ನವರಾತ್ರಿಯ ಐದನೇ ದಿನ ಸ್ಕಂದಮಾತಾ ಆರಾಧನೆ ಹೇಗೆ ಮಾಡಬೇಕು?
ನವರಾತ್ರಿಯ ಒಂಬತ್ತು ದಿನವೂ ದುರ್ಗೆಯ ಆರಾಧನೆಗೆ ಪ್ರಶಸ್ತ. ಈ ವೇಳೆ ನವದುರ್ಗೆಯರನ್ನು ಆರಾಧಿಸೋದು ವಿಶೇಷ. ನವರಾತ್ರಿಯ ಐದನೇ ದಿನ ಕರುಣೆ ತುಂಬಿದ ಸ್ಕಂದಮಾತಾ ದೇವಿಯ ಆರಾಧನೆಗೆ ಮೀಸಲು. ನವದುರ್ಗೆಯರಲ್ಲಿ ಸ್ಕಂದಮಾತೆಯದ್ದು ಐದನೇ ರೂಪ. ಪುರಾಣದ ಪ್ರಕಾರ, ದುರ್ಗೆಗೆ ಸ್ಕಂದಮಾತಾ ಎಂದು ಹೆಸರು ಬರಲು ಒಂದು ಕಾರಣವಿದೆ. ಅದೇನಂದ್ರೆ, ಪಾತಾಳಲೋಕದಲ್ಲಿರುವ ತಾರಕಾಸುರ ಎಂಬ ರಾಕ್ಷಸನನ್ನು ವಧೆ ಮಾಡಲು, ದೇವಿ ಸ್ಕಂದನಿಗೆ ಜನ್ಮ ಕೊಡ್ತಾಳೆ. ಆದ್ದರಿಂದ ಈಕೆಯನ್ನು ಸ್ಕಂದಮಾತಾ ಅಂತಾ ಕರೆಯಲಾಗುತ್ತೆ. ಸ್ಕಂದಮಾತೆಯ ರೂಪ ಅತ್ಯಂತ ವಿಶಿಷ್ಟ. ಈ ದೇವಿ […]
ನವರಾತ್ರಿಯ ಒಂಬತ್ತು ದಿನವೂ ದುರ್ಗೆಯ ಆರಾಧನೆಗೆ ಪ್ರಶಸ್ತ. ಈ ವೇಳೆ ನವದುರ್ಗೆಯರನ್ನು ಆರಾಧಿಸೋದು ವಿಶೇಷ. ನವರಾತ್ರಿಯ ಐದನೇ ದಿನ ಕರುಣೆ ತುಂಬಿದ ಸ್ಕಂದಮಾತಾ ದೇವಿಯ ಆರಾಧನೆಗೆ ಮೀಸಲು. ನವದುರ್ಗೆಯರಲ್ಲಿ ಸ್ಕಂದಮಾತೆಯದ್ದು ಐದನೇ ರೂಪ. ಪುರಾಣದ ಪ್ರಕಾರ, ದುರ್ಗೆಗೆ ಸ್ಕಂದಮಾತಾ ಎಂದು ಹೆಸರು ಬರಲು ಒಂದು ಕಾರಣವಿದೆ.
ಅದೇನಂದ್ರೆ, ಪಾತಾಳಲೋಕದಲ್ಲಿರುವ ತಾರಕಾಸುರ ಎಂಬ ರಾಕ್ಷಸನನ್ನು ವಧೆ ಮಾಡಲು, ದೇವಿ ಸ್ಕಂದನಿಗೆ ಜನ್ಮ ಕೊಡ್ತಾಳೆ. ಆದ್ದರಿಂದ ಈಕೆಯನ್ನು ಸ್ಕಂದಮಾತಾ ಅಂತಾ ಕರೆಯಲಾಗುತ್ತೆ. ಸ್ಕಂದಮಾತೆಯ ರೂಪ ಅತ್ಯಂತ ವಿಶಿಷ್ಟ. ಈ ದೇವಿ ಸಿಂಹದ ಮೇಲೆ ಕುಳಿತಿರುತ್ತಾಳೆ. ಶ್ವೇತವರ್ಣಳಾಗಿ ಸುಂದರವಾಗಿ ಕಾಣುತ್ತಾಳೆ.
ನಾಲ್ಕು ಭುಜಗಳನ್ನು ಹೊಂದಿದ್ದು, ಎರಡು ಕೈಗಳಲ್ಲಿ ಕಮಲಗಳನ್ನು ಹಿಡಿದಿರುತ್ತಾಳೆ. ಇನ್ನು ತಾಯಿಯ ಬಲ ತೊಡೆಯ ಮೇಲೆ ತಾನು ಜನ್ಮ ನೀಡಿದ ಸ್ಕಂದನನ್ನು ಕೂರಿಸಿಕೊಂಡಿರ್ತಾಳೆ. ಸ್ಕಂದಮಾತೆಯದ್ದು ಕರುಣೆ ತುಂಬಿದ ತಾಯಿಯ ರೂಪವಾಗಿದೆ. ಮಾತೃ ಹೃದಯಿ ಆಗಿರುವ ಸ್ಕಂದಮಾತೆಯನ್ನು ಆರಾಧಿಸಲು ವಿಶೇಷ ಮಂತ್ರವಿದೆ. ಈ ಮಂತ್ರವನ್ನು ಜಪಿಸಿದ್ರೆ ಶೀಘ್ರ ಫಲಗಳನ್ನು ಪಡೆಯಬಹುದು ಅನ್ನೋ ನಂಬಿಕೆ ಇದೆ.
ಸ್ಕಂದಮಾತಾ ಮಂತ್ರ
ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಾ ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ
ನವರಾತ್ರಿಯ ಐದನೇ ದಿನ ಪುರಾಣದ ಪ್ರಕಾರ ಅತ್ಯಂತ ಮಹತ್ವದ್ದು ಎಂದು ಉಲ್ಲೇಖವಿದೆ. ಈ ದಿನ ವಿಶೇಷವಾಗಿ ಸ್ಕಂದಮಾತೆಯನ್ನು ಪೂಜಿಸಿದ್ರೆ ಆದಿಶಕ್ತಿಯ ಸಂಪೂರ್ಣ ಆಶೀರ್ವಾದ ಪ್ರಾಪ್ತಿಯಾಗುತ್ತೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಸ್ಕಂದಮಾತೆಯ ಆರಾಧನೆಯಿಂದ ಏನೆಲ್ಲ ಫಲಗಳು ಪ್ರಾಪ್ತಿಯಾಗುತ್ವೆ.
ಸ್ಕಂದಮಾತಾ ಪೂಜಾ ಫಲಗಳು ಈಕೆ ತಪ್ಪಿತಸ್ಥರ ಪಾಲಿನ ಕ್ಷಮಯಾಧರಿತ್ರಿ. ಸುಖ, ಪರಮಶಾಂತಿಯನ್ನು ನೀಡ್ತಾಳೆ. ಸ್ಕಂದಮಾತಾ ಪೂಜೆಯಿಂದ ಮೋಕ್ಷ ಪ್ರಾಪ್ತಿ. ಸ್ಕಂದಮಾತಾ ಆರಾಧನೆಯಿಂದ ಸಾತ್ವಿಕ ಕಳೆ ಬರುತ್ತೆ. ಸ್ಕಂದಮಾತಾ ಸ್ಮರಣೆಯಿಂದ ಸ್ಕಂದನನ್ನು ಪೂಜಿಸಿದ ಪುಣ್ಯಪ್ರಾಪ್ತಿ.
Published On - 1:56 pm, Thu, 3 October 19