ಕೂದಲಿನ ಆರೋಗ್ಯ ಹೆಚ್ಚಿಸುವ ನೈಸರ್ಗಿಕವಾದ ಹೇರ್ ಕಂಡಿಷನರ್ ಮತ್ತು ಹಣ್ಣುಗಳು
ಸುಂದರವಾದ ಕೂದಲು ಬೇಕೆನ್ನುವ ಮಹಿಳೆಯರು ಅದಕ್ಕಾಗಿ ತುಂಬಾನೆ ಕಷ್ಟ ಪಡ್ತಾರೆ. ಒಂದು ವೇಳೆ ಸುಂದರವಾದ ಉದ್ದ ಕೂದಲು ಇದ್ರೂ ಅದ್ರಲ್ಲಿ ಸಾವಿರಾರು ಸಮಸ್ಯೆಗಳಿರುತ್ತೆ. ನಯವಾದ ಹೊಳೆಯುವ ಕೂದಲು ಪಡೆಯಬೇಕಂದ್ರೆ ನೀವೂ ಕಂಡಿಷನರ್ ಬಳಸೋದು ಕಾಮನ್. ಆದ್ರೆ ಕೆಮಿಕಲ್ ಇರುವ ಕಂಡಿಷನರ್ ಬಳಸೋ ಬದಲು ನ್ಯಾಚುರಲ್ ಆಗಿ ಹಣ್ಣುಗಳಿಂದ ತಯಾರಿಸಿ ಬಳಸಬಹುದಾದ ಕಂಡಿಷನರ್ ಬಗ್ಗೆ ಇಲ್ಲಿದೆ ಮಾಹಿತಿ. ತಲೆಕೂದಲ ಸಮಸ್ಯೆಗಳ ನಿವಾರಣೆಗೆ ನಿಂಬೆಹಣ್ಣು ಪ್ರಮುಖವಾದದ್ದು. ನಿಂಬೆ ಹಣ್ಣಿನಲ್ಲಿ ನೈಸರ್ಗಿಕ ಸಿಟ್ರಸ್ ಇರುವುದರಿಂದ ಇದು ನಿಮ್ಮ ಡಾಂಡ್ರಫ್ ಸಮಸ್ಯೆಗೆ ರಾಮಬಾಣವಿದ್ದಂತೆ. […]
ಸುಂದರವಾದ ಕೂದಲು ಬೇಕೆನ್ನುವ ಮಹಿಳೆಯರು ಅದಕ್ಕಾಗಿ ತುಂಬಾನೆ ಕಷ್ಟ ಪಡ್ತಾರೆ. ಒಂದು ವೇಳೆ ಸುಂದರವಾದ ಉದ್ದ ಕೂದಲು ಇದ್ರೂ ಅದ್ರಲ್ಲಿ ಸಾವಿರಾರು ಸಮಸ್ಯೆಗಳಿರುತ್ತೆ. ನಯವಾದ ಹೊಳೆಯುವ ಕೂದಲು ಪಡೆಯಬೇಕಂದ್ರೆ ನೀವೂ ಕಂಡಿಷನರ್ ಬಳಸೋದು ಕಾಮನ್. ಆದ್ರೆ ಕೆಮಿಕಲ್ ಇರುವ ಕಂಡಿಷನರ್ ಬಳಸೋ ಬದಲು ನ್ಯಾಚುರಲ್ ಆಗಿ ಹಣ್ಣುಗಳಿಂದ ತಯಾರಿಸಿ ಬಳಸಬಹುದಾದ ಕಂಡಿಷನರ್ ಬಗ್ಗೆ ಇಲ್ಲಿದೆ ಮಾಹಿತಿ.
ತಲೆಕೂದಲ ಸಮಸ್ಯೆಗಳ ನಿವಾರಣೆಗೆ ನಿಂಬೆಹಣ್ಣು ಪ್ರಮುಖವಾದದ್ದು. ನಿಂಬೆ ಹಣ್ಣಿನಲ್ಲಿ ನೈಸರ್ಗಿಕ ಸಿಟ್ರಸ್ ಇರುವುದರಿಂದ ಇದು ನಿಮ್ಮ ಡಾಂಡ್ರಫ್ ಸಮಸ್ಯೆಗೆ ರಾಮಬಾಣವಿದ್ದಂತೆ. ಜೊತೆಗೆ ಸಾಫ್ಟ್ ಆದ ಕೂದಲನ್ನು ಪಡೆಯಬಹುದು.
ಸೇಬುಹಣ್ಣಿನ ಸೇವನೆಯಿಂದ ಕೂದಲಿನ ಬುಡ ಸ್ಟ್ರಾಂಗ್ ಆಗುವುದು ಮಾತ್ರವಲ್ಲದೇ ಕೂದಲಿನ ಬೆಳವಣಿಗೆಗೂ ಸಹಾಯಕವಾಗುವುದು. ಅಲ್ಲದೆ ಆ್ಯಪಲ್ ಸಿಡರ್ ವೆನಿಗರ್ ಬೆಸ್ಟ್ ಹೇರ್ ಕಂಡಿಷನರ್. ಕೂದಲ ಬೆಳವಣಿಗೆಗೆ ಅವಾಕಾಡೋ ಹಣ್ಣು ಅಥವಾ ಬೆಣ್ಣೆ ಹಣ್ಣು ಸಹಾಯಕ. ವಿಟಮಿನ್ ಬಿ, ಸಿ ಹಾಗೂ ಇ ಅವಾಕಾಡೋ ಹಣ್ಣಿನಲ್ಲಿ ಹೇರಳವಾಗಿದೆ. ಬಟರ್ ಫ್ರೂಟ್ ಅಂತಲೂ ಕರೆಯಲ್ಪಡುವ ಈ ಹಣ್ಣಿನ ಹೇರ್ ಪ್ಯಾಕ್ ಕೂದಲಿಗೆ ಪೋಷಣೆ ನೀಡೋದ್ರ ಜೊತೆಗೆ ಹೊಳೆಯುವಂತೆ ಮಾಡುತ್ತೆ.
ಸೊಂಪಾದ ಕೂದಲಿಗೆ ಬಾಳೆಹಣ್ಣು ಸೇವನೆ ಉತ್ತಮ. ಜೊತೆಗೆ ಬಾಳೆ ಹಣ್ಣಿನ ಹೇರ್ ಪ್ಯಾಕ್ನಿಂದ ಸಾಕಷ್ಟು ಪ್ರಯೋಜನಗಳಿವೆ. ನಿರ್ಜಿವ ಕೂದಲಿಗೆ ಜೀವ ತುಂಬಲು ಬಾಳೆಹಣ್ಣಿನ ಪ್ಯಾಕ್ ಟ್ರೈ ಮಾಡಿ. ವಿಟಮಿನ್ ಸಿ ಹೇರಳವಾಗಿರುವ ಕಿತ್ತಳೆ ಹಣ್ಣಿನ ಸೇವನೆಯೂ ಸಹ ಕೂದಲ ಆರೋಗ್ಯಕ್ಕೆ ಉತ್ತಮ. ಜೊತೆಗೆ ಕಿತ್ತಳೆ ಹಣ್ಣಿನ ಹೇರ್ ಪ್ಯಾಕ್ನಿಂದ ಆರೋಗ್ಯಕಾರಿ ಕೂದಲನ್ನು ಪಡೆಯಬಹುದು. ಜೊತೆಗೆ ಕೂದಲ ಶೈನ್ ಕೂಡ ಹೆಚ್ಚುತ್ತೆ.
ವಿಟಮಿನ್ ಎ ಪೈನಾಪಲ್ ಹಣ್ಣಿನಲ್ಲಿ ಹೇರಳವಾಗಿದೆ. ಪೈನಾಪಲ್ ಸೇವನೆಯಿಂದ ಹಾಗೂ ಹೇರ್ ಪ್ಯಾಕ್ ಬಳಸೋದ್ರಿಂದ ನಿಮ್ಮ ನೆತ್ತಿಯನ್ನು ಹೆಲ್ತಿಯಾಗಿರಿಸುತ್ತದೆ. ನೀರಿನ ಅಂಶ ಜಾಸ್ತಿ ಇರುವ ದ್ರಾಕ್ಷಿ ಹೇರಳ ವಿಟಮಿನ್‌ನನ್ನು ಹೊಂದಿದೆ. ಇದು ನಿಮ್ಮ ಆರೋಗ್ಯ ಹಾಗೂ ಕೂದಲು ಉದುರುವಿಕೆಗೆ ರಾಮಬಾಣವಿದ್ದಂತೆ. ಆಪ್ರಿಕೊಟ್ ಕೂದಲು ಉದುರುವಿಕೆಗೆ, ಹಾಗೂ ಡ್ಯಾಮೇಜ್ ಹೇರ್‌ಗೆ ಇದು ನೈಸರ್ಗಿಕ ಪರಿಹಾರವಿದ್ದಂತೆ. ಇದು ಉತ್ತಮ ಹೇರ್ ಕಂಡೀಶನರ್ ಆಗಿ ಕಾರ್ಯನಿರ್ವಹಿಸುತ್ತದೆ.
ಪೇರಲೆ ಹಣ್ಣಿನಲ್ಲಿ ವಿಟಮಿನ್ ಎ ಅಧಿಕವಾಗಿರುತ್ತದೆ. ಇದರಿಂದ ಕೂದಲು ಉದುರುವುದು ಹಾಗೂ ತಲೆಹೊಟ್ಟು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಹಾಗೂ ಕೂದಲ ಸಮಸ್ಯೆಗೆ ಸ್ಟ್ರಾಬೆರಿ ಹಣ್ಣಿನ ಸೇವನೆ ಉತ್ತಮ. ಅಷ್ಟೇಅಲ್ಲಾ ಸ್ಟ್ರಾಬರಿ ಹಣ್ಣಿನ ಪ್ಯಾಕ್ ತಯಾರಿಸಿ ಬಳಸೋದ್ರಿಂದ ಹೆಲ್ತಿ ಹೇರ್ ಪಡೆಯಬಹುದು.