AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಶಿಯಲ್ಲಿ ಸಾವನ್ನಪ್ಪಿದ್ರೆ ಸ್ವರ್ಗ ಪ್ರಾಪ್ತಿಯಾಗುತ್ತಾ?

ಉತ್ತರಪ್ರದೇಶದಲ್ಲಿರುವ ಪ್ರಪಂಚದ ಪ್ರಾಚೀನ ಪಟ್ಟಣ ಕಾಶಿ. ಕಾಶಿ ಅಥವಾ ಬನಾರಸ್ ಎಂದು ಕರೆಯಲ್ಪಡುವ ಈ ಪಟ್ಟಣವನ್ನು ಸಾಕ್ಷಾತ್ ಪರಮೇಶ್ವರನೇ ಸೃಷ್ಟಿ ಮಾಡಿದ ಎಂದು ನಂಬಲಾಗಿದೆ. ಹೀಗಾಗೇ ವೇದಗಳಲ್ಲೂ ಕಾಶಿ ಬಗ್ಗೆ ಉಲ್ಲೇಖವನ್ನು ಕಾಣಬಹುದು. ಋಗ್ವೇದದಲ್ಲಿ ಕಾಶಿ ಶಿವನಿಗೆ ಅತ್ಯಂತ ಪ್ರಿಯವಾದ ಸ್ಥಳ ಅಂತಾ ಉಲ್ಲೇಖಿಸಲಾಗಿದೆ. ಇಂತಹ ಮಹಿಮಾನ್ವಿತ ಸ್ಥಳದಲ್ಲಿ ದ್ವಾದಶ ಜ್ಯೋತಿರ್ಲಿಂಗ ರೂಪದಲ್ಲಿ ಭಂ ಭಂ ಭೋಲೇನಾಥ ನೆಲೆಗೊಂಡಿದ್ದಾನೆ. ಪ್ರಪಂಚದ ಅತಿ ಪ್ರಾಚೀನ ನಗರ ಇದಾಗಿದ್ದು, ಭಾರತ ದೇಶದಲ್ಲಿನ ದೊಡ್ಡ ಮತ್ತು ಅತಿ ಪವಿತ್ರವಾದ ನದಿಯಾದ ಗಂಗಾ […]

ಕಾಶಿಯಲ್ಲಿ ಸಾವನ್ನಪ್ಪಿದ್ರೆ ಸ್ವರ್ಗ ಪ್ರಾಪ್ತಿಯಾಗುತ್ತಾ?
ಸಾಧು ಶ್ರೀನಾಥ್​
|

Updated on:Oct 15, 2019 | 7:06 AM

Share

ಉತ್ತರಪ್ರದೇಶದಲ್ಲಿರುವ ಪ್ರಪಂಚದ ಪ್ರಾಚೀನ ಪಟ್ಟಣ ಕಾಶಿ. ಕಾಶಿ ಅಥವಾ ಬನಾರಸ್ ಎಂದು ಕರೆಯಲ್ಪಡುವ ಈ ಪಟ್ಟಣವನ್ನು ಸಾಕ್ಷಾತ್ ಪರಮೇಶ್ವರನೇ ಸೃಷ್ಟಿ ಮಾಡಿದ ಎಂದು ನಂಬಲಾಗಿದೆ. ಹೀಗಾಗೇ ವೇದಗಳಲ್ಲೂ ಕಾಶಿ ಬಗ್ಗೆ ಉಲ್ಲೇಖವನ್ನು ಕಾಣಬಹುದು. ಋಗ್ವೇದದಲ್ಲಿ ಕಾಶಿ ಶಿವನಿಗೆ ಅತ್ಯಂತ ಪ್ರಿಯವಾದ ಸ್ಥಳ ಅಂತಾ ಉಲ್ಲೇಖಿಸಲಾಗಿದೆ. ಇಂತಹ ಮಹಿಮಾನ್ವಿತ ಸ್ಥಳದಲ್ಲಿ ದ್ವಾದಶ ಜ್ಯೋತಿರ್ಲಿಂಗ ರೂಪದಲ್ಲಿ ಭಂ ಭಂ ಭೋಲೇನಾಥ ನೆಲೆಗೊಂಡಿದ್ದಾನೆ.

ಪ್ರಪಂಚದ ಅತಿ ಪ್ರಾಚೀನ ನಗರ ಇದಾಗಿದ್ದು, ಭಾರತ ದೇಶದಲ್ಲಿನ ದೊಡ್ಡ ಮತ್ತು ಅತಿ ಪವಿತ್ರವಾದ ನದಿಯಾದ ಗಂಗಾ ನದಿ ವಾರಣಾಸಿ ಪಟ್ಟಣದಲ್ಲಿ ಪ್ರವಹಿಸುತ್ತೆ. ಈ ಕಾರಣದಿಂದ ಈ ಪಟ್ಟಣವು ಪ್ರಸಿದ್ಧಿ ಪಡೆದಿದೆ. ಆದರೆ, ಹಿಂದೂ ಧರ್ಮದಲ್ಲಿ 7 ಪವಿತ್ರ ನಗರಗಳಲ್ಲಿ ಈ ಕಾಶಿ ಪಟ್ಟಣ ಎಲ್ಲದಕ್ಕಿಂತ ದೊಡ್ಡದ್ದು ಎನ್ನಲಾಗುತ್ತೆ. ಗಂಗಾ ತಟದಲ್ಲಿರುವ ಕಾಶಿ ಆಧ್ಯಾತ್ಮ ಜೀವಿಗಳಿಗೆ ಪ್ರಿಯವಾದ ತಾಣ. ಕಾಶಿ ಪಟ್ಟಣದಲ್ಲಿ ಹೆಜ್ಜೆ ಇಟ್ಟ ಕೂಡಲೇ ಅಲ್ಲಿನ ಕಣ ಕಣದಲ್ಲೂ ಶಿವನಿರುವ ಅನುಭವವಾಗುತ್ತೆ. ಇಲ್ಲಿನ ಗಂಗೆಯಲ್ಲಿ ಮಿಂದರೆ ಸರ್ವ ಪಾಪಗಳು ನಿವಾರಣೆಯಾಗುತ್ತೆ ಎಂಬ ನಂಬಿಕೆ ಇದೆ. ಇಲ್ಲಿ ನಡೆಯುವ ಗಂಗಾರತಿ ಪ್ರಪಂಚದಲ್ಲೇ ಹೆಸರುವಾಸಿ. ಇದನ್ನು ಕಣ್ಣಾರೆ ನೋಡಿಯೇ ಆ ಅನುಭವವನ್ನು ಅನುಭವಿಸಬೇಕು.

ಸತ್ಯಕ್ಕಾಗಿ ಸಂಸಾರ ಸಾಮ್ರಾಜ್ಯವನ್ನೇ ತ್ಯಾಗ ಮಾಡಿದ ಸತ್ಯ ಹರಿಶ್ಚಂದ್ರ ನೆಲೆಗೊಂಡ ಪುಣ್ಯಸ್ಥಳವಿದು. ಈ ಸ್ಥಳದಲ್ಲಿ ಒಂದು ಬಾರಿಯಾದ್ರೂ ಗತಿಸಿದ ಹಿರಿಯರಿಗೆ ಪಿಂಡಪ್ರದಾನ, ತರ್ಪಣ ಕಾರ್ಯ ಮಾಡಿದ್ರೆ ಮೃತರು ಸ್ವರ್ಗ ಸೇರ್ತಾರೆ ಅನ್ನೋ ನಂಬಿಕೆ ಇದೆ. ಹೀಗಾಗೇ ಪಿತೃಪಕ್ಷದಲ್ಲಿ ಇಲ್ಲಿಗೆ ಬಂದು ಜನರು ಪಿತೃ ಕಾರ್ಯವನ್ನು ಮಾಡ್ತಾರೆ. ಇನ್ನು ಕಾಶಿಯಲ್ಲಿ ಸಾವನ್ನಪ್ಪಿದ್ರೆ ಮೋಕ್ಷ ದೊರೆಯುತ್ತೆ, ಇಲ್ಲಿ ಸಾವನ್ನಪ್ಪಿದವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಅನ್ನೋ ನಂಬಿಕೆ ಇದೆ. ಕಾಶಿಯಲ್ಲಿ ಅವಸಾನ ದೆಸೆಯಲ್ಲಿರುವ ತನ್ನ ಭಕ್ತರಿಗೆ ವಿಶ್ವನಾಥ ಕಿವಿಯಲ್ಲಿ ಶ್ರೀರಾಮತಾರಕ ಮಂತ್ರವನ್ನು ಉಪದೇಶಿಸಿ ಮುಕ್ತಿ ಪ್ರಸಾದಿಸ್ತಾನೆ ಅನ್ನೋದು ಹಿಂದೂಗಳ ನಂಬಿಕೆ. ಹೀಗಾಗೇ ಇಂದಿಗೂ ಈ ಪ್ರದೇಶದಲ್ಲಿ ಸನಾತನ ಹಿಂದೂ ಧರ್ಮದ ಆಚಾರ, ವ್ಯವಹಾರಗಳು ಪ್ರತಿನಿತ್ಯ ನಡೆಯುತ್ತಲೇ ಇರುತ್ತವೆ.

ಇಷ್ಟು ಪ್ರಖ್ಯಾತಿ ಹೊಂದಿರುವ ಕಾಶಿಯಲ್ಲಿ ಪ್ರಸಿದ್ಧಿ ಹೊಂದಿರುವ ಅನೇಕ ಮಂದಿ ಆಧ್ಯಾತ್ಮಿಕ ಗುರುಗಳು, ಸಾಧು-ಸಂತರು ತಮ್ಮ ಜೀವನದ ಅಂತಿಮ ಸಮಯವನ್ನು ಕಳೆಯಲು ಇಷ್ಟ ಪಡ್ತಾರೆ. ಕೇವಲ ಸಾಧು-ಸಂತರಲ್ಲದೇ ಅನೇಕ ಮಂದಿ ತಮ್ಮ ಕೊನೆಯ ದಿನಗಳನ್ನು ಇಲ್ಲಿ ಕಳೆಯುತ್ತಾರೆ. ಕಾಶಿಯಲ್ಲಿ ಅನೇಕ ದೇವಾಲಯಗಳಿವೆ. ಅವುಗಳಲ್ಲಿ ವಿಶ್ವನಾಥ ದೇವಾಲಯಕ್ಕೆ ವಿಶೇಷ ಮಹತ್ವ ಇದೆ. ಇಂತಹ ಪುಣ್ಯಸ್ಥಳದಲ್ಲಿ ಮರಣ ಹೊಂದಿದರೆ ಸ್ವರ್ಗಕ್ಕೆ ಹೋಗುತ್ತಾರೆ ಎಂಬುದು ಕಾಶಿ ವಿಶ್ವನಾಥನ ಭಕ್ತರ ನಂಬಿಕೆ. ಹೀಗಾಗೇ ಈ ಮೋಕ್ಷ ಕ್ಷೇತ್ರಕ್ಕೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

Published On - 9:51 pm, Mon, 14 October 19

ಸಿರಿಯಾ ಮೇಲೆ ಇಸ್ರೇಲ್ ದಾಳಿ; ಲೈವ್ ಮಧ್ಯದಲ್ಲೇ ಓಡಿಹೋದ ಟಿವಿ ನಿರೂಪಕಿ
ಸಿರಿಯಾ ಮೇಲೆ ಇಸ್ರೇಲ್ ದಾಳಿ; ಲೈವ್ ಮಧ್ಯದಲ್ಲೇ ಓಡಿಹೋದ ಟಿವಿ ನಿರೂಪಕಿ
ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ಸಂಧಾನದ ಮಾತು ನಡೆಯುವ ಬಗ್ಗೆ ನಿನ್ನೆ ವಿಜಯೇಂದ್ರ ಸುಳಿವು ನೀಡಿದ್ದರು
ನಾನು ಮಂಗಳೂರು ಹುಡುಗಿ: ಹೆಮ್ಮೆಯಿಂದ ಹೇಳಿದ ಜೆನಿಲಿಯಾ ಡಿಸೋಜಾ
ನಾನು ಮಂಗಳೂರು ಹುಡುಗಿ: ಹೆಮ್ಮೆಯಿಂದ ಹೇಳಿದ ಜೆನಿಲಿಯಾ ಡಿಸೋಜಾ
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಿಗಂದೂರು ತೂಗು ಸೇತುವೆ ಮೇಲೆ ಸಂಚರಿಸುವುದೇ ಏನೋ ಒಂಥರಾ ಸಂತೋಷ, ಉಲ್ಲಾಸ
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ಸಾರಿಗೆ ನೌಕರರಿಗೆ 38 ತಿಂಗಳುಗಳ ಹಿಂಬಾಕಿ ಸರ್ಕಾರ ಕೊಡಬೇಕಿದೆ: ಸುಬ್ಬಾರಾವ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ನಿಗಮಗಳಿಗೆ ಸದಸ್ಯರ ನೇಮಕಾತಿ ಶೀಘ್ರದಲ್ಲಿ ನಡೆಯಲಿದೆ: ಪರಮೇಶ್ವರ್
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ಚಾಮುಂಡಿ ತಾಯಿ ಆಶೀರ್ವಾದ ಪಡೆದ ದೊಡ್ಮನೆ ಹುಡುಗ್ರು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ನಾನು ನೀಡಿದ ಚೆಕ್​ಗಳು ಬೌನ್ಸ್ ಆಗುವ ಚಾನ್ಸೇ ಇಲ್ಲ ಎಂದ ಕೆಜಿಎಫ್ ಬಾಬು
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಬಾಲಸೋರ್​​ನಲ್ಲಿ ಬೃಹತ್ ಪ್ರತಿಭಟನೆ; ಪೊಲೀಸರಿಂದ ಜಲಫಿರಂಗಿ ಪ್ರಯೋಗ
ಮುಂಬೈನಲ್ಲಿ ಟೆಸ್ಲಾ ಕಾರು ಚಲಾಯಿಸಿದ ಡಿಸಿಎಂ ಏಕನಾಥ್ ಶಿಂಧೆ
ಮುಂಬೈನಲ್ಲಿ ಟೆಸ್ಲಾ ಕಾರು ಚಲಾಯಿಸಿದ ಡಿಸಿಎಂ ಏಕನಾಥ್ ಶಿಂಧೆ