ಸ್ವಲ್ಪ ಯಾಮಾರಿದ್ರೆ ಹೊಟ್ಟೆಗೆ ಬೀಳುತ್ತೆ ಮಾರಣಾಂತಿಕ ವಿಷ!

|

Updated on: Oct 18, 2019 | 1:38 PM

ಆಹಾರದ ಪ್ರಾಮುಖ್ಯತೆ ಅರಿತ ಜಾಗತಿಕ ಆಹಾರ ಸಂಸ್ಥೆಗಳು ಪ್ರತಿ ವರ್ಷ ಅಕ್ಟೋಬರ್ 16ರಂದು ವಿಶ್ವ ಆಹಾರ ದಿನವನ್ನಾಗಿ ಆಚರಿಸುತ್ತಿದೆ. ಪ್ರತಿ ವರ್ಷವೂ ಒಂದು ವಿಷಯವನ್ನಾಧರಿಸಿ ಆಚರಿಸಲಾಗುವ ಆಹಾರ ದಿನವನ್ನು ಈ ವರ್ಷ ‘ನಮ್ಮ ಕ್ರಿಯೆ ನಮ್ಮ ಭವಿಷ್ಯ. ಜಾಗತಿಕ ಹಸಿವು ನಿರ್ಮೂಲನೆಗೆ ಆರೋಗ್ಯಕರ ಆಹಾರ ಪದ್ಧತಿ’ ಎಂಬ ವಿಷಯದಡಿ ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ವಿಶ್ವ ಆಹಾರ ದಿನದ ಹಿನ್ನೆಲೆ ಆಹಾರ ವಿಷವಾಗಲು ಕಾರಣಗಳೇನು, ಅದಕ್ಕೆ ಚಿಕಿತ್ಸೆ ಹಾಗೂ ಪರಹಾರವೇನು? ಆಹಾರಕ್ಕೆ ಸಂಬಂಧಿಸಿದ ಕೆಲವೊಂದು ಅನಾರೋಗ್ಯವನ್ನು ಆಹಾರ ವಿಷವಾಗುವುದು ಎಂದು […]

ಸ್ವಲ್ಪ ಯಾಮಾರಿದ್ರೆ ಹೊಟ್ಟೆಗೆ ಬೀಳುತ್ತೆ ಮಾರಣಾಂತಿಕ ವಿಷ!
Follow us on

ಆಹಾರದ ಪ್ರಾಮುಖ್ಯತೆ ಅರಿತ ಜಾಗತಿಕ ಆಹಾರ ಸಂಸ್ಥೆಗಳು ಪ್ರತಿ ವರ್ಷ ಅಕ್ಟೋಬರ್ 16ರಂದು ವಿಶ್ವ ಆಹಾರ ದಿನವನ್ನಾಗಿ ಆಚರಿಸುತ್ತಿದೆ. ಪ್ರತಿ ವರ್ಷವೂ ಒಂದು ವಿಷಯವನ್ನಾಧರಿಸಿ ಆಚರಿಸಲಾಗುವ ಆಹಾರ ದಿನವನ್ನು ಈ ವರ್ಷ ‘ನಮ್ಮ ಕ್ರಿಯೆ ನಮ್ಮ ಭವಿಷ್ಯ. ಜಾಗತಿಕ ಹಸಿವು ನಿರ್ಮೂಲನೆಗೆ ಆರೋಗ್ಯಕರ ಆಹಾರ ಪದ್ಧತಿ’ ಎಂಬ ವಿಷಯದಡಿ ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ವಿಶ್ವ ಆಹಾರ ದಿನದ ಹಿನ್ನೆಲೆ ಆಹಾರ ವಿಷವಾಗಲು ಕಾರಣಗಳೇನು, ಅದಕ್ಕೆ ಚಿಕಿತ್ಸೆ ಹಾಗೂ ಪರಹಾರವೇನು?

ಆಹಾರಕ್ಕೆ ಸಂಬಂಧಿಸಿದ ಕೆಲವೊಂದು ಅನಾರೋಗ್ಯವನ್ನು ಆಹಾರ ವಿಷವಾಗುವುದು ಎಂದು ಕರೆಯಲಾಗುತ್ತದೆ. ಕಲುಷಿತ ಆಹಾರ, ಕೆಟ್ಟ ಆಹಾರ ಅಥವಾ ವಿಷವಾಗಿರುವಂತಹ ಆಹಾರ ಸೇವನೆಯೇ ಆಹಾರ ವಿಷವಾಗಲು ಕಾರಣವಾಗಿದೆ. ಆಹಾರ ವಿಷವಾಗುವ ಪ್ರಮುಖ ಲಕ್ಷಣಗಳೆಂದರೆ ವಾಕರಿಕೆ, ವಾಂತಿ ಮತ್ತು ಅತಿಸಾರ. ಆಹಾರ ವಿಷವಾಗುವುದು ಅಸಾಮಾನ್ಯವಲ್ಲದ ಕಾರಣದಿಂದಾಗಿ ಇದು ತುಂಬಾ ಅಹಿತರ ಭಾವನೆ ಉಂಟು ಮಾಡುವುದು. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆಂಟೇಷನ್(ಸಿಡಿಸಿ) ಹೇಳುವ ಪ್ರಕಾರ ಅಮೆರಿಕಾದಲ್ಲಿ 6 ಮಂದಿಯಲ್ಲಿ ಒಬ್ಬರು ಪ್ರತೀ ವರ್ಷ ಆಹಾರ ವಿಷವಾಗುವ ಸಮಸ್ಯೆಗೆ ಒಳಗಾಗುವರು.

ಆಹಾರ ವಿಷವಾಗಿದೆ ಎಂದು ನಿಮ್ಮ ದೇಹದಲ್ಲಿ ಲಕ್ಷಣ ತೋರಿಸಲು ಒಂದು ಗಂಟೆಯಿಂದ 28 ದಿನಗಳು ಬೇಕಾಗಬಹುದು. ಹೊಟ್ಟೆಯಲ್ಲಿ ಸೆಳೆತ, ಅತಿಸಾರ, ವಾಂತಿ, ಹಸಿವಾಗದೆ ಇರುವುದು, ಜ್ವರ, ವಾಕರಿಕೆ, ತಲೆನೋವು ಆಹಾರ ವಿಷವಾಗುವುದರಿಂದ ಕಾಣಿಸಿಕೊಳ್ಳುವ ಇಂಥ ಕೆಲವೊಂದು ಲಕ್ಷಣಗಳು ಪ್ರಾಣಹಾನಿಗೆ ಕಾರಣವಾಗಬಹುದು. ಅದಕ್ಕೆ ಎಚ್ಚರವಾಗಿರಬೇಕು. ಮೂರು ದಿನಗಳಿಗೂ ಹೆಚ್ಚು ಸಮಯ ಅತಿಸಾರ ಇದ್ದರೆ, 101.5ಎಫ್ ಗಿಂತಲೂ ತೀವ್ರವಾದ ಜ್ವರವಿದ್ದರೆ ಇದು ಅಪಾಯಕಾರಿ. ವಿಷಾಹಾರವಾದಾಗ ನೋಡಲು ಮತ್ತು ಮಾತನಾಡಲು ಕಷ್ಟವಾಗುವುದು ಮತ್ತು ತೀವ್ರ ನಿರ್ಜಲೀಕರಣವಾಗುವ ಲಕ್ಷಣಗಳು ಕಾಣಿಸಬಹುದು. ಇದರಲ್ಲಿ ಮುಖ್ಯವಾಗಿ ಬಾಯಿ ಒಣಗುವುದು, ಮೂತ್ರ ಬರದೆ ಇರುವುದು. ಮೂತ್ರದಲ್ಲಿ ರಕ್ತದ ಅಂಶವಿರುವುದು ಈ ಎಲ್ಲಾ ಲಕ್ಷಣಗಳು ಕಾಣಿಸಿಕೊಂಡರೆ ಆಗ ನೀವು ತಕ್ಷಣವೇ ವೈದ್ಯರ ಬಳಿಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ.

ವೈರಸ್ ನಿಂದಾಗಿಯೂ ಆಹಾರವು ವಿಷವಾಗಬಹುದು. ನೊರೊವೈರಸ್ ಅಥವಾ ನೊರವಾಕ್ ವೈರಸ್ ಪ್ರತೀ ವರ್ಷ ಸುಮಾರು 19 ಮಿಲಿಯನ್ ಪ್ರಕರಣಗಳಲ್ಲಿ ಆಹಾರವನ್ನು ವಿಷವಾಗಿಸುವುದು ಎಂದು ಮೂಲಗಳು ಹೇಳಿವೆ. ಅಪರೂಪದ ಸಂದರ್ಭದಲ್ಲಿ ಇದು ಪ್ರಾಣಹಾನಿಗೆ ಕಾರಣವಾಗಬಹುದು. ಸಪೋವೈರಸ್, ರೋಟವೈರಸ್ ಮತ್ತು ಆಸ್ಟ್ರೋವೈರಸ್ ಒಂದೇ ರೀತಿಯ ಲಕ್ಷಣಗಳನ್ನು ತೋರಿಸಬಹುದು. ಆದರೆ ಇದು ಸಾಮಾನ್ಯವಾಗಿ ಇರುವುದಿಲ್ಲ. ಹೆಪಟಿಟಿಸ್ ಎ ವೈರಸ್ ಆಹಾರದ ಮೂಲಕವೇ ದೇಹದೊಳಗೆ ಪ್ರವೇಶಿಸಿ, ಗಂಭೀರ ಪರಿಣಾಮ ಬೀರುವುದು.

ಇದನ್ನೂ ಓದಿ: ತಿನ್ನೋ ಆಹಾರ ವಿಷವಾಯಿತೇ? ತಕ್ಷಣ ಹೀಗೆ ಮಾಡಿ

ಮನುಷ್ಯ ತಿನ್ನುವಂತಹ ಹೆಚ್ಚಿನ ಆಹಾರಗಳಲ್ಲಿ ರೋಗಕಾರಕಗಳು ಕಂಡುಬರುವುದು. ಅದಾಗ್ಯೂ, ಆಹಾರವು ಬಿಸಿಯಾಗುವ ಕಾರಣದಿಂದಾಗಿ ಅದು ದೇಹ ಸೇರುವ ಮೊದಲು ರೋಗಕಾರಕಗಳು ನಾಶವಾಗುವುದು. ಹಸಿಯಾಗಿರುವಂತಹ ಯಾವುದೇ ಆಹಾರವು, ನಮ್ಮ ದೇಹದಲ್ಲಿ ಆಹಾರ ವಿಷವಾಗಿಸುವುದು. ಯಾಕೆಂದರೆ ಇದು ಬಿಸಿಯಾಗದೆ ಇರುವ ಪರಿಣಾಮ ರೋಗಕಾರಗಳು ಹಾಗೆ ಉಳಿಯುವುದು. ಕೆಲವೊಂದು ಸಲ ಸೂಕ್ಷ್ಮಾಣು ಜೀವಿಗಳು ಆಹಾರವನ್ನು ಸೇರಿಕೊಳ್ಳುವುದು. ಇದಕ್ಕೆ ಮುಖ್ಯ ಕಾರಣವೆಂದರೆ ಆಹಾರ ತಯಾರಿಸುವ ಮೊದಲು ಸರಿಯಾಗಿ ಕೈಗಳನ್ನು ತೊಳೆಯದೆ ಇರುವುದು. ಮಾಂಸ, ಮೊಟ್ಟೆ ಮತ್ತು ಹಾಲಿನ ಉತ್ಪನ್ನಗಳು ಬೇಗನೆ ಕಲುಷಿತವಾಗುವುದು. ನೀರು ಕೂಡ ಕೆಲವೊಂದು ಕಾಯಿಲೆಗಳಿಗೆ ಕಾರಣವಾಗುವಂತಹ ರೋಗಕಾರಕಗಳಿಂದ ಕಲುಷಿತವಾಗಬಹುದು.

 

Published On - 11:53 am, Fri, 18 October 19