ದೇವರ ಪ್ರಸಾದದ ಹೂವನ್ನು ದಿಂಬಿನಡಿ ಇಟ್ಟು ಮಲಗಬಹುದಾ?
ಮನಸ್ಸಿನ ನೆಮ್ಮದಿಗಾಗಿ, ಬೇಡಿಕೆಗಳ ಈಡೇರಿಕೆಗಾಗಿ ನಾವೆಲ್ಲಾ ದೇವಾಲಯಗಳಿಗೆ ಹೋಗೋದು ಸಾಮಾನ್ಯ. ದೇವರ ದರ್ಶನವಾದ ನಂತರ ದೇವಾಲಯದಲ್ಲಿ ಪ್ರಸಾದವನ್ನು ನೀಡ್ತಾರೆ. ಪ್ರಸಾದದಲ್ಲಿ ಹಲವು ವಿಧವಿದೆ. ತಿನ್ನುವ ಪ್ರಸಾದ, ಹೂವಿನ ಪ್ರಸಾದ, ಹಚ್ಚಿಕೊಳ್ಳುವ ಪ್ರಸಾದ ಹೀಗೆ ಹಲವಾರು ತರಹದ ಪ್ರಸಾದವನ್ನ ನೀಡ್ತಾರೆ. ಅದ್ರಲ್ಲಿ ಹೂವಿನ ಪ್ರಸಾದವನ್ನು ಮಹಿಳೆಯರು ತಲೆಗೆ ಮುಡಿದುಕೊಳ್ತಾರೆ. ಪುರುಷರು ಹೂವಿನ ಚಿಕ್ಕ ಭಾಗವನ್ನು ತಲೆಯ ಮೇಲೆ ಇಟ್ಟುಕೊಂಡು ಉಳಿದಿದ್ದನ್ನು ತಮ್ಮ ಜೇಬಿನಲ್ಲಿ ಇಲ್ಲವೇ ಬ್ಯಾಗಿನಲ್ಲಿ ಇಟ್ಟುಕೊಳ್ತಾರೆ. ನಂತರ ಅದನ್ನು ಮನೆಗೆ ತಂದು ದೇವರ ಮುಂದೆ ಇಡ್ತಾರೆ. ಇದ್ರಲ್ಲಿ […]
ಮನಸ್ಸಿನ ನೆಮ್ಮದಿಗಾಗಿ, ಬೇಡಿಕೆಗಳ ಈಡೇರಿಕೆಗಾಗಿ ನಾವೆಲ್ಲಾ ದೇವಾಲಯಗಳಿಗೆ ಹೋಗೋದು ಸಾಮಾನ್ಯ. ದೇವರ ದರ್ಶನವಾದ ನಂತರ ದೇವಾಲಯದಲ್ಲಿ ಪ್ರಸಾದವನ್ನು ನೀಡ್ತಾರೆ. ಪ್ರಸಾದದಲ್ಲಿ ಹಲವು ವಿಧವಿದೆ. ತಿನ್ನುವ ಪ್ರಸಾದ, ಹೂವಿನ ಪ್ರಸಾದ, ಹಚ್ಚಿಕೊಳ್ಳುವ ಪ್ರಸಾದ ಹೀಗೆ ಹಲವಾರು ತರಹದ ಪ್ರಸಾದವನ್ನ ನೀಡ್ತಾರೆ. ಅದ್ರಲ್ಲಿ ಹೂವಿನ ಪ್ರಸಾದವನ್ನು ಮಹಿಳೆಯರು ತಲೆಗೆ ಮುಡಿದುಕೊಳ್ತಾರೆ.
ಪುರುಷರು ಹೂವಿನ ಚಿಕ್ಕ ಭಾಗವನ್ನು ತಲೆಯ ಮೇಲೆ ಇಟ್ಟುಕೊಂಡು ಉಳಿದಿದ್ದನ್ನು ತಮ್ಮ ಜೇಬಿನಲ್ಲಿ ಇಲ್ಲವೇ ಬ್ಯಾಗಿನಲ್ಲಿ ಇಟ್ಟುಕೊಳ್ತಾರೆ. ನಂತರ ಅದನ್ನು ಮನೆಗೆ ತಂದು ದೇವರ ಮುಂದೆ ಇಡ್ತಾರೆ. ಇದ್ರಲ್ಲಿ ತಪ್ಪೇನು ಇಲ್ಲ. ಆದ್ರೆ ಹೀಗೆ ತಂದ ಪ್ರಸಾದವನ್ನು ಹಣ, ಆಭರಣಗಳನ್ನಿಡುವ ಕಪಾಟಿನಲ್ಲಿಡಬೇಕು ಎಂದು ಕೆಲವರು ಹೇಳ್ತಾರೆ. ಇದ್ರಿಂದ ನಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗುತ್ತೆ ಅನ್ನೋ ನಂಬಿಕೆ ಇದೆ.
ಅಲ್ಲದೇ ಪವಿತ್ರ ಕ್ಷೇತ್ರಗಳಿಂದ ತಂದ ಪ್ರಸಾದವನ್ನು ಮನೆಯಲ್ಲಿ ಇಡುವುದರಿಂದ ಶ್ರೇಯೋಭಿವೃದ್ಧಿ ಆಗುತ್ತೆ ಅನ್ನೋ ನಂಬಿಕೆ ಸಹ ಇದೆ. ಪ್ರಸಾದದ ರೂಪದಲ್ಲಿ ನೀಡುವ ಹೂವಿನಿಂದ ಇನ್ನೊಂದು ಸಮಸ್ಯೆ ಕೂಡ ಪರಿಹಾರವಾಗುತ್ತೆ. ಅದೇನಂದ್ರೆ ಕೆಲವರಿಗೆ ರಾತ್ರಿ ಮಲಗಿದಾಗ ಸರಿಯಾಗಿ ನಿದ್ರೆ ಬರೋದಿಲ್ಲ. ಇನ್ನು ಕೆಲವರಿಗೆ ರಾತ್ರಿ ಮಲಗಿದಾಗ ದುಸ್ವಪ್ನಗಳು ಬೀಳುತ್ತವೆ. ಇದಕ್ಕೆ ಪರಿಹಾರ ದೇವಾಲಯದಲ್ಲಿ ನೀಡುವ ಹೂವಿನ ಪ್ರಸಾದ ಎನ್ನಲಾಗುತ್ತೆ.
ಅದು ಹೇಗಂದ್ರೆ, ದೇವಾಲಯದಲ್ಲಿ ನೀಡುವ ಹೂವಿನ ಪ್ರಸಾದವನ್ನು ನಾವು ಮಲಗುವ ದಿಂಬಿನ ಕೆಳಗಡೆ ಇಟ್ಟು ಮಲಗಬೇಕು ಎಂದು ಧಾರ್ಮಿಕ ಪಂಡಿತರು ಹೇಳ್ತಾರೆ. ಇದ್ರಿಂದ ನಿದ್ರೆ ಚೆನ್ನಾಗಿ ಬರೋದಲ್ಲದೇ, ದುಸ್ವಪ್ನಗಳು ಬೀಳುವುದಿಲ್ಲ ಅನ್ನೋ ನಂಬಿಕೆ ಇದೆ. ಅದ್ರಲ್ಲೂ ಆಂಜನೇಯನ ದೇವಾಲಯಗಳಲ್ಲಿ ನೀಡುವ ಹೂವಿನ ಪ್ರಸಾದವನ್ನು ದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ ಪರಿಣಾಮ ಜಾಸ್ತಿ ಎಂದು ಹೇಳಲಾಗುತ್ತೆ.
ಹಾಗಂತಾ ಒಂದು ಬಾರಿ ತಂದ ಹೂವಿನ ಪ್ರಸಾದವನ್ನೇ ಬಹಳ ದಿನಗಳವರೆಗೂ ಇಡಬಾರದು. ಸಾಮಾನ್ಯವಾಗಿ ಹೂವಿನ ಪ್ರಸಾದ ಒಂದೆರಡು ದಿನದಲ್ಲಿ ಒಣಗಿ ಹೋಗುತ್ತೆ. ಹೀಗೆ ಒಣಗಿ ಹೋದ ಪ್ರಸಾದವನ್ನು ಬಹಳ ದಿನಗಳ ಕಾಲ ಹಾಗೇ ಇಡಬಾರದು ಎಂದು ಆಧ್ಯಾತ್ಮಶಾಸ್ತ್ರ ಹೇಳುತ್ತೆ. ಯಾಕಂದ್ರೆ ಒಣಗಿ ಹೋದ ಪ್ರಸಾದದಲ್ಲಿ ಯಾವುದೇ ಧನಾತ್ಮಕ ಅಂಶಗಳು ಇರೋದಿಲ್ಲ. ಅದಕ್ಕಾಗೇ ಒಣಗಿದ ಹೂವಿನ ಪ್ರಸಾದವನ್ನು ಬಹಳ ದಿನ ಮನೆಯಲ್ಲಿ ಇಟ್ಟುಕೊಳ್ಳಬಾರದು ಎಂದು ಹೇಳಲಾಗುತ್ತೆ. ಹಾಗಾದ್ರೆ ಒಣಗಿದ ಹೂವಿನ ಪ್ರಸಾದವನ್ನು ಏನು ಮಾಡಬೇಕು ಎಂದು ಸಹ ಆಧ್ಯಾತ್ಮದಲ್ಲಿ ಹೇಳಲಾಗಿದೆ. ಅದೇನಂದ್ರೆ ಒಣಗಿದ ಹೂವಿನ ಪ್ರಸಾದವನ್ನು ಎಲ್ಲೆಂದರಲ್ಲಿ ಎಸೆಯಬಾರದು. ಬದಲಾಗಿ ಹರಿಯುವ ನೀರಿನಲ್ಲಿ ಹಾಕಬೇಕು ಎಂದು ಹೇಳ್ತಾರೆ. ಇದು ಸಾಧ್ಯ ಆಗದೇ ಇದ್ದಲ್ಲಿ ಗಿಡಮರಗಳ ಬುಡಕ್ಕೂ ಹಾಕಬಹುದು ಎಂದು ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ.
ಹೀಗಾಗೇ ದೇವಸ್ಥಾನಗಳಲ್ಲಿ ನೀಡುವ ಹೂವಿನ ಪ್ರಸಾದವನ್ನು ಎಲ್ಲೆಂದರಲ್ಲಿ ಬಿಸಾಕಬಾರದು ಬದಲಾಗಿ, ನಾವು ಮಲಗುವ ದಿಂಬಿನ ಕೆಳಗಿಟ್ಟುಕೊಂಡು ಮಲಗಬೇಕು. ಹೀಗೆ ಮಾಡೋದ್ರಿಂದ ಕೋಣೆಯಲ್ಲಿ ಧನಾತ್ಮಕ ಶಕ್ತಿ ಸಂಚಲನವಾಗುತ್ತೆ ಎಂಬ ನಂಬಿಕೆ ಇದೆ.