ನವರಾತ್ರಿಯ 3ನೇ ದಿನ.. ಚಂದ್ರಘಂಟಾ ದೇವಿಯನ್ನ ಹೇಗೆ ಆರಾಧಿಸಬೇಕು?

ನವರಾತ್ರಿಯ 3ನೇ ದಿನ.. ಚಂದ್ರಘಂಟಾ ದೇವಿಯನ್ನ ಹೇಗೆ ಆರಾಧಿಸಬೇಕು?

ಇಂದು ನವರಾತ್ರಿಯ ಮೂರನೇ ದಿನ. ತೇಜಸ್ವಿ ಸ್ವರೂಪಿಯಾದ ಆದಿಶಕ್ತಿಯ ಆರಾಧನೆ ಎಲ್ಲೆಡೆ ನಡೆಯುತ್ತಿದೆ. ನವರಾತ್ರಿ ದಿನಗಳಲ್ಲಿ ದುರ್ಗೆಯನ್ನು ಆರಾಧಿಸುವುದರಿಂದ ವಿಶೇಷ ಶಕ್ತಿ ಪ್ರಾಪ್ತಿಯಾಗುತ್ತೆ ಅನ್ನೋ ನಂಬಿಕೆ ಇದೆ. ನವರಾತ್ರಿಯ ಮೂರನೇ ದಿನವಾದ ಇಂದು ನವದುರ್ಗೆಯರಲ್ಲಿ ಮೂರನೇ ಶಕ್ತಿಯಾದ ಚಂದ್ರಘಂಟಾ ದೇವಿಯನ್ನು ಆರಾಧಿಸಲಾಗುತ್ತೆ.

ಚಂದ್ರಘಂಟಾ ದೇವಿ ಸದಾ ಯುದ್ಧಕ್ಕೆ ಸನ್ನದ್ಧಳಾಗಿ ಹೊರಟಂತೆ ಕಾಣುತ್ತಾಳೆ. ದೇವಿಯ ಚಂದ್ರಘಂಟಾ ರೂಪದ ಮೂಲಕ ದುಷ್ಟರ ದಮನ, ಶಿಷ್ಟರ ರಕ್ಷಣೆಗೆ ಸದಾಕಾಲಸನ್ನದ್ಧಳಾಗಿರ್ತಾಳೆ. ಚಂದ್ರಘಂಟಾ ಮಾತೆ ಸಕಲ ಐಶ್ವರ್ಯ, ಅಧಿಕಾರವನ್ನು ಕರುಣಿಸುವ ದೇವತೆ. ನವರಾತ್ರಿಯ 3ನೇ ದಿನ ಇವಳನ್ನು ಪೂಜಿಸಿದ್ರೆ ಭಕ್ತರ ಕಷ್ಟಗಳು ಬಹು ಬೇಗ ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ. ಇನ್ನು ದೇವಿಯ ಚಂದ್ರಘಂಟಾ ಸ್ವರೂಪ ಆರಾಧನೆಗೆ ಒಂದು ಮಂತ್ರವಿದೆ. ಈ ದೇವಿಯ ಮಂತ್ರ ಜಪಿಸುವುದರಿಂದ ರಕ್ಷಣೆ, ಶಕ್ತಿ ಸಿಗುತ್ತೆ ಅನ್ನೋ ನಂಬಿಕೆ ಇದೆ. ಹೀಗಾಗೇ ಚಂದ್ರಘಂಟಾ ಪೂಜಾ ಮಂತ್ರ ಹೇಳಿ ಈ ದಿನ ದೇವಿಯ ಆರಾಧನೆ ಮಾಡಲಾಗುತ್ತೆ.

ಚಂದ್ರಘಂಟಾ ಪೂಜಾ ಮಂತ್ರ

ಪಿಂಡಜಪ್ರವರಾರೂಢಾ ಚಂಡಕೋಪಾಸ್ತ್ರಕೈರ್ಯುತಾ
ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ

ಚಂದ್ರಘಂಟಾ ಪೂಜಾ ಫಲ

* ಪಾಪ ಪರಿಹಾರ
* ಭಯ ದೂರ
* ದುಷ್ಟಶಕ್ತಿಗಳಿಂದ ರಕ್ಷಣೆ
* ಸಾಧಕರಿಗೆ ಆಧ್ಯಾತ್ಮಿಕ ಅನುಭವ
* ಸೌಮ್ಯತೆ ವಿನಮ್ರತೆ ಪ್ರಾಪ್ತಿ
* ಕೌಟುಂಬಿಕ ಜೀವನದಲ್ಲಿ ನೆಮ್ಮದಿ
* ಇಹಪರಲೋಕದಲ್ಲಿ ಸದ್ಗತಿ

ನವರಾತ್ರಿಯ ದುರ್ಗಾ ಉಪಾಸನೆಯಲ್ಲಿ 3ನೇ ದಿನದ ಪೂಜೆ ವಿಶೇಷವಾದುದು. ಈ ದಿನ ಸಾಧಕನ ಮನಸ್ಸು ಮಣಿಪೂರ ಚಕ್ರದಲ್ಲಿ ಪ್ರವೇಶಿಸುತ್ತೆ. ಚಂದ್ರಘಂಟೆಯ ಕೃಪೆಯಿಂದ ಸಾಧಕರಿಗೆ ವಿಶೇಷ ಅನುಭೂತಿಯಾಗುತ್ತೆ. ಹೀಗೇ ನವರಾತ್ರಿಯ ಮೂರನೇ ದಿನ ವಿಶೇಷ ಫಲ ಪ್ರಾಪ್ತಿಗಾಗಿ ಚಂದ್ರಘಂಟಾ ದೇವಿಯನ್ನು ಭಕ್ತರು ಶ್ರದ್ಧಾ ಭಕ್ತಿಯಿಂದ ಪೂಜಿಸ್ತಾರೆ.

Click on your DTH Provider to Add TV9 Kannada