AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾಲಯ ಅಮಾವಾಸ್ಯೆ ದಿನ ಶ್ರಾದ್ಧ ಕಾರ್ಯ ಹೇಗೆ ಮಾಡಬೇಕು?

ಮಹಾಲಯ ಅಮಾವಾಸ್ಯೆ ದಿನದ ಪಿತೃಕಾರ್ಯವನ್ನು ಹೇಗೆ ಮಾಡಬೇಕು? ಈ ದಿನದ ಆಚರಣೆಯ ಫಲವೇನು? ಎಂಬುವುದರ ವಿವರ ಇಲ್ಲಿದೆ. ಶ್ರಾದ್ಧ ಕಾರ್ಯ ಮಾಡುವವರು ಮೊದಲು ಶುಚಿರ್ಭೂತರಾಗಬೇಕು. ದೋತಿ ಉಟ್ಟು ಶ್ರಾದ್ಧದ ಕೆಲಸಕ್ಕೆ ಕೂರಬೇಕು. ನಂತರ ದರ್ಬೆಯಿಂದ ತಯಾರಿಸಿದ ಉಂಗುರವನ್ನು ಹಾಕಬೇಕು. ಆ ಪವಿತ್ರ ಉಂಗುರದಲ್ಲಿ ಪೂರ್ವಜರನ್ನು ಆಹ್ವಾನಿಸಬೇಕು. ಪುರೋಹಿತರ ಮಾರ್ಗದರ್ಶನದಂತೆ ಜನಿವಾರ ಬದಲಾಯಿಸಬೇಕು. ತುಂಬಾ ಮುಖ್ಯವಾಗಿ ಪೂರ್ವಜರನ್ನು ನೆನೆದು ಪಿಂಡದಾನ ಮಾಡಬೇಕು. ಪಿಂಡವನ್ನು ಅನ್ನ, ಬಾರ್ಲಿ ಹಿಟ್ಟು, ತುಪ್ಪ, ಕಪ್ಪು ಎಳ್ಳು ಬಳಸಿ ತಯಾರಿಸಬೇಕು. ಪಿಂಡ ಅರ್ಪಿಸುವಾಗ ನೀರನ್ನು […]

ಮಹಾಲಯ ಅಮಾವಾಸ್ಯೆ ದಿನ ಶ್ರಾದ್ಧ ಕಾರ್ಯ ಹೇಗೆ ಮಾಡಬೇಕು?
ಸಾಧು ಶ್ರೀನಾಥ್​
|

Updated on:Sep 28, 2019 | 10:21 AM

Share

ಮಹಾಲಯ ಅಮಾವಾಸ್ಯೆ ದಿನದ ಪಿತೃಕಾರ್ಯವನ್ನು ಹೇಗೆ ಮಾಡಬೇಕು? ಈ ದಿನದ ಆಚರಣೆಯ ಫಲವೇನು? ಎಂಬುವುದರ ವಿವರ ಇಲ್ಲಿದೆ.

  1. ಶ್ರಾದ್ಧ ಕಾರ್ಯ ಮಾಡುವವರು ಮೊದಲು ಶುಚಿರ್ಭೂತರಾಗಬೇಕು.
  2. ದೋತಿ ಉಟ್ಟು ಶ್ರಾದ್ಧದ ಕೆಲಸಕ್ಕೆ ಕೂರಬೇಕು.
  3. ನಂತರ ದರ್ಬೆಯಿಂದ ತಯಾರಿಸಿದ ಉಂಗುರವನ್ನು ಹಾಕಬೇಕು.
  4. ಆ ಪವಿತ್ರ ಉಂಗುರದಲ್ಲಿ ಪೂರ್ವಜರನ್ನು ಆಹ್ವಾನಿಸಬೇಕು.
  5. ಪುರೋಹಿತರ ಮಾರ್ಗದರ್ಶನದಂತೆ ಜನಿವಾರ ಬದಲಾಯಿಸಬೇಕು.
  6. ತುಂಬಾ ಮುಖ್ಯವಾಗಿ ಪೂರ್ವಜರನ್ನು ನೆನೆದು ಪಿಂಡದಾನ ಮಾಡಬೇಕು.
  7. ಪಿಂಡವನ್ನು ಅನ್ನ, ಬಾರ್ಲಿ ಹಿಟ್ಟು, ತುಪ್ಪ, ಕಪ್ಪು ಎಳ್ಳು ಬಳಸಿ ತಯಾರಿಸಬೇಕು.
  8. ಪಿಂಡ ಅರ್ಪಿಸುವಾಗ ನೀರನ್ನು ಪಿಂಡದ ಮೇಲೆ ಬಿಡಬೇಕು.
  9. ದೇವರಿಗೆ, ಸಾಲಿಗ್ರಾಮಕ್ಕೆ ಮತ್ತು ಯಮನಿಗೆ ಪೂಜೆ ಸಲ್ಲಿಸಬೇಕು.
  10. ಮಾಡಿದ ಆಹಾರ ಪದಾರ್ಥಗಳನ್ನೆಲ್ಲಾ ಎಡೆಯಾಗಿ ಅರ್ಪಿಸಬೇಕು.
  11. ಮೊಸರನ್ನು ಇಟ್ಟು ಪ್ರಾರ್ಥಿಸಿದ್ರೆ ಪಿತೃಗಳಿಗೆ ಬಲು ಪ್ರೀತಿ.
  12. ಪಿತೃಗಳನ್ನು ನೆನೆದು ಮನೆಯಲ್ಲಿ ಧೂಪ ಹಾಕಬೇಕು.
  13. ಪಿಂಡ, ಎಡೆಯನ್ನು ಕಾಗೆಗಳಿಗೆ ಇಡಬೇಕು.
  14. ಪುರೋಹಿತರಿಗೆ ಧನ-ಧಾನ್ಯ ದಾನ ನೀಡಬೇಕು.
  15. ಕಾಗೆ ಎಡೆಯನ್ನು ಮುಟ್ಟಿದ ನಂತರ ಕುಟುಂಬದ ಸದಸ್ಯರು ಆಹಾರ ಸೇವಿಸಬೇಕು.

ಶ್ರಾದ್ಧ ಕಾರ್ಯ ಮಾಡುವ ದಿನ ಕೆಲವು ನಿಯಮಗಳನ್ನು ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ. ಆ ನಿಯಮಗಳನ್ನು ಪಾಲಿಸಿ ಪಿತೃ ಕಾರ್ಯ ಮಾಡಿದ್ರೆ ಫಲ ಹೆಚ್ಚು ಎಂಬ ನಂಬಿಕೆ ಇದೆ.

ಶ್ರಾದ್ಧ ಕಾರ್ಯದಲ್ಲಿ ಅನುಸರಿಸಬೇಕಾದ ನಿಯಮಗಳು

-ಪಿತೃಗಳಿಗೆ ಹೆಚ್ಚು ಸುಗಂಧ ಇರುವ ಪುಷ್ಪಗಳನ್ನು ಇಡಬಾರದು.

-ತರ್ಪಣ ಕೊಡುವಾಗ ದಕ್ಷಿಣ ದಿಕ್ಕಿಗೆ ಮಾತ್ರ ನಿಲ್ಲಬೇಕು.

-ಸಾಲ ಮಾಡಿ ಶ್ರಾದ್ಧ ಕಾರ್ಯ ಮಾಡಬೇಡಿ.

-ಪಿತೃಕಾರ್ಯ ಮಾಡುವ ದಿನ ಮನೆ ಮುಂದೆ ರಂಗೋಲಿ ಹಾಕಬಾರದು.

-ಮನೆ ಮಂದಿ ಕೆಟ್ಟ ಮಾತನಾಡಬಾರದು.

-ಪಿತೃ ಪೂಜೆ ಮಾಡುವಾಗ ಘಂಟೆ ಬಾರಿಸಬಾರದು.

-ಇಂದು ದೇವತಾ ಕಾರ್ಯ ಮಾಡಬಾರದು.

ಮಹಾಲಯ ಅಮಾವಾಸ್ಯೆ ದಿನದ ಪಿತೃಕಾರ್ಯದ ಫಲಗಳು

-ವಂಶಾಭಿವೃದ್ಧಿ

-ಧನ-ಧಾನ್ಯ, ಐಶ್ವರ್ಯ ವೃದ್ಧಿಯಾಗಲಿದೆ.

-ಮನೆಯಲ್ಲಿ ಮಂಗಳಕಾರ್ಯಗಳು ನಡೆಯುತ್ತವೆ.

-ನವಗ್ರಹ ದೋಷಗಳು ನಿವಾರಣೆಯಾಗುತ್ತೆ

-ಗ್ರಹದೋಷಗಳಿಂದ ಮುಕ್ತಿ ಸಿಗುತ್ತೆ.

-ಮನೆಗೆ ಸಂಪೂರ್ಣ ರಕ್ಷಣೆ ಸಿಗುತ್ತೆ.

-ಕುಟುಂಬದಲ್ಲಿ ಸುಖ-ಶಾಂತಿ ನೆಲೆಸುತ್ತೆ.

-ಆರೋಗ್ಯ ಸದೃಢವಾಗಿರುತ್ತೆ

-ಆಯುಷ್ಯ ಗಟ್ಟಿಯಾಗಿರುತ್ತೆ.

ಹೀಗಾಗೇ ಪಿತೃ ಪಕ್ಷ ಮತ್ತು ಮಹಾಲಯ ಅಮಾವಾಸ್ಯೆಯಂದು ಪಿತೃಕಾರ್ಯವನ್ನು ಮಾಡುವ ಸಂಪ್ರದಾಯ ಅನಾದಿಕಾಲದಿಂದಲೂ ನಡೆದುಕೊಂಡಿದೆ. ಈ ದಿನ ಮಾಡುವ ಪಿತೃ ಕಾರ್ಯದಿಂದ ಗತಿಸಿದ ಪಿತೃಗಳ ಆತ್ಮಕ್ಕೆ ಮೋಕ್ಷ ಪ್ರಾಪ್ತಿಯಾಗುತ್ತೆ ಎಂಬ ನಂಬಿಕೆ ಇದೆ.

Published On - 1:14 pm, Fri, 27 September 19