ನವರಾತ್ರಿಯ ಎರಡನೇ ದಿನ ಶಕ್ತಿದೇವತೆಯ ಆರಾಧನೆಗೆ ಪರ್ವಕಾಲ. ನವರಾತ್ರಿಯ ಒಂಬತ್ತು ದಿನಗಳಲ್ಲಿ ಪ್ರತಿದಿನ ದೇವಿಯ ಬೇರೆ ಬೇರೆ ಸ್ವರೂಪವನ್ನು ಪೂಜಿಸಲಾಗುತ್ತೆ. ಹೀಗೆ ನವರಾತ್ರಿಯ ಎರಡನೇ ದಿನ ದುರ್ಗೆಯನ್ನು ಬ್ರಹ್ಮಚಾರಿಣಿ ರೂಪದಲ್ಲಿ ಆರಾಧನೆ ಮಾಡಲಾಗುತ್ತೆ. ಹಾಗಾದ್ರೆ ಬ್ರಹ್ಮಚಾರಿಣಿ ಯಾರು ಅಂದ್ರೆ ನವದುರ್ಗೆಯರಲ್ಲಿ ಬ್ರಹ್ಮಚಾರಿಣಿಯದ್ದು ಎರಡನೇ ರೂಪ. ಈಕೆ ಸೃಷ್ಟಿಕರ್ತನಾದ ಬ್ರಹ್ಮನಿಗೆೇ ಜ್ಞಾನ ಕೊಟ್ಟವಳು ಎಂದು ಪುರಾಣದಲ್ಲಿ ಉಲ್ಲೇಖವಿದೆ.
ಬ್ರಹ್ಮಚಾರಿಣಿಯದ್ದು ಸಾತ್ವಿಕ ಮತ್ತು ಸುಂದರ ರೂಪ. ಬ್ರಹ್ಮಚಾರಿಣಿ ಪೂರ್ಣ ಜ್ಯೋತಿರ್ಮಯ ಸ್ವರೂಪಿಯಾಗಿದ್ದಾಳೆ. ಬಲಗೈಯಲ್ಲಿ ಜಪಮಾಲೆ ಹಿಡಿದಿರುತ್ತಾಳೆ. ಎಡಗೈಯಲ್ಲಿ ಕಮಂಡಲವಿರುತ್ತೆ. ಸದಾ ಧ್ಯಾನದಲ್ಲಿ ತಲ್ಲೀನಳಾಗ್ತಾಳೆ.
ಇನ್ನು ಈ ಬ್ರಹ್ಮಚಾರಿಣಿ ಆರಾಧನೆಗೆ ವಿಶೇಷ ಮಂತ್ರವೊಂದಿದೆ. ಆ ಮಂತ್ರವನ್ನು ಪಠಿಸಿ ಪೂಜಿಸಿದ್ರೆ ಬ್ರಹ್ಮಚಾರಿಣಿ ಬೇಗ ಸಂತುಷ್ಟಳಾಗ್ತಾಳೆ ಎನ್ನಲಾಗುತ್ತೆ.
ಬ್ರಹ್ಮಚಾರಿಣಿ ಪೂಜಾ ಮಂತ್ರ
ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ
ಬ್ರಹ್ಮಚಾರಿಣಿ ಪೂಜೆಯ ಫಲ
ಅನಂತ ಫಲಗಳನ್ನು ನೀಡ್ತಾಳೆ.
ಆಧ್ಯಾತ್ಮ ಸಾಧನೆ ಜೊತೆಗೆ ಮನಸ್ಸಿನ ಏಕಾಗ್ರತೆ ಸಾಧನೆಯಾಗುತ್ತೆ.
ತ್ಯಾಗ, ವೈರಾಗ್ಯ, ಸದಾಚಾರ, ಸಂಯಮ ವೃದ್ಧಿಯಾಗುತ್ತೆ.
ಸಕಲ ಕಾರ್ಯದಲ್ಲೂ ವಿಜಯ ಪ್ರಾಪ್ತಿಯಾಗಲಿದೆ.
ಈ ಎಲ್ಲ ಕಾರಣಗಳಿಂದ ನವರಾತ್ರಿಯ ಎರಡನೇ ದಿನ ಯೋಗಿಗಳು ಬ್ರಹ್ಮಚಾರಿಣಿಯ ಉಪಾಸನೆ ಮಾಡ್ತಾರೆ. ಇದ್ರಿಂದ ಮನಸ್ಸಿನ ಏಕಾಗ್ರತೆ ಹೆಚ್ಚಾಗಿ, ಬ್ರಹ್ಮಚಾರಿಣಿಯ ಅನಂತ ಆಶೀರ್ವಾದಕ್ಕೆ ಪಾತ್ರರಾಗ್ತಾರೆ ಅನ್ನೋ ನಂಬಿಕೆ ಇದೆ.
Published On - 5:09 pm, Mon, 30 September 19