್ಯಕ್ಷೀಯ ಚುನಾವಣೆ ಮೇಲಿರುವುದು ಸ್ಪಷ್ಟವಾಗಿತ್ತು.

ವಲಸೆರಹಿತ ಹೆಚ್-1ಬಿ ವೀಸಾಗಳನ್ನು ಅಮೇರಿಕದ ಕಂಪನಿಗಳು ವಿದೇಶದ ನಾಗರಿಕರನ್ನು ಪರಿಣಿತ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲು ಪರಿಗಣಿಸುವುದರಿಂದ ಭಾರತೀಯರು ಅದನ್ನು ಪಡೆಯಲು ಉತ್ಸುಕರಾಗಿರುತ್ತಾರೆ. ಅಲ್ಲಿನ ತಾಂತ್ರಿಕ ಮತ್ತು ಐಟಿ ಸಂಸ್ಥೆಗಳು ಭಾರತ ಮತ್ತು ಚೀನಾದಂಥ ರಾಷ್ರಗಳಿಂದ ಸಾವಿರಾರು ಪರಿಣಿತರನ್ನು ನೇಮಕಮಾಡಿಕೊಳ್ಳಲು ಈ ವೀಸಾಗಳನ್ನೇ ಅವಲಂಬಿಸಿರುತ್ತಾರೆ.

ಆದೇಶದ ಮೇಲೆ ಸಹಿ ಮಾಡುವ ಮೊದಲು ಟ್ರಂಪ್, “ನಾನೀಗ ಸಹಿ ಮಾಡಲು ಹೊರಟಿರುವ ಆದೇಶವು ನಮ್ಮ ಸರಕಾರ ಒಂದು ಸರಳ ನೀತಿಯನ್ನು ಅನುಸರಿಸಲು ಸಹಾಯವಾಗುತ್ತದೆ. ಆ ಸರಳ ನಿಯಮವೆಂದರೆ, ಕೇವಲ ಅಮೇರಿಕನ್ನರಿಗೆ ಉದ್ಯೋಗಾವಕಾಶ ಕಲ್ಪಿಸುವುದು,”ಎಂದಿದ್ದರು.

ಟ್ರಂಪ್ ನಿರ್ಧಾರ ಭಾರತದ ಅನೇಕ ಯುವ ಐಟಿ ವೃತ್ತಿಪರರಿಗೆ ಕಂಟಕವಾಗಿದೆಯನ್ನುವುದು ಮಾತ್ರ ಸದ್ಯದ ಸತ್ಯ.

Published On - 5:14 pm, Tue, 4 August 20