ರಾಬರ್ಟ್​ ಹೀರೋಹಿನ್ ಆಶಾ ಭಟ್ ಫಿಟ್ನೆಸ್ ಗುಟ್ಟು!

ಸಾಧು ಶ್ರೀನಾಥ್​

|

Updated on:Oct 15, 2019 | 4:34 PM

ಆಶಾ ಭಟ್ 2014ರ ಸುಪ್ರ ಇಂಟರ್ ನ್ಯಾಷನಲ್ ವಿನ್ನರ್. ವಿಶೇಷ ಅಂದ್ರೆ ಈ ಪುರಸ್ಕಾರಕ್ಕೆ ಭಾಜನರಾದ ಭಾರತದ ಪ್ರಥಮ ಮಹಿಳೆ ಎನ್ನುವ ಹೆಗ್ಗಳಿಕೆ ಕೂಡಾ ಇವರದ್ದಾಗಿದೆ. ಮಾಡೆಲಿಂಗ್ ಕ್ಷೇತ್ರದಿಂದ ಚಿತ್ರರಂಗಕ್ಕೆ ಕಾಲಿಟ್ಟ ಆಶಾಭಟ್ ಬಾಲಿವುಡ್ ಜಂಗ್ಲೀ ಚಿತ್ರದ ಮೂಲಕ ಸಿನಿಪಯಣವನ್ನು ಆರಂಭಿಸಿದ ತಾರೆ. ಮುಂಬರುವ ರಾಬರ್ಟ್ ಚಿತ್ರದ ಮೂಲಕ ಚಂದನವನ ಪ್ರವೇಶ ಮಾಡಲಿರುವ ಚೆಲುವೆ. ಮಾಡೆಲ್ ಅಂದ್ಮೇಲೆ ಫಿಟ್ ಆಗಿಯೆ ಇರ್ತಾರೆ. ಆದ್ರೆ ಇವರೆಲ್ಲಾ ಹೇಗಪ್ಪಾ ಹೆಲ್ತಿ ಫಿಟ್ನೆಸ್ ಮೇಂಟೇನ್ ಮಾಡ್ತಾರೆ? ಅನ್ನೋ ಕುತೂಹಲ ಎಲ್ಲರಲ್ಲೂ ಇರುತ್ತೆ. […]

ರಾಬರ್ಟ್​ ಹೀರೋಹಿನ್ ಆಶಾ ಭಟ್ ಫಿಟ್ನೆಸ್ ಗುಟ್ಟು!
Follow us

ಆಶಾ ಭಟ್ 2014ರ ಸುಪ್ರ ಇಂಟರ್ ನ್ಯಾಷನಲ್ ವಿನ್ನರ್. ವಿಶೇಷ ಅಂದ್ರೆ ಈ ಪುರಸ್ಕಾರಕ್ಕೆ ಭಾಜನರಾದ ಭಾರತದ ಪ್ರಥಮ ಮಹಿಳೆ ಎನ್ನುವ ಹೆಗ್ಗಳಿಕೆ ಕೂಡಾ ಇವರದ್ದಾಗಿದೆ. ಮಾಡೆಲಿಂಗ್ ಕ್ಷೇತ್ರದಿಂದ ಚಿತ್ರರಂಗಕ್ಕೆ ಕಾಲಿಟ್ಟ ಆಶಾಭಟ್ ಬಾಲಿವುಡ್ ಜಂಗ್ಲೀ ಚಿತ್ರದ ಮೂಲಕ ಸಿನಿಪಯಣವನ್ನು ಆರಂಭಿಸಿದ ತಾರೆ. ಮುಂಬರುವ ರಾಬರ್ಟ್ ಚಿತ್ರದ ಮೂಲಕ ಚಂದನವನ ಪ್ರವೇಶ ಮಾಡಲಿರುವ ಚೆಲುವೆ.

ಮಾಡೆಲ್ ಅಂದ್ಮೇಲೆ ಫಿಟ್ ಆಗಿಯೆ ಇರ್ತಾರೆ. ಆದ್ರೆ ಇವರೆಲ್ಲಾ ಹೇಗಪ್ಪಾ ಹೆಲ್ತಿ ಫಿಟ್ನೆಸ್ ಮೇಂಟೇನ್ ಮಾಡ್ತಾರೆ? ಅನ್ನೋ ಕುತೂಹಲ ಎಲ್ಲರಲ್ಲೂ ಇರುತ್ತೆ. ಸೊ ಬ್ಯೂಟಿಫುಲ್ ಕನ್ನಡತಿಯ ಪರ್ಫೆಕ್ಟ್ ಫಿಟ್ನೆಸ್ ಬಗ್ಗೆಯೂ ನಿಮ್ಮಲ್ಲಿ ಕ್ಯೂರಿಯಾಸಿಟಿ ಇರ್ಬೋದು. ಭದ್ರಾವತಿ ಬೆಡಗಿ ತಮ್ಮ ಫಿಟ್ನೆಸ್ ಗುಟ್ಟನ್ನು ಹಂಚಿಕೊಂಡಿದ್ದಾರೆ.

ಆಶಾ ಭಟ್ ಅವರ ಆರೋಗ್ಯಕರ ಮೈಕಟ್ಟಿನ ಗುಟ್ಟು ನಿತ್ಯ ಆಹಾರ ಮತ್ತು ವರ್ಕೌಟ್ ಅಂತೆ. ಹಾಗಾದ್ರೆ ಇವರ ದಿನಚರಿ ಹೇಗಿರುತ್ತೆ ಅಂತೀರಾ? ಯೆಸ್ ಇವರು ಪರ್ಟಿಕ್ಯುಲರ್ ಆಗಿ ಯಾವುದೇ ಡಯಟ್ ಚಾರ್ಟ್ ಪಾಲಿಸಲ್ವಂತೆ. ಇವರಿಗೆ ಯಾವ ಆಹಾರ ಇಷ್ಟ ಅಗುತ್ತೋ ಅದನ್ನೇ ತಿಂದು ಫಿಟ್ ಆಗಿದ್ದಾರಂತೆ ಈ ಚೆಲುವೆ. ಯಾವುದೇ ಕಾರಣಕ್ಕೂ ಬ್ರೇಕ್ ಫಾಸ್ಟ್ ಮಿಸ್ ಮಾಡದ ಆಶಾ, ಬ್ರೇಕ್ ಫಾಸ್ಟ್​ನಲ್ಲಿ ಸಾಮಾನ್ಯವಾಗಿ ದೋಸೆ ತಿಂತಾರಂತೆ. ಇದನ್ನು ಹೊರತುಪಡಿಸಿ ಮಾರ್ನಿಂಗ್ ಟೈಮ್ ಓಟ್ಸ್ ಮೀಲ್​ ಸೇವಿಸುವುದನ್ನು ಇಷ್ಟ ಪಡ್ತಾರೆ ಈ ಬ್ಯೂಟಿ.

ಇವರ ಮೆಟಬೊಲಿಸಂ ಸ್ಟ್ರಾಂಗ್ ಆಗಿರುವುದರಿಂದ ಮಿನಿ ಮೀಲ್ಸ್ ತಗೋಳ್ತಾರೆ. ಹಾಗೆಯೇ ದಿನದಲ್ಲಿ ಹೆಚ್ಚಿನ ಪ್ರಮಾಣದ ನೀರು ಕುಡೀತಾರಂತೆ. ಈ ಅಭ್ಯಾಸ ನನ್ನನ್ನು ಹೆಲ್ತಿ ಆ್ಯಂಡ್ ಹೈಡ್ರೇಟ್ ಆಗಿರುವಂತೆ ಮಾಡಿದೆ ಅಂತಾರೆ ಆಶಾ. ಇನ್ನು ಇವರ ವರ್ಕೌಟ್ ರುಟಿನ್​ನಲ್ಲಿ ಮಾರ್ಷಲ್ ಆರ್ಟ್ಸ್, ಬಾಕ್ಸಿಂಗ್ ಮತ್ತು ಫ್ರೀ ಹ್ಯಾಂಡ್ ವ್ಯಾಯಾಮಗಳು ಇರುತ್ತಂತೆ..ಹಾಗೆಯೇ ವಾರದಲ್ಲಿ ಎರಡು ದಿನ ವೇಟ್​ ಟ್ರೇನಿಂಗ್ ಕೂಡ ಮಾಡ್ತಾರಂತೆ. ಇಷ್ಟು ಮಾತ್ರವಲ್ಲದೆ ನಿತ್ಯ ಯೋಗ ಕೂಡಾ ಇವರ ಫಿಟ್​ ಆ್ಯಂಡ್​ ಫೈನ್ ಬಾಡಿಯ ಮತ್ತೊಂದು ಸೀಕ್ರೆಟ್.

https://www.instagram.com/p/B0tQzNwlyva/?utm_source=ig_web_copy_link

ತಾಜಾ ಸುದ್ದಿ

Related Stories

Click on your DTH Provider to Add TV9 Kannada