AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಟ್ರೆಚ್ ಮಾರ್ಕ್‌ ನಿವಾರಣೆಗೆ ಸರಳ ಉಪಾಯ!

ಸ್ಟ್ರೆಚ್ ಮಾರ್ಕ್‌ ಎಂಬುದು ಮಹಿಳೆಯರಿಗೆ ಬಹುವಾಗಿ ಕಾಡುವ ಸಮಸ್ಯೆ. ಆಗಾಗ್ಗೆ ಚರ್ಮದ ಮೇಲೆ ಮೂಡುವ ಸ್ಟ್ರೆಚ್ ಮಾರ್ಕ್‌ಗಳನ್ನು ಕಂಡು ತುಂಬಾ ಜನ ಬೇಸರ ವ್ಯಕ್ತಪಡಿಸುತ್ತಾರೆ. ಈ ಕಾರಣದಿಂದಾಗಿ, ಮಹಿಳೆಯರು ತಮ್ಮ ನೆಚ್ಚಿನ ಬಟ್ಟೆಗಳನ್ನು ಧರಿಸುವುದನ್ನು ಸಹ ತುಂಬಾನೇ ಯೋಚಿಸ್ತಾರೆ. ಏಕೆಂದರೆ ಸುಂದರವಾದ ಬಟ್ಟೆ ನಡುವೆ ಸ್ಟ್ರೆಚ್ ಮಾರ್ಕ್ಸ್ ಚೆನ್ನಾಗಿ ಕಾಣುವುದಿಲ್ಲ ಎಂದು ಕೆಲವರು ಭಾವಿಸುತಾರೆ. ಅಂತಹ ಪರಿಸ್ಥಿತಿಯಲ್ಲಿ, ಮಹಿಳೆಯರು ಈ ಸ್ಟ್ರೆಚ್ ಮಾರ್ಕ್ಸ್ ಗಳನ್ನು ತೊಡೆದುಹಾಕಲು ವಿವಿಧ ರೀತಿಯ ಉತ್ಪನ್ನಗಳನ್ನು ಬಳಸುತ್ತಲೇ ಇರುತ್ತಾರೆ. ಹಲವು ಬಗೆಯ ಕ್ರೀಂ […]

ಸ್ಟ್ರೆಚ್ ಮಾರ್ಕ್‌ ನಿವಾರಣೆಗೆ ಸರಳ ಉಪಾಯ!
ಸಾಧು ಶ್ರೀನಾಥ್​
|

Updated on:Oct 18, 2019 | 6:35 PM

Share

ಸ್ಟ್ರೆಚ್ ಮಾರ್ಕ್‌ ಎಂಬುದು ಮಹಿಳೆಯರಿಗೆ ಬಹುವಾಗಿ ಕಾಡುವ ಸಮಸ್ಯೆ. ಆಗಾಗ್ಗೆ ಚರ್ಮದ ಮೇಲೆ ಮೂಡುವ ಸ್ಟ್ರೆಚ್ ಮಾರ್ಕ್‌ಗಳನ್ನು ಕಂಡು ತುಂಬಾ ಜನ ಬೇಸರ ವ್ಯಕ್ತಪಡಿಸುತ್ತಾರೆ. ಈ ಕಾರಣದಿಂದಾಗಿ, ಮಹಿಳೆಯರು ತಮ್ಮ ನೆಚ್ಚಿನ ಬಟ್ಟೆಗಳನ್ನು ಧರಿಸುವುದನ್ನು ಸಹ ತುಂಬಾನೇ ಯೋಚಿಸ್ತಾರೆ. ಏಕೆಂದರೆ ಸುಂದರವಾದ ಬಟ್ಟೆ ನಡುವೆ ಸ್ಟ್ರೆಚ್ ಮಾರ್ಕ್ಸ್ ಚೆನ್ನಾಗಿ ಕಾಣುವುದಿಲ್ಲ ಎಂದು ಕೆಲವರು ಭಾವಿಸುತಾರೆ. ಅಂತಹ ಪರಿಸ್ಥಿತಿಯಲ್ಲಿ, ಮಹಿಳೆಯರು ಈ ಸ್ಟ್ರೆಚ್ ಮಾರ್ಕ್ಸ್ ಗಳನ್ನು ತೊಡೆದುಹಾಕಲು ವಿವಿಧ ರೀತಿಯ ಉತ್ಪನ್ನಗಳನ್ನು ಬಳಸುತ್ತಲೇ ಇರುತ್ತಾರೆ. ಹಲವು ಬಗೆಯ ಕ್ರೀಂ ಬಳಸಿದರೂ ಈ ಸ್ಟ್ರೆಚ್ ಮಾರ್ಕ್ಸ್ ಕಡಿಮೆಯೇ ಆಗಿಲ್ಲ ಎಂಬುದು ಹಲವರ ದೂರು.

ನೀವು ಸ್ಟ್ರೆಚ್ ಮಾರ್ಕ್ಸ್ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಡೋಂಟ್ ವರಿ. ದುಬಾರಿ ಕ್ರೀಮ್‌ಗಳನ್ನು ಬಿಟ್ಟುಬಿಡಿ, ಏಕೆಂದರೆ ಸ್ಟ್ರೆಚ್ ಮಾರ್ಕ್‌ಗಳನ್ನು ವಿಟಮಿನ್‌ಗಳ ಮೂಲಕವೂ ತೆಗೆದುಹಾಕಬಹುದು.

ವಿಟಮಿನ್ ಇ ಯ ಅನೇಕ ಪ್ರಯೋಜನಗಳ ಬಗ್ಗೆ ನೀವು ಕೇಳಿರಬಹುದು, ಆದರೆ ‘ವಿಟಮಿನ್ ಇ’ ಸಹಾಯದಿಂದ ಸ್ಟ್ರೆಚ್ ಮಾರ್ಕ್ಸ್ ಅನ್ನು ಸಹ ತೊಡೆದುಹಾಕಬಹುದು ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಹೌದು ‘ವಿಟಮಿನ್ ಇ’ ಹಾನಿಗೊಳಗಾಗಿರುವ ಚರ್ಮವನ್ನು ಸರಿಪಡಿಸುತ್ತದೆ ಎಂದು ಹೇಳಲಾಗುತ್ತದೆ. ಇದು ಸ್ಟ್ರೆಚ್ ಮಾರ್ಕ್ಸ್ ಅನ್ನು ತೆಗೆದುಹಾಕಲು ಸಹ ಸಹಾಯ ಮಾಡುತ್ತದೆ. ಲೋಷನ್‌ನಲ್ಲಿ ಬೆರೆಸಿ ನೀವು ಇದನ್ನು ಬಳಸಬಹುದು.

ವಿಟಮಿನ್ ‘ಸಿ’ ಚರ್ಮವನ್ನು ಆರೋಗ್ಯಕರವಾಗಿ ಇರಿಸುತ್ತದೆ. ಕಾಲಜನ್ ಉತ್ಪಾದನೆ ಸಹ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ. ನೀವು ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ‘ಸಿ’ ತೆಗೆದುಕೊಂಡರೆ, ಕೆಲವೇ ದಿನಗಳಲ್ಲಿ ಅದು ನಿಮ್ಮ ದೇಹದಲ್ಲಿರುವ ಸ್ಟ್ರೆಚ್ ಮಾರ್ಕ್ಸ್ ಅನ್ನು ತೆಗೆದುಹಾಕುತ್ತದೆ ಮತ್ತು ನಿಮಗೆ ಹೊಸ ಮತ್ತು ಹೊಳೆಯುವ ಚರ್ಮವನ್ನು ನೀಡುತ್ತದೆ. ಇದಕ್ಕಾಗಿ, ನೀವು ಕಿತ್ತಳೆ, ನಿಂಬೆ, ಆಮ್ಲಾ ಮುಂತಾದವುಗಳನ್ನು ಸೇವಿಸುವುದು ಉತ್ತಮ.

ವಿಟಮಿನ್ ‘ಎ’ ಚರ್ಮವನ್ನು ಒಣಗಿಸುವ ಮೂಲಕ ಅದನ್ನು ಹೊಸದಾಗಿ ಮಾಡುತ್ತದೆ ಮತ್ತು ಸ್ಟ್ರೆಚ್ ಮಾರ್ಕ್ಸ್ ಅನ್ನು ತೆಗೆದುಹಾಕುತ್ತದೆ. ಜೀವಸತ್ವಗಳಿಗಾಗಿ, ನಿಮ್ಮ ಆಹಾರದಲ್ಲಿ ನೀವು ಕ್ಯಾರೆಟ್, ಏಪ್ರಿಕಾಟ್, ಮೀನು ಮತ್ತು ಉಷ್ಣವಲಯದ ಆಹಾರವನ್ನು ತೆಗೆದುಕೊಳ್ಳಿ.

ವಿಟಮಿನ್ ‘ಕೆ’ ಸಹ ಚರ್ಮವನ್ನು ಸುಂದರವಾಗಿಸುವ ಮತ್ತು ಡಾರ್ಕ್ ಸರ್ಕಲ್ ಗಳನ್ನೂ ತೆಗೆದುಹಾಕುವ ಜೀವಸತ್ವಗಳಲ್ಲಿ ಒಂದಾಗಿದೆ. ವಿಟಮಿನ್ ‘ಕೆ’ ಪದಾರ್ಥಗಳ ಬಳಕೆ ಸ್ಟ್ರೆಚ್ ಮಾರ್ಕ್ಸ್ ಅನ್ನು ವೇಗವಾಗಿ ಕಡಿಮೆ ಮಾಡಲು ಸಹಾಯಕವಾಗಿವೆ.

ಹಾಗೆಯೇ ಇವೆಲ್ಲದರ ಜೊತೆಗೆ ಮಹಿಳೆಯರು ದಿನದಲ್ಲಿ ಸಾಕಷ್ಟು ಪ್ರಮಾಣದ ನೀರು ಕುಡಿಯಬೇಕು. ಇದು ನಿಮ್ಮ ಹೆಲ್ತಿ ಮತ್ತು ಹೈಡ್ರೇಟ್ ತ್ವಚೆಗೆ ಸಹಕಾರಿಯಾಗಿ , ಸ್ಟ್ರೆಚ್ ಮಾರ್ಕ್ ದೂರ ಮಾಡುತ್ತೆ.

Published On - 6:29 pm, Fri, 18 October 19

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ