ಯಾರಾದರು ಚೈನೀಸ್ ಖಾದ್ಯಗಳನ್ನು ತಯಾರಿಸುವವರ ಬಳಿಗೆ ಹೋಗಿ ಇದು ಯಾವ ಬಗೆಯ ಚೈನೀಸ್ ತಿಂಡಿ ಎಂದು ಕೇಳಿ, ಆಗ ಅವರು ಇದು ‘ಚೌಮೇನ್’ ಎನ್ನುತ್ತಾರೆ. ಇನ್ನುಳಿದಂತೆ ನಾವು ಸಾಮಾನ್ಯವಾಗಿ ಚೈನೀಸ್ ಪ್ಲಾಟ್ಟರ್‌ಗಳ ಬಗ್ಗೆ ಸ್ವಲ್ಪ ದೊಡ್ಡ ಗಂಟಲಿನಲ್ಲಿ ಮಾತನಾಡುತ್ತಿರುತ್ತೇವೆ. ಏಕೆಂದರೆ ನಮ್ಮ ಪ್ರಕಾರ ಚೈನೀಸ್ ತಿಂಡಿಗಳು ಎಂದರೆ ಆ ಪ್ಲಾಟ್ಟರ್ ಮತ್ತು ನೂಡಲ್ಸ್ ಎಂಬ ಭಾವನೆ. ಚೈನೀಸ್ ರೆಸ್ಟೋರೆಂಟ್‍ಗಳಲ್ಲಿ ಚಾಪ್ ಸ್ಟಿಕ್ ಹಿಡಿದುಕೊಳ್ಳುವ ಮೊದಲು ಅದರ ಕುರಿತಾದ ಸವಿವರವಾದ ಮಾಹಿತಿಯನ್ನು ಮೊದಲು ತಿಳಿದುಕೊಳ್ಳಿ.
ಸಿಗಡಿ ಚಿಪ್ಸ್ ತಿನ್ನುವ ಮುನ್ನ ಯೋಚಿಸಿ!:
ಗರಿ ಗರಿಯಾದ ನೂಡಲ್‍ಗಳಿಗಿಂತ ಸಿಗಡಿ ಚಿಪ್ಸ್‌ಗಳು ಆರೋಗ್ಯಕರ ಮತ್ತು ತಿನ್ನಲು ಮೃದು ಎಂದು ಭಾವಿಸುವಿರಾ? ನೆನಪಿರಲಿ, ಈ ಸಿಗಡಿ ಚಿಪ್ಸ್‌ಗಳು ಎಣ್ಣೆಯಲ್ಲಿ ಡೀಪ್ ಫ್ರೈ ಆಗಿರುತ್ತವೆ ಮತ್ತು ಸ್ಟಾರ್ಚ್ ಹೊಂದಿರುತ್ತವೆ. ಒಂದು ಹಿಡಿ ಸಿಗಡಿ ಚಿಪ್ಸ್‌ಗಳಲ್ಲಿ 200ಕ್ಕೂ ಅಧಿಕ ಕ್ಯಾಲೋರಿಗಳು ಮತ್ತು 14 ಗ್ರಾಂ ಕೊಬ್ಬು ಇರುತ್ತದೆ. ಒಂದು ವೇಳೆ ನೀವು ಸ್ನ್ಯಾಕ್ಸ್ ಸಮಯದಲ್ಲಿ ಶ್ರಿಂಪ್ ಚಿಪ್ಸ್ ತಿನ್ನಬೇಕಾದಲ್ಲಿ ಇದರ ಜೊತೆಗೆ ಒಂದೆರಡು ಕಪ್ ಗ್ರೀನ್ ಟೀ ಸೇವಿಸಿ.
ಕ್ಯಾಲೋರಿಯ ಮಿತಿಯನ್ನು ಹೊಂದಿರುವುದಿಲ್ಲ ಡಂಪ್ಲಿಂಗ್‍ಗಳು ಎಂದರೆ ಪಕೋಡಾದಂತಹ ಆಹಾರಗಳು. ಇವುಗಳಲ್ಲಿ ಎಣ್ಣೆಯಲ್ಲಿ ಕರಿದ ಆಹಾರಗಳಿಗೆ ಹೋಲಿಸಿದಲ್ಲಿ ಉಗಿಯಲ್ಲಿ ಬೇಯಿಸಿದ ಆಹಾರಗಳಲ್ಲಿ ಕ್ಯಾಲೋರಿಗಳು ಹೆಚ್ಚಾಗಿರುವುದಿಲ್ಲ. ಆದರೆ ಇದು ಡಂಪ್ಲಿಂಗ್ ಒಳಗೆ ಯಾವ ಪದಾರ್ಥಗಳನ್ನು ಬೇಯಿಸಲಾಗಿದೆ ಎಂಬುದನ್ನು ಅವಲಂಬಿಸಿವೆ. ಕೆಲವೊಂದು ಆಹಾರಗಳಲ್ಲಿ ಹಂದಿ ಮಾಂಸವನ್ನು ಇಡಲಾಗುತ್ತದೆ, ಇವು ಒಂದು ತುಂಡಿಗೆ 80 ಕ್ಯಾಲೋರಿ ಇರುತ್ತದೆ ಮತ್ತು ತರಕಾರಿಗಳು ಒಂದು ತುಂಡಿಗೆ 35 ಕ್ಯಾಲೋರಿಗಳನ್ನು ಹೊಂದಿರುತ್ತದೆ.
ಎಲ್ಲಾ ಬಗೆಯ ಟೊಫುಗಳು ನಿಮ್ಮ ತೂಕವನ್ನು ಇಳಿಸಿಕೊಳ್ಳುವಲ್ಲಿ ಸಹಾಯ ಮಾಡುವುದಿಲ್ಲ. ಕೆಲವೊಂದು ಟೊಫುಗಳಲ್ಲಿ ಕ್ಯಾಲೋರಿಗಳು ಅಧಿಕವಾಗಿರುತ್ತವೆ. ಏಕೆಂದರೆ ಇವುಗಳನ್ನು ಸ್ಟಿರ್ ಫ್ರೈಡ್ ಮಾಡುವ ಮೊದಲು ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿರುತ್ತಾರೆ. ಆದ್ದರಿಂದ ಇದನ್ನು ಸೇವಿಸುವ ಮೊದಲು ಹೇಗೆ ತಯಾರಿಸಿದಿರಿ ಎಂದು ಕೇಳಿ, ಜೊತೆಗೆ ಅದು ಸಾಫ್ಟ್ ಅಥವಾ ಪ್ಲೇನ್ ಟೊಫುನೆ ಎಂದು ಸಹ ಕೇಳಿ. ಆಮೇಲೆ ತಿನ್ನಬೇಕೆ, ಬೇಡವೇ ಎಂದು ಯೋಚಿಸಿ.
Published On - 3:42 pm, Wed, 2 October 19